Amrutadhare Serial: ಮಗಳ ಕಿಡ್​ನ್ಯಾಪ್​ ಮಾಡಿದ ಜೈಗೆ ಗೌತಮ್​ನಿಂದ ಪ್ರಮೋಷನ್​! ಮಲ್ಲಿ ಹೇಳ್ತಾಳಾ ಸತ್ಯ?

Published : Apr 22, 2025, 05:44 PM ISTUpdated : Apr 22, 2025, 05:55 PM IST
Amrutadhare Serial: ಮಗಳ ಕಿಡ್​ನ್ಯಾಪ್​ ಮಾಡಿದ ಜೈಗೆ ಗೌತಮ್​ನಿಂದ ಪ್ರಮೋಷನ್​! ಮಲ್ಲಿ ಹೇಳ್ತಾಳಾ ಸತ್ಯ?

ಸಾರಾಂಶ

ಲಚ್ಚಿಯ ಅಪಹರಣದ ಹಿಂದೆ ಶಕುಂತಲಾಳ ಕೈವಾಡವಿದೆ. ಲಚ್ಚಿ ಶಕುಂತಲಾಳನ್ನು ಗುರುತಿಸಿದ್ದಾಳೆ. ಜೈದೇವ್‌ಗೆ ಗೌತಮ್ ಬಡ್ತಿ ನೀಡಿದ್ದಾನೆ. ಮಲ್ಲಿಗೆಗೆ ಜೈದೇವ್‌ನ ಕುತಂತ್ರ ತಿಳಿದಿದೆ. ಆನಂದ್ ಮತ್ತು ಭೂಮಿಕಾಗೆ ಸತ್ಯ ತಿಳಿದರೆ, ಶಕುಂತಲಾ ಮತ್ತು ಜೈದೇವ್‌ನ ಅಸಲಿ ಮುಖ ಬಯಲಾಗುತ್ತದೆ.

ಸುಧಾ ಮಗಳು ಲಚ್ಚಿಯನ್ನು ಕಿಡ್​ನ್ಯಾಪ್​ ಮಾಡಿರೋ ಜೈದೇವ್​ಗೆ ಗೌತಮ್​ಗೆ ಖುದ್ದಾಗಿ ಪ್ರಮೋಷನ್​ ಕೊಟ್ಟಿದ್ದಾನೆ. ಬೋರ್ಡ್​ ಆಫ್​ ಮ್ಯಾನೇಜ್​ಮೆಂಟ್​ಗೆ ಸೇರಿಸಿದ್ದಾನೆ. ಅದೇ ಇನ್ನೊಂದೆಡೆ ಲಚ್ಚಿಯನ್ನು ಅಪಹರಣ ಮಾಡಿರುವ ಪಾಪಿಗಳನ್ನು ನಾನು ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾನೆ. ಹೀಗೆ ವಿಚಿತ್ರ ದಿಕ್ಕಿನಲ್ಲಿ ಸಾಗಿದೆ ಅಮೃತಧಾರೆ. ಅಷ್ಟಕ್ಕೂ,ತನ್ನ ಲಾಕೆಟ್​ನಲ್ಲಿ ಮೈಕ್​ ಫಿಕ್ಸ್​ ಮಾಡಿರುವುದು ಶಕುಂತಲಾನೇ ಎನ್ನುವುದು ಭೂಮಿಕಾಗೆ ಇನ್ನೇನು ತಿಳಿಯುವುದರಲ್ಲಿತ್ತು. ಇದು ಶಕುಂತಲಾಗೆ ಗೊತ್ತಾಗಿ ಮನೆಯವರ ತಲೆಯನ್ನು ಬೇರೆ ಕಡೆ ತಿರುಗಿಸುವುದಕ್ಕಾಗಿ ಸುಧಾ ಮಗಳು ಲಚ್ಚಿಯನ್ನು ಕಿಡ್ನಾಪ್​ ಮಾಡಲಾಗಿದೆ. ಜೈದೇವ್​ ಬೇರೆ ದನಿಯಲ್ಲಿ ಗೌತಮ್​ಗೆ ಕರೆ ಮಾಡಿ ಹಣ ತರಲು ಹೇಳಿದ್ದಾನೆ. ಆದರೆ ಇದನ್ನು ಮಾಡಿಸಿರುವುದು ಜೈದೇವ್​, ಶಕುಂತಲಾ ಎನ್ನುವ ಸಣ್ಣ ಗುಮಾನಿ ಕೂಡ ಮನೆಯಲ್ಲಿ ಯಾರಿಗೂ ಬರುವುದಿಲ್ಲ. ಹಣದ ಆಸೆಗಾಗಿ ಲಚ್ಚಿಯನ್ನು ಅಪಹರಣ ಮಾಡಿರುವುದಾಗಿ ಅಂದುಕೊಳ್ಳಲಾಗಿದೆ.  

 
ಅದೇ ಜಾಗಕ್ಕೆ ಶಕುಂತಲಾ ಮತ್ತು ಸಹೋದರ ಬಂದಿದ್ದಾರೆ. ಮುಂದೇನು ಮಾಡಬೇಕು ಎನ್ನುವ ಪ್ಲ್ಯಾನ್​ ಹಾಕಿದ್ದಾರೆ. ಆದರೆ ಲಚ್ಚಿಯ ಕಿವಿಗೆ ಹೆಡ್​ಫೋನ್​ ಇರುವ ಕಾರಣ ಅದ್ಯಾವುದೂ ಕೇಳುತ್ತಿಲ್ಲ. ಲಚ್ಚಿಯನ್ನು ಒಂದು ಕಡೆ ಬಿಟ್ಟು, ದುಡ್ಡನ್ನು ಇನ್ನೊಂದು ಕಡೆ ಇಡುವಂತೆ ಗೌತಮ್​ಗೆ ಹೇಳಿ ನಾವು ಪರಾರಿಯಾಗಬಹುದು ಎಂದು ಶಕುಂತಲಾ ಹೇಳಿದ್ದು, ಅದರಂತೆಯೇ ಪ್ಲ್ಯಾನ್​  ಮಾಡಲಾಗುತ್ತಿದೆ. ಆದರೆ ಇದೇ ವೇಳೆ ಲಚ್ಚಿ ತನ್ನ ಕಣ್ಣಿಗೆ ಕಟ್ಟಿರೋ ಪಟ್ಟಿಯಿಂದ ಸೂಕ್ಷ್ಮವಾಗಿ ತಲೆಯನ್ನು ಮೇಲಕ್ಕೆ ಮಾಡಿ ಅಲ್ಲಿ ಯಾರಿರುವುದು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆಗ ಆಕೆಗೆ ಶಕುಂತಲಾಳ ಕಾಲು, ಸೀರೆಯ ತುದಿ ಕಾಣಿಸಿದೆ. ಯಾರೋ ಮಹಿಳೆ ಬಂದಿದ್ದಾಳೆ ಎನ್ನುವುದು ಆಕೆಗೆ ತಿಳಿದಿತ್ತು.  ಆಕೆ ಶಕುಂತಲಾಳನ್ನು ಗುರುತು ಹಿಡಿಯುತ್ತಾಳಾ ಎನ್ನುವುದು ಮುಂದಿರುವ ಪ್ರಶ್ನೆ. ಒಂದು ವೇಳೆ ಇದರ ಹಿಂದೆ ಶಕುಂತಲಾ ಇದ್ದಾಳೆ ಎಂಬ ಬಗ್ಗೆ ಲಚ್ಚಿ ಹೇಳಿದರೂ ಅವಳ ಅಮ್ಮ ಸುಧಾ ಅಂತೂ ಅದನ್ನು ಒಪ್ಪುವುದಿಲ್ಲ.  ಆಕೆ ಮಗಳ ಬಾಯಿ ಮುಚ್ಚಿಸಲೂಬಹುದು. ಇನ್ನು ಗೌತಮ್​  ಅಂತೂ ಒಪ್ಪಲು ಸಾಧ್ಯನೇ ಇಲ್ಲ. ಲಚ್ಚಿಯನ್ನು ಗೌತಮ್​ ಬಿಡಿಸಿಕೊಂಡು ಬಂದಿದ್ದಾನೆ. ಲಚ್ಚಿ ಶಕುಂತಲಾಳ ಕಾಲನ್ನು ನೋಡಿ ಶಾಕ್​ ಆಗಿದ್ದಾಳೆ. ಅಲ್ಲಿಗೆ ಬಂದಾಕೆ ಇವಳೇ ಎನ್ನುವುದು ಗೊತ್ತಾಗಿದೆ. ಆದರೆ ಅದನ್ನು ಅವಳು ಯಾರಿಗೂ ಹೇಳಲಿಲ್ಲ.

ಸಿಹಿ ಸತ್ತ ಸುದ್ದಿ ಸೀತಾಗೆ ಗೊತ್ತಾಯ್ತು; ಸಿಹಿ ಆತ್ಮ ಓಡಾಡ್ತಿರೊ ಸುದ್ದಿ ಅಶೋಕ್​ಗೆ ತಿಳಿದಾಯ್ತು! ಮುಂದೆ?

ಅದೇ ಇನ್ನೊಂದೆಡೆ, ಜೈದೇವ್​ ಒಳ್ಳೆಯ ಕೆಲಸ ನೋಡಿ ಆತನಿಗೆ ಬಡ್ತಿ ಕೊಟ್ಟಿದ್ದಾನೆ ಗೌತಮ್​. ಇದನ್ನು ಮಲ್ಲಿಗೆ ಬಂದು ಹೇಳಿದ್ದಾಳೆ ಭೂಮಿಕಾ. ಆದರೆ ಮಲ್ಲಿಗೆ ತನ್ನ ಪತಿಯ ಎಲ್ಲಾ ಕುತಂತ್ರ ತಿಳಿದಿದೆ. ಮಗು ಕಿಡ್​ನ್ಯಾಪ್​ ಮಾಡಿರುವ ಹಿಂದೆ ಇರುವುದು ಗಂಡನೇ ಎನ್ನುವುದು ತಿಳಿದಿದೆ. ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಕೂಡ ತಿಳಿದಿದೆ. ಇಷ್ಟೆಲ್ಲಾ ಕೆಟ್ಟ ಬುದ್ಧಿ ತಿಳಿಯದ ಗೌತಮ್​  ಮತ್ತು ಭೂಮಿಕಾ ಆತನ ಮೇಲೆ ಪ್ರೀತಿ ತೋರಿಸ್ತಾ ಇರೋದಕ್ಕೆ ಮಲ್ಲಿ ಬೇಸರ ವ್ಯಕ್ತಪಡಿಸಿದ್ದಾಳೆ. ಪ್ರಮೋಷನ್​ ವಿಷ್ಯ ಹೇಳಿದಾಗ ಅವಳಿಗೆ ಖುಷಿ ಆಗಲಿಲ್ಲ. ನಿನ್ನ ಮುಖದಲ್ಲಿ ಏನೊ ಬೇಸರ ಇದ್ಯಲ್ಲಾ ಎಂದು ಭೂಮಿಕಾ ಮತ್ತು ಗೌತಮ್​ ಕೇಳಿದ್ದಾರೆ. ಮಲ್ಲಿ ಅಸಲಿ ವಿಷ್ಯ ಹೇಳ್ತಾಳಾ ಇಲ್ಲವೊ ಎನ್ನುವುದು ಮುಂದಿರುವ ಪ್ರಶ್ನೆ. 

 
ಇನ್ನು ಈ ವಿಷಯ ಆನಂದ್​ ಮತ್ತು ಭೂಮಿಕಾ ಕಿವಿಗೆ ಬಿದ್ದರೆ ಮಾತ್ರ ಅಲ್ಲಿಗೆ ಬಹುತೇಕ ಸೀರಿಯಲ್​ ಮುಗಿದಂತೆ. ಏಕೆಂದರೆ, ಈಗ ಏನಿದ್ದರೂ ಇರುವುದು ಶಕುಂತಲಾಳ ಅಸಲಿಯತ್ತು ಬಯಲು ಮಾಡುವುದು ಮಾತ್ರ. ಒಂದು ವೇಳೆ ಆಕೆಯ ಅಸಲಿಯತ್ತು ಬಯಲಾಗದರೆ ಜೈದೇವನ ಅಸಲಿಯತ್ತೂ ಬಯಲಾಗುತ್ತದೆ. ಆತನ ಅಕ್ರಮ ಸಂಬಂಧದ ಬಗ್ಗೆ ಪತ್ನಿ ಮಲ್ಲಿಗೆ ಇದಾಗಲೇ ಗೊತ್ತಾಗಿರೋ ಕಾರಣ, ಎಲ್ಲವೂ ಮುಗಿದಂತೆಯೇ ಆಗುತ್ತದೆ. ಇಷ್ಟು ಮಾಡಿ ಸೀರಿಯಲ್​ ಮುಕ್ತಾಯ ಮಾಡಿದರೆ ಒಳ್ಳೆಯದು. ಆದರೆ ಸದ್ಯ ಸೀರಿಯಲ್​ ಟಿಆರ್​ಪಿ ಹೆಚ್ಚಾಗಿರುವ ಕಾರಣ, ಅನಗತ್ಯ ಟ್ವಿಸ್ಟ್​ ಸೇರಿಸಿ ಎಳೆದರೂ ಅಚ್ಚರಿಯೇನಿಲ್ಲ. ಶಕುಂತಲಾ ಅಸಲಿಯತ್ತು ಲಚ್ಚಿಗೆ ಗೊತ್ತಾದರೂ ಅದನ್ನು ಹೇಳುವುದಕ್ಕೆ ಆಗದೇ ಮತ್ತಷ್ಟು ಟ್ವಿಸ್ಟ್​ ಸೇರಿಸಿ ಚ್ಯೂಯಿಂಗ್​ ಗಮ್​ನಂತೆ ಸೀರಿಯಲ್​ ಎಳೆಯುವುದು ನಿರ್ದೇಶಕರಿಗೆ ಏನೂ ಹೊಸ ವಿಷಯವಲ್ಲ ಬಿಡಿ. 

ನಿವೇದಿತಾ ಗೌಡ ಬಾತ್​ರೂಂ ಸೀಕ್ರೇಟ್​ ಕೊನೆಗೂ ರಿವೀಲ್​! ಅಬ್ಬಾ... ಇದಾ ವಿಷ್ಯ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!