ಅಂತಿಮ ಘಟ್ಟದಲ್ಲಿ ಗಟ್ಟಿಮೇಳ ಸೀರಿಯಲ್‌: ಮುಕ್ತಾಯದ ದಿನ ರಿವೀಲ್‌- ಅದಿತಿ ನೀಡಿದ್ರು ಮಾಹಿತಿ...

Published : Dec 28, 2023, 04:16 PM IST
ಅಂತಿಮ ಘಟ್ಟದಲ್ಲಿ ಗಟ್ಟಿಮೇಳ ಸೀರಿಯಲ್‌: ಮುಕ್ತಾಯದ ದಿನ ರಿವೀಲ್‌- ಅದಿತಿ ನೀಡಿದ್ರು ಮಾಹಿತಿ...

ಸಾರಾಂಶ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಗಟ್ಟಿಮೇಳ ಸೀರಿಯಲ್‌ ಮುಕ್ತಾಯದ ಹಂತ ತಲುಪಿದೆ. ಇದರ ಅಂತಿಮ ಕಂತು ಯಾವಾಗ? ಇಲ್ಲಿದೆ ಡಿಟೇಲ್ಸ್‌...  

2019ರ ಮಾರ್ಚ್​ 11ರಿಂದ ಶುರುವಾದ ಜೀ ಟಿ.ವಿ ವಾಹಿನಿಯ ಗಟ್ಟಿಮೇಳ ಈಗ ಅಂತಿಮ ಘಟಕ್ಕೆ ತಲುಪಿದೆ. ನಾಲ್ಕೂವರೆ ವರ್ಷಗಳವರೆಗೆ ಧಾರಾವಾಹಿ ಪ್ರಿಯರನ್ನು ಹಿಡಿದುಕೊಂಡಿದ್ದ ಈ ಸೀರಿಯಲ್​ ಮುಗಿಯುವ ಹಂತಕ್ಕೆ ಬಂದಿದೆ.  ಧಾರಾವಾಹಿಯ ವಿಲನ್​ ಸುಹಾಸಿನಿ ತನ್ನ ಅಕ್ಕನ ಇಬ್ಬರು ಮಕ್ಕಳನ್ನು ಕೊಲೆ ಮಾಡಲು ಪ್ರಯತ್ನಿಸಿರುವುದು ಸೇರಿದಂತೆ ಅಗ್ನಿ ಎಂಬ ವಿಲನ್​ ಕೊಲೆ ಪ್ರಯತ್ನ ಮಾಡಿದ್ದರೂ ಒಳ್ಳೆಯವಳಂತೆ ನಟಿಸುತ್ತಾ ಮನೆಯಲ್ಲಿಯೇ ಇದ್ದಾಳೆ.  ಅದೇ ಇನ್ನೊಂದೆಡೆ, ತನ್ನ ಮನೆಯಲ್ಲಿಯೇ ಕೆಲಸದವಳ ರೀತಿ ಇದ್ದ  ವೈದೇಹಿಯ ಅಸಲಿಯತ್ತು ಬಯಲಾಗಿದೆ. ಆಕೆಯೇ ನಿಜವಾದ ತಾಯಿ ಎನ್ನುವುದು ತಿಳಿದಿದೆ. ಇದು ಆಗುತ್ತಿದ್ದಂತೆಯೇ ಧಾರಾವಾಹಿ ಮುಗಿಯಿತು ಎಂದುಕೊಂಡಿದ್ದರು ಫ್ಯಾನ್ಸ್‌. ಆದರೆ ಸೀರಿಯಲ್‌ಗೆ ಒಂದಿಷ್ಟು ಟ್ವಿಸ್ಟ್‌ ಕೊಟ್ಟು ಮತ್ತಷ್ಟು ದಿನ ತಳ್ಳಲಾಗಿದೆ.

ಇನ್ನೂ ಟಿಆರ್‌ಪಿಯಲ್ಲಿ ಸೀರಿಯಲ್‌ ಒಳ್ಳೆಯ ರೇಟಿಂಗ್‌ ಪಡೆದುಕೊಳ್ಳುತ್ತಲೇ ಸಾಗಿದೆ. ವಿಲನ್‌ ಆಗಿರೋ ಸುಹಾಸಿನಿ ಸಿಕ್ಕಿಬೀಳಬೇಕಿದೆ. ವಿಲನ್‌ ಅಗ್ನಿ ಮತ್ತು ಆತನ ತಂದೆ ಪೊಲೀಸರ ಕೈಸೇರಬೇಕಿದೆ. ಅದೇ ಇನ್ನೊಂದೆಡೆ,  ನಾಯಕ ವೇದಾಂತ್​ ಇನ್ನೂ ಪತ್ತೆಯಿಲ್ಲ.  ಅವರು ಸಿನಿಮಾ ಒಂದರಲ್ಲಿ ನಟಿಸುತ್ತಿರುವ ಕಾರಣ ಧಾರಾವಾಹಿಗೆ ಗುಡ್​ಬೈ ಹೇಳಿದ್ದಾರೆ ಎನ್ನಲಾಗುತ್ತಿದ್ದರೂ, ಕೊನೆಯಾಗಿಯಾದರೂ ಒಮ್ಮೆ ಅವರನ್ನು ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ.  ವೇದಾಂತ್‌ ಪಾತ್ರಧಾರಿ ರಕ್ಷ್ ರಾಮ್ ಅವರು ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಅವರು ‘ಬರ್ಮ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಬಹದ್ದೂರ್’, ‘ಭರ್ಜರಿ’ ನಿರ್ದೇಶಕ ಚೇತನ್ ಕುಮಾರ್ ಅವರು ‘ಬರ್ಮ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.  

ಸೀತಾ ಮದ್ವೆ ದಿನ ಭಾರಿ ಟ್ವಿಸ್ಟ್‌! ನಿರ್ದೇಶಕರನ್ನು ಹುಡುಕಿ ಹೊಡೆಯುವುದಾಗಿ ಬೆದರಿಕೆ ಹಾಕಿದ ರಾಮ್‌ ಫ್ಯಾನ್ಸ್‌...

ಧಾರಾವಾಹಿಯಲ್ಲಿ ಕೂಡ ವೇದಾಂತ್​ ತನ್ನ ಆಸ್ತಿಯನ್ನು ಪತ್ನಿ ಅಮೂಲ್ಯಗೆ ಜಿಪಿಎ ಹೋಲ್ಡರ್​ ಮಾಡಿ ಕೊಟ್ಟಿದ್ದು, ಆತ ಕಂಪೆನಿಯೊಂದರ ಕೆಲಸದ ನಿಮಿತ್ತ ಪರ ಊರಿಗೆ ಹೋಗಿರುವುದಾಗಿ ತೋರಿಸಲಾಗಿದೆ. ಅದೇನೇ ಇದ್ದರೂ ಕೊನೆಯದಾಗಿ ಒಮ್ಮೆ ಅವರ ದರ್ಶನ ಮಾಡಿಸಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ಕೊಲೆಯಾಗಿದ್ದಾನೆ ಎನ್ನಲಾದ ವಿಕ್ಕಿ ಬಂದೇ ಬರುತ್ತಾನೆ ಎಂದು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ. 

ಇದರ ನಡುವೆಯೇ ಇದೀಗ ಸೀರಿಯಲ್‌ ಯಾವಾಗ ಎಂಡ್ ಆಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ.  ಜನವರಿ 5ರ   ಶುಕ್ರವಾರ ಧಾರಾವಾಹಿ ಕೊನೆಗೊಳ್ಳಲಿದೆ ಎನ್ನಲಾಗುತ್ತಿದ್ದು, ಜನವರಿ 1ರಿಂದ ಅಂತಿಮ ಸಂಚಿಕೆಗಳ ಪ್ರಸಾರ ಆರಂಭ ಆಗಲಿದೆ ಎನ್ನಲಾಗಿದೆ. ಗಟ್ಟಿಮೇಳ ಧಾರಾವಾಹಿಯು ಈ ವರ್ಷದ ಜನವರಿ ತಿಂಗಳಲ್ಲಿ 1000 ಸಂಚಿಕೆ ಪೂರೈಸಿತ್ತು. ಇದೀಗ 1238 ಸಂಚಿಕೆ ಪೂರೈಸಿದೆ. ಈಗ ಕೊನೆಯ ಹಂತ ತಲುಪುತ್ತಿದ್ದು ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅದಿತಿ ಪಾತ್ರಧಾರಿ ಪ್ರಿಯಾ ಅವರೂ ಹೇಳಿಕೊಂಡಿದ್ದು, ಸೀರಿಯಲ್‌ ಮುಗಿಯುವುದು ಬಹುತೇಕ ಖಚಿತವಾಗಿದೆ. 

ಬಿಹಾರದ ಎಮ್ಮೆ, ಮೇಕೆ ಜೊತೆ ಕಾಣಿಸಿಕೊಂಡ ಡಾ.ಬ್ರೋ: ಫೋಟೋ ನೋಡಿ ಕುಣಿದಾಡಿದ ಫ್ಯಾನ್ಸ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?