Lakshana: ನಕ್ಷತ್ರಾಗೆ ಪ್ರೊಪೋಸ್ ಮಾಡಲಿಕ್ಕೆ ಭೂಪತಿಗೆ ಐಡಿಯಾ ಕೊಡಿ!

Published : Mar 21, 2023, 11:36 AM ISTUpdated : Mar 21, 2023, 11:41 AM IST
Lakshana: ನಕ್ಷತ್ರಾಗೆ ಪ್ರೊಪೋಸ್ ಮಾಡಲಿಕ್ಕೆ ಭೂಪತಿಗೆ ಐಡಿಯಾ ಕೊಡಿ!

ಸಾರಾಂಶ

ತನಗೆ ನಕ್ಷತ್ರಾ ಮೇಲಿರೋದು ಬರೀ ಸ್ನೇಹ ಮಾತ್ರ ಅಂತ ಭೂಪತಿ ಇಷ್ಟು ದಿನ ಅಂದ್ಕೊಂಡಿದ್ದ. ಆದರೆ ಈಗ ತನಗೆ ಅವಳ ಮೇಲಿರೋದು ಪ್ರೇಮ ಅಂತ ಗೊತ್ತಾಗಿದೆ. ಆದರೆ ಸ್ಪೆಷಲ್ಲಾಗಿ ಹೇಗೆ ಪ್ರೊಪೋಸ್ ಮಾಡೋದು ಅಂತ ಐಡಿಯಾ ಸಿಕ್ತಿಲ್ಲ. ನಿಮ್ಮತ್ರ ಆ ಥರದ ಐಡಿಯಾ ಇದೆಯಾ?  

ಲಕ್ಷಣ ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್. ಇದರಲ್ಲೀಗ ಎರಡು ದೊಡ್ಡ ತಿರುವುಗಳು ಮುಖಾಮುಖಿ ಆಗೋದ್ರಲ್ಲಿದೆ. ಅದರ ಪರಿಣಾಮದಿಂದ ನಕ್ಷತ್ರ ಮತ್ತು ಭೂಪತಿ ಲೈಫು ಏನಾಗುತ್ತೆ ಅನ್ನೋದು ದೊಡ್ಡ ಪ್ರಶ್ನೆ. ಭೂಪತಿಗೆ ನಕ್ಷತ್ರಾ ಮೇಲೆ ಲವ್ವಾಗಿದೆ. ಆತ ಅವಳ ಬಗ್ಗೆ ಕನಸು ಕಾಣ್ತಾ ಇದ್ದರೆ ಈ ಕಡೆ ನಕ್ಷತ್ರ ಡೆವಿಲ್ ಕಾಟದಿಂದ ನಡುಗೋ ಥರ ಆಗ್ತಿದೆ. ಅವಳು ಒಳಗೊಳಗೇ ಕುಸಿಯುತ್ತಿದ್ದಾಳೆ. ನಕ್ಷತ್ರಗೆ ಡೆವಿಲ್ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಭೂಪತಿಗೆ ಡಿವೋರ್ಸ್ ಕೊಡುವಂತೆ ನಕ್ಷತ್ರ ಮೇಲೆ ಡೆವಿಲ್‌ ಪ್ರೆಶರ್‌ ಹಾಕುತ್ತಿದ್ದಾಳೆ. ಭೂಪತಿಗೆ ಡಿವೋರ್ಸ್ ಕೊಡದಿದ್ದರೆ ಶಕುಂತಲಾ ದೇವಿ ಪ್ರಾಣಕ್ಕೆ ಕುತ್ತು ತರಲು ಡೆವಿಲ್ ಮುಂದಾಗಿದ್ದಾಳೆ. ಭೂಪತಿಗೆ ಡಿವೋರ್ಸ್ ಕೊಡಬೇಕು ಅಂತ ನಕ್ಷತ್ರಗೆ ಡೆವಿಲ್ ಬ್ಲಾಕ್ ಮೇಲ್ ಮಾಡಿದ್ದಾಳೆ. ವಿಚ್ಛೇದನ ಕೊಡಲಿಲ್ಲ ಅಂದ್ರೆ ಪರಿಣಾಮ ನೆಟ್ಟಗೆ ಇರಲ್ಲ ಅಂತ ಡೆವಿಲ್ ಎಚ್ಚರಿಕೆ ಕೊಟ್ಟಿದ್ದಾಳೆ. ಈ ವಿಷಯವನ್ನ ನಕ್ಷತ್ರ ಯಾರೊಂದಿಗೂ ಹೇಳಿಕೊಳ್ಳಲು ಆಗುತ್ತಿಲ್ಲ. ಯಾಕಂದ್ರೆ, ಯಾರ ಬಳಿಯೂ ಈ ಬ್ಲಾಕ್ ಮೇಲ್ ಬಗ್ಗೆ ಹೇಳದಂತೆ ನಕ್ಷತ್ರಗೆ ಡೆವಿಲ್ ಬ್ಲಾಕ್ ಮಾಡಿದ್ದಾಳೆ. ಹೀಗಾಗಿ, ನಕ್ಷತ್ರ ಇಕ್ಕಟ್ಟಿಗೆ ಸಿಲುಕಿದ್ದಾಳೆ.

ಇನ್ನೊಂದು ಕಡೆ ಭೂಪತಿ ವಿರುದ್ಧ ದಿಕ್ಕಿನಲ್ಲಿ ಯೋಚನೆ ಮಾಡ್ತಿದ್ದಾನೆ. ನಕ್ಷತ್ರಾ ಮೇಲೆ ತನಗಿರೋದು ಬರೀ ಫ್ರೆಂಡ್‌ಶಿಪ್ ಮಾತ್ರ ಅಂತ ಇಷ್ಟು ದಿನ ತಿಳ್ಕೊಂಡಿದ್ದ. ಆದರೆ ಈಗ ಇದು ಬರೀ ಫ್ರೆಂಡ್‌ಶಿಪ್‌ ಅಲ್ಲ, ನಿಜಕ್ಕೂ ತನಗೆ ಅವಳ ಮೇಲಿರೋದು ಪ್ರೀತಿ ಅಂತ ಗೊತ್ತಾಗಿದೆ. ಈ ಗೊತ್ತಾಗಿದ್ದರೆ ದೊಡ್ಡ ಪಾತ್ರ ಇರೋದು ಭೂಪತಿ ತಮ್ಮ ಮೌರ್ಯ ಮತ್ತು ಅತ್ತಿಗೆಯ ಪಾತ್ರ. ಭೂಪತಿಯನ್ನು ಊರೆಲ್ಲ ಅಲೆದಾಡಿಸಿ ಜೊತೆಗೆ ನಕ್ಷತ್ರಾಗೂ ಏನೇನೆಲ್ಲ ಟಾಸ್ಕ್ ಕೊಟ್ಟು ಭೂಪತಿಗೆ ನಿಜ ಏನು ಅಂತ ರಿವೀಲ್ ಆಗೋ ಹಾಗೆ ಮಾಡಿದ್ದಾರೆ. ಮೌರ್ಯಾ ಅಂತೂ ತನ್ನ ಗೆಳತಿಯನ್ನು ಕರೆಸಿ ತಾನೇ ಭೂಪತಿಯ ಪಾತ್ರ, ಅವಳು ನಕ್ಷತ್ರ ಪಾತ್ರ ಮಾಡುವಂತೆ ಮಾಡಿ ಭೂಪತಿ ಎದುರೇ ಆತನ ಸಮಸ್ಯೆ ಬಿಟ್ಟಿಟ್ಟು ಆತನಿಗೆ ಪರಿಸ್ಥಿತಿ ಮನದಟ್ಟು ಮಾಡಿಕೊಟ್ಟಿದ್ದಾನೆ.

Lakshana Serial: ಟ್ಯೂಬ್‌ಲೈಟ್‌ ಭೂಪತಿಗೆ ಮೌರ್ಯ ಕೊಟ್ಟ ನೋಡಿ ಚಮಕ್!

ಒಂದು ಹಂತದಲ್ಲಿ ಭೂಪತಿಗೆ ತಾನು ನಕ್ಷತ್ರ ಬಗ್ಗೆ ತೋರಿಸುತ್ತಿರುವ ಕಾಳಜಿ ಪ್ರೀತಿಯಿಂದ(Love) ಬಂದದ್ದು ಅನ್ನೋದರ ಅರಿವಾಗಿದೆ. ಈಗ ಭೂಪತಿ ಹೇಗಾದರೂ ಮಾಡಿ ನಕ್ಷತ್ರಾ ಮುಂದೆ ಪ್ರೇಮ ನಿವೇದನೆ ಮಾಡಲು ಸ್ಕೆಚ್ ಹಾಕುತ್ತಿದ್ದಾನೆ. ಅತ್ತಿಗೆ ಬಳಿ ಐಡಿಯಾ ಕೇಳ್ತಿದ್ದಾನೆ. ಆದರೆ ಈ ಟೆನ್ಶನ್‌ನಲ್ಲಿ ಯಾರಿಗೂ ಅಂಥಾ ಅದ್ಭುತ ಐಡಿಯಾ ಹೊಳೀತಿಲ್ಲ.

ತಾನು ನಕ್ಷತ್ರಾಗೆ ಪ್ರೊಪೋಸ್ (Propose) ಮಾಡೋದು ಹೇಗಿರಬೇಕು ಅಂದರೆ ಆಕೆ ಜೀವನ ಪರ್ಯಂತ ಅದನ್ನು ನೆನಪಿಟ್ಟುಕೊಳ್ಳಬೇಕು, ಅಷ್ಟು ಅದ್ಭುತವಾಗಿರಬೇಕು ಅಂತ ಭೂಪತಿ ಬಯಸುತ್ತಾನೆ. ಸದ್ಯ ಈಗ ಆ ಐಡಿಯಾದ ಹುಡುಕಾಟದಲ್ಲಿದ್ದಾನೆ. ಆದರೆ ಆತನಿಗೆ ಅದ್ಭುತ ಐಡಿಯಾ ಹೊಳೆದು ಅದನ್ನು ನಕ್ಷತ್ರ ಮುಂದೆ ಹೇಳವಷ್ಟು ಹೊತ್ತಿಗೆ ಬಹುಶಃ ನಕ್ಷತ್ರ ಡಿವೋರ್ಸ್(Divorce) ತೀರ್ಮಾನಕ್ಕೆ ಬಂದಿರುತ್ತಾಳೆ ಅನ್ನೋ ಗೆಸ್ ಇದೆ. ಏಕೆಂದರೆ ಶಕುಂತಲಾ ದೇವಿ ಸದ್ಯಕ್ಕೆ ಮನೆಯಲ್ಲಿ ಇಲ್ಲ. ಶಕುಂತಲಾ ದೇವಿಗೆ ಡೇಂಜರ್ ಕಾದಿದೆ ಎಂಬ ಸಂದೇಶವನ್ನ ನಕ್ಷತ್ರಗೆ ಡೆವಿಲ್ ಕಳುಹಿಸಿದ್ದಾಳೆ. ಅತ್ತೆ ಪ್ರಾಣಕ್ಕೆ ಅಪಾಯ ಆಗುತ್ತೆ ಎಂಬ ಭಯಕ್ಕೆ ಭೂಪತಿಗೆ ಡಿವೋರ್ಸ್ ಕೊಡಲು ನಕ್ಷತ್ರ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.

ಈ ಸೀರಿಯಲ್‌ನಲ್ಲಿ ನಕ್ಷತ್ರ ಪಾತ್ರದಲ್ಲಿ ವಿಜಯಲಕ್ಷ್ಮೀ, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಶ್ವೇತಾ ಆಗಿ ಸುಕೃತಾ ನಾಗ್, ಭೂಪತಿ ತಾಯಿ ಶಕುಂತಲಾ ದೇವಿಯಾಗಿ ಸುಧಾ ಬೆಳವಾಡಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಈ ಸೀರಿಯಲ್(Serial) ಕುತೂಹಲಕಾರಿ ಘಟ್ಟ ತಲುಪಿದೆ.

Olavina Nildana: ತಾರಿಣಿಗೆ ಬಣ್ಣದ ಕೊಡೆ ಕೊಟ್ಟ ಸಿದ್ಧಾಂತ್, ಭಾವಕ್ಕೂ, ಅನುಬಂಧಕ್ಕೂ ಇದೆ ಕೊಡೆಯ ನಂಟು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ