
ಜೀ ಕನ್ನಡ(Zee Kannada)ದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ'(Gattimela) ಸೀರಿಯಲ್ ಒಂದು ಥರದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು ಅನಿಸೋ ಕಥೆ ಹೊಂದಿದೆ. ಫನ್(Fun) ಇಷ್ಟಪಡೋರಿಗೆ ಇದರಲ್ಲಿ ಕಿಸಕ್ಕನೆ ನಗಿಸೋ ಫನ್ ಎಲಿಮೆಂಟ್‌ಗಳಿವೆ. ಫ್ಯಾಮಿಲಿ ಡ್ರಾಮಾ(Family Drama) ಬೇಕು ಅನ್ನೋರಿಗೆ ವಿಲನ್(Villon) ಸುಹಾಸಿನಿ ಸಖತ್ತಾಗಿ ಚಮಕ್ ಕೊಡ್ತಾಳೆ. ಅಳೋರಿಗೂ ಈ ಸೀರಿಯಲ್ ಅಳೋದಕ್ಕೆ ಆಗಾಗ ಚಾನ್ಸ್(Chance) ಕೊಡುತ್ತೆ. ಗಂಭೀರ ಕತೆಯೂ ಇದರಲ್ಲಿದೆ. ಈ ಎಲ್ಲ ಕಾರಣಕ್ಕೆ ಈ ಸೀರಿಯಲ್ ನಂ 1 (No.1) ಸ್ಥಾನವನ್ನು ಕಾಪಾಡಿಕೊಂಡೇ ಬರುತ್ತೆ ಅಂದರೆ ತಪ್ಪಲ್ಲ. ಅಂದಹಾಗೆ ಸದ್ಯಕ್ಕೆ ಈ ಸೀರಿಯಲ್‌ನಲ್ಲಿ ಒಂದು ಫನ್ನಿ ಸನ್ನಿವೇಶ ಸಖತ್ತಾಗಿ ಬಂದಿದೆ. ಸಿಕ್ಕಾಪಟ್ಟೆ ತರಲೆ, ತುಂಟಿ ಅಮೂಲ್ಯಗೆ ಅವಳ ಗಂಡ ವೇದಾಂತ್ ಮೀಸೆ(Mustache) ಮೇಲೆ ಕಣ್ಣು ಬಿದ್ದಿದೆ. ತನ್ನ ಪ್ರಾಣಕ್ಕಿಂತ ಹೆಚ್ಚು ಜತನದಿಂದ ಗಡ್ಡ, ಮೀಸೆ ಕಾಪಾಡಿಕೊಂಡು ಬಂದಿದ್ದ ವೇದಾಂತ್‌ಗೆ ತನ್ನ ಮೀಸೆ ಮೇಲೆ ಹೆಂಡತಿ ಕಣ್ಣು ಬಿದ್ದಿದೆ, ಅವಳ ಪ್ರಯೋಗ ಅದರ ಮೇಲೆ ಶುರುವಾಗಲಿದೆ ಅಂತ ಗೊತ್ತಾದಾಗ ಜೀವವೇ ಬಾಯಿಗೆ ಬಂದ ಹಾಗಾಗಿದೆ.
ಮನೆ ಹೊರಗೆ ನಿಂತು ಕೈಯಲ್ಲಿ ಕನ್ನಡಿ ಹಿಡಿದು ಮೀಸೆ ಕಟ್ ಮಾಡ್ತಾ ಇರೋ ವೇದಾಂತ್‌ನಿಂದ ಸೀನ್ ಶುರುವಾಗುತ್ತೆ. ಅಷ್ಟೊತ್ತಿಗೆ ಅದೆಲ್ಲಿದ್ದಳೋ ಪುಣ್ಯಾತಿಗಿತ್ತಿ ಅಮೂಲ್ಯ ಆ ಜಾಗಕ್ಕೆ ಬರ್ತಾಳೆ. ಸದಾ ತರಲೆ ಸಂಗತಿಗಳೇ ಓಡಾಡ್ತಿರೋ ಅವಳ ತಲೆಯಲ್ಲಿ ವೇದಾಂತ್ ಮೀಸೆ ಕಟ್ ಮಾಡ್ತಿರೋದನ್ನು ನೋಡುವಾಗಲೂ ತಾನೇ ಮೀಸೆ ಕಟ್ ಮಾಡ್ಬೇಕು ಅಂತಾಗಿದೆ. '
ಅಮೂಲ್ಯ: ವೇದಾಂತ್ ನಿನ್ ಕೈಯಲ್ಲಿರೋ ಕತ್ತರಿನ ನಂಗೆ ಕೊಡ್ತೀಯಾ?
ವೇದಾಂತ್: ಯಾಕೆ?
ಅಮೂಲ್ಯ: ನಿನ್ ಮೀಸೆನ ನಾನು ಕಟ್ ಮಾಡ್ತೀನಿ.
ವೇದಾಂತ್ ತಬ್ಬಿಬ್ಬಾಗಿ : ಏನು, ಏನಂದೆ, ಇನ್ನೊಂದು ಸಲ ಹೇಳು?
ಅಮೂಲ್ಯ: ನಿನ್ ಮೀಸೆನ ನಾನು ಕಟ್ ಮಾಡ್ತೀನಿ ಅಂದೆ.
ವೇದಾಂತ್ : ಏ ಬಜಾರಿ, ಮೀಸೆ ಕಟ್ ಮಾಡೋದು ಅಡುಗೆ ಮನೆಲಿ ತರಕಾರಿ ಕಟ್ ಮಾಡಿದಂಗೆ ಅಂದುಕೊಂಡಿದ್ದೀಯಾ? ನಿನ್ ಕೈಯಲ್ಲೇನಾದ್ರೂ ಈ ಕತ್ರಿ ಕೊಟ್ಟರೆ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂಗೆ!
ಸೃಜನ್ ಲೋಕೇಶ್ ಮನೇಲಿ ಅತ್ತೆ ಸೊಸೆ ಜಗಳ ಹೆಂಗಿರುತ್ತೆ ಗೊತ್ತಾ?
ಹೀಗೆ ಫನ್ನಿಯಾಗಿ ಸಾಗೋ ಸೀನ್(Scene)ನಲ್ಲಿ ವೇದಾಂತ್ ಬೇಡ ಬೇಡ ಅಂತ ಗೋಗರೆದರೂ, 'ನಾನು ಮೀಸೆ ಕಟ್ ಮಾಡಿಯೇ ತೀರ್ತೀನಿ. ಹೆಂಡ್ತಿಯಾದವಳ ಒಂದು ಸಣ್ಣ ಆಸೆಯನ್ನೂ ತೀರಿಸಲಿಕ್ಕಾಗೋದಿಲ್ವಾ..' ಅಂತ ಬಜಾರಿ ಅಮೂಲ್ಯ ವೇದಾಂತ್ ಜೊತೆ ಜಿದ್ದಿಗೆ ಬೀಳ್ತಾಳೆ. ಕೊನೆಗೂ ಹೆಂಡತಿಯ ವಿಚಿತ್ರ ಆಸೆಗೆ ಮಣಿದು, ಒಂಚೂರೇ ಕಟ್ ಮಾಡ್ಬೇಕು ಅಂತ ಮಾತು ತಗೊಂಡು ಕತ್ತರಿಯನ್ನು ಹೆಂಡತಿ ಕೈಗೆ ಕೊಡ್ತಾನೆ. ಅವಳು ವಿಚಿತ್ರವಾಗಿ ಕತ್ತರಿ ಹಿಡ್ಕೊಂಡು ಬಂದಾಗ ಇವನಿಗೆ ಜೀವ ಬಾಯಿಗೆ ಬಂದ ಫೀಲ್(Feel) . ಆದರೆ ವೇದಾಂತ್ ಮೀಸೆ ಪುಣ್ಯ ಮಾಡಿತ್ತು ಅನಿಸುತ್ತೆ, ಇನ್ನೇನು ಅಮೂಲ್ಯ ಕತ್ತರಿ ಹಾಕ್ತಾಳೆ ಅಂತನ್ನುವಾಗ ಒಂದು ವಾಯ್ಸ್ ನೋಟ್ ವಿಕ್ರಾಂತ್ ವಸಿಷ್ಠನಿಂದ ಬರುತ್ತೆ. 'ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಸ್ಸು' ಅನ್ನೋ ಹಾಗೆ ಅದೇ ನೆವ ಮಾಡಿಕೊಂಡು ವೇದಾಂತ್ ಅಲ್ಲಿಂದ ಜಾಗ ಖಾಲಿ ಮಾಡ್ತಾನೆ.
ಈ ಸೀನ್‌ಅನ್ನು ಜನ ಎಷ್ಟು ಎನ್‌ಜಾಯ್ ಮಾಡಿದ್ರು ಅಂದರೆ ಈ ಸೀನ್ ಪೋಸ್ಟ್ ಮಾಡಿದ ಅರ್ಧಗಂಟೆಯೊಳಗೆ ಇನ್‌ಸ್ಟಾಗ್ರಾಂ ಒಂದರಲ್ಲೇ 38,000 ಕ್ಕೂ ಹೆಚ್ಚು ಜನ ಇದನ್ನು ನೋಡಿದ್ದಾರೆ. ಕೆಲವೇ ಹೊತ್ತಲ್ಲಿ ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋ ನೋಡಿ ಎನ್‌ಜಾಯ್ ಮಾಡಿದ್ದಾರೆ. 'ಸಖತ್ ಕ್ಯೂಟ್ ಪರ್ಫಾಮೆನ್ಸ್'(Cute Performance) ಅಂತ ಸಾಕಷ್ಟು ಜನ ಕಮೆಂಟ್(Comment) ಮಾಡಿದ್ದಾರೆ.
ಇಷ್ಟೆಲ್ಲ ಆದ್ಮೇಲೆ ಜನ ಇಷ್ಟ ಪಡೋದು ಎಂಥಾ ಸೀನ್‌ಗಳನ್ನು ಅನ್ನೋದು ಸೀರಿಯಲ್ ಸ್ಕ್ರಿಪ್ಟ್(Script) ಬರೆಯೋರಿಗೆ ಅರ್ಥ ಆಗಿರುತ್ತೆ.
Sathya: ಸತ್ಯ ಮಾಲಾಶ್ರೀ ತರವೇ ಇರಲಿ, ಶ್ರುತಿ ಮಾಡ್ಬೇಡಿ ಪ್ಲೀಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.