
ಮೊದಲ ಸೀಸನ್ ಯಶಸ್ಸಿನಲ್ಲಿ ಬೀಗುತ್ತಿರುವ ಜನಪ್ರಿಯ ಟಿವಿ ಶೋ ‘ರಾಜ-ರಾಣಿ’ಯ(Raja Rani 2) ಹೊಸ ಸೀಸನ್ ಈ ಶನಿವಾರ(ಜೂನ್ 11) ಶುರುವಾಗುತ್ತಿದೆ. ಎರಡನೇ ಸೀಸನ್ನನ್ನು ಮೊದಲ ಸೀಸನ್ನಿಗಿಂತ ಅದ್ದೂರಿ ಹಾಗೂ ವರ್ಣರಂಜಿತವಾಗಿ ಪ್ರೇಕ್ಷಕರ ಮುಂದಿಡಲು ಕಲರ್ಸ್ ಕನ್ನಡ ಸಜ್ಜಾಗಿದೆ. ಶೋನ ಆರಂಭಿಕ ಸಂಚಿಕೆ ಜೂನ್ 11ರ ಸಂಜೆ 7.30ಕ್ಕೆ ಪ್ರಸಾರಗೊಳ್ಳಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರಗೊಳ್ಳಲಿರುವ ರಾಜ-ರಾಣಿ ಶೋ, ಸೆಲಿಬ್ರಿಟಿಗಳ ಸಂಸಾರದ ಸುಖ-ದುಃಖಗಳನ್ನು ಬಣ್ಣಬಣ್ಣವಾಗಿ ಪ್ರೇಕ್ಷಕರ ಮುಂದಿಡುತ್ತದೆ. ಅಲ್ಲಿ ಮಾತು, ಆಟ, ಕಣ್ಣೀರು, ಪನ್ನೀರು ಎಲ್ಲವೂ ಇರುತ್ತದೆ. ಸಂಸಾರ ಅಂದರೆ ಅದೇ ಪ್ರೆಷರ್ ಕುಕ್ಕರು, ಫ್ರಿಜ್ಜು, ವಾಷಿಂಗ್ ಮಶೀನ್, ಲಂಚ್ ಬಾಕ್ಸು, ಮಕ್ಕಳ ಯೂನಿಫಾರ್ಮು, ವೀಕೆಂಡ್ ಶಾಪಿಂಗ್, ದಿನಸಿ ಪಟ್ಟಿ ಅಂತ ನೀವನ್ನಬಹುದು. ಹಾಗಿದ್ದರೂ ಪ್ರತೀ ಸಂಸಾರವೂ ಬೇರೆ ಬೇರೆ.
ಇನ್ನೊಬ್ಬರ ಸಂಸಾರ ತಾಪತ್ರಯಗಳೊಳಗೆ ಇಣುಕಿ ನೋಡುವುದರಲ್ಲಿ ಕುತೂಹಲ, ಖುಷಿಗಳಿದ್ದಂತೆಯೇ ಕಲಿಯುವುದೂ ಸಾಕಷ್ಟಿರುತ್ತದೆ. ಕಲಿಯುವುದೂ, ನಲಿಯುವುದೂ ಎರಡೂ ಇರೋದ್ರಿಂದಲೇ ‘ರಾಜ-ರಾಣಿ’ ಶೋ ಕರ್ನಾಟಕದ ಮನೆಮಾತಾಗಿರೋದು. ಮತ್ತೊಂದು ವಿಶೇಷತೆ ಎಂದರೆ ಈ ಬಾರಿಯ ರಾಜ-ರಾಣಿ ಸೀಸನ್ 2ನಲ್ಲಿ ಕಾಮನ್ ಜೋಡಿಗಳಿಗೂ ಅವಕಾಶ ದೊರೆಯಲಿದ್ದು ವೀಕ್ಷಕರಿಗಾಗಿ ಒಂದು ಕಾಂಟೆಸ್ಟ್ ಏರ್ಪಡಿಸಲಾಗಿದೆ. ಈ ಕಾಂಟೆಸ್ಟ್‌ನಲ್ಲಿ ಗೆದ್ದ ಜೋಡಿಯು ಸ್ವಿಟ್ಜರ್ಲ್ಯಾಂಡ್‌ನಲ್ಲಿ ತಮ್ಮ ಎರಡನೇ ಹನಿಮೂನ್ ಅನ್ನು ಆಚರಿಸಿಕೊಳ್ಳಬಹುದು.
ಈ ಕಾಂಟೆಸ್ಟ್ ಏನು ಎಂಬುದು ರಾಜ-ರಾಣಿ ಸೀಸನ್ 2 ನ ಮೊದಲನೇ ಎಪಿಸೋಡ್ ನಲ್ಲಿ ತಿಳಿಯಬಹುದಾಗಿದೆ. ಹಾಗಾಗಿ ತಪ್ಪದೆ ರಾಜ-ರಾಣಿ ಸೀಸನ್ 2 ಅನ್ನು ವೀಕ್ಷಿಸಿ ಹಾಗೂ ಸ್ವಿಟ್ಜರ್ಲ್ಯಾಂಡ್ ನಲ್ಲಿ ಹನಿಮೂನ್ ಆಚರಿಸಿಕೊಳ್ಳಲು ಸಜ್ಜಾಗಿ. ಎರಡನೇ ಸೀಸನ್ನಿನಲ್ಲಿ ಹನ್ನೆರೆಡು ಸೆಲೆಬ್ರಿಟಿ ದಂಪತಿಗಳು ಭಾಗವಹಿಸುತ್ತಿದ್ದಾರೆ. ಅದರಲ್ಲಿ ಹಾಡುವವರು, ಕುಣಿಯುವವರು, ನಗಿಸುವವರು, ನಟಿಸುವವರು ಎಲ್ಲರೂ ಇರುವುದರಿಂದ ಮನರಂಜನೆಗೇನೂ ಕೊರತೆಯಿಲ್ಲ.
ಮದುವೆ ದಿನವೂ ಇಷ್ಟೊಂದು ಬೇವರು ಕಿತ್ಕೊಂಡು ಬಂದಿರಲಿಲ್ಲ: ವಿಜಯ್ ದೀಪಿಕಾ ಜೋಡಿ
ಸೀಸನ್ ಕೊನೆಯಲ್ಲಿ ಒಂದು ಜೋಡಿ ವಿಜಯಶಾಲಿಯಾಗುತ್ತದೆ. ಹೆಸರಾಂತ ನಟ ನಟಿಯರಾದ ಸೃಜನ್ ಲೋಕೇಶ್ ಹಾಗೂ ತಾರಾ ಈ ಶೋನ ತೀರ್ಪುಗಾರರಾಗಿರುತ್ತಾರೆ. ಈ ಬಾರಿ ಕಾರ್ಯಕ್ರಮವನ್ನ ನಡೆಸಿಕೊಡುವ ಜವಾಬ್ದಾರಿ ಜಾಹ್ನವಿ ಅವರದು. ಈ ಸೀಸನ್ನಿನಲ್ಲಿ ಕಣಕ್ಕಿಳಿದಿರುವ ಜೋಡಿಗಳು ಯಾವ್ಯಾವುದು ಎನ್ನುವುದು ಎಲ್ಲರ ಕುತೂಹಲದ ಪ್ರಶ್ನೆ. ಖ್ಯಾತ ಸಂಗೀತ ನಿರ್ದೇಶಕ, ನಟ ವಿ ಮನೋಹರ್ ಮತ್ತು ಅವರ ಪತ್ನಿ ವೇಣಿ, ನಟ ನಟಿಯರಾದ ಸುಂದರ್ ಮತ್ತು ವೀಣಾ ದಂಪತಿ, ರಾಧಾ ರಮಣ ಖ್ಯಾತಿಯ ನಟಿ ಸುಜಾತಾ ಮತ್ತವರ ಪತಿ ಅಕ್ಷಯ್, ಬಿಗ್ ಬಾಸ್ ಖ್ಯಾತಿಯ ಧನರಾಜ್ ಮತ್ತು ಅವರ ಹೆಂಡತಿ ಶಾಲಿನಿ, ಬಿಗ್ ಬಾಸಿನಿಂದಲೇ ಹೆಸರಾದ ಕ್ರಿಕೆಟಿಗ ರಾಜೀವ್ ಮತ್ತು ರೇಷ್ಮಾ ಈ ಬಾರಿ ಸ್ಪರ್ಧೆಯಲ್ಲಿದ್ದಾರೆ. ಅವರೊಟ್ಟಿಗೆ ವಿವಿಧ ರಂಗಗಳಲ್ಲಿ ಹೆಸರು ಮಾಡಿ ನಿಮಗೆ ಪರಿಚಿತರಾಗಿರುವ ರಜತ್- ಅಕ್ಷಿತಾ, ಕಾವ್ಯಾ ಮಹದೇವ್-ಕುಮಾರ್, ಶೋಭರಾಜ್- ದೀಪಿಕಾ ಸುವರ್ಣ, ಸಂದೇಶ್- ಮನೀಶಾ, ನಿಶಿತಾ ಗೌಡ-ಪ್ರಸನ್ನ, ಅರುಣ್-ಮಾಧುರ್ಯ, ಮತ್ತು ಐಶ್ವರ್ಯಾ-ವಿನಯ್ ಕೂಡ ಈ ರಿಯಾಲಿಟಿ ಶೋನಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ.
18 ವರ್ಷ ವೈವಾಹಿಕ ಜೀವನದಲ್ಲಿ ನಾನು ಸಣ್ಣಗಾಗದಂತೆ ನೋಡಿಕೊಂಡಿದ್ದಾಳೆ ಪತ್ನಿ: ವಿ ಮನೋಹರ್
ಇಷ್ಟೂ ಜೋಡಿಗಳನ್ನು ಈ ಶನಿವಾರ ಸಂಜೆ ಏಳೂ ಮೂವತ್ತಕ್ಕೆ ಕಲರ್ಸ್ ಕನ್ನಡ ಚಾನೆಲ್ಲಿನ ‘ರಾಜ-ರಾಣಿ ಸೀಸನ್ 2’ ವೇದಿಕೆಯಲ್ಲಿ ಎದುರುಗೊಳ್ಳಲು ಮರೆಯಬೇಡಿ. ನಿಮ್ಮ ನಿಮ್ಮ ಸಂಸಾರ ತಾಪತ್ರಯಗಳನ್ನು ಪಕ್ಕಕ್ಕಿಟ್ಟು ಮನರಂಜನೆಯ ಮಳೆಯಲ್ಲಿ ನೆನೆಯುವ ಸದವಕಾಶವನ್ನು ತಪ್ಪಿಸಿಕೊಳ್ಳಬೇಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.