Latest Videos

ಹುಟ್ಟುಹಬ್ಬದ ಸಂಭ್ರಮದಲ್ಲಿ ಸತ್ಯ ಸೀರಿಯಲ್​ ಬಾಲ: ಇನ್ಫೋಸಿಸ್‌ ನೌಕರಿ ಬಿಟ್ಟು ನಟನೆಗೆ ಬಂದದ್ದೇ ರೋಚಕ...

By Suchethana DFirst Published Jun 16, 2024, 1:06 PM IST
Highlights

ಸತ್ಯ ಸೀರಿಯಲ್​ ಬಾಲ ಪಾತ್ರಧಾರಿ ಶಶಿರಾಜ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇನ್ಫೋಸಿಸ್‌ ನೌಕರಿ ಬಿಟ್ಟು ನಟನೆಗೆ ಬಂದದ್ದು ಹೇಗೆ? 
 

  ಐಷಾರಾಮಿ ಜೀವನವೇ ಬದುಕಿನ ಗುರಿ ಎಂದುಕೊಂಡಿದ್ದ ಹುಡುಗಿಯ ಪ್ರೀತಿಗೆ ಬಿದ್ದ   ಗೂಂಡಾನೊಬ್ಬ ಆಕೆಯನ್ನು ಮದ್ವೆಯೂ ಆಗಿ, ಕೊನೆಗೆ ಪೇಚಿಗೆ ಸಿಲುಕಿರುವ ಪಾತ್ರವೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್​ ಬಾಲನದ್ದು. ದಿವ್ಯಾ  ಎಂಬ ಬಡ ಕುಟುಂಬದ ಹುಡುಗಿಗೆ ಐಷಾರಾಮಿ ಜೀವನ ಮಾಡುವ ಆಸೆ. ಅದಕ್ಕಾಗಿಯೇ ಮೊದಲಿಗೆ ಗೂಂಡಾಗಿರಿ ಮಾಡಿ ಆಕೆಯ ಆಸೆಯನ್ನು ಪೂರೈಸುತ್ತಿದ್ದ. ಕೊನೆಗೆ ಒಳ್ಳೆಯವನಾದ. ಒಳ್ಳೆಯವನಾದ ಮೇಲೆ ಕೂಲಿ ನಾಲಿ ಮಾಡಿ ಸಂಪಾದನೆ ಮಾಡಲು ಶುರು ಮಾಡಿದಾಗ ಪತ್ನಿಗೆ ಬೇಡವಾದ. ಪತ್ನಿಯನ್ನು ಜೀವಕ್ಕಿಂತ ಈಗ ಹೆಚ್ಚಾಗಿ ಪ್ರೀತಿಸಿ ಆಕೆಯ ಆಸೆಗಳನ್ನು ಈಡೇರಿಸಲು ಪ್ರಯತ್ನಿಸಿದರೂ, ತನ್ನ ಗಂಡ ಕೋಟ್ಯಧಿಪತಿ ಅಲ್ಲ ಎಂದು ತಿಳಿಯುತ್ತಿದ್ದಂತೆಯೇ ದಿವ್ಯ ಶ್ರೀಮಂತ ಹುಡುಗರನ್ನು ಹುಡುಕಲು ಶುರು ಮಾಡಿದಳು. ಕೊನೆಗೆ ಆಕೆಗೆ ತನ್ನ ತಪ್ಪಿನ ಅರಿವಾಗಿ ಈಗ ಗಂಡನನ್ನು ಒಲಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ.

ಆಗ ರೌಡಿಯಾಗಿ, ಈಗ ಒಳ್ಳೆಯವನಾಗಿ ಜೀವನ ಸಾಗಿಸುತ್ತ ಎರಡೂ ವಿಭಿನ್ನ ಶೇಡ್​ಗಳಿಗೆ ಜೀವ ತುಂಬಿದ ಬಾಲನ ನಿಜವಾದ ಹೆಸರು ಶಶಿರಾಜ್. ಇಂದು ಅಂದರೆ ಜೂನ್​ 16 ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಶಶಿ ಅವರು ಕಿರುತೆರೆಗೆ ಬಂದಿರುವ ರೋಚಕ ಪಯಣದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಬೆಂಗಳೂರಿನಲ್ಲಿಯೇ ಹುಟ್ಟು ಬೆಳೆದು ಬೆಂಗಳೂರಿನ ಆಚೆಯೊಂದು ಪ್ರಪಂಚವೇ ಇದೆ ಎಂದು ತಿಳಿಯದ ಶಶಿ ಅವರಿಗೆ ಜೀವನ ಪಾಠ ಕಲಿಸಿದ್ದು ರಂಗಭೂಮಿ. ಶಾಲಾ-ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದೆ ಇದ್ದ ಶಶಿ ಅವರಿಗೆ  ಗೊತ್ತಿಲ್ಲದೆ ನಟನೆಯ ಗೀಳು ಹುಟ್ಟಿತ್ತಂತೆ. ಒಮ್ಮೆ ವೇದಿಕೆ ಹತ್ತಿದ ಅವರಿಗೆ ನಟನಾಗುವ ಹುಚ್ಚು ಹತ್ತಿತ್ತು. ನಟನಾ ವೃತ್ತಿಯೇ ತಲೆ ತುಂಬಿಕೊಂಡಿದ್ದರಿಂದ  ಬಿಸಿಎ, ಎಂಬಿಎ ಮಾಡಿದ್ರೂ ಅದನ್ನು ಪೂರ್ಣಗೊಳಿಸಲು ಆಗಲಿಲ್ಲ.  ಆದರೆ ನೌಕರಿಗೆ ಹೋಗಲೇಬೇಕಿತ್ತು.

ರೇಪಿಸ್ಟ್ ಎನ್‌ಕೌಂಟರ್‌ಗೆ ಮುಂದಾದ 'ಸತ್ಯ', ಕಿಲ್ಲಿಂಗ್ ಸ್ಟಾರ್ ಕೇಸೂ ಇವ್ಳಿಗೇ ಕೊಡಿ ಅಂತಿರೋ ವೀಕ್ಷಕರು!

ಆಗಲೇ  ಇನ್ಫೋಸಿಸ್‌ನಲ್ಲಿ ಸಂದರ್ಶನಕ್ಕೆ ಕರೆ ಬಂದಿತ್ತು. ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ  ಶಶಿ ಅವರು,  ಇನ್ಫೋಸಿಸ್‌ನಲ್ಲಿ ಸೆಲೆಕ್ಟ್​ ಆದೆ. ಹಾಗೆಂದು ಅಲ್ಲಿ ಆಯ್ಕೆಯಾದದ್ದು  ನನ್ನ ಟೆಕ್ನಿಕಲ್ ಸ್ಕಿಲ್ಸ್‌ನಿಂದ ಅಲ್ಲ. ಇಂಗ್ಲಿಷ್​  ಕೂಡ ಅಷ್ಟಕ್ಕಷ್ಟೇ ಇತ್ತು. ಆದರೆ ಪಠ್ಯೇತರ ಚಟುವಟಿಕೆ ನೋಡಿ ಸಂದರ್ಶಕರಿಗೆ  ಇಷ್ಟ ಆಯ್ತು. ಹಾಗೆ ಹೇಳಬೇಕು ಎಂದರೆ ಇನ್ಫೋಸಿಸ್‌ನಲ್ಲಿ ಫ್ಯಾಷನ್ ಮತ್ತು ಆರ್ಟ್ಸ್‌ನಲ್ಲಿ ಮುಂದೆ ಇದ್ದವರಿಗೆ  ಸಪೋರ್ಟ್ ಮಾಡುತ್ತಾರೆ. ನಾನು ರಂಗಭೂಮಿ ಕಲಾವಿದ ಎಂದು ತಿಳಿದಾಗ,  ನಮ್ಮ ಟೀಮ್‌ಗೆ ಬಹುಮಾನ ಬರುವ ಹಾಗೆ ಮಾಡಬೇಕು ಅಂತ ಹೇಳಿ ನನ್ನನ್ನ ಸೆಲೆಕ್ಟ್ ಮಾಡಿದರು. ಅಲ್ಲಿ,  ಮೂರೂವರೆ ವರ್ಷ ಕೆಲಸ ಮಾಡಿದೆ. ನಂತರ ಟೀಮ್‌ಲೀಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡಿದೆ. ನಂತರ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟೆ ಎಂದಿದ್ದಾರೆ ಶಶಿ. ಇನ್​ಫೋಸಿಸ್​ನಲ್ಲಿ ಪರಿಚಯವಾದ ಒಬ್ಬರ ಮೂಲಕ ಇವರಿಗೆ ನಟನೆಯಲ್ಲಿ ಬ್ರೇಕ್​ ಸಿಕ್ಕಿತು. 

  ‘ಮೂರು ಮುತ್ತು’. ‘ಅಂಕೆ ತಪ್ಪಿದ ಶಂಕರ್‌ ಲಾಲ್’, ‘ತದ್ರೂಪಿ’, ‘ಕಕೇಶಿಯನ್ ಚಾಕ್ ಸರ್ಕಲ್’, ‘ಸ್ಮೃತಿ’, ‘ತಂತಿ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.   ‘ಶಾಂತಂ ಪಾಪಂ’ನಲ್ಲಿ ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ‘ಪ್ರೇಮಲೋಕ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಸತ್ಯ ಸೀರಿಯಲ್​ನಲ್ಲಿ ಇವರು ಆಡಿಷನ್​ ಕೊಟ್ಟಿದ್ದು ಕಾರ್ತಿಕ್​ ಪಾತ್ರಕ್ಕೆ,  ಆದರೆ ಸೆಲೆಕ್ಟ್ ಆಗಿದ್ದು ಬಾಲಾ ಪಾತ್ರಕ್ಕೆ.  ಆದರೆ ಈ ಪಾತ್ರದಲ್ಲಿಯೂ ಜೀವ ತುಂಬುತ್ತಿದ್ದಾರೆ. ಬೇರೆ ಬೇರೆ ವಾಹಿನಿಗಳಿಂದ ಆಫರ್ಸ್ ಬರುತ್ತಿವೆ. ಒಳ್ಳೊಳ್ಳೆ ಪಾತ್ರಗಳು ಸಿಕ್ಕರೆ ಮಾಡುತ್ತೇನೆ. ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿವೆ ಎನ್ನುತ್ತಾರೆ ಶಶಿ. 

ಸತ್ಯ ಸೀರಿಯಲ್​ ಅಮ್ಮ-ಮಗಳ ಡಾನ್ಸ್​ಗೆ ಫ್ಯಾನ್ಸ್​ ಅಚ್ಚರಿ! ಊರ್ಮಿಳಾ-ರಿತು ಕುರಿತ ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ

click me!