Latest Videos

ಪಾನೀಪುರಿ ಆಮೇಲೆ ತಿನ್ನು ತಾಯಿ... ನಮ್ಗೆ ಫುಲ್​ ಟೆನ್ಷನ್​ ಆಗ್ತಿದೆ... ಬೇಗ ಮನೆಗೆ ಹೋಗು

By Suchethana DFirst Published Jun 16, 2024, 12:06 PM IST
Highlights

ಒಂದು ಲಕ್ಷ ರೂಪಾಯಿ ಹಿಡಿದುಕೊಂಡು ಪಾನೀಪುರಿ ತಿನ್ನಲು ಹೋದ ಭಾಗ್ಯಳನ್ನು ನೋಡಿ ಅಭಿಮಾನಿಗಳಿಗೆ ಟೆನ್ಷನ್​ ಶುರುವಾಗಿದೆ. ಅವರು ಹೇಳ್ತಿರೋದೇನು?
 

ಭಾಗ್ಯಳ ಗೋಳು ಮುಗಿದಿದೆ. ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಒಂದು ಲಕ್ಷ ರೂಪಾಯಿ ಮುಂಗಡ ಹಣ ಅವಳ ಕೈಗೆ ಸಿಕ್ಕಿದೆ.  ಸಾಮಾನ್ಯವಾಗಿ ಸ್ಟಾರ್​ ಹೋಟೆಲ್​ಗಳ ಶೆಫ್​ಗಳಿಗೆ ನೀಡುವಂತೆ ಲಕ್ಷ ಸಂಬಳ ಪಡೆಯುತ್ತಾಳೆ ಇನ್ನುಮುಂದೆ ಭಾಗ್ಯ.  ಒತ್ತುಶ್ಯಾವಿಗೆಯ ಸ್ಪೆಷಲಿಸ್ಟ್​ ಆದ ಭಾಗ್ಯಳ ಕೈಗೆ ಒಂದು ಲಕ್ಷ ರೂಪಾಯಿ ಚೆಕ್​ ಬಂದಿದ್ದು, ಅದನ್ನು ಬ್ಯಾಂಕ್​ಗೆ ಹೋಗಿ ಹಣ ತಂದಿದ್ದಾಳೆ.  ಒಂದು ಪೈಸೆ ದುಡಿಯುವ ತಾಕತ್ತು ಇಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ ಪತಿ ತಾಂಡವ್​. ಆದರೆ ಒಂದೇ ಸಲಕ್ಕೆ ಒಂದು ಲಕ್ಷ ರೂಪಾಯಿ ದುಡಿದಿದ್ದಾಳೆ. ಸ್ವಂತ ದುಡಿಮೆ. ಅದೆಷ್ಟು ಖುಷಿ! ಮಕ್ಕಳಿಗೆ ಒಂದಿಷ್ಟು ತಿನಿಸುಗಳನ್ನು ತೆಗೆದುಕೊಂಡು ಹೋಗಿರುವ ಭಾಗ್ಯ, ಸ್ವಂತ ದುಡಿಮೆಯ ಹಣದಲ್ಲಿ ಪಾನಿಪುರಿ ತಿಂದಿದ್ದಾಳೆ. ಇಷ್ಟು ದಿನ ಚಿಕ್ಕಪುಟ್ಟ ಖರ್ಚಿಗೂ ಗಂಡನ ಬಳಿ ಕೈಚಾಚುತ್ತಿದ್ದೆ, ಇದೀಗ ಸ್ವಂತ ದುಡಿಮೆಯಿಂದ ತಿನ್ನುತ್ತಿದ್ದೇನೆ ಎನ್ನುತ್ತಲೇ ಖುಷಿ ಪಟ್ಟಿದ್ದಾಳೆ ಭಾಗ್ಯ. 

ಪಾನಿಪುರಿ ತಿನ್ನುತ್ತಿದ್ದದ್ದನ್ನು ನೋಡಿ ಇತ್ತ ಅಭಿಮಾನಿಗಳಿಗೆ ಟೆನ್ಷನ್​ ಶುರುವಾಗಿದೆ. ಬ್ಯಾಗ್​ನಲ್ಲಿ ಒಂದು ಲಕ್ಷ ರೂಪಾಯಿ ಇಟ್ಕೊಂಡು ಯಾರಾದ್ರೂ ಹೀಗೆ ಬೀದಿ ಬದಿ ನಿಲ್ತಾರಾ? ತಲೆ ಸರಿ ಇಲ್ವಾ ನಿನಗೆ? ನಮಗೆ ಟೆನ್ಷನ್​ ಆಗ್ತಿದೆ. ಬೇಗ ಮನೆಗೆ ಹೋಗು. ಸಿಕ್ಕ ಒಂದು ಲಕ್ಷ ರೂಪಾಯಿಯನ್ನು ಕಳೆದುಕೊಂಡು ಆಮೇಲೆ ಗೋಳಾಡೋದನ್ನು ನಮ್ಮಿಂದ ನೋಡಲು ಆಗಲ್ಲ. ಪಾನಿಪುರಿ ಆಮೇಲೆ ತಿನ್ನು, ಭಾಷಣ ಆಮೇಲೆ ಬಿಗಿ ಬೇಗ ಮನೆಗೆ ಹೋಗು ತಾಯಿ ಎಂದೆಲ್ಲಾ ಕಮೆಂಟಿಗರು ಕಮೆಂಟ್​ ಹಾಕ್ತಿದ್ದಾರೆ. ಎಲ್ಲಿ ಪೆದ್ದು ಭಾಗ್ಯ ಲಕ್ಷ ರೂಪಾಯಿ ಕಳೆದುಕೊಂಡು ಹೋಗುತ್ತಾಳೋ ಎನ್ನುವ ಟೆನ್ಷನ್​ ಈಕೆಯ ಅಭಿಮಾನಿಗಳಿಗೆ. 

500ರ ಸಂಭ್ರಮದಲ್ಲಿರೋ ಭಾಗ್ಯಳ ಕೈಗೆ ಬಂತು ಒಂದು ಲಕ್ಷ ರೂ. ಚೆಕ್​! ಗೃಹಿಣಿಯ ತಾಕತ್ತಿಗೆ ಶ್ಲಾಘನೆಗಳ ಮಹಾಪೂರ

ಅಷ್ಟಕ್ಕೂ ಭಾಗ್ಯಳ ಭಾಗ್ಯವೇ ಹಾಗಲ್ಲವೆ? ಎಲ್ಲೆಲ್ಲೂ ಎಡವಟ್ಟು. ಪಾತ್ರವೇ ಅಳುಮುಂಜಿಯದ್ದದು. ಅಷ್ಟಕ್ಕೂ, ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಯಾರದ್ದೋ ಹೆಸರಿನಲ್ಲಿ ಸೇರಿಕೊಂಡುಬಿಟ್ಟಿದ್ದಳು. ಖುದ್ದು ಅವಳಿಗೂ ವಿಷಯ ಗೊತ್ತಿರಲಿಲ್ಲ. ಆದರೆ ಅಸಲಿಯತ್ತು ಗೊತ್ತಾಗುತ್ತಿದ್ದಂತೆಯೇ ಅವಳನ್ನು ಕೆಲಸದಿಂದ ಹೊರಹಾಕುವ ಪ್ರಯತ್ನ ನಡೆದಿತ್ತು. ಯಾವ ಕೆಲಸ ಕೊಟ್ಟರೂ ಸರಿ ಮಾಡುತ್ತೇನೆ, ಅಡುಗೆ ಕೆಲಸ ಕೊಡಿ ಎಂದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಕಾರಣ, ಅವಳಿಗೆ ಇಂಗ್ಲಿಷ್​ ಬರಲ್ಲ, ಸೀರೆಯುಡುವ ಅಪ್ಪಟ ಗೃಹಿಣಿ ಎನ್ನುವ ತಾತ್ಸಾರ. ಭಾಗ್ಯ ಹೋಟೆಲ್​ನವರಿಗೆ ಕಾಡಿ ಬೇಡಿದರೂ ಅವರಿಗೆ ಕರುಣೆ ಬರುವ ರೀತಿಯಲ್ಲಿ ಕಾಣಿಸುತ್ತಿರಲಿಲ್ಲ. ಭಾಗ್ಯಳ ಗೋಳು ನೋಡಿ ವೀಕ್ಷಕರಿಗೆ ತಲೆ ಚಿಟ್ಟು ಹಿಡಿದು ಹೋಗಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.

 ಸ್ಟಾರ್​ ಹೋಟೆಲ್​ನ ಮೇನ್​ ಶೆಫ್​ ಅವಳನ್ನು ಇನ್ನೇನು ನೂಕಿ ಹೊರಹಾಕುವುದೊಂದೇ ಬಾಕಿ. ಅಷ್ಟರಲ್ಲಿಯೇ ಖ್ಯಾತ ಪತ್ರಕರ್ತರಾಗಿರುವ ಜೊತೆಗೆ ಬಿಗ್​ಬಾಸ್ ಸ್ಪರ್ಧಿಯೂ ಆಗಿದ್ದ ಗೌರೀಶ್​ ಅಕ್ಕಿ ಅವರ ಎಂಟ್ರಿಯಾಗಿತ್ತು. ಅವರಿಗೆ ಒತ್ತು ಶ್ಯಾವಿಗೆ ಬೇಕಾಗಿರುತ್ತದೆ. ಇದನ್ನು ಕೇಳಿದವರಿಗೆ ಪಕ್ಕದ ಚಿಕ್ಕ ಹೋಟೆಲ್​ನಿಂದ ಖರೀದಿ ಮಾಡುವ ಪಾಡು ಈ ಸ್ಟಾರ್​ ಹೋಟೆಲ್​ನವರದ್ದು. ಆದರೆ ಅಲ್ಲಿ ಅವರಿಗೆ ಸಿಗುವುದಿಲ್ಲ. ಅಷ್ಟರಲ್ಲಿಯೇ  ಮಧ್ಯೆ ಪ್ರವೇಶಿಸುವ ಭಾಗ್ಯ ತನಗೆ ಇದು ಚೆನ್ನಾಗಿ ಮಾಡುವುದು ಗೊತ್ತು. ನಾನು ಮಾಡುತ್ತೇನೆ ಎಂದರೂ ಮುಖ್ಯಸ್ಥ ಆಕೆಯನ್ನು ಹೀಯಾಳಿಸುತ್ತಾನೆ. ಒತ್ತು ಶ್ಯಾವಿಗೆ ಮಾಡಿಕೊಟ್ಟು ಹೋಟೆಲ್​ನವರ ಭಯದಿಂದ ಅಲ್ಲಿಂದ ಕಾಲ್ಕೀಳುತ್ತಾಳೆ ಭಾಗ್ಯ. ಪತ್ರಕರ್ತರಿಗೆ ಭಾಗ್ಯಳ ಒತ್ತುಶ್ಯಾವಿಗೆ ಇಷ್ಟವಾಗುತ್ತದೆ. ಆದರೆ ಇಲ್ಲೇ ಇದ್ದರೆ ಪೊಲೀಸರಿಗೆ ಕರೆಸುತ್ತೇನೆ ಎಂದು ಮುಖ್ಯಸ್ಥ ಹೆದರಿಸಿದ್ದರಿಂದ ಭಾಗ್ಯ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾಳೆ. ನಂತರ ಆಕೆಯನ್ನು ಹುಡುಕಿ ತಂದು  ಒಂದು ಲಕ್ಷ ರೂಪಾಯಿ ನೀಡಲಾಗಿದೆ. 

ಸೀರಿಯಲ್​ನಿಂದ ಮನೆಹಾಳು ಬುದ್ಧಿನೂ ಬರುತ್ತಲ್ಲಾ ಅತ್ತೆ... ಭೂಮಿ ಬೀಸಿದ ಚಾಟಿಗೆ ಶಕುಂತಲಾ ತತ್ತರ...


click me!