BBK9: ಅನ್ನ ತಿಂದು ಹಿಂದೆಯಿಂದ ಚೂರಿ ಹಾಕಬಾರದು, ಮೊದಲ ದಿನವೇ ಸಿಡಿದೆದ್ದ ಪ್ರಶಾಂತ್, ಆರ್ಯವರ್ಧನ್, ದರ್ಶ್

Published : Sep 25, 2022, 10:41 AM IST
BBK9: ಅನ್ನ ತಿಂದು ಹಿಂದೆಯಿಂದ ಚೂರಿ ಹಾಕಬಾರದು, ಮೊದಲ ದಿನವೇ ಸಿಡಿದೆದ್ದ ಪ್ರಶಾಂತ್, ಆರ್ಯವರ್ಧನ್, ದರ್ಶ್

ಸಾರಾಂಶ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್ ಮತ್ತು ದರ್ಶ್ ಚಂದ್ರಪ್ಪ ನಡುವೆ ವಾಗ್ವಾದ ತಾರಕಕ್ಕೇರಿದೆ. ಮೊದಲ ದಿನವೇ ಬಿಗ್ ಮನೆ ಕಾವೇರಿರುವುದು ಕುತೂಹಲ ಹೆಚ್ಚಿಸಿದೆ. 

ಬಿಗ್ ಬಾಸ್ ಕನ್ನಡ ಒಟಿಟಿ ಶೋ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಟಿವಿ ಬಿಗ್ ಬಾಸ್ ಅದ್ದೂರಿಯಾಗಿ ಪ್ರಾರಂಭವಾಗಿದೆ. ನಿನ್ನ ಸಂಜೆ (ಸೆಪ್ಟಂಬರ್ 24) ಟಿವಿ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಆಗಿದೆ. ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ಬಿಗ್ ಮನೆಗೆ ಕಳುಹಿಸಿದ್ದಾರೆ. ಈ ಬಾರಿಯ ಬಿಗ್ ಬಾಸ್ 9 ಜೂನಿಯರ್ಸ್ ವರ್ಸಸ್ ಸೀನಿಯರ್ ಎನ್ನುವ ಕಾನೆಪ್ಟ್‌ನಲ್ಲಿ ನಡೆಯುತ್ತಿದೆ. ಒಟಿಟಿಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ 4 ಜನ ಟಿವಿ ಬಿಗ್ ಬಾಸ್ ‌ಗೆ ಎಂಟ್ರಿ ಕೊಟ್ಟಿದ್ದಾರೆ. ಒಟ್ಟು 18 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಈಗಾಗಲೇ ಬಿಗ್ ಮನೆ ಕಾವೇರಿದೆ. 

ಅಂದಹಾಗೆ ಬಿಗ್ ಬಾಸ್ ಸೀಸನ್ 9ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಲ್ಲಿ ಪ್ರವೀಣರಾಗಿರುವ ಮೊದಲ ಸೀಸನ್ ರನ್ನರ್ ಅಪ್ ಅರುಣ್ ಸಾಗರ್ ನಂತರದ ಸೀಸನ್‌ಗಳಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಾದ ದೀಪಿಕಾ ದಾಸ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಅನುಪಮಾ ಗೌಡ, ಆರ್ಯವರ್ಧನ್, ರಾಕೇಶ್ ಅಡಿಗ ಹಾಗೂ ನವೀನರಾದ ನಟಿ ಮಯೂರಿ, ನವಜ್, ದರ್ಶ್ ಚಂದ್ರಪ್ಪ, ನಟಿ ಅಮೂಲ್ಯಾ, ವಿನೋದ್ ಗೊಬ್ರಗಾಲ, ನಟಿ ನೇಹಾ ಗೌಡ, ಬೈಕರ್ ಐಶ್ವರ್ಯ ಪಿಸೆ, ರೂಪೇಶ್ ರಾಜಣ್ಣ, ನಟಿ ಕಾವ್ಯಶ್ರೀ ಗೌಡ. 

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್ ಮತ್ತು ದರ್ಶ್ ಚಂದ್ರಪ್ಪ ನಡುವೆ ವಾಗ್ವಾದ ತಾರಕಕ್ಕೇರಿದೆ. ಮೊದಲ ದಿನವೇ ಬಿಗ್ ಮನೆ ಕಾವೇರಿರುವುದು ಕುತೂಹಲ ಹೆಚ್ಚಿಸಿದೆ. ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್ ಗುರೂಜಿಯನ್ನು ಕೆಣಕಿ, ನಿಮ್ಮ ಹೆಸರು ಆರ್ಯವರ್ಧನ್ ಅಲ್ಲವೇ ಅಲ್ಲ ಎಂದು ಕೂಗಾಡಿದ್ದಾರೆ. ಮತ್ತೊಂದೆಡೆ ದರ್ಶ್, ಪ್ರಶಾಂತ್ ವಿರುದ್ಧ ಹರಿಹಾಯ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದು ಹೊರಗಡೆ ಬಂದು ಹೆಣ್ಣುಮಕ್ಕಳ ಬಗ್ಗೆ ಕಚಡವಾಗಿ ಮಾತನಾಡುತ್ತಾರೆ ಎಂದು ಆರೋಪಿಸಿದ್ದಾರೆ. 

Bigg Boss Kannada Season 9: ಬಿಗ್‌ಬಾಸ್‌ ಮನೆಗೆ ಕಾಲಿಟ್ಟ ಒಟ್ಟು 18 ಸ್ಪರ್ಧಿಗಳ ಪಟ್ಟಿ ಇಲ್ಲಿದೆ

ಊಟದ ಟೇಬಲ್ ಮೇಲೆ ಎಲ್ಲರೂ ಕುಳಿತಿದ್ದರು. ಆಗ ಆರ್ಯವರ್ಧನ್ ಗುರೂಜಿ, '10 ಲಕ್ಷ ಜನಕ್ಕೆ ನಾನು ಜೋತಿಷ್ಯ ಹೇಳಿದ್ದೀನಿ' ಎಂದು ಹೇಳಿದರು. ಆರ್ಯವರ್ಧನ್ ಹೀಗೆ ಹೇಳುತ್ತಿದ್ದಂತೆ ಪ್ರಶಾಂತ್ ಗರಂ ಆದರು.  ಏನೇನೋ ಹೇಳಬೇಡಿ, 10 ಲಕ್ಷ ಅಂತೆಲ್ಲ' ಎಂದರು. ಬಳಿಕ ಅವರು ನಿಮ್ಮ ಹೆಸರು ಆರ್ಯವರ್ಧನ್ ಅಲ್ಲ, ನಿಜವಾದ ಹೆಸರುನಾನು ಹೇಳೋದಾ? ಎಂದು ಕೂಗಾಡಿದರು.  

ಬಳಿಕ ದರ್ಶ್ ಚಂದ್ರಪ್ಪ, ಬಿಗ್ ಬಾಸ್ ನಲ್ಲಿ ಇರುವಾಗ ಚೆನ್ನಾಗಿ ಇದ್ದು ಹೊರಗಡೆ ಬಂದು ಬೇರೆ ಹೆಣ್ಣುಮಕ್ಕಳ ಬಗ್ಗೆ ಎಷ್ಟು ಕಚಡವಾಗಿ ಮಾತಾಡ್ತಿದ್ರು ಅಂದರೆ, ಎನ್ನುತ್ತಿದ್ದಂತೆ ಪಕ್ಕದಲ್ಲೇ ಇದ್ದ ದಿವ್ಯಾ ಹೌದು ಮಾತನಾಡುತ್ತಿದ್ರು ಅಂತ ಹೇಳಿದ್ರು.  ನಂತರ ಪ್ರಶಾಂತ್ 'ನನ್ನ ಸ್ವಾತಂತ್ರ್ಯ ನನ್ನ ಅಭಿಪ್ರಾಯ' ಎಂದರು. ಅದಕ್ಕೆ ದರ್ಶ್ 'ಅನ್ನ ತಿಂದು ಹಿಂದೆಯಿಂದ ಚೂರಿ ಹಾಕೋದು ಮಾಡಬಾರ್ದು' ಅಂತ ಹೇಳಿದ್ರು. ನಂತರ ಆರ್ಯವರ್ಧನ್ ಮತ್ತು ಪ್ರಶಾಂತ್ ನಡುವೆ ಮಾತಿನ ಚಕಮಕಿ ಜೋರಾಗಿತ್ತು. ಆರ್ಯವರ್ಧನ್ ಪ್ರಶಾಂತ್ ಅವರಿಗೆ ಎಡಗಾಲಲ್ಲಿ ತುಳಿದು ಹೋಗ್ತಾನಿ ಅಂತ ಸಿಟ್ಟಾಗಿ ಹೇಳಿದರು.

BBK9: ಇದನ್ನೆಲ್ಲ ನೋಡ್ತೀನಿ ಅಂತ ಯಾವತ್ತು ಅಂದುಕೊಂಡಿರ್ಲಿಲ್ಲ- ಕಿಚ್ಚ ಸುದೀಪ್

ಮೊದಲ ದಿನವೇ ಬಿಗ್ ಬಾಸ್ ಮನೆ ತಾರಕಕ್ಕೇರಿರುವುದು ಅಚ್ಚರಿ ಮೂಡಿಸಿದೆ. ಸ್ಪರ್ಧಿಗಳ ತಮ್ಮತಮ್ಮ ಆಟವನ್ನು ಪ್ರಾರಂಭಿಸಿದ್ದಾರೆ. 18 ಜನರ ನಡುವೆಯೂ ಪೈಪೋಟಿ ಜೋರಾಗಿದ್ದು ಯಾರು ಸೀಸನ್ 9 ವಿನ್ನರ್ ಆಗಿ ಹೊರಹೊಮ್ಮುತ್ತಾರೆ ಎಂದು ನೋಡಬೇಕಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!