BBK9 100 ಚಡ್ಡಿ ಕೊಡ್ಸು ಅಂದ್ರೆ ಬರೀ 6 ಚಡ್ಡಿ ಕೊಡ್ಸಿದ್ದಾರೆ ನಮ್ಮಪ್ಪ: ಸೈಕ್ ನವಾಜ್

By Vaishnavi Chandrashekar  |  First Published Sep 25, 2022, 10:40 AM IST

ಬಿಗ್ ಬಾಸ್‌ ಮನೆ ಪ್ರವೇಶಿಸಿದ ಸೈಕ್ ನವಾಜ್. ಮಗ ಒಂದೇ ವಾರದಲ್ಲಿ ಹೊರ ಬರ್ತಾನೆ ಅಂತಾರೆ ತಂದೆ... 


ಸಿನಿಮಾ ಫಸ್ಟ್‌ ಡೇ ಫಸ್ಟ್‌ ಶೋ ನೋಡಿ ಹಿಂಗ್ ಹಿಂಗೇ ಇದೆ ಇವ್ರು ಹಿಂಗ್ ಆಕ್ಷನ್ ಕಟ್ ಹೇಳಿದ್ದಾರೆ ಅಂತ ಪಂಚ್ ಡೈಲಾಗ್‌ ಮೂಲಕ ರಿವ್ಯೂ ಕೊಡುವ ಸೈಕ್ ನವಾಜ್ ಈಗ ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 9 ಪ್ರವೇಶಿಸಿದ್ದಾರೆ. 19 ವರ್ಷದ ಹುಡುಗ ಒಂದು ವರ್ಷದ ಅವಧಿಯಲ್ಲಿ ಮಾಡಿರುವ ನೇಮ್ ಆಂಡ್ ಫೇಮ್‌ ಬಗ್ಗೆ ಕುಟುಂಬಸ್ಥರು ಏನು ಹೇಳುತ್ತಾರೆ. ಜನರು ನೋಡುವ ದೃಷ್ಟಿ ಹೇಗಿದೆ ಎಂದು ಮಾತನಾಡಿದ್ದಾರೆ. 

'6 ತಿಂಗಳು ಮುಂಚೆ ನಾನು ಸಾಮಾನ್ಯ ವ್ಯಕ್ತಿಯಾಗಿ ನಡೆದುಕೊಂಡು ಹೋಗಿದ್ದರೆ ಯಾರೂ ಕೇರ್ ಮಾಡುತ್ತಿರಲಿಲ್ಲ ಈಗ ಜನರು ನನ್ನನ್ನು ಕಂಡು ಹಿಡಿಯುತ್ತಾರೆ ನವಾಜ್ ಅಲ್ವಾ ನಮಗೆ ನಿಮ್ಮ ಸ್ಟೈಲ್ ರಿವ್ಯೂ ತುಂಬಾನೇ ಇಷ್ಟ ಅಂತ ಹೇಳ್ತಾರೆ. ಜೀವನದಲ್ಲಿ ತುಂಬಾನೇ ಖುಷಿಯಾಗಿರುವೆ. ನಾನು ದೊಡ್ಡು ಮೂವಿ ಲವರ್ ಎಲ್ಲಾ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಬೇಕು ಆದರೆ ಈಗ ಜನರು ಬರುತ್ತಿಲ್ಲ. ಎಷ್ಟು ಕಷ್ಟ ಪಟ್ಟು ಸಿನಿಮಾ ಮಾಡ್ತಾರೆ ಕಷ್ಟ ಪಟ್ಟಿರುವ ಜನರಿಗೆ ಸಹಾಯ ಮಾಡಬೇಕು ಅಂತ ಸ್ನೇಹಿತರ ಜೊತೆ ಹೇಗೆ ಮಾತನಾಡುತ್ತೀನಿ ಅದೇ ರೀತಿ ರಿವ್ಯೂ ಮಾಡಲು ಶುರು ಮಾಡಿದೆ. ನಾನು ಹೇಳುವುದರಿಂದ 10-15 ಜನ ಆದ್ರೂ ಸಿನಿಮಾ ನೋಡ್ತಾರೆ ಅನ್ನೋ ಹೆಮ್ಮೆ ಇದೆ. ಹುಚ್ಚನ ರೀತಿ ಆಡ್ತೀಯಾ ಅಂತ ತುಂಬಾ ಜನರು ಬೈದ್ರು ಆಗ ಬೇಜಾರ್ ಆಯ್ತು...ಹೌದು ಜನರು ಬೈತ್ತಾರೆ ನಾನು ಹುಚ್ಚನೇ. ಈಗ ಶುಕ್ರವಾರ ಆದರೆ ಸಾಕು ಜನರು ಕಾಯುತ್ತಾರೆ ನವಾಜ್ ರಿವ್ಯೂ ಮಾಡ್ತಾನೆ ಅಂತ.  ಶುರು ಮಾಡಿದ್ದು ಒಬ್ಬನೇ ಈಗ ತುಂಬಾ ಜನರನ್ನು ಸಂಪಾದನೆ ಮಾಡಿದ್ದೀನಿ. ಮಾಧ್ಯಮದವರು ಥಿಯೇಟರ್‌ಗೆ ಬಂದ್ರೆ ಹೀರೋ ಹೀರೋಯಿನ್ ಮಾತನಾಡಲು ಬಿಡುತ್ತಾರೋ ಇಲ್ವೋ ಮೊದಲು ನವಾಜ್ ಮಾತನಾಡಬೇಕು ಅಂತ ಜನರು ಡಿಮ್ಯಾಂಡ್ ಮಾಡುತ್ತಾರೆ. ನಮ್ಮ ಮನೆಯಲ್ಲಿ ಅಪ್ಪ-ಅಮ್ಮ ಮತ್ತು ತಮ್ಮ ಇರ್ತೀವಿ. ಮನೆಯಲ್ಲಿ ತುಂಬಾನೇ ಸ್ಟ್ರಿಟ್ ಇರುವ ಕಾರಣ ಅವರಿಗೆ ಗೊತ್ತಿಲ್ಲದೆ ಹೋಗಿ ನಾನು ವಾರಕ್ಕೊಂದು ಸಿನಿಮಾ ನೋಡ್ಕೊಂಡು ಬರ್ತೀನಿ. ನವಾಜ್ ಇದ್ರೆನೇ ಸಿನಿಮಾ ನೋಡೋದು ಅಂತಾರೆ ಸ್ನೇಹಿತರು ಏಕೆಂದರೆ ಅಷ್ಟು ಮನೋರಂಜನೆ ನೀಡುವೆ. ನನ್ನ ಕನಸು ಇರುವುದು ಅದೇ...ಚಿತ್ರರಂಗದಲ್ಲಿ ಕಾಮಿಡಿಯನ್ ಆಗಬೇಕು. ಗೆಲ್ಲಬೇಕು ಅಂತ ಬಿಗ್ ಬಾಸ್‌ಗೆ ಹೋಗುತ್ತಿಲ್ಲ ..ಬಿಗ್ ಬಾಸ್‌ನ ಗೆಲ್ಲಿಸಬೇಕು ಅಂತ ಹೋಗುತ್ತಿರುವೆ ನಾನು ಎಷ್ಟು ಕಷ್ಟ ಪಟ್ಟು ಬಂದಿರುವೆ ಎಂದು ನನಗೆ ಗೊತ್ತಿದೆ ಬಿಗ್ ಬಾಸ್ ವೇದಿಕೆ ಮೇಲೆ ನಿಂತಿರುವೆ ಅಂದ್ರೆ ಅದೇ ಸಾಧನೆ ನನಗೆ. ಮನೆ ಕೆಲಸ ಏನೂ ಬರೋಲ್ಲ ಕಸ ಗುಡಿಸುವುದಕ್ಕೆ ಕೂಡ ಬರೋಲ್ಲ ..ಇಲ್ಲಿ ನಮ್ಮ ಬಟ್ಟೆ ನಾವು ವಾಶ್ ಮಾಡಬೇಕು ಅದೇ ಕಷ್ಟ ಆಗುತ್ತೆ.  ಬಿಗ್ ಬಾಸ್ ಮನೆಯಲ್ಲಿ ನಮಗೆ ಇಷ್ಟ ಆದ್ರೆ ನಾವು ಹಮ್ ಸಾಥ್ ಸಾಥ್ ಹೇ ಇಷ್ಟ ಆಗಿಲ್ಲ ಅಂದ್ರೆ ಹಮ್ ಆಪ್ಕೆ ಹೇ ಕೋನ್. ಟೆಂಪರ್ ಮತ್ತು ಕೌಂಟರ್‌ ಮಿರ್ಚಿ ಮಸಾಲ ಜನರಿಗೆ ನಾನು ಇಷ್ಟ ಆಗುತ್ತೀನಿ' ಎಂದು ಪ್ರೋಮೋ ವಿಡಿಯೋದಲ್ಲಿ ನವಾಜ್ ಮಾತನಾಡಿದ್ದಾರೆ. 

Tap to resize

Latest Videos

BBK9 ಒಳ್ಳೆ ಹುಡುಗ ಪ್ರಥಮ್‌ ಮೇಲೆ ಪ್ರತಿ ದಿನ ಕೋಪ ಬಂದಿದೆ, ಮೆಂಟಲಿ ಟಾರ್ಚರ್ ಕೊಡ್ತಾರೆ: ಅಮೂಲ್ಯ ಗೌಡ

'ಜನರು ನನ್ನ ಸೈಕ್ ನವಾಜ್ ಎಂದು ಕರೆಯುತ್ತಾರೆ. ಮಸ್ತಾಗಿ ಜನರನ್ನು ನಗಿಸುವ ಆದು ಅವರಿಗೆ ಸೈಕ್ ಅಗಿರುತ್ತೆ. ಬಿಗ್ ಬಾಸ್ ಮನೆಯಲ್ಲಿ ಆ ಸೈಕ್‌ನೆಸ್‌ ತೋರಿಸುತ್ತೀನಿ' ಎಂದು ಹೇಳುತಾ ವೇದಿಕೆ ಮೇಲೆ ಕುರಿ ಪ್ರತಾಪ್‌ನ ನೆನಪಿಸಿಕೊಂಡಿದ್ದಾರೆ. 'ಕುರಿ ಪ್ರತಾಪ್ ಬಿಗ್ ಬಾಸ್ ಮನೆಯೊಳಗೆ ಹೋಗುವಾಗ 100 ಚಡ್ಡಿ ತೆಗೆದುಕೊಂಡು ಬಂದಿದ್ರು ನನಗೂ ಕೊಡ್ಸು ಅಪ್ಪ ಅಂತ ಕೇಳಿದೆ. ನಮ್ಮ ಅಪ್ಪ 6 ಚಡ್ಡಿ ಕೊಡ್ಸಿ ಸಾಕು ಹೋಗಿ ಬಾ ಅಂದ್ರು. ಈಗ ಆ 6 ಚಡ್ಡಿಯಲ್ಲಿ 100 ದಿನ ಇರ್ತೀನಿ' ಎಂದಿದ್ದಾರೆ ನವಾಜ್. ಇದಕ್ಕೆ ಕಿಚ್ಚ 'ನಿಮ್ಮ ತಂದೆ ಹೇಳಿದ್ದು ಉಳಿದ ದಿನಗಳು ಬೇಡ ವಾರದ ದಿನ ಮಾತ್ರ ಹಾಕೋ ಅಂತ. ಫ್ರೀಡಂನಲ್ಲಿ ಇರ್ಬೇಕು ಅನ್ನೋದಕ್ಕೆ ಹೇಳಿದ್ದಾರೆ' ಕೌಂಟರ್ ಕೊಟ್ಟಿದ್ದಾರೆ.

ಕುಟುಂಬಸ್ಥರ ಮಾತು:

'ಮಾತು ಜೋರಾಗಿರುತ್ತೆ ಅದರಿಂದ ಅವನು ಮನೆಯಲ್ಲಿ ಇರಬಹುದು ಜನರಿಗೆ ಇಷ್ಟ ಆಗಬಹುದು. ನಾನು ಬೈದಾಗ ಒಂದು ದಿನವೂ ಉಲ್ಟಾ ಮಾತನಾಡಿಲ್ಲ ಸುಮ್ಮನಾಗುತ್ತಾನೆ.' ಎಂದು ನವಾಜ್ ತಂದೆ ಮಾತನಾಡಿದ್ದಾರೆ. 'ಮಗ ಏನೂ ಕೆಲಸ ಮಾಡುವುದಿಲ್ಲ ಆದರೂ ಬಿಗ್ ಬಾಸ್‌ ಗೆದ್ದು ಬರುತ್ತಾನೆ' ಎಂದು ನವಾಜ್ ತಾಯಿ ಹೇಳಿದ್ದಾರೆ. 

click me!