ನರ್ಸ್ ಗೆ ಅಮೃತಧಾರೆಯಲ್ಲಿ ಅವಮಾನ, ರೊಚ್ಚಿಗೆದ್ದ ಫ್ಯಾನ್ಸ್

Published : Sep 26, 2024, 10:24 AM ISTUpdated : Sep 26, 2024, 10:59 AM IST
ನರ್ಸ್ ಗೆ ಅಮೃತಧಾರೆಯಲ್ಲಿ ಅವಮಾನ, ರೊಚ್ಚಿಗೆದ್ದ ಫ್ಯಾನ್ಸ್

ಸಾರಾಂಶ

ಅಮೃತಧಾರೆ ಸೀರಿಯಲ್ ನಲ್ಲಿ ಮಲ್ಲಿ ಆಸ್ಪತ್ರೆ ಸೇರಿದ್ದಾಳೆ. ಜೈದೇವನ ಮುಖ ಆಕೆ ಮುಂದೆ ಕಳಚಿದ್ರೂ ಈ ಸತ್ಯವನ್ನು ಗೌತಮ್ ಗೆ ಹೇಳಲು ಆಗ್ತಿಲ್ಲ. ಈ ಮಧ್ಯೆ ನರ್ಸ್ ಜೊತೆ ಜೈದೇವ್ ಡೀಲ್ ಮಾಡಿದ್ದು, ಇದ್ಯಾಕೋ ಅಭಿಮಾನಿಗಳಿಗೆ ಸರಿ ಬರ್ತಿಲ್ಲ.   

ಝೀ ಕನ್ನಡ (Zee Kannada) ದಲ್ಲಿ ಪ್ರಸಾರವಾಗ್ತಿರುವ ಅಮೃತಧಾರೆ ಸೀರಿಯಲ್ (Amritdhare Serial) ನಲ್ಲಿ ಮಲ್ಲಿಗೆ ಪ್ರಜ್ಞೆ ಬರುತ್ತಾ, ಜೈದೇವ್ ಗುಟ್ಟು ಗೌತಮ್ ಹಾಗೂ ಭೂಮಿಕಾ (Gautham and Bhumika) ಗೆ ತಿಳಿಯುತ್ತಾ ಅನ್ನೋದೇ ಈಗಿರುವ ಪ್ರಶ್ನೆ. ಆಕ್ಸಿಡೆಂಟ್ ಆದ್ಮೇಲೆ ಆಸ್ಪತ್ರೆ ಸೇರಿರುವ ಮಲ್ಲಿ, ಮಗು ಕಳೆದುಕೊಂಡಿದ್ದಾಳೆ. ಆಕೆಗೆ ಪ್ರಜ್ಞೆ ಬಂದ್ರೆ ತನ್ನ ಬಣ್ಣ ಬಯಲಾಗುತ್ತೆ ಎನ್ನುವ ಭಯದಲ್ಲಿ ಜೈದೇವ್ ಇದ್ದಾನೆ. ಮಲ್ಲಿಗೆ ಟ್ರೀಟ್ ಮೆಂಟ್ ನೀಡುವ ನರ್ಸ್ ಒಳಗೆ ಹಾಕಿಕೊಂಡಿರುವ ಜೈದೇವ್ (Jaidev), ಆಕೆಗೆ ಹಣದ ಆಮೀಷ ತೋರಿಸಿ, ಪ್ರಜ್ಞೆ ಬರದಂತೆ ನೋಡಿಕೊಳ್ಳುವ ಸೂಚನೆ ನೀಡಿದ್ದಾರೆ. ಪ್ರಜ್ಞೆ ಬಂದ ತಕ್ಷಣ ಮತ್ತೆ ಪ್ರಜ್ಞೆ ತಪ್ಪುವ ಇಂಜೆಕ್ಷನ್ ನೀಡುಂತೆ ಜೈದೇವ್ ಹೇಳಿದ್ದಾನೆ. 

ಇನ್ಸ್ಟಾಗ್ರಾಮ್ ನಲ್ಲಿ ಝೀ ಕನ್ನಡ ಸೀರಿಯಲ್ ನ ತುಣುಕುಗಳನ್ನು ಹಂಚಿಕೊಳ್ತಿದ್ದಂತೆ ಫಾಲೋವರ್ಸ್ ಕಮೆಂಟ್ ಶುರು ಮಾಡಿದ್ದಾರೆ. ಜೈದೇವ್ ಜೊತೆ ಸೀರಿಯಲ್ ನಲ್ಲಿ ನರ್ಸ್ ಕೂಡ ವಿಲ್ಲನ್ ರೀತಿ ತೋರಿಸಲಾಗ್ತಿದೆ. ಜೈದೇವ್ ಹಣ ನೀಡ್ತಾನೆ ಎನ್ನುವ ಕಾರಣಕ್ಕೆ ನರ್ಸ್, ಮಲ್ಲಿ ಪ್ರಜ್ಞೆ ತಪ್ಪಿಸುವ ಪ್ರಯತ್ನ ಮಾಡ್ತಿದ್ದಾರೆ. ಇದು ಫ್ಯಾನ್ಸ್ ಗೆ ಇಷ್ಟವಾಗಿಲ್ಲ. ಸೀರಿಯಲ್ ನಲ್ಲಿ ನರ್ಸ್ ಗಳನ್ನು ಕೆಟ್ಟದಾಗಿ ತೋರಿಸಬೇಡಿ ಎಂದು ವೀಕ್ಷಕರು ಸಲಹೆ ನೀಡಿದ್ದಾರೆ.

ಎದೆ ಮೇಲೆ ಮೊನ್ನೆ ಹುಟ್ಟಿದ ಮಗನನ್ನ ಮಲಗಿಸಿಕೊಂಡ ಚಂದನ್, ಪೇರೆಂಟಿಂಗ್ ಟಿಪ್ಸ್ ಕೊಟ್ಟ ಫ್ಯಾನ್ಸ್!

ನಿಮ್ಮ ಧಾರಾವಾಹಿಯಲ್ಲಿ ನರ್ಸ್ ಗಳನ್ನು ಕೆಟ್ಟದಾಗಿ ತೋರಿಸಬೇಡಿ. ಇದು ನರ್ಸ್ ಗಳ ಮೇಲೆ ಬ್ಯಾಡ್ ಇಂಪ್ರೆಶನ್ ಕ್ರಿಯೆಟ್ ಮಾಡುತ್ತೆ. ನರ್ಸ್ ಗಳು ಮಾಡುವ ಕೆಲಸಕ್ಕೆ ಗೌರವ ನೀಡಿ ಎಂದು ಕಮೆಂಟ್ ಹಾಕಿದ್ದಾರೆ. ನಿಮ್ಮ ಲಾಭಕ್ಕಾಗಿ ನೀವು ನರ್ಸ್ ಮತ್ತು ವೈದ್ಯರನ್ನು ಏಕೆ ಈ ರೀತಿ ತೋರಿಸುತ್ತಿದ್ದೀರಿ? ನೀವು ಇವರನ್ನು ಕೆಟ್ಟ ಪಾತ್ರದಂತೆ ಬಿಂಬಿಸುತ್ತಿದ್ದೀರಿ. ಇದರಿಂದಾಗಿ ನಿತ್ಯ ಕೆಲಸ ಮಾಡುವ ನರ್ಸ್ ಗಳಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ರಾತ್ರಿ ಪೂರ್ತಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಪೇಶೆಂಟ್ ಕೇರ್ ಮಾಡುವ ನರ್ಸ್ ಗಳನ್ನು ಈ ರೀತಿ ತೋರಿಸಬೇಡಿ, ನರ್ಸ್ ಮರ್ಯಾದೆ ತೆಗೆಯಲಾಗಿದೆ ಎಂದು ಅನೇಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. 

ಇನ್ನು ಜೈದೇವ್ ನ ಕೆಲಸಕ್ಕೆ ಧಿಕ್ಕಾರ ಹಾಕಿರುವ ಜನರು, ಅವನಿಗೆ ಬುದ್ದಿ ಕಲಿಸಿ ಎಂದಿದ್ದಾರೆ. ಮಲ್ಲಿಗೆ ಪ್ರಜ್ಞೆ ಬಂದೇ ಬರುತ್ತೆ, ಅವ ಜೈಲಿಗೆ ಹೋಗ್ತಾನೆ ಎನ್ನುತ್ತಿರುವ ಫ್ಯಾನ್ಸ್, ಮಲ್ಲಿ ಮಗು ಸಾಯ್ಬಾರದಿತ್ತು ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಎಲ್ಲ ಸೀರಿಯಲ್ ನಲ್ಲಿ ಗರ್ಭಿಣಿಗೆ ತೊಂದರೆಯಾಗೋದನ್ನು ತೋರಿಸಿ, ಮಗುವನ್ನು ಸಾಯಿಸಿ, ವೀಕ್ಷಕರಿಗೆ ಹಿಂಸೆ ನೀಡ್ತಿದ್ದಾರೆಂದು ವೀಕ್ಷಕರು ಹೇಳ್ತಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಅಮೃತಧಾರೆ ಸೀರಿಯಲ್ ತನ್ನ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭೂಮಿಕಾ ಮತ್ತು ಗೌತಮ್ ಪ್ರೀತಿಯನ್ನು ಜನರು ಒಪ್ಪಿಕೊಂಡಿದ್ದು, ಅದಾದ್ಮೇಲೆ ಬಂದ ಟ್ವಿಸ್ಟ್ ಗಳನ್ನು ಸ್ವಾಗತಿಸಿದ್ದಾರೆ. ಜೈದೇವನನ್ನು ಅತಿಯಾಗಿ ನಂಬಿದ್ದ ಮಲ್ಲಿಗೆ ಈಗ ಸತ್ಯಗೊತ್ತಾಗಿದೆ.

Dr bro ಗೆ ಬಿಗ್ ಬಾಸ್ ಗೆ ಬನ್ನಿ ಅಂದ್ರೆ, ಬೇಡ ವಿಡಿಯೋ ಪೋಸ್ಟ್ ಮಾಡ್ತೀರಿ ಸಾಕೆಂದ ಫ್ಯಾನ್ಸ್!

ಸೀಮಂತ ಮುಗಿಸಿ ಖುಷಿಯಿಂದ ತವರಿಗೆ ಹೊರಟಿದ್ದ ಮಲ್ಲಿ ಆಸ್ಪತ್ರೆ ಸೇರುವಂತಾಗಿದೆ. ಜೈದೇವ್ ನ ಬಗ್ಗೆ ಸ್ವಲ್ಪ ಗಮನ ಇರ್ಲಿ ಅಂತ ಭೂಮಿಕಾ ಹೇಳ್ತಿದ್ದಂತೆ ಕೋಪಗೊಂಡಿದ್ದ ಮಲ್ಲಿ, ಹಾರಾಡಿದ್ದಳು. ಆದ್ರೆ ತವರಿಗೆ ಹೋಗುವ ವೇಳೆ ಜೈದೇವ್ ತನ್ನ ಗರ್ಲ್ ಫ್ರೆಂಡ್ ದಿಯಾ ಜೊತೆ ಮಾತನಾಡೋದನ್ನು ನೋಡಿ ದಂಗಾಗಿದ್ದಳು. ಶಾಕ್ ನಲ್ಲಿದ್ದ ಆಕೆಗೆ ಇದೇ ಸಮಯದಲ್ಲಿ ಆಕ್ಸಿಡೆಂಟ್ ಆಗಿದೆ. ಗೌತಮ್ ಹಾಗೂ ಭೂಮಿಕಾ ಆಸ್ಪತ್ರೆಯಲ್ಲೇ ಇದ್ದು, ಮಲ್ಲಿಗೆ ಪ್ರಜ್ಞೆ ಬರೋದನ್ನೇ ಕಾಯ್ತಿದ್ದಾರೆ. ಅವರನ್ನು ಆಸ್ಪತ್ರೆಯಿಂದ ಹೊರಗೆ ಕಳಿಸುವ ಶತ ಪ್ರಯತ್ನ ಮಾಡ್ತಿರುವ ಜೈದೇವ್, ಹೇಗಾದ್ರೂ ಮಲ್ಲಿ ಸಾಯಿಸ್ಬೇಕು ಎನ್ನುವ ಪ್ಲಾನ್ ಮಾಡ್ತಿದ್ದಾನೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್