ಬೀದಿ ನಾಯಿ ಪ್ರಾಣ ಉಳಿಸಿದ ಸೋನು ಗೌಡ; ನಿನ್ನಲ್ಲೂ ಒಳ್ಳೆ ಗುಣಗಳಿದೆ ಎಂದು ಕೊಂಡಾಡುತ್ತಿರುವ ನೆಟ್ಟಿಗರು!

By Vaishnavi Chandrashekar  |  First Published Sep 25, 2024, 3:08 PM IST

ಮೊದಲ ಸಲ ಸೋನು ಕೆಲಸವನ್ನು ಮೆಚ್ಚಿ ಕೊಂಡಾಡುತ್ತಿರುವ ನೆಟ್ಟಿಗರು....ನಾಯಿಯನ್ನು ಉಳಿಸಿದ ಸೋನು...


ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಕ್ವೀನ್ ಸೋನು ಶ್ರೀನಿವಾಸ್ ಗೌಡ ಪ್ರತಿ ದಿನ ತಮ್ಮ ದಿನಚರಿಗಳ ಬಗ್ಗೆ ವಿಡಿಯೋ ಮಾಡಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ. ಸಾಮಾನ್ಯವಾಗಿ ಸೋನು ಯಾವುದೇ ವಿಡಿಯೋ ಮಾಡಲಿ 10ರಲ್ಲಿ ಒಂದೆರಡು ನೆಗೆಟಿವ್ ಕಾಮೆಂಟ್ ಇದ್ದೇ ಇರುತ್ತದೆ, ಅದರಲ್ಲೂ ಹಾಟ್ ಡ್ರೆಸ್ ಹಾಕಿ ಪೋಸ್ಟ್ ಕೊಟ್ಟರೆ ಪೂರ್ತಿ ನೆಗೆಟಿವ್ ಕಾಮೆಂಟ್ ಇರುತ್ತದೆ. ಆದರೆ ಈ ಸಲ ಸೋನು ಮಾಡಿರುವ ಕೆಲಸವನ್ನು ಪ್ರತಿಯೊಬ್ಬರು ಮೆಚ್ಚಿಕೊಂಡು ಹೊಗಳುತ್ತಿದ್ದಾರೆ, ಎಲ್ಲಿ ನೋಡಿದರೂ ಪಾಸಿಟಿವ್ ಕಾಮೆಂಟ್ಸ್‌ಗಳಿದೆ....

ಹೌದು! ಸೋನು ಮನೆಯಲ್ಲಿ ಎರಡು shih tzu ಜಾತಿಯ ಶ್ವಾನಗಳಿದೆ. ಒಂದಕ್ಕೆ ಕಿಯಾ ಮತ್ತೊಂದಕ್ಕೆ ಬ್ರೀಝು ಎಂದು ಹೆಸರಿಟ್ಟಿದ್ದಾರೆ. ತಾಯಿ ಊರಿನಲ್ಲಿ ಮನೆ ಕಟ್ಟಿಸುತ್ತಿರುವ ಕಾರಣ ಬೆಂಗಳೂರಿನಲ್ಲಿ ಸಹೋದರರ ಜೊತೆ ಸೋನು ವಾಸವಾಗಿದ್ದಾರೆ. ಪ್ರತಿ ದಿನ ಬಳಗ್ಗೆ ಶ್ವಾನಗಳನ್ನು ವಾಕಿಂಗ್ ಕರೆದುಕೊಂಡು ಹೋಗಿ ಅನಂತರ ಅವುಗಳಿಗೆ ಅಂತ ಸಪರೇಟ್ ಅಡುಗೆ ಮಾಡಿ ಆನಂತರ ಸ್ನಾನ ಮಾಡಿಸುವುದು ಅದು ಇದು ಅಂತ ಬ್ಯುಸಿಯಾಗಿ ಬಿಡುತ್ತಾರೆ. ಇತ್ತೀಚಿಗೆ ರಸ್ತೆಯಲ್ಲಿ ತಮ್ಮ ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದಾಗ ರಸ್ತೆಯಲ್ಲಿ ನರಳುತ್ತಿರುವ ಬೀದಿ ನಾಯಿಯನ್ನು ನೋಡಿ ಸೋನು ಮನಸ್ಸು ಕರಗಿದೆ. ನಾಯಿಯ ಮೂತಿ ಭಾಗಕ್ಕೆ ಗಾಯವಾಗಿದೆ, ಗಾಯ ವಾಸಿಯಾಗದ ಕಾರಣ ಹುಳ ತುಂಬಿಕೊಂಡ ಉಸಿರಾಡುವುದಕ್ಕೂ ಕಷ್ಟ ಪಟ್ಟಿದೆ. ಕಸದ ಕೊಂಪೆಯಲ್ಲಿ ಈ ನಾಯಿ ಮಲಗಿರುವುದನ್ನು ನೋಡಿ ಸೋನು ಗಾಬರಿ ಆಗಿದ್ದಾರೆ. 

Tap to resize

Latest Videos

undefined

30 ದಾಟಿದರೂ ಮದುವೆಯಾಗದೆ ಇರಲು ಈ ವ್ಯಕ್ತಿನೇ ಕಾರಣ; ಕೊನೆಗೂ ಸತ್ಯ ಬಾಯಿಬಿಟ್ಟ ಅನುಪಮಾ ಗೌಡ!

ಬಿಬಿಎಂಪಿ ಮತ್ತು ಹಲವು ಪ್ರಾಣಿಗಳ NGOಗೆ ಸಂಪರ್ಕ ಮಾಡಿ ವಿಚಾರಿಸಿದ್ದಾರೆ. ಈ ಘಟನೆ ನಡೆದಿರುವುದು ಹೇರೋಹಳ್ಳಿಯಲ್ಲಿ, ನಾಯಿಯನ್ನು ಕಾಪಾಡಲು ಬಂದಿರುವವರು ಜಯನಗರದಿಂದ. ಕೆಲವು ಸಮಯಗಳ ನಂತರ ಹೋಗಿ ನೋಡಿದಾಗ ಅಲ್ಲಿ ನಾಯಿ ಕಾಣಿಸಲಿಲ್ಲ...ಅಕ್ಕಪಕ್ಕದ ಮನೆಯವರ ಸಹಾಯ ಪಡೆದುಕೊಂಡು  ನಾಯಿಯನ್ನು ರಕ್ಷಣೆ ಮಾಡಿದ್ದಾರೆ.ಕೆಲವೊಂದು ಪೇಪರ್‌ಗಳಿಗೆ ಸಹಿ ಮಾಡಿ ಸೋನು ನಾಯಿಯನ್ನು ಕಳುಹಿಸಿ ಕೊಟ್ಟಿದ್ದಾರೆ. 'ಮನಸಿಗೆ ಖುಷಿಯಾಗುತ್ತಿದೆ ಒಂದು ನಾಯಿಯ ಪ್ರಾಣ ಉಳಿಸಿರುವುದಕ್ಕೆ ಅದು ಎಷ್ಟು ಕಷ್ಟ ಪಡುತ್ತಿತ್ತು ಎಂದು ನೋಡಲು ಆಗುತ್ತಿರಲಿಲ್ಲ...ನಾಯಿ ಗುಣ ಆಗುತ್ತಿದ್ದಂತೆ ಇಲ್ಲಿಗೆ ಕರೆದುಕೊಂಡು ಬಂದು ಬಿಡಲು ಹೇಳಿದ್ದೀನಿ. ಅವರೊಟ್ಟಿಗೆ ಸಂಪರ್ಕದಲ್ಲಿದ್ದು ವಿಚಾರಿಸಿಕೊಳ್ಳುತ್ತೀನಿ' ಎಂದು ಸೋನು ಮಾತನಾಡಿದ್ದಾರೆ.

ಶ್ರೀಮಂತ ರಾಜಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದ ಸೋನಲ್; ಹುಟ್ಟೂರು ಮರೆತಿಲ್ಲ ಎಂದ ನೆಟ್ಟಿಗರು

'ಸೋನು ನೀನು ಏನೇ ತಪ್ಪುಗಳನ್ನು ಮಾಡಿರಬಹುದು ಆದರೆ ನಿನ್ನಲ್ಲಿ ಸಾಕಷ್ಟು ಒಳ್ಳೆಯ ಗುಣಗಳಿದೆ. ಅದನ್ನು ನಾನು ಮೆಚ್ಚ ಬೇಕು. ನಿನಗೆ ಒಳ್ಳೆಯದಾಗಲಿ' ಎಂದು ಪ್ರತಿಯೊಬ್ಬರು ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ. 

 

click me!