
ಬಿಗ್ ಬಾಸ್ ಸ್ಪರ್ಧಿ, ಖ್ಯಾತ ನಿರೂಪಕ ಹಾಗೂ ಈಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಕಿರಿಕ್ ಕೀರ್ತಿ ತಮ್ಮ ತಾಯಿಯ ಜೊತೆಗಿರುವ ಅಟ್ಯಾಚ್ಮೆಂಟ್ ಹಾಗೂ ಒಂದು ದಿನ ಶೂಟಿಂಗ್‌ನಿಂದ ತಡವಾಗಿ ಬಂದಿದ್ದಕ್ಕೆ ಮಗ ಮಾಡಿದ ಮೆಸೇಜ್ ನೋಡಿ ಭಾವುಕರಾಗಿದ್ದಾರೆ.
ಮಗನ ಮೆಸೇಜ್:
'ನನ್ನ ಮಗನಿಗೆ ನಾನು ತುಂಬಾನೇ ಅಟ್ಯಾಚ್ ಆಗಿದ್ದೀನ, ಮೊನ್ನೆ ಆಫೀಸಿನಿಂದ ಬರುವುದು ತುಂಬಾ ಲೇಟ್ ಆಗಿತ್ತು ಆಗ ನನ್ನ ಮಗ ಮೆಸೇಜ್ ಕಳುಹಿಸಿದ್ದ Appa please come i am not sleepy (ಅಪ್ಪ ಬೇಗ ಬಾ ನನಗೆ ನಿದ್ರೆ ಬರುತ್ತಿಲ್ಲ) ಅಂತ. ಅದಿಕ್ಕೆ ನಾನು ಯಾಕಪ್ಪ ಏನಾಯ್ತು ಆರಾಮ್ ಆಗಿ ಮಲ್ಕೋ ಅಂತ ನಾನು ಹೇಳಿದೆ, ಏಕೆಂದರೆ ನನ್ನ ತಂಗಿ ಇದ್ದ ಕಾರಣ ಅಮ್ಮ ಹೋಗಿ ತಂಗಿ ರೂಮಿನಲ್ಲಿ ಮಲಗಿಕೊಂಡಿದ್ದಾರೆ ನನ್ನ ಮಗನ ಜೊತೆ ತಂಗಿ ಮಲಗಿದ್ದಳು. ನಾನು ರಾತ್ರಿ ಹೋಗಿ ಅವನೊಟ್ಟಿಗೆ ಮಲಗಿಕೊಂಡೆ ಆದರೆ ಬೆಳಗ್ಗೆ ಕೇಳಿದೆ ಯಾಕೆ ಮಗನೆ ಆ ರೀತಿ ಮೆಸೇಜ್ ಕಳುಹಿಸಿದೆ ಅಂತ ಆಗ ಅವನು, 'ಅಪ್ಪ ನೀವು ಮತ್ತು ಅಜ್ಜಿ ಜೊತೆಗಿದ್ದರೆ ಮಾತ್ರ ನಿದ್ರೆ ಬರುವುದು' ಅಂತ ಹೇಳಿದೆ. ನನಗೆ ಮಾತ್ರವಲ್ಲ ನನ್ನ ಮಗನಿಗೂ ತಾಯಿ ಜೊತೆ ಅಟ್ಯಾಚ್ಮೆಂಟ್ ಇದೆ ಎಂದು ಖಾಸಗಿ ಸಂದರ್ಶನದಲ್ಲಿ ಕೀರ್ತಿ ಮಾತನಾಡಿದ್ದಾರೆ.
ತಾಯಿ ಪ್ರೀತಿ:
ನನಗೆ 37 ವರ್ಷ ಆದರೂ ನನ್ನ ತಾಯಿ ಪ್ರಕಾರ ನನಗೆ ಮೂರು ವರ್ಷ. ಅಡುಗೆ ಮಾಡುತ್ತಾರೆ ನನಗೆ ತಿನ್ನಿಸುತ್ತಾರೆ ಹಾಲು ತರುತ್ತಾರೆ....ಯಾರೋ ಬಂದು ಏನೇ ಮಾತನಾಡಲಿ ನನ್ನನ್ನು ತಪ್ಪು ಎಂದು ಸಾಭೀತು ಮಾಡುವ ಪ್ರಯತ್ನ ಮಾಡಿದ್ದರೂ ನನ್ನ ಮಗ ಹಾಗಲ್ಲ ನನ್ನ ಮಗ ಸರಿಯಾಗಿದ್ದಾನೆ ಅಂತಲೇ ಅಮ್ಮ ಫೈಟ್ ಮಾಡುತ್ತಾರೆ. ಈಗಲೂ ನಾನು ಏನೇ ಮಾಡುವ ಮೊದಲು ನನ್ನ ತಾಯಿ ಬಗ್ಗೆ ಯೋಚನೆ ಮಾಡುತ್ತೀನಿ. ನೀನು ಏನೇ ನಿರ್ಧಾರ ಮಾಡಿದರೂ ಅದು ಕರೆಕ್ಟ್ ಆಗಿದೆ ನೀನು ಸರಿಯಾಗಿ ಯೋಚನೆ ಮಾಡಿರುವೆ ಎಂದು ಅಮ್ಮ ಹೇಳುತ್ತಾರೆ ಎಂದು ಕೀರ್ತಿ ಹೇಳಿದ್ದಾರೆ.
ನನಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲ ಪ್ರತಿಯೊಂದಕ್ಕೂ ಕಷ್ಟ ಪಟ್ಟಿದ್ದೀನಿ: ನಟಿ ರಕ್ಷಿತಾ ಪ್ರೇಮ್
ನನ್ನ ತಾಯಿ ಬಗ್ಗೆ ಮಾತನಾಡಲು ನನಗೆ ಎರಡು ಜನ್ಮ ಬೇಕು. ನಾನು 6ನೇ ತರಗತಿಯಲ್ಲಿ ಇದ್ದಾಗ ತಂದೆ ಬಿಟ್ಟು ಹೋದರು...ಸಾಲ ಅಂತ ಪೇಪರ್‌ನಲ್ಲಿ ತಂದೆ ಪೋಟೋ ಹಾಕಿಬಿಡುತ್ತಾರೆ ಎಂದು ಪ್ರತಿದಿನ 10 ಅಥವಾ 20 ರೂಪಾಯಿಗಳನ್ನು ಕಟ್ಟಿ ಬ್ಯಾಂಕ್ ಸಾಲ ತೀರಿಸಿದ್ದಾರೆ ನನ್ನ ತಾಯಿ. ನನ್ನ ಮಗ ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿಗೆ ಶಿವಮೊಗ್ಗ ಕಾಲೇಜ್‌ನಲ್ಲಿ ಓದಬೇಕು ಎಂದು ಪ್ರತಿ ದಿನ 20 ಅಥವಾ 30 ರೂಪಾಯಿ ಕಟ್ಟಿದ್ದಾರೆ. ಅವಮಾನಗಳನ್ನು ಎದುರಿಸಿದ್ದಾಳೆ, ಮನೆ ಕೆಲಸ ಮಾಡಿದ್ದಾಳೆ....ನಾವೆಲ್ಲ ಮಲಗಿದ ಮೇಲೆ ಆಕೆ ಸ್ನಾನ ಮಾಡುತ್ತಿದ್ದಳು ಏಕೆಂದರೆ ಸ್ನಾನದ ಮನೆ ಇರಲಿಲ್ಲ ಎಂದಿದ್ದಾರೆ ಕಿರಿಕ್ ಕೀರ್ತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.