ಅತಿ ಒಳ್ಳೆಯತನ ಒಳ್ಳೆಯದಲ್ಲ ಎಂದು ಶ್ರೀರಸ್ತು ಶುಭಮಸ್ತು ಸೀರಿಯಲ್ ತುಳಸಿಗೆ ಅಭಿಮಾನಿಗಳು ಕಿವಿಮಾತು ಹೇಳುತ್ತಿದ್ದಾರೆ. ಇದಕ್ಕೆ ಕಾರಣವೇನು?
ಅತಿ ಒಳ್ಳೆಯದನ್ನು ಮಾಡಲು ಹೋಗುವವರು ಬೆರಳೆಣಿಕೆಯಷ್ಟು ಮಂದಿ ಅಲ್ಲಲ್ಲಿ ಕಾಣಸಿಗುತ್ತಾರೆ. ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಎಲ್ಲಾ ತಪ್ಪುಗಳನ್ನೂ ತಮ್ಮ ಮೇಲೆಯೇ ಹಾಕಿಕೊಳ್ಳುತ್ತಾರೆ. ಸತ್ಯವಂತರಾಗಲು ಹೋಗುತ್ತಾರೆ. ಆದರೆ ಸತ್ಯವಂತರಿಗಿದು ಕಾಲವಲ್ಲ ಎನ್ನುವುದು ಹಲವರ ಮಾತು. ಅಂತಿಮವಾಗಿ ಸತ್ಯಕ್ಕೇ ಜಯ ಸಿಗುವುದು ಎಂಬ ಮಾತು ಇದ್ದರೂ, ಅದೇ ಇನ್ನೊಂದೆಡೆ, ಆ ಅಂತ್ಯ ಬರುವವರೆಗೆ ನರಳುತ್ತಲೇ ಇರಬೇಕಾಗುತ್ತದೆ ಎಂದು ಕೆಲವರು ಹೇಳುವುದೂ ಉಂಟು. ಕೊನೆಯದಾಗಿ ಸತ್ಯವೇ ಗೆಲ್ಲುವುದು ನಿಜವಾದರೂ, ಆ ಗೆಲುವು ಸಿಗುವವರೆಗೆ ಅನುಭವಿಸುವ ನೋವು ಯಾರಿಗೂ ಬೇಡ, ಅತಿಯಾಗಿ ಒಳ್ಳೆಯತನ ತೋರಲು ಹೋದವರೇ ತೊಂದರೆಗೆ ಸಿಲುಕಿಕೊಳ್ಳುವುದೇ ಕಲಿಯುಗ ಎಂದೆಲ್ಲಾ ಎಷ್ಟೋ ಮಂದಿ ಹೇಳುತ್ತಾರೆ.
ಇದೀಗ ಶ್ರೀರಸ್ತು, ಶುಭಮಸ್ತು ಸೀರಿಯಲ್ ಪ್ರೇಮಿಗಳೂ ಇದನ್ನೇ ಹೇಳುತ್ತಿದ್ದಾರೆ. ಅತಿ ಒಳ್ಳೆಯವಳಾಗಿರುವ ತುಳಸಿಗೆ ಬುದ್ಧಿಮಾತು ಹೇಳುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಮನೆಯಲ್ಲಿ ಮಾಧವ್ ಅಮ್ಮನ ಪೂಜೆ ಮಾಡಬೇಕು ಎಂದುಕೊಂಡಿದ್ದರು. ಅವರು ಧರಿಸುತ್ತಿದ್ದ ಬಂಗಾರದ ಸರ ಪೂಜೆಗೆ ಇಡಬೇಕೆಂದು ಆಗಿತ್ತು. ಆದರೆ ಅದನ್ನು ದೀಪಿಕಾ ಕದ್ದಿದ್ದಳು. ಹೀಗೆ ಕದ್ದಿರೋ ಸರವನ್ನು ಆಕೆ ಶಾರ್ವರಿ ಕಪಾಟಿನಲ್ಲಿ ಇರಿಸಿದ್ದಳು. ಸರ ಕದಿಯುವ ಪ್ಲ್ಯಾನ್ ಶಾರ್ವರಿ ಮತ್ತು ದೀಪಿಕಾ ಇಬ್ಬರದ್ದೂ ಆಗಿತ್ತು. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಇಡೀ ಮನೆಯ ಕೀಲಿ ತುಳಸಿಯ ಕೈಯಲ್ಲಿ ಇದೆ. ತುಳಸಿ ಮನೆಯ ಯಜಮಾನಿಯನ್ನಾಗಿ ಮಾಡಿರುವುದನ್ನು ಈ ಅತ್ತೆ-ಸೊಸೆ ಸಹಿಸುತ್ತಿಲ್ಲ. ಇದೇ ಕಾರಣಕ್ಕೆ ತುಳಸಿಯ ಮೇಲೆ ಕಿಡಿ ಕಾರುತ್ತಿದ್ದಾರೆ. ಆಕೆ ಮನೆಯ ಜವಾಬ್ದಾರಿ ಹೊರುವಷ್ಟು ಶಕ್ಯಳಲ್ಲ ಎನ್ನುವುದನ್ನು ಸಾಬೀತು ಮಾಡಲು ಪ್ಲ್ಯಾನ್ ಹೆಣೆಯುತ್ತಲೇ ಇದ್ದಾರೆ. ಆದರೆ ಬಹುಶಃ ಈ ಬಾರಿ ಅದು ಉಲ್ಟಾ ಹೊಡೆದಂತೆ ಕಾಣುತ್ತಿದೆ.
ಬೀದೀಲಿ ಹೋಗ್ತಿರೋ ಮಾರಿಯನ್ನು ಮನೆಗೇ ಕರ್ಕೊಂಡು ಬಿಟ್ಯಲ್ಲಮ್ಮಾ ಭೂಮಿಕಾ ಅಂತಿದ್ದಾರೆ ಫ್ಯಾನ್ಸ್!
ಪೂಜೆಯ ಸಮಯದಲ್ಲಿ ಒಡವೆ ನೋಡಿದಾಗ ಅದು ಕಾಣೆಯಾಗಿದೆ. ಮನೆಯ ಕೀಲಿ ತುಳಸಿ ಕೈಯಲ್ಲಿ ಇರುವ ಕಾರಣ, ಎಲ್ಲರ ದೃಷ್ಟಿ ಅವಳ ಮೇಲೆ ಬಿದ್ದಿದೆ. ಆದರೆ ಅಷ್ಟರಲ್ಲಿಯೇ ಶಾರ್ವರಿ ಮಗಳು ತಾನು ಈ ಸರವನ್ನು ನೋಡಿರುವುದಾಗಿ ಹೇಳಿದ್ದಾಳೆ. ಅಮ್ಮನ ಕಪಾಟಿನಲ್ಲಿ ಸರ ಇದ್ದುದನ್ನು ನೋಡಿದುದಾಗಿ ಹೇಳಿದ್ದಾಳೆ. ಇದನ್ನು ಕೇಳಿ ಶಾರ್ವರಿ ಶಾಕ್ ಆಗಿದ್ದಾಳೆ. ದೀಪಿಕಾಗೂ ಗರಬಡಿದಂತಾಗಿದೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆಮಾಡಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್ನ ಈ ಪ್ರೊಮೋ ನೋಡಿ ಕರ್ಮ ರಿಟರ್ನ್ಸ್ ಅನ್ನೋದು ಇದಕ್ಕೇ ಅಂತಿದ್ದಾರೆ ನೆಟ್ಟಿಗರು. ತಾನೇ ಹೆಣೆದಿರುವ ಬಲೆಯಲ್ಲಿ ಶಾರ್ವರಿ ಬಿದ್ದಿದ್ದಾಳೆ. ಮನೆಯವರೇ ಸರ ಕದ್ದಿದ್ದಾರೆ ಎಂಬ ಕಾರಣದಿಂದ ಯಾರು ಎಂಬುದನ್ನು ಹೇಳುವಂತೆ ಹೇಳಿದ್ದಾರೆ.
ದೀಪಿಕಾ ಮತ್ತುಶಾರ್ವರಿಗೆ ಶಾಕ್ ಆಗಿತ್ತು. ದೀಪಿಕಾನೇ ಈ ಕುತಂತ್ರ ಮಾಡಿರುವುದು ಎಂಬ ಸತ್ಯ ಶಾರ್ವರಿಗೆ ಗೊತ್ತಿದೆ. ಆದರೆ ಅವಳ ಹೆಸರು ಬರಬಾರದು ಎನ್ನುವ ಕಾರಣಕ್ಕೆ ಅವಳೂ ಸುಮ್ಮನಾಗಿದ್ದಾಳೆ. ಆದರೆ ಮನೆಯವರ ಮೇಲೆ ಸುಮ್ಮನೇ ಆರೋಪ ಮಾಡಬಾರದು ಎನ್ನುವ ಕಾರಣಕ್ಕೆ ಇದನ್ನು ತನ್ನ ತಲೆಗೆ ತಂದುಕೊಂಡಿದ್ದಾಳೆ ತುಳಸಿ. ಇದೇ ಹಾರ ಹೌದೋ, ಅಲ್ಲವೋ ಎಂಬ ಕಾರಣಕ್ಕೆ, ಶಾರ್ವರಿ ಅವರ ರೂಮ್ಗೆ ತಾನು ಹೋಗಿದ್ದೆ. ಆ ಸಮಯದಲ್ಲಿ ಶಾರ್ವರಿ ಕೋಣೆಯಲ್ಲಿ ಇರಲಿಲ್ಲ. ಆಗ ಆಮೇಲೆ ತೋರಿಸಿದರಾಯಿತು ಎನ್ನುವ ಕಾರಣಕ್ಕೆ ಅಲ್ಲಿಯೇ ಬಿಟ್ಟುಬಂದಿದ್ದೆ. ನನಗೆ ಮರೆತು ಹೋಗಿತ್ತು, ಈಗ ನೆನಪಾಯ್ತು ಎನ್ನುತ್ತಾಳೆ ತುಳಸಿ. ಇವಳ ಒಳ್ಳೆಯತನ ನೋಡಿ ಶಾರ್ವರಿ, ದೀಪಿಕಾ ಬದಲಾದರೆ ಸಾಕು ಎನ್ನುತ್ತಿದ್ದಾರೆ ಫ್ಯಾನ್ಸ್. ಆದರೆ ಇದು ಸಾಧ್ಯವಿಲ್ಲ ಎನ್ನುವುದೂ ಅವರಿಗೆ ಗೊತ್ತು. ಇದೇ ಕಾರಣಕ್ಕೆ, ತುಳಸಿಗೆ ಅತಿ ಒಳ್ಳೆಯವಳಾಗಬೇಡಿ ಎಂದು ಬುದ್ಧಿಮಾತು ಹೇಳುತ್ತಿದ್ದಾರೆ.
ರಗಡ್ ಲುಕ್ನಲ್ಲಿ ಸತ್ಯ ಸೀರಿಯಲ್ ಮಾಜಿ ಕೀರ್ತನಾ: ಪ್ಲೀಸ್ ಸೀರಿಯಲ್ಗೆ ವಾಪಸ್ ಬನ್ನಿ ಅಂತಿದ್ದಾರೆ ಫ್ಯಾನ್ಸ್