ಬಿಗ್‌ಬಾಸ್‌ ಫ್ಯಾಮಿಲಿ ಶೋ ಅಲ್ವಾ? ಈ ಥರ ಅಸಹ್ಯವಾಗಿ ರೊಮ್ಯಾನ್ಸ್ ಮಾಡ್ತಿದ್ರೆ ಮನೆಮಂದಿ ಕೂತು ನೋಡಕ್ಕಾಗುತ್ತಾ?

By Bhavani Bhat  |  First Published Oct 16, 2024, 12:42 PM IST

ಬಿಗ್‌ಬಾಸ್ ಕನ್ನಡದಿಂದ ಸುದೀಪ್ ನಿರ್ಗಮಿಸುವಿಕೆ ಚರ್ಚೆಗೆ ಗ್ರಾಸವಾಗಿದ್ದು, ಹಿಂದಿ ಬಿಗ್‌ಬಾಸ್‌ನಲ್ಲಿನ ಅತಿಯಾದ ಅನ್ಯೋನ್ಯತೆಯ ದೃಶ್ಯಗಳು ಟೀಕೆಗೆ ಗುರಿಯಾಗಿವೆ. 


ಬಿಗ್‌ಬಾಸ್ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಅಂತಲೇ ಫೇಮಸ್. ಸದ್ಯ ಕನ್ನಡದಲ್ಲಿ ಈ ಶೋ ಬಹಳ ಗ್ರಾಂಡ್ ಆಗಿಯೇ ನಡೆಯುತ್ತಿದೆ. ಸದ್ಯ ಈ ಶೋ ಬಗ್ಗೆ ಬಿಸಿ ಬಿಸಿ ಚರ್ಚೆಯಲ್ಲಿರೋದು ಸುದೀಪ್ ನೆಕ್ಸ್ಟ್‌ ಸೀಸನ್‌ನಿಂದ ಈ ಶೋವನ್ನು ಹೋಸ್ಟ್ ಮಾಡಲ್ಲ ಅನ್ನೋ ವಿಚಾರ. ಇದನ್ನು ಅವರು ನೇರವಾಗಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಯಾವ ರೀತಿಯ ಅನುಮಾನವೂ ಇಲ್ಲದ ಹಾಗೆ ಮಾಡಿದ್ದಾರೆ. ಸೋ ಇಲ್ಲಿ ಕನ್‌ಫ್ಯೂಶನ್ಸ್‌ ಇಲ್ಲ. ನೆಕ್ಸ್ಟ್ ಶೋಗೆ ದೊಡ್ಡ ಮನಸ್ಸು ಮಾಡಿ ಸುದೀಪ್ ಎಂಟ್ರಿ ಕೊಟ್ಟರೆ ಅದು ಪಾಸಿಟಿವ್. ಇಲ್ಲಾಂದ್ರೆ ಈಗ ರಾಕೆಟ್ ಥರ ಏರಿರೋ ಟಿಆರ್‌ಪಿ ಠುಸ್ ಪಟಾಕಿ ಆಗೋ ಎಲ್ಲಾ ಸಾಧ್ಯತೆ ಇದೆ. ಇದರ ಜೊತೆಗೆ ಇನ್ನೊಂದು ಪ್ರಶ್ನೆಯೂ ವೀಕ್ಷಕರ ವಲಯದಿಂದ ಎದ್ದು ಬರ್ತಾ ಇದೆ. ಬಿಗ್‌ಬಾಸ್ ಶೋನಲ್ಲಿ ಈ ಮಟ್ಟಿನ ರೊಮ್ಯಾನ್ಸ್‌ ಅನ್ನು ತೋರಿಸಬಹುದಾ? ಇದು ಫ್ಯಾಮಿಲಿ ಮಂದಿ ಕೂತು ನೋಡೋ ಶೋ ಅಲ್ವಾ, ಟಿವಿ ಮುಂದೆ ವಯಸ್ಸಾದವರು, ಚಿಕ್ಕಮಕ್ಕಳು ಎಲ್ಲರೂ ವಯಸ್ಸು ಲಿಂಗ ಭೇದವಿಲ್ಲದೆ ಕೂತಿರುತ್ತಾರೆ. ಹೀಗಿರುವಾಗ ಈ ಶೋವನ್ನು ಅವರೆಲ್ಲರೂ ನೋಡುವಂತೆ ರೂಪಿಸಬೇಕಾಗುತ್ತದೆ.

ಬಿಗ್‌ಬಾಸ್‌ನಂಥಾ ಶೋನಲ್ಲಿ ಸೆಲೆಬ್ರಿಟಿಗಳು ಜೊತೆಗಿರುವಾಗ ಜಗಳ, ಹೊಡೆದಾಟ, ಪ್ರೀತಿ ಪ್ರೇಮ ಎಲ್ಲ ಆಗಬಹುದು. ಆದರೆ ಅದನ್ನು ಟಿವಿಯಲ್ಲಿ ತೋರಿಸುವಾಗ ಕೊಂಚ ಸೆನ್ಸ್‌ ಬೇಕಲ್ವಾ? ಫ್ಯಾಮಿಲಿ ಮಂದಿ ನೋಡ್ತಿದ್ದಾರೆ ಅನ್ನೋದು ಮನಸ್ಸಲ್ಲಿ ಇರಬೇಕಲ್ವಾ? ಅನ್ನೋ ಮಾತು ಕೇಳಿ ಬರ್ತಿದೆ. ಹೀಗೆ ಹೇಳೋದಕ್ಕೆ ಕಾರಣ ಒಂದು ಸೀನ್. ಅದೀಗ ಸೋಷಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಬಹಳ ಇಂಟಿಮೀಟ್ ಆಗಿರೋ ಈ ಸೀನ್ ನೋಡಿ ಜನ ಥರಾವರಿ ಕಾಮೆಂಟ್ ಮಾಡ್ತಿದ್ದಾರೆ.

Tap to resize

Latest Videos

undefined

ಮನೆಯಲ್ಲಿ ಲಾಯರ್ ಜಗದೀಶ್ ವರ್ತನೆ ಹೇಗಿರುತ್ತೆ? ಪತಿಯ ಗುಟ್ಟು ಬಿಚ್ಚಿಟ್ಟ 2ನೇ ಪತ್ನಿ!

ಇನ್ನೊಂದು ಕಡೆ ಕನ್ನಡ ಬಿಗ್‌ಬಾಸ್ ವಿಚಾರಕ್ಕೆ ಬಂದರೆ ಬಿಗ್‌ಬಾಸ್‌ ಶೋಗೆ ಕಿಚ್ಚ ಸುದೀಪ್ ವಿದಾಯ ಹೇಳುವ ವಿಚಾರ ಲಕ್ಷಾಂತರ ಬಿಗ್‌ಬಾಸ್‌ ಕನ್ನಡ ಅಭಿಮಾನಿಗಳಿಗೆ ಬೇಸರ ತಂದಿದೆ. ಈಗಾಗಲೇ ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಯಶಸ್ವಿಯಾಗಿ ಮುಂದುವರೆಯುತ್ತಿರುವಾಗ ಕಿಚ್ಚ ಸುದೀಪ್ ಅವರ ಟ್ವೀಟ್ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಬಗ್ಗೆ ಬಿಗ್‌ಬಾಸ್‌ ಹಳೆಯ ಸ್ಪರ್ಧಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೈಕಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಿಚ್ಚ ಸುದೀಪ್ ಇಲ್ದೆ ಬಿಗ್‌ಬಾಸ್‌ ಅನ್ನು ಊಹೆ ಮಾಡಲು ಆಗಲ್ಲ. ಸುದೀಪ್ ಇಲ್ಲದ ಬಿಗ್‌ಬಾಸ್‌ ಮಹಾಭಾರತವನ್ನು ಶ್ರೀಕೃಷ್ಣನ ಕಥೆ ಇಲ್ದೆ ಬರೆದಂತೆ ಆಗುತ್ತದೆ. ಸುದೀಪ್ ಅವರು ಬಿಗ್‌ಬಾಸ್‌ಗೆ ಆಧಾರಸ್ತಂಭ ಇದ್ದಂತೆ. ಹನ್ನೊಂದು ವರ್ಷ ಯಶಸ್ವಿಯಾಗಿ ಬಿಗ್‌ಬಾಸ್‌ ಶೋಗೆ ನಿರೂಪಣೆ ಮಾಡಿದ್ದಾರೆ. ಮುಂದೆ ಕೂಡ ನಿರೂಪಣೆ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ' ಎಂದು ಬಿಗ್‌ಬಾಸ್ ಹಳೆಯ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.

ನೀವು ಹಾಕಿರುವ ಶ್ರಮಕ್ಕೆ ಬೇರೆ ಯಾರಿಂದಲೂ ಮ್ಯಾಚ್ ಮಾಡಲಾಗದು; ಬಿಗ್ ಬಾಸ್ ಬಿಟ್ಟಿದ್ದಕ್ಕೆ ಸುದೀಪ್ ಪುತ್ರಿ ಬೇಸರದ ಪೋಸ್ಟ್!

ಇಷ್ಟೆಲ್ಲ ಅಭಿಮಾನ ಇರುವ ಸುದೀಪ್ ವಿಚಾರ ಒಂದು ಕಡೆಯಾದರೆ ಹಿಂದಿ ಬಿಗ್‌ಬಾಸ್‌ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ಟ್ರೆಂಡ್ ಸೃಷ್ಟಿಸಿದೆ. ಇದರಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಅತಿಯಾದ ಇಂಟಿಮೇಟ್ ಕ್ಷಣಗಳನ್ನು ತೋರಿಸಲಾಗಿದೆ. ಒಬ್ಬ ಸ್ಪರ್ಧಿ ತನ್ನ ಸಹಸ್ಪರ್ಧಿಯ ಲಿಪ್‌ ಟು ಲಿಪ್ ಕಿಸ್ ಮಾಡೋದು, ಅವಳ ಯಾವ್ಯಾವುದೇ ಪಾರ್ಟ್‌ಗೆ ಮುತ್ತಿಕ್ಕೋದು ಇತ್ಯಾದಿ ಸಖತ್ ವೈರಲ್ ಆಗ್ತಿದೆ. ಪುಣ್ಯಕ್ಕೆ ನಮ್ಮ ಕನ್ನಡದಲ್ಲಿ ಇಂಥದ್ದಕ್ಕೆಲ್ಲ ಅವಕಾಶ ಇಲ್ವಲ್ಲ. ಹೀಗಾಗಿ ದಕ್ಷಿಣ ಭಾರತದ ಬಿಗ್‌ಬಾಸ್ ಶೋ ನಿಜಕ್ಕೂ ಮನೆಮಂದಿ ಕೂತು ನೋಡೋ ಹಾಗಿದೆ. ಹೀಗಾಗಿ ಇದನ್ನು ಈ ಕಾರ್ಯಕ್ರಮ ಹೋಸ್ಟ್ ಮಾಡುವವರನ್ನೂ ಜನ ಬಹಳ ಗೌರವದಿಂದ ನೋಡುತ್ತಾರೆ. ಶೋ ಕೂಡ ಆ ಗೌರವ ಉಳಿಸಿಕೊಂಡಿದೆ. ಅದರಲ್ಲೂ ಕನ್ನಡ ಬಿಗ್‌ಬಾಸ್‌ನಲ್ಲಿ ಇಂಥಾ ಅಸಹ್ಯ ರೊಮ್ಯಾನ್ಸ್‌ಗಳು ಅತಿಯಾಗಿ ನಡೆದದ್ದಿಲ್ಲ. ಹೀಗಾಗಿ ಕನ್ನಡಿಗರು ಬಿಗ್‌ಬಾಸ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನೇ ಹೇಳುತ್ತಾರೆ.

 

click me!