ಮನೆಯಲ್ಲಿ ಲಾಯರ್ ಜಗದೀಶ್ ವರ್ತನೆ ಹೇಗಿರುತ್ತೆ? ಪತಿಯ ಗುಟ್ಟು ಬಿಚ್ಚಿಟ್ಟ 2ನೇ ಪತ್ನಿ!

Published : Oct 16, 2024, 11:37 AM ISTUpdated : Oct 16, 2024, 11:49 AM IST
ಮನೆಯಲ್ಲಿ ಲಾಯರ್ ಜಗದೀಶ್ ವರ್ತನೆ ಹೇಗಿರುತ್ತೆ? ಪತಿಯ ಗುಟ್ಟು ಬಿಚ್ಚಿಟ್ಟ 2ನೇ ಪತ್ನಿ!

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ  ಜಗದೀಶ್ ನಾನಾ ರೂಪ ನೋಡಿಯಾಗಿದೆ. ಅವರು ಮನೆಯಲ್ಲಿ ಹೇಗಿರ್ತಾರೆ? ಪ್ರಸಿದ್ಧಿಗಾಗಿ ಹೀಗೆ ಕೂಗಾಡ್ತಾರಾ ಅಥವಾ ಅವರ ಸ್ವಭಾವವೇ ಇದಾ? ಈ ಎಲ್ಲ ಪ್ರಶ್ನೆಗೆ ಅವರ ಪತ್ನಿ ಕಲರ್ಸ್ ಕನ್ನಡ ಸವಿರುಚಿಯಲ್ಲಿ ಉತ್ತರ ನೀಡಿದ್ದಾರೆ.  

ಬಿಗ್ ಬಾಸ್ (Big Boss) ಮನೆಯಲ್ಲಿ ಕಿಚ್ಚು ಹಚ್ಚಿವ ಕೆಲಸವನ್ನು ಕರ್ನಾಟಕ ಕ್ರಶ್ ಎಂದೇ ಪ್ರಸಿದ್ಧಿ ಪಡೆದಿರುವ ಜಗದೀಶ್ (Jagadish) ಮಾಡ್ತಿದ್ದಾರೆ. ಒಂದ್ ಬಾರಿ ಅಳು, ಇನ್ನೊಂದು ಬಾರಿ ನಗು, ಮತ್ತೊಂದು ಬಾರಿ ಬೊಬ್ಬೆ ಹಾಕುವ ಜಗದೀಶ್ ಹೇಗೆ ಎಂಬುದನ್ನು ತಿಳಿಯಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಸಾಧ್ಯವಾಗ್ತಿಲ್ಲ. ನಿನ್ನೆ ಬಿಗ್ ಬಾಸ್ ಮನೆಯಲ್ಲೇ ಜಗದೀಶ್ ಎಲ್ಲ ಅವತಾರವನ್ನು ವೀಕ್ಷಕರು ನೋಡಿದ್ದಾರೆ. ಈ ಮಧ್ಯೆ ಜಗದೀಶ್ ಪತ್ನಿ ಲಾಯರ್ ಸೌಮ್ಯ (Soumya) ಸವಿರುಚಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರವಾಗುವ ಸವಿರುಚಿ (Saviruchi) ಕಾರ್ಯಕ್ರಮಕ್ಕೆ ಬಂದು ಅಡುಗೆ ಮಾಡಿದ ಸೌಮ್ಯ, ಜಗದೀಶ್ ಬಗ್ಗೆ ಕೆಲ ವಿಷ್ಯವನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹೇಗಿದ್ದಾರೋ ಅದೇ ರೀತಿ ಮನೆಯಲ್ಲೂ ಇರ್ತಾರೆ ಎಂದು ಸೌಮ್ಯ ಹೇಳಿದ್ದಾರೆ. ಕಲರ್ಸ್ ಕನ್ನಡ ಬರೀ ಪ್ರೋಮೋ ಬಿಟ್ಟಿದ್ದು, ಜಗದೀಶ್ ಬಗ್ಗೆ ತಿಳಿಯಬೇಕೆಂದ್ರೆ ಫುಲ್ ಎಪಿಸೋಡ್ ನೋಡ್ಲೇಬೇಕು. ಪ್ರೋಮೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಜಗದೀಶ್ ಜೊತೆ ಹೇಗೆ ಸಂಸಾರ ಮಾಡ್ತಿದ್ದೀರಿ ಎಂದು ಒಬ್ಬರು ಕೇಳಿದ್ರೆ ಮತ್ತೊಬ್ಬರು ಬೆಸ್ಟ್ ಜೋಡಿ ಎಂದಿದ್ದಾರೆ. 

ನಾನು ಚೆನ್ನಾಗಿಲ್ಲ ದಪ್ಪ ಇದ್ದೀನಿ ಅಂತ ಸಂತು ರಿಜೆಕ್ಟ್‌ ಮಾಡಿದ್ದಕ್ಕೆ ಅಷ್ಟಿಷ್ಟಲ್ಲ ಶಾಪ ಹಾಕಿದ್ದು: ಬಿಗ್ ಬಾಸ್ ಮಾನಸ

ಜಗದೀಶ್, ಕರ್ನಾಟಕದ ಕ್ರಶ್ (Karnataka crush) ಎಂಬುದು ಬಿಗ್ ಬಾಸ್ ಸ್ಪರ್ಧಿಗಳಿಗೆ ಇಷ್ಟವಾಗ್ತಿಲ್ಲ. ಹಾಗಾಗಿಯೇ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಜಗದೀಶ್ ಕೆಣಕಿದ್ರೆ ತಾವು ಹೈಲೈಟ್ ಆಗ್ಬಹುದು ಎಂಬ ನಂಬಿಕೆ ಸ್ಪರ್ಧಿಗಳದ್ದು ಎನ್ನುತ್ತಿದ್ದಾರೆ ವೀಕ್ಷಕರು. ಜಗದೀಶ್ ಒಳ್ಳೆ ಸ್ಪರ್ಧಿ ಎಂದು ವೋಟ್ ನೀಡಿದ ಫ್ಯಾನ್ಸ್ ಸಂಖ್ಯೆಯೂ ಇಲ್ಲಿದೆ. 

ಜಗದೀಶ್ ಗೆ ಎರಡು ಪತ್ನಿಯರು. ಎರಡನೇ ಪತ್ನಿ ಹೆಸರು ಸೌಮ್ಯ. ಅವರಿಗೆ ಒಬ್ಬ ಮಗನಿದ್ದಾನೆ. ಮಗ ಕೂಡ ಲಾ ಓದುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಐಶ್ವರ್ಯ ಜೊತೆ ಮಾತನಾಡಿದ ಜಗದೀಶ್, ತಮ್ಮ ಕುಟುಂಬವನ್ನು ನೆನೆದು ಕಣ್ಣೀರು ಹಾಕಿದ್ದರು. ಅಪ್ಪ – ಅಮ್ಮನ ವಿಚಾರದಲ್ಲಿ ನಾನು ಲಕ್ಕಿ. ಆದ್ರೆ ಅವರು ಜಾಸ್ತಿ ದಿನ ಇರಲಿಲ್ಲ. ಇನ್ನು ನನ್ನ ಮೊದಲ ಪತ್ನಿ ಕೂಡ ಒಳ್ಳೆಯವಳು. ಆದ್ರೆ ನಾನು ಹೋರಾಟ ಶುರು ಮಾಡಿದಾಗ ಅದನ್ನು ನೋಡಲು ಅವಳಿಗೆ ಆಗ್ಲಿಲ್ಲ ಎಂದು ಅತ್ತಿದ್ದರು. ಐಶ್ವರ್ಯ, ಮಗಳಂತೆ ಅವರಿಗೆ ಸಮಾಧಾನ ಮಾಡಿದ್ದರು.

ಮತ್ತೆ ಬಿಗ್ ಬಾಸ್ ಗೆ ಅವಮಾನಿಸಿದ ಜಗದೀಶ್‌, ಅಶ್ಲೀಲ ಪದ ಬಳಕೆಗೆ ಬೀಪ್ ಸೌಂಡ್‌ ಅಷ್ಟೇ!

ಜಗದೀಶ್ ಬಿಗ್ ಬಾಸ್ ಮನೆಗೆ ಹೋಗ್ತಿದ್ದಂತೆ ಒಳಗೆ ಹಾಗೂ ಹೊರಗೆ ಅವರ ಬಗ್ಗೆ ಚರ್ಚೆ ಶುರುವಾಗಿತ್ತು. ಮೊದಲ ದಿನವೇ ಜಗದೀಶ್ ಬಿಗ್ ಬಾಸ್ ಗೆ ಧಮಕಿ ಹಾಕಿದ್ದರು. ನಾನು ಲಾಯರ್, ಬಿಗ್ ಬಾಸ್ ಶೋ ಬಂದ್ ಮಾಡ್ತೇನೆ ಎಂದಿದ್ದರು. ಆ ನಂತ್ರ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದರು.  ವಕೀಲರು ಎಂಬ ವಿಷ್ಯ ಬಂದಾಗ ಅದನ್ನು ಜನರು ಗಂಭೀರವಾಗಿ ಪರಿಗಣಿಸಿದ್ದರು. ದೆಹಲಿ ಬಾರ್ ಕೌನ್ಸಿಲ್ ನಲ್ಲಿ ಜಗದೀಶ್ ವಕೀಲರಾಗಿ ನೋಂದಾಯಿಸಿದ್ದ ದಾಖಲೆಯನ್ನು ಪರಿಶೀಲನೆ ಮಾಡಲಾಯ್ತು. ಅವರು ನೀಡಿದ ದಾಖಲೆ ನಕಲಿ ಎನ್ನುವ ಕಾರಣಕ್ಕೆ ಅವರ ನೋಂದಣಿಯನ್ನು ರದ್ದು ಮಾಡಲಾಗಿದೆ. ಅವರನ್ನು ವಕೀಲರೆಂದು ಕರೆಯದಂತೆ ಸೂಚನೆ ನೀಡಲಾಗಿದೆ. 

ಇನ್ನು ಬಿಗ್ ಬಾಸ್ ಮನೆಯ ಎಲ್ಲ ಸ್ಪರ್ಧಿಗಳು ರೊಚ್ಚಿಗೆದ್ದಿದ್ದಾರೆ. ಜಗದೀಶ್ ಮೇಲೆ ಮುಗಿಬಿದ್ದಿದ್ದಾರೆ. ತ್ರಿವಿಕ್ರಮ್, ಮಂಜು ಸೇರಿದಂತೆ ಮನೆ ಸದಸ್ಯರೆಲ್ಲ ಜಗದೀಶ್ ವಿರುದ್ಧ ಜಗಳಕ್ಕಿಳಿದಿದ್ದು, ಧರ್ಮ ಕೀರ್ತಿರಾಜ್ ನಾಮಿನೇಷನ್ ಇದಕ್ಕೆಲ್ಲ ಕಾರಣವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!