ನಾನು ಚೆನ್ನಾಗಿಲ್ಲ ದಪ್ಪ ಇದ್ದೀನಿ ಅಂತ ಸಂತು ರಿಜೆಕ್ಟ್‌ ಮಾಡಿದ್ದಕ್ಕೆ ಅಷ್ಟಿಷ್ಟಲ್ಲ ಶಾಪ ಹಾಕಿದ್ದು: ಬಿಗ್ ಬಾಸ್ ಮಾನಸ

By Vaishnavi Chandrashekar  |  First Published Oct 16, 2024, 11:00 AM IST

ಮದುವೆ ಸಮಯಲ್ಲಿ ಸಂತು ಮಾಡಿದ ಅವಾಂತರವನ್ನು ರಿವೀಲ್‌ ಮಾಡಿದ ಮಾನಸ. ರಿಜೆಕ್ಟ್ ಮಾಡಿದ್ದಕ್ಕೆ ದೇವರಲ್ಲಿ ಪ್ರಾರ್ಥನೆ ಮಾಡಿದ ನಟಿ..... 
 


ಕನ್ನಡ ಕಿರುತೆರೆಯ ಕಾಮಿಡಿ ಸ್ಟಾರ್ ತುಕಾಲಿ ಸಂತೋಷ್ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿ ಟಾಪ್‌ ಫೈನಲಿಸ್ಟ್‌ ಪಟ್ಟಿ ಸೇರಿದ್ದರು. ಇದಾದ ಮೇಲೆ ಪತ್ನಿ ಜೊತೆ ಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಭಾಗಿಯಾಗಿದ್ದರು. ಪತ್ನಿ ಮಾನಸ ಕೊಂಚ ನೇಮ್ ಆಂಡ್ ಫೇಮ್ ಗಳಿಸಿದ ಕಾರಣ ಈಗ ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ಆರಂಭವಾಗಿ 16 ದಿನಗಳು ಕಳೆದರೂ ಮಾನಸ ಯಾವುದೇ ರೀತಿಯಲ್ಲಿ ಎಂಟರ್ಟೈನ್ ಮಾಡಿಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ. ಈ ಸಮಯದಲ್ಲಿ ಮಾನಸ ಮದುವೆ ಪ್ರಸಂಗ ವೈರಲ್ ಆಗುತ್ತಿದೆ.

ಮೊದಲ ಸೆಲೆಬ್ರಿಟಿ ಸಂತು:

Latest Videos

undefined

'ನಮ್ಮ ಮನೆಯಲ್ಲಿ ಹೆಣ್ಣು ನೋಡಲು ಬಂದಾಗ ನಾನು ಫಸ್ಟ್ ನೋಡಿದ್ದು, ಏಕೆಂದರೆ ನಾನು ಇರುವುದು ಹಳ್ಳಿಯಲ್ಲಿ ಸಂತು ಕೆಲಸ ಮಾಡಿಕೊಂಡು ಇದ್ದಿದ್ದು ಸಿಟಿಯಲ್ಲಿ. ನಮ್ದು ಲವ್ ಮ್ಯಾರೇಜ್ ಅಲ್ಲ ಮನೆಯಲ್ಲಿ ನೋಡಿ ಮಾಡಿ ಒಪ್ಪಿಕೊಂಡು ಮದುವೆ ಮಾಡಿಕೊಂಡಿದ್ದು. ನನ್ನನ್ನು ಒಪ್ಪಿಕೊಳ್ಳುವುದಕ್ಕೆ ಸಂತು ತುಂಬಾ ಸಮಯ ತೆಗೆದುಕೊಂಡಿದ್ದರು, ಇಲ್ಲ ಹುಡುಗಿ ಚೆನ್ನಾಗಿಲ್ಲ ದಪ್ಪ ಇದ್ದಾಳೆ ಅಂತ ರಿಜೆಕ್ಟ್‌ ಮಾಡಿ 6 ತಿಂಗಳ ನಂತರ ಮತ್ತೆ ಬಂದರು. ನಾನು ನೋಡಿ ಭೇಟಿ ಮಾಡಿದ ಮೊದಲ ಸೆಲೆಬ್ರಿಟಿನೇ ಸಂತು...ಮದುವೆ ಆಗ್ತೀನೋ ಬಿಡ್ತೀನೋ ಒಂದು ಫೋಟೋ ತೆಗೆದುಕೊಳ್ಳಬೇಕು ಅನ್ನೋ ಆಸೆ ಇತ್ತು ನಂಗೆ. ಹುಡುಗಿ ಚೆನ್ನಾಗಿಲ್ಲ ಎಂದು ಹೇಳಿದ್ದಕ್ಕೆ ಸ್ವಲ್ಪ ಹರ್ಟ್ ಆಯ್ತು. ನನ್ನ ರಿಜೆಕ್ಟ್ ಮಾಡಿದ್ದಕ್ಕೆ ಸಂತು ಜೀವನದಲ್ಲಿ ಮದುವೆ ಆಗಬಾರದು ಬ್ರಹ್ಮಚಾರಿಯಾಗಿ ಉಳಿಯಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದೆ' ಎಂದು ಖಾಸಗಿ ಸಂದರ್ಶನದಲ್ಲಿ ಮಾನಸ ಮಾತನಾಡಿದ್ದಾರೆ.

3 ದಿನಗಳಲ್ಲಿ 30ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿದ ಮಾರ್ಟಿನ್; ಮಿಕ್ಸ್‌ ಅಭಿಪ್ರಾಯದ ನಡುವೆಯೂ ಅಬ್ಬರಿಸುತ್ತಿದೆ!

ಸಂತುನೇ ಅಳಿಯ ಎಂದು ಫಿಕ್ಸ್:

'ಸಂತು ಹುಡುಕಿಕೊಂಡ ಬಂದ ಮೇಲೆ ಸ್ವಲ್ಪ ಸ್ಕೋಪ್ ತೆಗೆದುಕೊಳ್ಳೋಣ ಅಂದುಕೊಂಡೆ ಆದರೆ ಮನೆಯಲ್ಲಿ ಹಿರಿಯರು ಬೈದ್ರು ಅವನು ಸಿಕ್ಕಿರುವುದೇ ಹೆಚ್ಚು ನಿನಗೆ ಎಂದು ...ಊರಿನ ಕಡೆ ಮನೆಯಲ್ಲಿ ಹೇಳಿದ್ದೆ ಫೈನಲ್ ನಾವು ಏನೂ ಹೇಳುವುದಕ್ಕೆ ಆಗಲ್ಲ. ಮನೆಯಲ್ಲಿ ಪರಿಸ್ಥಿತಿ ಕಷ್ಟ ಇದ್ದ ಕಾರಣ ಹೊರಗೆ ಒಳಗೆ ಕೆಲಸ ಮಾಡುತ್ತಿದ್ದೆ.....ಹೀಗಾಗಿ ಹುಡುಗರ ರೀತಿಯಲ್ಲಿ ರಫ್ ಆಂಡ್ ಟಫ್ ಆಗಿದ್ದೆ. ಮದುವೆಯಾದ ಒಂದು ವಾರ ಮಾತ್ರ ಸಂತು ಬನ್ನಿ ಹೋಗಿ ಸಂತು ಅಂತ ಗೌರವ ಕೊಡುತ್ತಿದ್ದೆ ಆದರೆ ಒಂದು ವಾರ ಕಳೆದ ನಂತರ ಹೋಗೋ ಬಾರೋ ಶೈಲಿಯಲ್ಲಿ ಮಾತನಾಡಲು ಶುರು ಮಾಡಿದೆ. ಮನೆಯಲ್ಲಿ ಹೇಗಿರುತ್ತೀವಿ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಕೂಡ ನಾವು ಹಾಗೆ ಬಂದು ಬಿಟ್ವಿ ಅದೇ ಜನರಿಗೆ ಇಷ್ಟವಾಗಿದ್ದು' ಎಂದು ಮಾನಸ ಹೇಳಿದ್ದಾರೆ.

ಅಮ್ಮ ಓಡಾಡ್ಕೊಂಡು ಆರೋಗ್ಯವಾಗಿರ ಬೇಕು ಅಂತ ದಿನ ದೇವರಲ್ಲಿ ಬೇಡಿಕೊಳ್ಳುತ್ತೀನಿ; ಕಣ್ಣೀರಿಟ್ಟ ಬಿಗ್ ಬಾಸ್ ತನಿಷಾ!

ಜನರು ಗಾಸಿಪ್ ಹಬ್ಬಿಸಿದ್ದರು:

'ಸಂತು ನನ್ನನ್ನು ನೋಡಲು ಬಂದಾಗ ನನ್ನ ಮೊಬೈಲ್‌ನಲ್ಲಿ ಒಂದು ಫೋಟೋ ತೆಗೆದುಕೊಂಡು ವಾಟ್ಸಪ್‌ ಗ್ರೂಪ್‌ನಲ್ಲಿ ಹಾಕಿದೆ. ನೋಡಿ ನನ್ನನ್ನು ನೋಡಲು ಸಂತು ಬಂದಿದ್ದಾರೆ ಅಂತ ಹೇಳಿದೆ. ಸೆಲೆಬ್ರಿಟಿಗಳು ನಿನ್ನ ಮದುವೆ ಆಗಲ್ಲ ಮನೆಯವರು ಒತ್ತಾಯಕ್ಕೆ ಬಂದು ನೋಡುತ್ತಿರುವುದು ಎಂದು ಸ್ನೇಹಿತರು ಹೇಳಿದ್ದರು ಅದಿಕ್ಕೆ ನಾನು ಆಸೆ ಇಟ್ಟುಕೊಂಡಿರಲಿಲ್ಲ. ಬೇಡ ಅಂತ ಹೇಳಿದಾಗ ಬೇಸರ ಅಯ್ತು. 6 ತಿಂಗಳ ನಂತರ ಮತ್ತೆ ಬಂದಾಗ ಸಂತು ಬೇಡ ಅವನಿಗೆ ಬೆಂಳೂರಿನಲ್ಲಿ ಮದುವೆ ಆಗಿದೆ ಮಗು ಇದೆ ಊರಿನ ಕಡೆ ಮುಖ ಹಾಕುವುದಿಲ್ಲ ಅಂತ ಸುಮಾರು ಜನ ಹೇಳಿದ್ದರು. ಆದರೆ ನಮ್ಮ ಅಪ್ಪಾಜಿ ಮಾತ್ರ ಫಿಕ್ಸ್‌ ಆಗಿಬಿಟ್ಟಿದ್ದರು ಮಾನಸಾ ಮದುವೆ ಅಂತ ಆದ್ರೆ ಅದು ಸಂತುನೇ ಆಗಬೇಕು ಇಲ್ಲ ಅಂದ್ರೆ ಇವಳಿಗೆ ಮದಿವೆನೇ ಮಾಡಲ್ಲ ಅಂತ. ಯಾಕೆ ಅಪ್ಪ ಸಂತೋಷ್‌ನ ಅಷ್ಟೋಂದು ಇಷ್ಟ ಪಟ್ಟರು ಗೊತ್ತಿಲ್ಲ ಆದರೆ ಬೇರೆ ಯಾವ ಗಂಡು ಬಂದರೂ ರಿಜೆಕ್ಟ್ ಮಾಡುತ್ತಿದ್ದರು' ಎಂದಿದ್ದಾರೆ ಮಾನಸ.

click me!