ಈ ಅಮ್ಮ-ಮಗನ ಬಾಂಧವ್ಯಕ್ಕೆ ಯಾರ ಕಣ್ಣೂ ಬೀಳದಿರಲಪ್ಪ ಅಂತಿದ್ದಾರೆ ಅಭಿಮಾನಿಗಳು!

Published : Mar 19, 2024, 03:01 PM ISTUpdated : Mar 19, 2024, 04:03 PM IST
ಈ ಅಮ್ಮ-ಮಗನ ಬಾಂಧವ್ಯಕ್ಕೆ ಯಾರ ಕಣ್ಣೂ ಬೀಳದಿರಲಪ್ಪ ಅಂತಿದ್ದಾರೆ ಅಭಿಮಾನಿಗಳು!

ಸಾರಾಂಶ

ಅಮ್ಮ ತುಳಸಿಯ ಮೇಲೆ ಸಮರ್ಥ್​ ತೋರುವ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಅನ್ನುತ್ತಿದ್ದಾರೆ ಫ್ಯಾನ್ಸ್​. ಅಷ್ಟಕ್ಕೂ ಆಗಿದ್ದೇನು?   

ಅಮ್ಮ ತುಳಸಿ ಗಂಡನ ಮನೆಯಲ್ಲಿ ಪಡುತ್ತಿರುವ ಕಷ್ಟವನ್ನು ಮಗ ಸಮರ್ಥ್​ಗೆ ನೋಡಲು ಆಗುತ್ತಿಲ್ಲ.  ಅಮ್ಮನ ಮೇಲೆ ಎದುರಿಗೆ ದ್ವೇಷದಂತೆ ಮಾತನಾಡುತ್ತಿದ್ದರೂ, ಒಳಗೇ ಅಮ್ಮನ ಮೇಲೆ ಅದಕ್ಕಿಂತಲೂ ಹೆಚ್ಚು ಪ್ರೀತಿ ಇದೆ ಅವನಿಗೆ. ಅಮ್ಮನಿಗೆ ಏನೇ ಸಣ್ಣ ನೋವಾದರೂ ಅದನ್ನು ಆತ ಸಹಿಸಿಕೊಳ್ಳುವುದಿಲ್ಲ. ತನ್ನ ಅಮ್ಮ ಈ ಮನೆಯಲ್ಲಿ ಖುಷಿಯಿಂದ ಇಲ್ಲ ಎನ್ನುವ ಸತ್ಯ ಅವನಿಗೂ ಗೊತ್ತು. ಆದರೆ ಅಮ್ಮ ತಮಗೆ ಹೇಳದೇ ಮದುವೆಯಾಗಿ ಹೋದಳು ಎನ್ನುವ ಚಿಕ್ಕ ನೋವು ಇದೆ. ಇದೇ ಕಾರಣಕ್ಕೆ ತುಳಸಿ ಎದುರಿಗೆ ಬಂದಾಗ ಮೇಡಂ, ಯಜಮಾನಿ ಎಂದೆಲ್ಲಾ ಮಾತಿನಲ್ಲಿಯೇ ಚುಚ್ಚುತ್ತಾನೆ. ಆದರೆ ಅಮ್ಮನಿಗೆ ಸ್ವಲ್ಪ ನೋವಾದರೂ ಸಹಿಸಿಕೊಳ್ಳುವುದು ಆತನಿಂದ ಸಾಧ್ಯವಿಲ್ಲ. ಆದರೆ ಈಗ ಅಮ್ಮನ ಮೇಲೆ ಬಹುದೊಡ್ಡ ಆರೋಪ ಬಂದುಬಿಟ್ಟಿದೆ. ಅದನ್ನು ಸಮರ್ಥ್​ ಹೇಗೆ ನಿಭಾಯಿಸುತ್ತಾನೆ ಎನ್ನುವುದು ಅವನ ಮುಂದಿರುವ ಚಾಲೆಂಜ್​ ಆಗಿತ್ತು.

ಆದರೆ ಈಗ ಆ ಚಾಲೆಂಜ್​ನಲ್ಲಿ ಸಮರ್ಥ್​ ಗೆದ್ದಿದ್ದಾನೆ. ಅಮ್ಮನ ಮಾನ ಉಳಿಸಿದ್ದಾನೆ. ತನ್ನ ಮಗ ತನಗಾಗಿ ಚಾಲೆಂಜ್​ ತೆಗೆದುಕೊಂಡಿರುವುದನ್ನು ನೋಡಿ ತುಳಸಿಯ ಕಣ್ತುಂಬಿ ಬಂದಿತ್ತು. ತನಗಾಗಿ ಮಗ ಚಾಲೆಂಜ್​ ತೆಗೆದುಕೊಂಡು ನಿದ್ದೆ ಮಾಡದೇ ರಾತ್ರಿಪೂರ್ತಿ ಕುಳಿತಾಗ ಈ ಅಮ್ಮ ಆದ್ರೂ ಹೇಗೆ ನಿದ್ದೆ ಮಾಡಿಯಾಳು? ರಾತ್ರಿಪೂರ್ತಿ ಜಾಗರಣೆ ಮಾಡಿದ್ದಾಳೆ. ಮಗನಿಗೆ ನಿದ್ದೆ ಬರದಂತೆ ನೋಡಿಕೊಂಡಿದ್ದಾಳೆ. ಈ ಮಗನಿಗೋ ಅಮ್ಮನ ಮೇಲೆ ಹುಸಿಕೋಪ. ಆದರೂ ಅಕ್ಕರೆ, ಅಮ್ಮ ನಿದ್ದೆ ಮಾಡುತ್ತಿದ್ದಂತೆಯೇ ಮಡಿಲ ಮೇಲೆ ಮಲಗಿಸಿಕೊಂಡಿದ್ದಾನೆ. ಮಾರನೆಯ ದಿನ ಫೈಲ್​ ರೆಡಿ ಆಗಿದ್ದು ನೋಡಿ ಎಲ್ಲರಿಗೂ ಅಚ್ಚರಿ. ನಿನಗೆ ಹೇಳಿದಂತೆ ಪಾರ್ಟಿ ಕೊಡಿಸುವೆ ಅಂದಿದ್ದಾನೆ ಅವಿ. ಆದರೆ ಇದಕ್ಕೆಲ್ಲಾ ಸಮರ್ಥ್​ ಒಪ್ಪುವವನಲ್ಲ. ನಿಮಗೆ ಏನಾದರೂ ಕೊಡಬೇಕು ಎನ್ನಿಸಿದ್ರೆ ಅದು ಈ ಮೇಡಂಗೆ (ಅಮ್ಮ) ಏನೂ ಹೇಳಬೇಡಿ, ಅಷ್ಟೇ ಸಾಕು ಎಂದಿದ್ದಾನೆ. ಈ ಅಮ್ಮ-ಮಗನ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಪ್ಪ ದೇವ್ರೇ ಅನ್ನುತ್ತಿದ್ದಾರೆ ಫ್ಯಾನ್ಸ್. 

ಗೌತಮ್​-ಭೂಮಿ ಒಂದಾಗೋ ಹೊತ್ತಲ್ಲಿ ಇದ್ಯಾವಳು ಬಂದಳಪ್ಪಾ? ಹೀಗೆ ಮಾಡ್ಬೇಡಿ ಪ್ಲೀಸ್​ ಅಂತಿದ್ದಾರೆ ಫ್ಯಾನ್ಸ್​!

ಅಷ್ಟಕ್ಕೂ ಆಗಿದ್ದೇನೆಂದರೆ, ತುಳಸಿ ಗೊತ್ತಿಲ್ಲದೇ ಅವಿ-ಅಭಿಗೆ ಸೇರಿದ ಆಫೀಸ್​ ಫೈಲ್​ ಅನ್ನು ಯಾವುದೋ ವ್ಯಕ್ತಿಗೆ ಕೊಟ್ಟುಬಿಟ್ಟಿದ್ದಾಳೆ. ಇದು ದೀಪಿಕಾಳ ಕುತಂತ್ರ. ಆದರೆ ಈ ಬಗ್ಗೆ ಯಾರಿಗೂ ಅರಿವಿಲ್ಲ. ಇದೇ ಸಿಟ್ಟಿನಲ್ಲಿ ಅವಿ ಮತ್ತು ಅಭಿ ತುಳಸಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಅವಿಯ ಕಚೇರಿಯ ಫೈಲ್​ ಕೊಡುವಂತೆ ಯಾರೋ ಕೇಳಿಕೊಂಡು ಬಂದಾಗ ತುಳಸಿ ಹಿಂದು ಮುಂದು ನೋಡದೇ ಅದನ್ನು ಕೊಟ್ಟುಬಿಟ್ಟಿದ್ದಾಳೆ.  ತುಳಸಿಯನ್ನು ಹೇಗಾದರೂ ಮಾಡಿ ಎಲ್ಲರ ದೃಷ್ಟಿಯಲ್ಲಿ ಕೆಳಗೆ ಮಾಡಬೇಕು ಎನ್ನುವುದು ದೀಪಿಕಾ ಮತ್ತು ಅತ್ತೆ ಶಾರ್ವರಿಯ ತಂತ್ರ. ಮನೆಯ ಯಜಮಾನಿಕೆಯನ್ನು ತುಳಸಿ ಕೈಯಲ್ಲಿ ಕೊಟ್ಟಿರುವ ಕಾರಣ, ಅದನ್ನು ವಾಪಸ್​ ಪಡೆಯಬೇಕು ಎನ್ನುವ ತಂತ್ರ ಹೆಣೆದಿದ್ದಾರೆ. ಆದರೆ ಪಾಪ ಮುಗ್ಧಳಾದ ತುಳಸಿಗೆ ಇದ್ಯಾವುದರ ಅರಿವೇ ಇಲ್ಲ. ಅವಳಿಗೆ ಯಜಮಾನಿಕೆಯೂ ಬೇಕಿರಲಿಲ್ಲ. ಆದರೆ ಅದು ತಂತಾನೇ ಬಂದುಬಿಟ್ಟಿದೆ. ಆದರೆ ಇದನ್ನು ಶಾರ್ವರಿ ಸಹಿಸುತ್ತಿಲ್ಲ. ಇದೇ ಕಾರಣಕ್ಕೆ ಸೊಸೆ ದೀಪಿಕಾ ಜೊತೆಗೂಡಿ ಕುತಂತ್ರ ರೂಪಿಸಿದ್ದಾಳೆ.

ಅರ್ಜೆಂಟ್​ ಆಗಿ ಫೈಲ್​ ಬೇಕು ಎಂದು ವ್ಯಕ್ತಿಯೊಬ್ಬ ಮನೆಗೆ ಬಂದಾಗ ಅದನ್ನು ತುಳಸಿ ಕೊಟ್ಟುಬಿಟ್ಟಿದ್ದಾಳೆ. ಮಕ್ಕಳಿಗೆ ತೊಂದರೆ ಆಗಬಾರದು ಎಂದು ಅವಳು ಈ ರೀತಿಮಾಡಿದ್ದಾಳೆ. ಆದರೆ ಅವಿ, ತುಳಸಿಗೆ ಚೆನ್ನಾಗಿ ಬೈದಿದ್ದಾನೆ. ಎಲ್ಲರೂ ಸೇರಿ ತುಳಸಿಯ ಮೇಲೆ ಹರಿಹಾಯ್ದಿದ್ದಾರೆ. ತುಳಸಿ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಳೆ. ಮಾಡಿದ್ದು ತಪ್ಪಾಗಿದೆ. ಏನೋ ಒಳ್ಳೆಯ ಉದ್ದೇಶದಲ್ಲಿ ಅವಳು ಕೊಟ್ಟುಬಿಟ್ಟಿದ್ದಾಳೆ. ಆದರೆ ಅಂದು ನಡೆಯಬೇಕಿರುವ ಮೀಟಿಂಗ್​ನ ಮಹತ್ವದ ಫೈಲ್​ ಆಗಿತ್ತು. ಅದಕ್ಕಾಗಿಯೇ ಸಿಟ್ಟಿನಿಂದ ಎಲ್ಲರೂ ಬೈದಿದ್ದಾರೆ. ದೀಪಿಕಾ ಮತ್ತು ಶಾರ್ವರಿಯಂತೂ ಮನಸಾರೆ ಖುಷಿಪಡುತ್ತಿದ್ದಾರೆ.  ಎಲ್ಲರೂ ಸೇರಿ ಫೈಲ್​ಗೋಸ್ಕರ ಅಮ್ಮನಿಗೆ ಬೈಯುವುದನ್ನು ನೋಡಲು ಆಗದ ಸಮರ್ಥ್​, ಒಂದು ಫೈಲ್​ ತಾನೆ? ಅದೇನಾಯ್ತು ಅಂತ ಎಲ್ಲರೂ ಬೈತಾ ಇದ್ದೀರಾ? ಮೀಟಿಂಗ್​ನಿಂದ ಮುಂಚೆ ಅದನ್ನು ರೆಡಿ ಮಾಡಿದ್ರೆ ಆಯ್ತಲ್ವಾ ಎಂದು ಪ್ರಶ್ನಿಸಿದ್ದ. ಅವಿ ಮತ್ತು ಅಭಿ ಸೇರಿ ಅವನಿಗೆ ಟಾಂಟ್​ ಕೊಟ್ಟಿದ್ದರು. ಹಾಗಿದ್ರೆ ನೀನು ಅದನ್ನು ರೆಡಿ ಮಾಡುತ್ತೀಯಾ ಎಂದು ಕೇಳಿದ್ದರು. ಈ ಚಾಲೆಂಜ್​ ಅನ್ನು ಸಮರ್ಥ್​ ತೆಗೆದುಕೊಂಡಿದ್ದಾನೆ. ತಾನೇ ಫೈಲ್​ ರೆಡಿ ಮಾಡಿಕೊಡುವುದಾಗಿ ಹೇಳಿದ್ದ. ಅದನ್ನು ಗೆದ್ದಿದ್ದಾನೆ. 

ಓರಗಿತ್ತಿಯರಾಗಲು ರೆಡಿಯಾಗಿರೋ ಸಾರಾ ಅಲಿ ಖಾನ್​, ಜಾಹ್ನವಿ ಕಪೂರ್​ ವರ್ಕ್​ಔಟ್​ಗೆ ಫ್ಯಾನ್ಸ್​ ಫಿದಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಜಯದೇವ್‌ ಕುತಂತ್ರಕ್ಕೆ ಗೌತಮ್‌-ಭೂಮಿಕಾ ಕುಟುಂಬದಲ್ಲಿ ಸಾವಾಯ್ತಾ?
BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ