ಎರಡು ಅಬಾರ್ಷನ್ ಆಗಿತ್ತು, ಸಾಯೋ ನಿರ್ಧಾರ ಮಾಡಿ ಮಾತ್ರೆ ನುಂಗಿದರೂ ಮಗಳು ಬದುಕಿಬಿಟ್ಟಳು: ನಯನಾ

Published : Mar 19, 2024, 11:09 AM IST
ಎರಡು ಅಬಾರ್ಷನ್ ಆಗಿತ್ತು, ಸಾಯೋ ನಿರ್ಧಾರ ಮಾಡಿ ಮಾತ್ರೆ ನುಂಗಿದರೂ ಮಗಳು ಬದುಕಿಬಿಟ್ಟಳು: ನಯನಾ

ಸಾರಾಂಶ

ಸುವರ್ಣ ಸೂಪರ್ ಸ್ಟಾರ್ ವೇದಿಕೆ ಮೇಲೆ ಕಣ್ಣೀರಿಟ್ಟ ನಯನಾ. ಅಬಾರ್ಷನ್ ಕಥೆ ಕೇಳಿ ಭಾವುಕರಾದ ಶಾಲಿನಿ. 

ಶಾಲಿನಿ ಸತ್ಯನಾರಾಯಣ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಕಾಮಿಡಿ ಕ್ವೀನ್ ನಯನಾ ಭಾಗಿಯಾಗಿದ್ದರು. ಈ ವೇಳೆ ತಮ್ಮ ಜೀವನದ ಸೂಪರ್ ಸ್ಟಾರ್ ಯಾರೆಂದು ಹಂಚಿಕೊಂಡಿದ್ದಾಳೆ. ಅಲ್ಲದೆ ಯಾರಿಗೂ ಗೊತ್ತಿರದ ಸತ್ಯ ಹಂಚಿಕೊಂಡು ಭಾವುಕರಾಗಿದ್ದಾರೆ.

'ನನ್ನ ಜೀವನದ ಸೂಪರ್ ಸ್ಟಾರ್ ವ್ಯಕ್ತಿ ಸದ್ಯಕ್ಕೆ ನನ್ನ ಮಗಳು. ನನ್ನ ಸಂಪೂರ್ಣ ಬದುಕು ನನ್ನ ಮಗಳಾಗಿದ್ದಾಳೆ.  ಅದೊಂದು ಜೀವನ ನನ್ನೊಳಗೆ ಇರದೇ ಹೋಗಿದ್ದರೆ ಇವತ್ತಿಗೆ ನಯನಾ ಅನ್ನೋ ವ್ಯಕ್ತಿನಾ ಯಾರೂ ನೋಡುತ್ತಿರಲಿಲ್ಲ. ನಯನಾ ಅನ್ನೋ ವ್ಯಕ್ತಿ ನೆನಪಾಗಿ ಉಳಿದುಬಿಡುತ್ತಿದ್ದಳು.' ಎಂದು ನಯನಾ ಮಾತನಾಡಿದ್ದಾರೆ. 

ಹೆಣ್ಣು ಮಗುವಿಗೆ ಜನ್ಮ ನೀಡಿದ ನಯನಾ; ನವೆಂಬರ್‌ನಲ್ಲಿ ಹುಟ್ಟಿದ ಕನ್ನಡಾಂಬೆ ಎಂದ ನೆಟ್ಟಿಗರು!

'ನಾನು ಪ್ರೆಗ್ನೆಂಟ್ ಅಂತ ಕನ್ಫರ್ಮ್‌ ಮಾಡಿಕೊಳ್ಳುವ ಎರಡು ಮೂರು ದಿನ ಮುಂಚೆ ನಾನು ಇರಬಾರದು ಅಂತ ನಿರ್ಧಾರ ಮಾಡಿಬಿಟ್ಟಿದ್ದೆ. ಈ ಜೀವನ ಬೇಡ ನನಗೆ ಅನಿಸುತ್ತಿತ್ತು. ಏನಾಗುತ್ತಿದೆ ಹೇಳಿ ಅಂತ ಹೇಳುವ ವ್ಯಕ್ತಿಗಳು ಬೇಕಿತ್ತು ಒಂದು ವೇಳೆ ಹೇಳಿಕೊಂಡರೆ ತಲೆ ತುಂಬಾ ನೆಗೆಟಿವಿಟಿನೇ ಕಣೇ ಅಂತ ಹೇಳುತ್ತಿದ್ದರು. ಯಾಕೋ ಗೊತ್ತಿಲ್ಲ ಇದಕ್ಕೂ ಮೊದಲು ಎರಡು ಅಬಾರ್ಷನ್ ಆದಾಗ ಏನ್ ಜೀವನ ಗುರು ಇದು ದುಡಿ....ಓಡಾಡೋಕೆ ಕಾರಿಗೆ ಬೈಕ್ ಇದೆ. ಎರಡು ಸಲವೂ ಅನಿರೀಕ್ಷಿತವಾಗಿ ಆಗಿಬಿಟ್ಟಿತ್ತು. ಯಾರಿಗೂ ನನ್ನ ಹೆಣ ಸಿಗಬಾರದು ಹಾಗೆ ಹೋಗ್ಬೇಕು ಅಂದುಕೊಂಡಿದ್ದೆ. ಅದರೆ ಪ್ರೆಗ್ನೆಂಟ್ ಅಂತ ಗೊತ್ತಾದ ಮೇಲೆ...ಎರಡು ಸಲ ತಪ್ಪು ಮಾಡಿದ್ದೀನಿ ಇದು ಒಂದನ್ನು ಉಳಿಸಿಕೊಳ್ಳೋಣ ಅಂತ ಧೈರ್ಯ ಮಾಡಿದೆ. ಸಾಯಬೇಕು ಅಂತ ಧೈರ್ಯ ಮಾಡಿದ್ದ ಕಾರಣ ಮಗು ಹೋಗಿಬಿಡಲಿ ಅಂತ ಮಾತ್ರೆ ತೆಗೆದುಕೊಂಡು ಬಿಟ್ಟಿದ್ದೆ. ಹೇಗಿದ್ರೂ ಸಾಯೋದೆ ಅಂತ ತೀರ್ಮಾನ ಆಗಿತ್ತು ಆದರೆ ದೇವರ ಶಕ್ತಿ ನನ್ನ ಮಗಳು ಬದುಕಿಬಿಟ್ಟಳು' ಎಂದು ನಯನಾ ಹೇಳಿದ್ದಾರೆ. 

ನಿಮ್ಮ ತೆವಲಿಗೋಸ್ಕರ ನ್ಯೂಸ್ ಹಾಕ್ಬೇಡಿ; ಆ ಸುದ್ದಿ ಓದಿ ಕಾಮಿಡಿ ಕಿಲಾಡಿಗಳು ನಯನಾ ಗರಂ!

'ಆಸ್ಪತ್ರೆಗೆ ಹೋದ ಮೇಲೆ ಡಾಕ್ಟರ್ ಹೇಳಿದರು ನೀವು ಪ್ರೆಗ್ನೆಂಟ್ ಆಗಿದ್ದೀರಾ ನಿಮ್ಮ ಮಗು ಹಾರ್ಟ್‌ ಬೀಟ್ ಬರ್ತಿದೆ ನೋಡಿ ಅಂತ...ಅದನ್ನು ಕೇಳಿಸಿಕೊಂಡು ನನ್ನ ಮಗು ಉಳಿಸಿಕೊಳ್ಳಬೇಕು ಆ ಜೀವ ಉಳಿಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿಬಿಟ್ಟೆ. ಎಲ್ಲರನ್ನು ನಗಿಸಬೇಕು ಎಂದು ನಾನು ತಮಾಷೆ ಮಾಡುತ್ತಿದ್ದೆ ಈ ಸಲ ಕಷ್ಟ ಪಟ್ಟು ನನ್ನ ಮಗಳ ನಗು ನೋಡಲು ಖುಷಿ ನೋಡಲು ಬದುಕಬೇಕು ಅನಿಸಿತ್ತು. ಮಗು ಆಗಿಲ್ಲ ಅಂತ ಈ ನಿರ್ಧಾರ ತೆಗೆದುಕೊಂಡಿರಲಿಲ್ಲ ನನಗೆ ಜೀವನದಲ್ಲಿ ತುಂಬಾ ಒಂಟಿತನ ಕಾಡುತ್ತಿತ್ತು. ಪ್ರೆಗ್ನೆನ್ಸಿ ಸಮಯದಲ್ಲಿ ನನ್ನ ಗಂಡನ ಜೊತೆ ಹಂಚಿಕೊಂಡೆ. ಮಗು ಹುಟ್ಟುವ ಸಮಯದಲ್ಲಿ ಜೀವನ ಚೆನ್ನಾಗಿರಬೇಕು ಅಂತ ಗಂಡ ದುಡಿಯುವ ಕಡೆ ಗಮನ ಕೊಡುತ್ತಿದ್ದರು. ನನಗೆ ಏನೋ ತಿನ್ನಬೇಕು ಅನ್ನೋ ಬಯಕೆ ಇರಲಿಲ್ಲ...ನನ್ನ ಗಂಡನನ್ನು ನೋಡಬೇಕು ಅನ್ನೋದೇ ತಲೆಯಲ್ಲಿ ಇತ್ತು' ಎಂದಿದ್ದಾರೆ ನಯನಾ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?