ಲಕ್ಷ್ಮೀ ಬಾರಮ್ಮಾ ಸೀರಿಯಲ್ ಖ್ಯಾತಿಯ ಕೀರ್ತಿ ಪಾತ್ರಧಾರಿಯ ಭವಿಷ್ಯವನ್ನು ಬಾಲ್ಯದಲ್ಲಿಯೇ ನುಡಿದಿದ್ದರು ದ್ವಾರಕೀಶ್. ವಿಡಿಯೋ ವೈರಲ್ ಆಗಿದೆ.
ಕೀರ್ತಿ ಎಂದಾಕ್ಷಣ ಸೀರಿಯಲ್ ಪ್ರಿಯರ ಎದುರಿಗೆ ಬರುವುದು ಲಕ್ಷ್ಮಿ ಬಾರಮ್ಮ ಸೀರಿಯಲ್ನ ಬೊಗಸೆ ಕಣ್ಣುಗಳ ಚೆಲುವೆ. ವೈಷ್ಣವ್- ಕೀರ್ತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಹೀರೋ ತಾಯಿ ಕಾವೇರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ತನ್ನ ಮಗನಿಗೆ ಲಕ್ಷ್ಮಿ ಎಂಬ ಮಧ್ಯಮ ಹುಡುಗಿ ಜೊತೆ ಮದುವೆ ಮಾಡಿಸುತ್ತಾರೆ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ಗೋಸ್ಕರ ಕೀರ್ತಿ ಹಂಬಲಿಸುತ್ತಿದ್ದಾಳೆ. ಏನಾದರೂ ಮಾಡಿ ನನ್ನ ವೈಷ್‌ನನ್ನು ಪಡೆದುಕೊಳ್ಳಬೇಕು ಅಂತ ಕೀರ್ತಿ ಪ್ಲ್ಯಾನ್ ಮಾಡುತ್ತಾಳೆ. ಇಂಥದ್ದೊಂದು ಕಥಾ ಹಂದರವನ್ನು ಹೊಂದಿರುವ ಸೀರಿಯಲ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದು, ಈ ಸೀರಿಯಲ್ನಲ್ಲಿ ಕೀರ್ತಿ ಪಾತ್ರ ಹಾಕುವ ಮೂಲಕ ಅಪಾರ ಮೆಚ್ಚುಗೆ ಗಳಿಸಿರುವ ಕೀರ್ತಿಯ ನಿಜವಾದ ಹೆಸರು ತನ್ವಿ ರಾವ್. ಇದಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧೆ ಶ್ಯಾಮ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಹಾಗೂ ಇದಾದ ಬಳಿಕ ಕನ್ನಡ, ತಮಿಳಿನ ಹಲವು ಸೀರಿಯಲ್ಗಳಲ್ಲಿ ಮನೋಜ್ಞ ಅಭಿನಯ ನೀಡಿರುವ ತನ್ವಿ ರಾವ್ ಕುರಿತು ಇಂಟರೆಸ್ಟಿಂಗ್ ಮಾಹಿತಿಗಳು ಹೊರಬಂದಿವೆ.
ಅಂದಹಾಗೆ, ತನ್ವಿ ರಾವ್ ಅವರೇ ಬಾಲ್ಯದ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಇದೀಗ ವೈರಲ್ ಆಗಿದೆ. ತನ್ವಿ ಅವರ ಬಾಲ್ಯದಲ್ಲಿಯೇ ಅವರ ಭವಿಷ್ಯವನ್ನು ನಟ ದ್ವಾರಕೀಶ್ ಅವರು ಹೇಳಿಬಿಟ್ಟಿದ್ದರು. ಬಾಲ್ಯದಲ್ಲಿಯೇ ತನ್ವಿ ಅವರ ಟ್ಯಾಲೆಂಟ್ ನೋಡಿದ್ದ ದ್ವಾರಕೀಶ್ ಅವರು ಈಕೆ ಮುಂದೆ ಅದ್ಭುತ ನಾಯಕಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು, ಇದೀಗ ಕಿರುತೆರೆಯ ಮೂಲಕ ತನ್ವಿ ಮಿಂಚುತ್ತಿದ್ದಾರೆ. ದ್ವಾರಕೀಶ್ ಸರ್ ಅವರ ಆಶೀರ್ವಾದ ಇವತ್ತಿಗೂ ನನ್ನನ್ನು ಮುಂದೆ ಕರೆದುಕೊಂಡು ಹೋಗುತ್ತಿದೆಯೇನೋ ಎಂದು ತನ್ವಿ ಬರೆದುಕೊಂಡಿದ್ದಾರೆ.
ಗಟ್ಟಿಮೇಳ ಸೀರಿಯಲ್ನ ಕೊನೆಯ ದಿನದ ಶೂಟಿಂಗ್ ಹೇಗಿತ್ತು? ಸಂಪೂರ್ಣ ವಿಡಿಯೋ ಶೇರ್ ಮಾಡಿದ ಅದಿತಿ!
ಹೌದು. ತನ್ವಿ ಅವರು 9 ವರ್ಷದವರಿರುವಾಗ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಷೋನಲ್ಲಿ ಅದ್ಭುತ ಪ್ರದರ್ಶನ ನೀಡಿ ದ್ವಾರಕೀಶ್ ಅವರ ಪ್ರಶಂಸೆಗೆ ಪಾತ್ರರಾಗಿದ್ದರು. ಇವರು ಒಬ್ಬ ಅದ್ಭುತ ಕಲಾವಿದೆ. ವೇದಿಕೆಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇವರು ಮುಂದೊಮ್ಮೆ ಉತ್ತಮ ಕಲಾವಿದೆಯಾಗಿ ಹೊರಹೊಮ್ಮಲಿದ್ದಾರೆ ಎಂದು ದ್ವಾರಕೀಶ್ ಹೇಳಿದ್ದರು. ಅದನ್ನು ತನ್ವಿ ಅವರು ಶೇರ್ ಮಾಡಿಕೊಂಡಿದ್ದಾರೆ.
ಅಂದಹಾಗೆ, ತನ್ವಿ ಅವರು, ಭರತನಾಟ್ಯ ಕಲಾವಿದೆ ಕೂಡ. 4 ನೇ ವಯಸ್ಸಿನಲ್ಲೇ ಕಥಕ್ ಡ್ಯಾನ್ಸರ್ ಕೂಡ ಆಗಿದ್ದಾರೆ. ಮಾಧುರಿ ದೀಕ್ಷಿತ್ ಅಭಿನಯದ ಗುಲಾಬ್ ಗ್ಯಾಂಗ್ ಸಿನಿಮಾದಲ್ಲಿಯೂ ತನ್ವಿ ನಟಿಸಿದ್ದಾರೆ. ಬಾಲ್ಯದಲ್ಲಿ ತನ್ವಿ ರಾವ್ ಅವರ ನೃತ್ಯ ಕಂಡಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು, ಆಕೆಗೆ ಆಶೀರ್ವಾದ ಮಾಡಿದ್ದರು. ಜಮೆಲ ಎನ್ನುವ ಮುಸ್ಲಿಂ ಪಾತ್ರ ಮಾಡಿದ್ದ ತನ್ವಿ ಗಾಯಕಿಯಾಗಿ ಕಾಣಿಸಿಕೊಂಡಿದ್ದರು. ಗಾಜಿನ ಕಣ್ಣುಗಳ ಈ ಚೆಲುವೆಗೆ ಅವರ ಕಣ್ಣುಗಳೇ ಒಮ್ಮೆ ಶತ್ರು ಆಗಿದ್ದೂ ಇದೆಯಂತೆ. ಇದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ಲೆನ್ಸ್ ಹಾಕಿ ನಟಿಸುವ ಅನಿವಾರ್ಯತೆ ಇತ್ತು. ಆಗ ಸಮಸ್ಯೆ ಆಗಿ ನಾನು ಲೆನ್ಸ್ ಹಾಕೋದು ಬಿಟ್ಟಿದ್ದೆ ಎಂದು ಹೇಳುತ್ತಾರೆ ತನ್ವಿ. ಇದೀಗ ಲಕ್ಷ್ಮಿ ಬಾರಮ್ಮ ಸೀರಿಯಲ್ ಸಕತ್ ಕೀರ್ತಿ ತಂದುಕೊಟ್ಟಿದೆ ಎನ್ನುತ್ತಾರೆ.
ರಾಮ ಭಕ್ತರ ಆಸೆ ಕೊನೆಗೂ ಈಡೇರಿಸಿದ ಡಾ.ಬ್ರೋ: ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ಗಗನ್ ವಿವರಣೆ...