
ದೃಷ್ಟಿಬೊಟ್ಟು ಅನ್ನೋದು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀರಿಯಲ್. ಬಳ್ಳಾರಿಯ ಡಾನ್ ಒಬ್ಬನ ಪ್ರೇಮ, ಆಕ್ಷನ್ ಕಥೆ ಈ ಸೀರಿಯಲ್‌ನದು ಅಂತ ಮೇಲ್ನೋಟಕ್ಕೆ ಅನಿಸಿದರೂ ಇದು ರೂಪವೇ ಶಾಪವಾದವಳ ಕಥೆ ಅಂತ ಸೀರಿಯಲ್ ಟೀಮ್ ಶುರುವಿನಲ್ಲೇ ಹೇಳಿಕೊಂಡಿದೆ. ಸೋ ಫೀಮೇಲ್ ಸೆಂಟ್ರಿಕ್ ಆಗಿರೋ ಸೀರಿಯಲ್ ಜಗತ್ತಿನಲ್ಲಿ ಇದು ಕೂಡ ದೃಷ್ಟಿ ಅನ್ನೋ ಸೌಂದರ್ಯವತಿಯ ಕಥೆ ಅಂತ ಹೇಳಬಹುದು. ಬಡತನ, ಅವಮಾನಗಳೇ ತುಂಬಿರುವ ಕುಟುಂಬದಲ್ಲಿ ಅಸಾಧಾರಣ ಸೌಂದರ್ಯವತಿಯೊಬ್ಬಳು ಹುಟ್ಟಿದಾಗ ಸಮಾಜ ದುಷ್ಟ ಜನರ ಕಣ್ಣು ಆಕೆಯ ಮೇಲೆ ಬೀಳುತ್ತೆ. ಅದಕ್ಕೆ ಭಯಪಟ್ಟ ಈಕೆಯ ತಾಯಿ ಮಗಳ ಮುಖಕ್ಕೆ ಇದ್ದಿಲು ಹಚ್ಚಿ ಆಕೆ ಕುರೂಪಿ ಆಗಿರುವ ಹಾಗೆ ಮಾಡ್ತಾಳೆ. ಹಾಗೆ ಮಾಡಿದರಷ್ಟೇ ಅವಳು ಸೇಫಾಗಿರಲು ಸಾಧ್ಯ ಅನ್ನೋದು ಅವಳ ತಾಯಿಯ ನಂಬಿಕೆ. ಇಂಥಾ ಹುಡುಗಿಯ ಲೈಫಿನ ಒಂದು ಹಂತದ ಕಷ್ಟಗಳೆಲ್ಲ ತಿಂಗಳಾನುಗಟ್ಟಲೆ ಸೀರಿಯಲ್‌ನಲ್ಲಿ ಕಾಣಿಸಿಕೊಂಡು ಆಮೇಲೆ ಅವಳು ಬಳ್ಳಾರಿ ಡಾನ್‌ನ ಸ್ನೇಹಿತೆ ಆಗಿ ಒಂದು ಹಂತದಲ್ಲಿ ಬಲವಂತದಲ್ಲಿ ಆತನಿಂದಲೇ ತಾಳಿಕಟ್ಟಿಸಿಕೊಂಡು ಅವನ ಹೆಂಡ್ತಿ ಆಗ್ತಾಳೆ. ದತ್ತ ಭಾಯ್ ಹೆಂಡ್ತಿ ಅಂತ ದೃಷ್ಟಿ ಏನೋ ಹೆಮ್ಮೆಯಿಂದ ಹೇಳಿಕೊಂಡರೂ ದತ್ತ ಅವಳ ಬಗ್ಗೆ ಸಿಟ್ಟು ತೀರಿಸಿಕೊಳ್ತನೇ ಇದ್ದಾನೆ.
ಮೊನ್ನೆ ತಾನೇ ದತ್ತನ ಅಕ್ಕ ತಮ್ಮನ ಕೊಲೆಗೆ ಸುಪಾರಿ ಕೊಟ್ಟಿದ್ಲು. ಕೊಲೆಗಾರ ತಪ್ಪಿ ದೃಷ್ಟಿಗೆ ಇರಿಬಿಟ್ಟಿದ್ದಾನೆ. ಆ ಟೈಮಲ್ಲಿ ಅವಳು ಸಾವು ನೋವಿನ ಮಧ್ಯೆ ಒದ್ದಾಡುವಾಗ ಸ್ವತಃ ದತ್ತನೇ ರಕ್ತಕೊಟ್ಟು ಕಾಪಾಡಿದ್ದಾನೆ. ಈಗ ದೃಷ್ಟಿ ಮನೆಗೆ ಬಂದಿದ್ದಾಳೆ. ದತ್ತನ ಕೋಪ ಕಂಟಿನ್ಯೂ ಆಗಿದೆ. ಆತನ ಸೇಡು ತೀರಿಸಿಕೊಳ್ಳುವ ನೆಕ್ಸ್ಟ್ ಟಾಸ್ಕ್ ದೃಷ್ಟಿಯ ಮುಂದಿದೆ. ಇದೆಲ್ಲ ಯಾಕೋ ಬೋರ್ ಹೊಡೀತಿದೆ ಅಂತಿದ್ದಾರೆ ವೀಕ್ಷಕರು. ಈ ನಡುವೆ ಅವರಿಗೆ ದೃಷ್ಟಿಯ ಕಪ್ಪು ಬಣ್ಣವೇ ದೊಡ್ಡ ಸಮಸ್ಯೆ ಆಗಿದೆ. ಅದೇ ಈ ಸೀರಿಯಲ್ ಅನ್ನು ಸರಿಯಾಗಿ ನೋಡದ ಹಾಗೆ ಮಾಡಿದೆ ಅನ್ನೋ ದೂರು ಅವರದ್ದು. ಇಲ್ಲಿ ದೃಷ್ಟಿ ಆಸ್ಪತ್ರೆಗೆ ಸೇರಿದಾಗಲೂ ಅವಳ ಮೇಕಪ್ ಕೊಂಚವೂ ಅಲ್ಲಾಡದ್ದದು ವೀಕ್ಷಕರಿಗೆ ಅಚ್ಚರಿ ತಂದಿದೆ. ಆಸ್ಪತ್ರೆಯಲ್ಲಿ ದೃಷ್ಟಿ ಮುಖ ತೊಳೆದಿಲ್ವಾ, ಅಲ್ಲಿಗೂ ಇದ್ದಿಲು ತಗೊಂಡು ಹೋಗಿದ್ಲಾ? ಡಾಕ್ಟರ್‌ಗೂ ಅವಳ ಮೈ ಬಣ್ಣ ಗೊತ್ತಾಗಿಲ್ವಾ? ಅಟ್‌ಲೀಸ್ಟ್ ಇರಿದ ಗಾಯಕ್ಕೆ ಟ್ರೀಟ್‌ಮೆಂಟ್ ಕೊಡುವಾಗಲಾದರೂ ಆ ಇದ್ದಿಲಿನ ಬಣ್ಣ ಅವರಿಗೆ ಗೊತ್ತಾಗಬೇಕಿತ್ತಲ್ವಾ? ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ.
ಭಾಗ್ಯಳ ಸಹಾಯಕ್ಕೆ ಕಿರುತೆರೆ ನಟಿಯರ ದಂಡೇ ಬಂದಾಗ ಶೂಟಿಂಗ್ನಲ್ಲಿ ಏನೇನಾಯ್ತು ನೋಡಿ!
ಆದರೆ ಸೀರಿಯಲ್ ಟೀಮ್‌ಗೆ ಇಂಥಾ ಪ್ರಶ್ನೆಗಳೆಲ್ಲ ಬರುತ್ತವೆ ಎಂಬ ನಿರೀಕ್ಷೆ ಇರಲಿಲ್ಲವೇನೋ. ಶುರುವಲ್ಲಿ ಇದರ ಬಗೆಗೆಲ್ಲ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಅವಳನ್ನು ಸಿಕ್ಕಾಪಟ್ಟೆ ಒಳ್ಳೆಯವಳನ್ನಾಗಿ ಮಾಡಲು ಹೊಸ ಹೊಸ ತಂತ್ರ ಹೂಡುತ್ತಲೇ ಇತ್ತು. ದತ್ತನಿಗೆ ಅವಳ ಮೇಲಿನ ಸಿಟ್ಟು ಕಂಟಿನ್ಯೂ ಆಗೋ ಹಾಗೆ ಮಾಡಿ, ಇದೆಲ್ಲ ದೃಷ್ಟಿ ಮಾಡಿರೋ ನಾಟಕ. ದತ್ತನ ಮೇಲೆ ಅಟ್ಯಾಕ್ ನಡೆದದ್ದು ಫೇಕ್ ಅನ್ನೋದನ್ನ ಅಕ್ಕ ಶರಾವತಿ ದತ್ತನಲ್ಲಿ ಬಿಂಬಿಸುವಲ್ಲಿ ಯಶಸ್ವಿಯಾದಳು. ಸೋ, ಸದ್ಯಕ್ಕಂತೂ ದೃಷ್ಟಿ ಮೇಕಪ್ ಸರಿಹೋಗೋ ಯಾವ ಲಕ್ಷಣವೂ ಕಾಣ್ತಿಲ್ಲ. ವೀಕ್ಷಕರ ಕಮೆಂಟೂ ನಿಲ್ಲುವ ಸೂಚನೆ ಇಲ್ಲ ಅಂದುಕೊಳ್ಳುವಾಗಲೇ ಸೀರಿಯಲ್‌ನಲ್ಲಿ ದೃಷ್ಟಿ ಮೇಕಪ್ ಬದಲಾಗಿದೆ. ಯದ್ವಾತದ್ವಾವಾಗಿ ಬಳಿಯುತ್ತಿದ್ದ ಕಲರನ್ನು ಕೊಂಚ ನೀಟಾಗಿ ಬಳಿಯುತ್ತಿದ್ದಾರೆ. ಕಣ್ಣು, ಮೂಗು ಎಲ್ಲ ಕೊಂಚ ನೀಟಾಗಿ ಕಂಡು ದೃಷ್ಟಿಯನ್ನು ನೋಡೋ ಹಾಗಾಗಿದೆ. ಇದಕ್ಕೆ ಸರಿಯಾಗಿ ಅವಳು ಗಂಟುಮೂಟೆ ಜೊತೆ ದತ್ತನ ಮನೆಗೆ ಬಂದು ಶರಾವತಿ ಆಂಡ್ ವಿಲನ್ ಗ್ಯಾಂಗ್‌ಗೆ ಚೋಕ್ ಕೊಟ್ಟಿದ್ದಾಳೆ. ಮುಂದೈತೆ ಹಬ್ಬ ಅಂತಿದ್ದಾರೆ ನೆಟ್ಟಿಗರು.
Puttakkana Makkalu Serial: ಏನ್ರೋ ಇದು ಫೈಟ್..; ಪುರುಷರ ಮರ್ಯಾದೆ ಕಳಿತೀದಿರಲ್ಲೋ ಎಂದ ವೀಕ್ಷಕರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.