ಒನ್ ಸೈಡ್ ಲವ್ ಮಾಡೋರ ಆಂಥಮ್ ‘ನೂರು ಜನ್ಮಕೂ’ ಹಾಡನ್ನು ರೀಕ್ರಿಯೇಟ್ ಮಾಡಿದ ಸೂರ್ಯ - ಭೂಮಿ

Published : Mar 06, 2025, 04:48 PM ISTUpdated : Mar 06, 2025, 05:38 PM IST
ಒನ್ ಸೈಡ್ ಲವ್ ಮಾಡೋರ ಆಂಥಮ್ ‘ನೂರು ಜನ್ಮಕೂ’ ಹಾಡನ್ನು ರೀಕ್ರಿಯೇಟ್ ಮಾಡಿದ ಸೂರ್ಯ - ಭೂಮಿ

ಸಾರಾಂಶ

ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ರಮೇಶ್ ಅರವಿಂದ್ ಚಿತ್ರರಂಗಕ್ಕೆ 40 ವರ್ಷಗಳನ್ನು ಪೂರೈಸಿದ್ದಾರೆ. ಝೀ ಕನ್ನಡ ಸರಿಗಮಪ ವೇದಿಕೆಯಲ್ಲಿ ಅವರ ಸಿನಿಕರಿಯರ್ ಅನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಮೇಶ್ ಅವರ ಯಶಸ್ವಿ ಸಿನಿಮಾಗಳ ಹಾಡುಗಳನ್ನು ಸ್ಪರ್ಧಿಗಳು ಹಾಡಿದರು. ಕಾರ್ಯಕ್ರಮದಲ್ಲಿ ನಿಹಾರಿಕಾ, ಭಾವನಾ, ಹೇಮಾ ಪ್ರಭಾತ್ ಮುಂತಾದವರು ಭಾಗವಹಿಸಿ ರಮೇಶ್ ಅವರಿಗೆ ಶುಭ ಕೋರಿದರು.  

ಚಂದನವನದಲ್ಲಿ ಅತ್ಯದ್ಭುತ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ತ್ಯಾಗರಾಜನಾಗಿ ಗುರುತಿಸಿಕೊಂಡ ಎವರ್ ಗ್ರೀನ್ ನಟ ರಮೇಶ್ ಅರವಿಂದ್ (Ramesh Aravind). ತಮ್ಮ ಸಿನಿಮಾ ಕರಿಯರ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ರಮೇಶ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ 40 ವರ್ಷಗಳು ತುಂಬಿದ್ದು, ಇವರು 40 ವರ್ಷಗಳ ಸಿನಿಮಾ ಜರ್ನಿಯನ್ನು ಝೀ ಕನ್ನಡದ ಸರಿಗಮಪ ವೇದಿಕೆ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ರಮೇಶ್ ಅರವಿಂದ್ ಅವರ ಸೂಪಾರ್ ಹಿಟ್ ಗೀತೆಗಳನ್ನು ಹಾಡುವ ಮೂಲಕ ನಟನನ್ನು ಸಂಭ್ರಮಿಸಿದ್ದಾರೆ. 

ಸರಿಗಮಪ ವೇದಿಕೆಯಲ್ಲಿ ರಮೇಶ್‌ ಅರವಿಂದ್‌ ಮಗಳು ನಿಹಾರಿಕಾ; ಅದೊಂದು ಕಾರಣಕ್ಕೆ ಕಣ್ಣೀರು ಹಾಕಿದ ತಂದೆ!

1986 ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮೇಶ್ ಅರವಿಂಗ್ ಇಷ್ಟು ವರ್ಷಗಳಲ್ಲಿ 140 ಚಿತ್ರಗಳಲ್ಲಿ ನಟಿಸಿದ್ದು, ಹತ್ತು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಈ ಯಶಸ್ವಿ ಜರ್ನಿಯನ್ನು ಸರಿಗಮಪ ವೇದಿಕೆ  (Zee Saregamapa) ಸಂಭ್ರಮಿಸಿದೆ. ಈ ಕಾರ್ಯಕ್ರಮದಲ್ಲಿ ರಮೇಶ ಅವರಿಗೆ ಸರ್ಪ್ರೈಸ್ ನೀಡಲು ಮಗಳು ನಿಹಾರಿಕಾ ಸಹ ಆಗಮಿಸಿದ್ದರು. ಅಷ್ಟೇ ಅಲ್ಲ ರಮೇಶ್ ಅವರ ಸಿನಿಮಾಗಳಲ್ಲಿ ಸಹ ನಟಿಯರಾಗಿದ್ದ ಭಾವನಾ ಹಾಗೂ ಹೇಮಾ ಪ್ರಭಾತ್ ಕೂಡ ಆಗಮಿಸಿ  ರಮೇಶ್ ಅರವಿಂದ್ ಅವರಿಗೆ ಅಚ್ಚರಿ ನೀಡಿದರು. ಇದೀಗ ಈ ಕಾರ್ಯಕ್ರಮದ ಹಲವು ಪ್ರೊಮೋ ತುಣುಕುಗಳು ರಿಲೀಸ್ ಆಗಿದ್ದು, ವೀಕ್ಷಕರು ಮೆಚ್ಚಿಕೊಂಡಿದ್ದಾರೆ. 

'Bigg Boss Kannada' ನಿರೂಪಣೆಗೆ ʼಗೋಲ್ಡನ್‌ ಸ್ಟಾರ್‌ʼ ಗಣೇಶ್, ರಮೇಶ್‌ ಅರವಿಂದ್‌ ಅವ್ರನ್ನ ಕಾಂಟ್ಯಾಕ್ಟ್‌ ಮಾಡಲಾಗಿದ್ಯಾ?

ರಮೇಶ್ ಅರವಿಂದ್ ಹಾಗೂ ಹೇಮಾ ಪ್ರಭಾತ್ (Hema Prabhath) ಇಬ್ಬರು ಜೊತೆಯಾಗಿ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ಅಮೆರಿಕಾ ಅಮೆರಿಕಾದಲ್ಲಿ (America Amrica film) ನಟಿಸಿದ್ದು, ಆ ಸಿನಿಮಾದ ಜನಪ್ರಿಯ ಗೀತೆ ನೂರು ಜನ್ಮಕೂ ನೂರಾರು ಜನ್ಮಕೂ ಹಾಡನ್ನು ಈ ಜೋಡಿ ರೀಕ್ರಿಯೇಟ್ ಮಾಡಿದ್ದು, ಆ ಸಿನಿಮಾದ ಡೈಲಾಗ್, ಹಾಡು, ಎಲ್ಲವನ್ನೂ ಮತ್ತೆ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ನೂರು ಜನ್ಮಕೂ ಹಾಡು, ಅಂದಿಗೂ ಇಂದಿಗೂ ಟಾಪ್ 1 ಸಾಲಿನಲ್ಲಿ ನಿಲ್ಲುವಂತಹ ಪ್ರಣಯ ಗೀತೆ. ಅದೆಷ್ಟೊ ಸಿಂಗಲ್ ಹುಡುಗರ, ಒನ್ ಸೈಡ್ ಲವ್ ಹುಡುಗರ ಆಂಥಮ್ ಸಾಂಗ್ ಇದಾಗಿತ್ತು. ರಮೇಶ್ ಹಾಗೂ ಹೇಮಾ ಸಿನಿಮಾದಲ್ಲಿ ಸೂರ್ಯ ಹಾಗೂ ಭೂಮಿಕಾ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಈ ಜೋಡಿ ಒಂದಾಗಿರಲಿಲ್ಲ. ಇದೀಗ ಈ ವೇದಿಕೆಯಲ್ಲಿ ಈ ಜೋಡಿ ಒಂದಾಗಿರೋದನ್ನು ನೋಡಿ ಜನ ಖುಷಿ ಪಟ್ಟಿದ್ದಾರೆ. 

ತಿಂಗಳಿಗೆ ಒಂದು ರೆಸೆಲ್ಯೂಷನ್‌ ಪಾಲಿಸಿ, ಲೈಫ್‌ ಬೊಂಬಾಟ್‌ ಆಗಿರುತ್ತೆ: ರಮೇಶ್‌ ಅರವಿಂದ್‌

ಇಂಜಿನಿಯರ್ ಪದವಿ ಪಡೆದಿರುವ ರಮೇಶ್ ಆರವಿಂದ 1986ರಲ್ಲಿ ಸುಂದರ ಸ್ವಪ್ನಗಳು ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಆದಾದ ನಂತರ ಇಲ್ಲಿವರೆಗೂ 100 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ರಮೇಶ್ ಅರವಿಂದ್. ಅದರಲ್ಲಿ ಅಮೆರಿಕಾ ಅಮೆರಿಕಾ, ಹೂಮಳೆ, ಅಮೃತವರ್ಷಿಣಿ, ಓಮಲ್ಲಿಗೆ, ರಾಮ ಶಾಮ ಭಾಮ, ಆರ್ಯಭಟ, ನಮ್ಮೂರ ಮಂದಾರ ಹೂವೆ ಸಿನಿಮಾಗಳು ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತು. ಇಲ್ಲದೇ ತಮಿಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದ ರಮೇಶ್ ಅಲ್ಲೂ ಕೂಡ ಸುಮಾರು 30 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ತೆಲುಗು, ಹಿಂದಿ ಹಾಗೂ ಮಲಯಾಲಂ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ ರಮೇಶ್. ಕೇವಲ ನಟ, ನಿರ್ದೇಶನ ಮಾತ್ರವಲ್ಲದೇ, ನಂದಿನಿ, ನೀನಾದೆನಾ, ಆಸೆ, ಸುಂದರಿ ಎನ್ನುವ ಸೀರಿಯಲ್ ಗಳನ್ನೂ ಕೂಡ ನಿರ್ಮಾಣ ಮಾಡುವ ಮೂಲಕ ಕಿರುತೆರೆಗೂ ಎಂಟ್ರಿ ಕೊಟ್ಟಿದ್ದಾರೆ.  ಅಷ್ಟೇ ಅಲ್ಲ ನಿರೂಪಕರಾಗಿಯೂ ಸದ್ದು ಮಾಡಿರುವ ರಮೇಶ್ ವೀಕೆಂಡ್ ವಿದ್ ರಮೇಶ್ (Weekend with Ramesh), ಕನ್ನಡದ ಕೋಟ್ಯಾಧಿಪತಿ, ಪ್ರೀತಿಯಿಂದ ರಮೇಶ್, ರಾಜಾ ರಾಣಿ ರಮೇಶ್ ನಿರೂಪಣೆ ಮಾಡಿದ್ದು, ಮಹಾನಟಿಯಲ್ಲಿ ತೀರ್ಪುಗಾರರಾಗಿದ್ದರು. ಜೊತೆಗೆ ಹಲವೆಡೆ ಪ್ರೇರಣಾತ್ಮಕ ಭಾಷಣ ಮಾಡುವಲ್ಲೂ ನಿಸ್ಸೀಮರು ರಮೇಶ್. ಹಾಗಾಗಿಯೇ ಈ ಮೇರು ನಟನ 40 ವರ್ಷಗಳ ಜರ್ನಿಯನ್ನು ಝೀ ಸರಿಗಮಪ ವೇದಿಕೆ ಸಂಭ್ರಮಿಸಿದೆ. ಈ ಎಪಿಸೋಡ್ ಗಳು ಈ ವಾರಾಂತ್ಯಗಳಲ್ಲಿ ಪ್ರಸಾರವಾಗಲಿವೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ