ಧಾರಾವಾಹಿಯಲ್ಲಿ ಅಣ್ಣ-ತಂಗಿ, ನಿಜ ಜೀವನದಲ್ಲಿ ಗಂಡ-ಹೆಂಡತಿಯಾದ ಕನ್ನಡದ ಜೋಡಿ, ಹನಿಮೂನ್‌ಗೆ ಮಾತ್ರ ಕಂಡೀಷನ್‌!

Published : Mar 06, 2025, 06:12 PM ISTUpdated : Mar 06, 2025, 06:24 PM IST
ಧಾರಾವಾಹಿಯಲ್ಲಿ ಅಣ್ಣ-ತಂಗಿ, ನಿಜ ಜೀವನದಲ್ಲಿ ಗಂಡ-ಹೆಂಡತಿಯಾದ ಕನ್ನಡದ ಜೋಡಿ, ಹನಿಮೂನ್‌ಗೆ ಮಾತ್ರ ಕಂಡೀಷನ್‌!

ಸಾರಾಂಶ

ಕನ್ನಡದ ಜನಪ್ರಿಯ ಧಾರವಾಹಿಯಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ ಜೋಡಿಯೊಂದು ನಿಜ ಜೀವನದಲ್ಲಿ ಗಂಡ-ಹೆಂಡತಿಯಾಗಿದ್ದಾರೆ.  

ನ್ನಡದಲ್ಲಿ ಸಾಕಷ್ಟು ಸೀರಿಯಲ್‌ಗಳು ಜನಪ್ರಿಯವಾಗಿದೆ. ಅದರಲ್ಲೂ ಕೌಟುಂಬಿಕ ಮೌಲ್ಯಗಳ ಬಗ್ಗೆ ಅಚ್ಚುಕಟ್ಟಾಗಿ ಕಥೆ ಸಾಗುವ ಸೀರಿಯಲ್‌ಗಳನ್ನು ಜನರು ಬಹಳ ಇಷ್ಟಪಟ್ಟಿದ್ದಾರೆ. ಅದರಲ್ಲು ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರವಾಹಿ ಕೂಡ ಒಂದು. ಕನ್ನಡದ ಪ್ರಮುಖ ಸೀರಿಯಲ್‌ವೊಂದರಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ ಜೋಡಿ  ನಿಜ ಜೀವನದಲ್ಲಿ ಗಂಡ-ಹೆಂಡಿಯಾಗಿರುವ ಅಪರೂಪದ ಸಂಗತಿ ನಡೆದಿದೆ.  ಸೀರಿಯಲ್‌ಗಳಲ್ಲಿ ಇಂಥ ವಿಚಾರಗಳು ಹೊಸದೇನಲ್ಲ. ತೆಲುಗು ಸೀರಿಯಲ್‌ ಚಕ್ರವಾಕಂನಲ್ಲಿ ಅತ್ತೆ-ಅಳಿಯನಾಗಿ ನಟಿಸಿದ್ದ ಜೋಡಿ ನಿಜ ಜೀವನದಲ್ಲಿ ಗಂಡ-ಹೆಂಡತಿಯಾಗಿರುವ ರೀತಿಯಲ್ಲಿಯೇ ಕನ್ನಡದಲ್ಲೀ ಇಂಥದ್ದೊಂದು ಜೋಡಿ ಕಾಣಸಿಕ್ಕಿದೆ.

ಶ್ರೀರಸ್ತು ಶುಭಮಸ್ತ ಧಾರವಾಹಿಯಲ್ಲಿ ಪೂರ್ಣಿ ಅನ್ನೋ ಪಾತ್ರದಲ್ಲಿ ನಟಿಸಿರುವುದು ಲಾವಣ್ಯ. ಅಮೃತಧಾರೆ ಸೀರಿಯಲ್‌ನಲ್ಲಿ ಜೀವನ್‌ ಪಾತ್ರದಲ್ಲಿ ನಟಿಸಿರುವ ಶಶಿ ಹೆಗಡೆ ಈಕೆಯ ಪತಿ. ಮೂಲತಃ ಉತ್ತರ ಕನ್ನಡದ ಶಿರಸಿಯವರಾಗಿರುವ ಶಶಿ ಹೆಗಡೆ ಹಲವು ವರ್ಷಗಳಿಂದ ಸೀರಿಯಲ್‌ನಲ್ಲಿ ನಟಿಸುತ್ತಿದ್ದೆ, ಅವರ ಕುಟುಂಬ ಶಿರಸಿಯಲ್ಲಿಯೇ ವಾಸವಿದೆ. ಪತ್ನಿ ಲಾವಣ್ಯ ಅವರೊಂದಿಗೆ ಶಶಿ ಹೆಗಡೆ ಬೆಂಗಳೂರಿನಲ್ಲಿಯೇ ವಾಸವಿದ್ದಾರೆ.

ಶಶಿ ಹೆಗಡೆ ಹಾಗೂ ಲಾವಣ್ಯ ಇಬ್ಬರೂ ಕೂಡ ಕಲರ್ಸ್‌ ಕನ್ನಡದ ಪ್ರಸಾರವಾಗುತ್ತಿದ್ದ ರಾಜಾ-ರಾಣಿ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಅದಕ್ಕೂ ಮುನ್ನ ಸಹವಾಸ ದೋಷ ಅನ್ನೋ ಕಿರುಚಿತ್ರದಲ್ಲೂ ಒಟ್ಟಾಗಿ ನಟಿಸಿದ್ದರು. ಅಂದಿನಿಂದಲೇ ಇಬ್ಬರ ನಡುವೆ ಪ್ರೀತಿ ಅಂಕುರವಾಗಿತ್ತು. ರಾಜಾ-ರಾಣಿ ಸೀರಿಯಲ್‌ನಲ್ಲಿ ಅಣ್ಣ-ತಂಗಿಯಾಗಿದ್ದ ಶಶಿ ಹೆಗಡೆ ಹಾಗೂ ಲಾವಣ್ಯ ಈಗ ನಿಜ ಜೀವನದಲ್ಲಿ ಗಂಡ ಹೆಂಡತಿಯಾಗಿದ್ದಾರೆ. 

2022ರಲ್ಲಿ ವೈವಾಹಿಕ ಜೀವನದಲ್ಲಿ ಕಾಲಿಟ್ಟಿರುವ ಈ ಜೋಡಿ ಸೋಶಿಯಲ್‌ ಮೀಡಿಯಾದಲ್ಲಿಯೂ ಸಖತ್‌ ಆಕ್ಟೀವ್‌ ಆಗಿದೆ. ಮೊದಲು ಲವ್‌ ಪ್ರಪೋಸ್‌ ಮಾಡಿದ್ದು ಶಶಿಯೇ ಎಂದು ಲಾವಣ್ಯ ಹಿಂದೊಮ್ಮೆ ಹೇಳಿದ್ದರು. ಲವ್‌ ಪ್ರಪೋಸ್ ಮಾಡಿದ ಬಳಿಕ ಲಾವಣ್ಯ ಅವರ ಉತ್ತರಕ್ಕೂ ಶಶಿ ಕಾದಿರಲಿಲ್ಲ. ಸೀದಾ ಲಾವಣ್ಯ ಅವರ ಪಾಲಕರಿಗೆ ವಿಚಾರ ತಿಳಿಸಿ ಮದುವೆಗೆ ಒಪ್ಪಿಗೆ ಪಡೆದುಕೊಂಡಿದ್ದರು. ಆ ಬಳಿಕ ಕೊರೋನಾ ಸಾಂಕ್ರಾಮಿಕದಿಂದಾಗಿ ಇವರಿಬ್ಬರ ಮದುವೆ ವಿಳಂಬವಾಗಿತ್ತು.
ಇನ್ನು ಮದುವೆಯ ಬಳಿಕ ಶಶಿಗೆ ಲಾವಣ್ಯ ಎರಡು ಕಂಡೀಷನ್‌ ಹಾಕಿದ್ದರ ಬಗ್ಗೆ ತಿಳಿಸಿದ್ದರು. ಇದಕ್ಕೆ ಒಪ್ಪಿದರೆ ಮಾತ್ರವೇ ಮಕ್ಕಳು ಮಾಡಿಕೊಳ್ಳಲು ಒಕೆ ಎಂದಿದ್ದರಂತೆ.

ʼಅಮೃತಧಾರೆʼ ಧಾರಾವಾಹಿಯಿಂದ ಹೊರ ಬಂದಿದ್ದೇಕೆ ಶಶಿ ಹೆಗಡೆ, ಸಾರಾ ಅಣ್ಣಯ್ಯ? ಇದೇ ಅಸಲಿ ಕಾರಣಾನಾ?

ಈ ಹೇಳಿಕೆ ನೀಡುವ ಸಮಯದಲ್ಲಿ ಲಾವಣ್ಯ-ಶಶಿ ಹನಿಮೂನ್‌ಗೆ ಹೋಗಿರಲಿಲ್ಲ. ಎರಡು ಬಾರಿ ಇದಕ್ಕೆ ಪ್ಲ್ಯಾನ್‌ ಮಾಡಿದ್ರೂ ಸಾಧ್ಯವಾಗಿರಲಿಲ್ಲ. ಹನಿಮೂನ್‌ಗೆ ಮನಾಲಿ ಅಥವಾ ಫಾರಿನ್‌ಗೆ ಕರೆದುಕೊಂಡು ಹೋದರೆ ಮಾತ್ರ ಅಪ್ಪ-ಅಮ್ಮ ಆಗೋಕೆ ಸಾಧ್ಯ ಎಂದು ಲಾವಣ್ಯ ಕಂಡೀಷನ್‌ ಹಾಕಿದ್ರಂತೆ.

 

ಸೀರಿಯಲ್​ಗೆ ಚಕ್ಕರ್​, ರೊಮಾನ್ಸ್​ಗೆ ಹಾಜರ್​! 'ಅಮೃತಧಾರೆ' ಜೀವಾ ಕಾಲೆಳಿರಿತೋ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?