ʼರಾಮಾಚಾರಿʼ ಧಾರಾವಾಹಿ ನಟಿಯ ರಿಯಲ್‌ ನಿಶ್ಚಿತಾರ್ಥ; ಶೀಲಾ ಖುಷಿಯಲ್ಲಿ ಭಾಗಿಯಾದ ಕಿರುತೆರೆ ಗಣ್ಯರು!

'ರಾಮಾಚಾರಿ' ಧಾರಾವಾಹಿ ನಟಿ ಶೀಲಾ ಎಚ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 


ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸುಗ್ಗಿ ಜೋರಾಗಿದೆ. ಒಬ್ಬರಾದ ಮೇಲೆ ಒಬ್ಬರು ಎಂಗೇಜ್‌ ಆಗ್ತಿದ್ದಾರೆ, ಮದುವೆ ಆಗ್ತಿದ್ದಾರೆ. ʼಬಿಗ್‌ ಬಾಸ್ʼ‌ ರಂಜಿತ್‌ ಅವರು ಇತ್ತೀಚೆಗೆ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ನೀಡಿದರು. ಈಗ ʼರಾಮಾಚಾರಿʼ ನಟಿಯ ಸರದಿ! ‘ರಾಮಾಚಾರಿ’ ಧಾರಾವಾಹಿಯಲ್ಲಿ ರಾಮಾಚಾರಿ ತಂಗಿ ಪಾತ್ರಧಾರಿಗಳು ಸಾಕಷ್ಟು ಬಾರಿ ಬದಲಾಗಿದ್ದಾರೆ. ಶ್ರುತಿ ಪಾತ್ರದಲ್ಲಿ ಒಮ್ಮೆ ಶೀಲಾ ಎಚ್‌ ಎನ್ನುವವರು ನಟಿಸಿದ್ದರು. ಅವರೀಗ ಹೊಸ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ರಾಮಾಚಾರಿ ಧಾರಾವಾಹಿ ತಂಡವು ಶೀಲಾ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. 

ಯಾವಾಗ ಮದುವೆ?
ಚಿರಂತ್‌ ಎನ್ನುವವರ ಜೊತೆ ಶೀಲಾ ನಿಶ್ಚಿತಾರ್ಥ ನಡೆದಿದೆ. ಚಿರಂತ್‌ ಯಾರು? ಎಲ್ಲಿಯವರು? ಚಿರಂತ್‌ ಹಾಗೂ ಶೀಲಾ ಭೇಟಿ ಆಗಿದ್ದು ಎಲ್ಲಿ? ಇವರಿಬ್ಬರದ್ದು ಲವ್‌ ಮ್ಯಾರೇಜ್?‌ ಅರೇಂಜ್ ಮ್ಯಾರೇಜ್?‌ ಎಂಬ ಬಗ್ಗೆ ಉತ್ತರ ಸಿಗಬೇಕಿದೆ. ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಪ್ರಶ್ನೆ ಇದ್ದು, ಇದಕ್ಕೆ ಶೀಲಾ ಅವರೇ ಉತ್ತರ ಕೊಡಬೇಕಿದೆ. ಇನ್ನು ಯಾವಾಗ ಮದುವೆ ಆಗಲಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. 

Latest Videos

ರಾಮಾಚಾರಿ ವೈಶಾಖಳನ್ನು ಮಣ್ಣಲ್ಲಿ ಮುಚ್ಚಿದ್ದು ಹೇಗೆ, ರಿವೀಲ್ ಆಯ್ತು ಧಾರಾವಾಹಿ ಮೇಕಿಂಗ್ ರಹಸ್ಯ!

ಶೀಲಾ ನಿಶ್ಚಿತಾರ್ಥದಲ್ಲಿ ಕಲಾವಿದರು! 
ರಾಮಾಚಾರಿ ಧಾರಾವಾಹಿ ಕಲಾವಿದರಾದ ಐಶ್ವರ್ಯಾ ಸಾಲೀಮಠ, ಮೌನ ಗುಡ್ಢೇಮನೆ, ನಟ ವಿನಯ್‌ ಯುಜೆ, ರಿತ್ವಿಕ್‌ ಕೃಪಾಕರ್‌, ತೇಜಸ್ವಿ ಪ್ರಕಾಶ್‌ ಮುಂತಾದವರು ಈ ನಿಶ್ಚಿತಾರ್ಥದಲ್ಲಿ ಭಾಗಿಯಾದರು. ಇದರ ಜೊತೆಗೆ ಸಾಕಷ್ಟು ನಟ-ನಟಿಯರು ಈ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದಾರೆ. ಬಹಳ ಅದ್ದೂರಿಯಾಗಿ ಎಂಗೇಜ್‌ಮೆಂಟ್‌ ನಡೆದಿದೆ. 

ʼಗಿಣಿರಾಮʼ ಧಾರಾವಾಹಿ ನಟಿ! 
ಶೀಲಾ ಅವರು ʼಗಿಣಿರಾಮʼ ಧಾರಾವಾಹಿಯಲ್ಲಿ ಕೂಡ ಹೀರೋ ತಂಗಿ ಪಾತ್ರ ಮಾಡಿದ್ದರು. ಇದು ಉತ್ತರ ಕರ್ನಾಟಕ ಭಾಷೆಯುಳ್ಳ ಸೀರಿಯಲ್‌ ಆಗಿತ್ತು. ಈ ಸೀರಿಯಲ್‌ನಿಂದ ಕಾವೇರಿ ಬಾಗಲಕೋಟೆ ಅವರು ಹೊರಗಡೆ ಬಂದನಂತರದಲ್ಲಿ ಶೀಲಾ ನಟಿಸಿದ್ದರು. 

ಅಮೃತಧಾರೆಯಿಂದ ಮಲ್ಲಿ ಔಟ್- ಕಾರಣ ಕೊಟ್ಟ ನಟಿ​: ಇನ್ಮುಂದೆ ಅಕ್ಕವ್ರೇ ಅಕ್ಕವ್ರೇ ಅನ್ನೋರು ಯಾರು?

ʼಇಂತಿ ನಿಮ್ಮ ಆಶಾʼ ಧಾರಾವಾಹಿ
ಇನ್ನು ಕಾರ್ತಿಕ್‌ ಮಹೇಶ್‌, ಸಂಗೀತಾ ಅನಿಲ್‌ ನಟನೆಯ ʼಇಂತಿ ನಿಮ್ಮ ಆಶಾʼ ಧಾರಾವಾಹಿಯಲ್ಲಿ ಶೀಲಾ ಅವರು ಕಾರ್ತಿಕ್‌ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ಇಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿ ಹುಡುಗಿ ಪಾತ್ರವಾಗಿತ್ತು. ಕಾರ್ತಿಕ್‌ ಮಹೇಶ್‌ ಹಾಗೂ ಶೀಲಾ ಕೆಮಿಸ್ಟ್ರಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. 

ʼರಾಧಿಕಾʼ ಧಾರಾವಾಹಿ
ಉದಯ ವಾಹಿನಿಯ ʼರಾಧಿಕಾʼ ಸೀರಿಯಲ್‌ನಲ್ಲಿ ಕೂಡ ಶೀಲಾ ನಟಿಸಿದ್ದರು. ವಿಜಯ್‌ ಸೂರ್ಯ ನಟನೆಯ ʼಪ್ರೇಮಲೋಕʼ ಧಾರಾವಾಹಿಯಲ್ಲಿಯೂ ಅವರು ಬಣ್ಣ ಹಚ್ಚಿದ್ದರು. 


 

click me!