ಎಲಿಮಿನೇಟ್‌ ಆಗಿದ್ದು ಶಮಂತ್, ಹೊರ ಬರೋದು ವೈಜಯಂತಿ ಅಡಿಗ; ಏನಿದೆ ಗೇಮ್ ಪ್ಲಾನ್?

By Suvarna NewsFirst Published Apr 11, 2021, 3:07 PM IST
Highlights

ಅಮ್ಮಚ್ಚಿ ಎಂಬ ನೆನಪು ಸಿನಿಮಾ ನಟಿ ಬಿಗ್‌ಬಾಸ್‌ ಮನೆಗೆ ಬಂದಷ್ಟೇ ವೇಗವಾಗಿ ವಾಪಾಸ್ ಬಂದಿದ್ದಾರೆ. ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಹೊರಬರುವಂಥ ಅಂಥಾ ಯಾವ ತಪ್ಪನ್ನು ವೈಜಯಂತಿ ಮಾಡಿದ್ರು?

ಮೊನ್ನೆ ಮೊನ್ನೆ ಕೇವಲ ನಾಲ್ಕು ದಿನಗಳ ಹಿಂದೆ ಬಿಗ್‌ ಬಾಸ್ ಮನೆಗೆ ಇಬ್ಬರು ಹೆಂಗಳೆಯರ ಎಂಟ್ರಿ ಆಯ್ತು. ನಗುವುದಾ ಅಳುವುದಾ ಅನ್ನೋ ಸಂದಿಗ್ದದಲ್ಲಿ ಬಿಗ್‌ಬಾಸ್‌ ಮನೆಯವ್ರೆಲ್ಲ ಇರುವಾಗಲೇ ಅವರಿಗೊಂದು ಅಚ್ಚರಿ ಎದುರಾಗಿದೆ. ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯೊಳಗೆ ಬಂದ ವೈಜಯಂತಿ ಅಡಿಗ ನಾಲ್ಕೇ ನಾಲ್ಕು ದಿನಗಳಲ್ಲಿ ಮನೆಯಿಂದ ಆಚೆ ಬರುತ್ತಿದ್ದಾರೆ. ಅಷ್ಟು ಬೇಗ ನಾಮಿನೇಶನ್‌ಗೂ ಒಳಪಡದೇ ಹೊರಬರುವಂಥಾ ತಪ್ಪು ವೈಜಯಂತಿ ಏನ್ ಮಾಡಿದ್ರು ಅನ್ನೋ ವಿಚಾರ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ.

ಬಿಗ್‌ಬಾಸ್ ಸೀಸನ್ 8ಗೆ ಎರಡನೇ ವೈಲ್ಡ್‌ ಕಾರ್ಡ್ ಮೂಲಕ ಎಂಟ್ರಿ ಪಡೆದವರು ವೈಜಯಂತಿ ಅಡಿಗ. ಚಂಪಾ ಶೆಟ್ಟಿ ನಿರ್ದೇಶನದ ಅಮ್ಮಚ್ಚಿ ಎಂಬ ನೆನಪು ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು. ವೈದೇಹಿ ಅವರ 'ಅಕ್ಕು', 'ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು' ಹಾಗೂ 'ಅಮ್ಮಚ್ಚಿ ಎಂಬ ನೆನಪು' ಈ ಮೂರು ಕಥೆಗಳನ್ನಾಧರಿಸಿದ ನಿರ್ಮಿಸಲಾದ ಚಿತ್ರ 'ಅಮ್ಮಚ್ಚಿ ಎಂಬ ನೆನಪು'. ಈ ಸಿನಿಮಾದ ನಿರ್ದೇಶನವನ್ನು ರಂಗಕರ್ಮಿ, ಡಬ್ಬಿಂಗ್ ಆರ್ಟಿಸ್ಟ್ ಜೊತೆಗೆ ನಟಿಯಾಗಿಯೂ ಗುರುತಿಸಿಕೊಂಡಿರುವ ಚಂಪಾ ಶೆಟ್ಟಿ ಮಾಡಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್ 8ಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೂ ಮೊದಲು ಅವರು 'ಅಕ್ಕು' ಅನ್ನುವ ನಾಟಕವನ್ನು ನಿರ್ದೇಶಿಸಿದ್ದರು. ಈ ನಾಟಕದ ಸಿನಿಮಾ ರೂಪವೇ 'ಅಮ್ಮಚ್ಚಿ ಎಂಬ ನೆನಪು'. ಈ ನಾಟಕದಲ್ಲೂ ಅಮ್ಮಚ್ಚಿಯ ಪಾತ್ರವನ್ನು ವೈಜಯಂತಿ ಅವರು ಮಾಡಿರುವುದು ವಿಶೇಷ. ಸಿನಿಮಾದಲ್ಲೂ ಅವರೇ ಈ ಪಾತ್ರವನ್ನು ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. 'ಒಂದು ಮೊಟ್ಟೆಯ ಕಥೆ' ಖ್ಯಾತಿ ರಾಜ್ ಬಿ ಶೆಟ್ಟಿ ಇದರಲ್ಲಿ ನೆಗೆಟಿವ್ ಶೇಡ್ ನ ವೆಂಕಪ್ಪಯ್ಯ ಪಾತ್ರ ನಿರ್ವಹಿಸಿದ್ದರು. ಐದಾರು ದಶಕಗಳ ಹಿಂದಿನ ಕಥೆ ಇದಾಗಿದ್ದು ಕುಂದಾಪುರ ಪರಿಸರದ ಹಿನ್ನೆಲೆಯಿದೆ. ಈ ಸಿನಿಮಾ ಮೂಲಕ ವೈಜಯಂತಿ ಗುರುತಿಸಿಕೊಂಡರು.

ಈ ಸೆಲೆಬ್ರಿಟಿಗಳಿಗೆ ಅನ್ಯ ದೇಶಗಳಿಗೆ ಪ್ರವೇಶವಿಲ್ಲ! ...

ಆದರೆ 'ಅಮ್ಮಚ್ಚಿ ಎಂಬ ನೆನಪು' ಚಿತ್ರದ ಬಳಿಕ ಮಹತ್ವದ ಪಾತ್ರಗಳಲ್ಲೆಲ್ಲೂ ಈಕೆ ಕಾಣಿಸಿಕೊಳ್ಳಲಿಲ್ಲ. ಮೂಲತಃ ಹೊಟೇಲ್ ಉದ್ಯಮಿಯೊಬ್ಬರ ಮಗಳಾದ ಈಕೆ ಶ್ರೀಮಂತ ಹಿನ್ನೆಲೆಯಲ್ಲೇ ಬೆಳೆದಾಕೆ. ತಮ್ಮ ಪರಿಚಯದ ಟೀಮ್ ಜೊತೆಗೇ ಸಿನಿಮಾ ಮಾಡಿದರು. ಕಂಫರ್ಟ್ ಝೋನ್ ನ ಆಚೆಗೆಲ್ಲೂ ಕಾಣಿಸಿಕೊಳ್ಳಲಿಲ್ಲ. ಈಗ ಬಿಗ್‌ಬಾಸ್ ಮನೆಯಿಂದ ಆಫರ್ ಬಂದಾಗ ಖುಷಿಯಿಂದಲೇ ಒಪ್ಪಿಕೊಂಡ ವೈಜಯಂತಿಗೆ ಅಲ್ಲಿ ಮನೆಯೊಳಗೆ ಬಂದಾಗಲೇ ವಾಸ್ತವದ ಅರಿವಾಗಿದ್ದು. ಇಲ್ಲಿನ ವ್ಯಕ್ತಿಗಳ ಚಿತ್ರ ವಿಚಿತ್ರ ವ್ಯಕ್ತಿತ್ವ, ಗೇಮ್‌ನಲ್ಲೂ ಡಬ್ಬಲ್ ಗೇಮ್ ಇಂಥಾ ವರ್ತನೆಗಳ ನಡುವೆ ವೈಜಯಂತಿಗೆ ಉಸಿರುಕಟ್ಟಿದ ಹಾಗಾಗಿದೆ. ಕಣ್ಣೀರು ಹರಿಸುತ್ತಾ ಮನೆಯಲ್ಲಿ ತನಗೆ ಇರೋದಕ್ಕೆ ಆಗುತ್ತಿಲ್ಲ ಅಂತ ಹೇಳಿದ್ದಾರೆ. ಚಂದ್ರಚೂಡ್, ಪ್ರಶಾಂತ್ ಸಂಬರಗಿ ಇವರನ್ನು ಸಮಾಧಾನ ಮಾಡಿದ್ದಾರೆ. ಆದರೂ ಈಕೆಗೆ ಇಲ್ಲಿ ಇರಲಾಗುತ್ತಿಲ್ಲ. ಹಾಗಾಗಿ ವೈಜಯಂತಿ ಅವರನ್ನು ಮನೆಯಿಂದ ಆಚೆ ಕಳಿಸಲಾಗಿದೆ ಎನ್ನಲಾಗುತ್ತದೆ.

ಭಾರತೀಯ ಹೆಣ್ಮಕ್ಕಳ ಫನ್ನಿ ಪ್ರಾಬ್ಲೆಂ ಶೇರ್ ಮಾಡಿದ ಮೇಘನಾ..! ...

ಜೊತೆಗೆ ವೈಜಯಂತಿ ಪದೇ ಪದೇ ತಾನು ಈ ಜಾಗಕ್ಕೆ ರಾಂಗ್ ಪರ್ಸನ್. ದಿವ್ಯಾ ಸುರೇಶ್ ಹಾಗೂ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಬಂದ ಪ್ರಿಯಾಂಕ ತಿಮ್ಮೇಶ್ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದೆಲ್ಲ ಸಂಬರಗಿ ಬಳಿ ಹೇಳಿಕೊಂಡಿದ್ದಾರೆ. ನಿನಗೆ ಎರಡೇ ದಿನಕ್ಕೆ ಹಾಗನಿಸಿದರೆ, ಅಷ್ಟು ದಿನಗಳಿಂದ ಮನೆಯಲ್ಲಿರುವ ನಮ್ಮ ಕಥೆ ಹೇಗಿರಬೇಡ, ತಾನು ಇದ್ದದ್ದನ್ನು ಇದ್ದ ಹಾಗೇ ಹೇಳುತ್ತೇನೆ ಅಂತ ಮನೆಯವರು ನನ್ನ ಸೈಡ್ ಲೈನ್ ಮಾಡಿದ್ದಾರೆ ಅಂತೆಲ್ಲ ಸಂಬರಗಿ ಹೇಳಿದ್ದಾರೆ.

ಕಿಚ್ಚ ಜೊತೆಗಿನ ಮಾತುಕತೆಯಲ್ಲಿ ನನಗೆ ಚಂದ್ರಚೂಡ್ ಇಷ್ಟ ಆದರು. ಪ್ರಿಯಾಂಕಾ ಅವರ ಗುಣ ಸೆಟ್ ಆಗಲಿಲ್ಲ. ಮೆಚ್ಯೂರಿಟಿಯೇ ಇಲ್ಲದ ವರ್ತನೆ ಬೇಸರ ತರಿಸಿತು ಅಂತೆಲ್ಲ ಹೇಳಿದ್ದಾರೆ. ಮನೆಯಲ್ಲಿರಲಾಗದ ಕಾರಣಕ್ಕೆ ಅವಕಾಶ ಇದ್ದರೂ ವೈಜಯಂತಿ ಮನೆಯಿಂದ ಹೊರ ಬರುವ ಹಾಗಾಗಿದೆ.

click me!