ಚಿಕ್ ಆ್ಯಂಡ್ ಚಿಕನ್ ಒಂದೇ ಎಂದೇಳಿದ ಶಮಂತ್ ತಲೆಗೆ ಹುಳ ಬಿಟ್ಟ ಪ್ರಿಯಾಂಕಾ; ಎಲಿಮಿನೇಷನ್ ಶುರು?

Suvarna News   | Asianet News
Published : Apr 10, 2021, 03:39 PM IST
ಚಿಕ್ ಆ್ಯಂಡ್ ಚಿಕನ್ ಒಂದೇ ಎಂದೇಳಿದ ಶಮಂತ್ ತಲೆಗೆ ಹುಳ ಬಿಟ್ಟ ಪ್ರಿಯಾಂಕಾ; ಎಲಿಮಿನೇಷನ್ ಶುರು?

ಸಾರಾಂಶ

ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಬಗ್ಗೆ ಅಸಮಾಧಾನವಿದ್ದರೂ ಸಹಿಸಿಕೊಳ್ಳಬಹುದು ಆದರೆ ಹೊರಗಿನ ಪ್ರಪಂಚದ ಫೀಡ್‌ಬ್ಯಾಕ್‌ ತುಂಬಾನೇ ಸ್ಟ್ರಾಂಗ್ ಆಗಿದೆ.... 

6ನೇ ವಾರ ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ ಚಕ್ರವರ್ತಿ ಚಂದ್ರಚೂಡ್ ಎಂಟ್ರಿ ಕೊಟ್ಟರು. ಹೆಣ್ಣು ಮಕ್ಕಳು ಬಂದಿದ್ದರೆ ಸೂಪರ್ ಆಗಿರುತ್ತಿತ್ತು ಎಂದು ಲ್ಯಾಗ್ ಮಂಜು ಕಿಚ್ಚ ಸುದೀಪ್‌ಗೆ ತಿಳಿಸಿದ್ದರು. ಇನ್ನು ಮನೆಯಲ್ಲಿ ಸಪ್ಪೆ ಅನ್ನ ತಿಂದು ರುಚಿ ಇಲ್ಲದ ನಾಲಿಗೆ ಚಿಕನ್ ಕೇಳುತ್ತಿದೆ ಎಂದು ರಾಜೀವ್, ಶುಭ ಪೂಂಜಾ, ಲ್ಯಾಗ್ ಮಂಜು, ದಿವ್ಯಾ ಸುರೇಶ್ ಕ್ಯಾಮೆರಾ ಎದುರು ಚಿಕನ್ ಬೇಡಿದರು. ಬಿಗ್‌ ಬಾಸ್‌ ಚಿಕನ್ ಕಳುಹಿಸುವುದು ಕನ್ಫರ್ಮ್ ಅಗಿತ್ತು ಆದರೆ ಚಿಕನ್ ಹಿಡಿದು ಬಂದ ವ್ಯಕ್ತಿ ನೋಡಿ ಮನೆ ಸದಸ್ಯರು ಶಾಕ್....

ನನ್ನ ಹುಡುಗಿ ಕುಳ್ಳಗಿರ್ಬೇಕು, ಚೆನ್ನಾಗಿರೋರು ಬೇಡ: ಶಮಂತ್ ಗರ್ಲ್‌ಫ್ರೆಂಡ್ ಸುಳಿವು! 

ಹೌದು! ಚಿಕನ್ ಹಿಡಿದು  ಬ್ಲ್ಯಾಕ್ ಸೀಎಲ್ಲಿಯ ಎಂಟ್ರಿ ಕೊಟ್ಟ ಮೂರನೇ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಬೇರೆ ಯಾರೂ ಅಲ್ಲ ಕನ್ನಡ ಚಿತ್ರರಂಗದ ನಟಿ ಪ್ರಿಯಾಂಕಾ ತಿಮ್ಮೇಶ್. ಚಿಕನ್ ಬಂತು ಅಂತ ಖುಷಿ ಪಡಬೇಕಾ ಅಥವಾ ಮತ್ತೊಮ್ಮ ಸ್ಪರ್ಧಿ ಬಂದ್ರು  ತಲೆ ಕೆಡಿಸಿಕೊಳ್ಳಬೇಕಾ ಅಂತ ಮಾತ್ರ ಸದಸ್ಯರಿಗೆ ತಿಳಿಯಲಿಲ್ಲ. 'ನನ್ನ ಬಗ್ಗೆ ಚಿಂತೆ ಇಲ್ಲ ಚಿಕನ್‌ ಬಗ್ಗೆ ಯೋಚನೆ ಮಾಡುತ್ತಿದ್ದೀರಾ' ಎಂದು ಪ್ರಿಯಾಂಕಾ ಕೇಳಿದರು. 'ಇಲ್ಲಿ ಚಿಕ್ಕು ಜೊತೆಗೆ ಚಿಕನ್ ಬಂದಿದೆ, ಎರಡು ಖುಷಿ ಕೊಟ್ಟಿದೆ' ಎಂದು ಶಮಂತ್ ಉತ್ತರ ನೀಡಿದ್ದಾರೆ. 

ಹೊರಗಿನ ಜನ ಬಿಗ್ ಬಾಸ್‌ ನೋಡಿ ಏನು ಹೇಳುತ್ತಿದ್ದಾರೆ ಹೇಗೆ ಕಾಣಿಸಿಕೊಳ್ಳುತ್ತಿದ್ದೀವಿ ಅಂತ ರಾಜೀವ್ ಹಾಗೂ ಶಮಂತ್‌ಗೆ ಕುತೂಹಲ ಹೆಚ್ಚಾಗಿತ್ತು. 'ಬಿಗ್ ಬಾಸ್‌ ಮನೆಯಲ್ಲಿ ಸುಮ್ಮನೆ ಕೂತಿದ್ದಾರೆ ಅಷ್ಟೆ. ಏನು ಮಾಡುತ್ತಿಲ್ಲ ನೀವು' ಎಂದು ಪ್ರಿಯಾಂಕಾ ಶಮಂತ್ ಮುಖಕ್ಕೆ ನೇರವಾಗಿ ಉತ್ತರ ನೀಡಿದ್ದರು. ನೀವು ಜೋಕ್ ಮಾಡಿದ್ರಾ? ನಿಜ ಹೇಳಿ ಅಂತ ಶಮಂತ್ ಮತ್ತೆ ಕೇಳಿದ್ದರು ಪ್ರಿಯಾಂಕಾ ಯಾವ ಉತ್ತರ ನೀಡಲಿಲ್ಲ. 'ವಿಶ್ವನಾಥ್ ಸಿಂಗ್ ಅವಾಗಾವಾಗ ಹಾಡುತ್ತಾರೆ ಅಷ್ಟೆ. ಆದರೆ ರಾಜೀವ್ ತುಂಬಾ ಸೈಲೆಂಟ್ ಮಾತಾಡೋದೇ ಇಲ್ಲ ನೀವು' ಎಂದು ರಾಜೀವ್‌ಗೆ ಹೇಳಿದ್ದರು. 

ಎರಡನೇ ವಾರ ಜೈಲು ಸೇರಿದ ಶಮಂತ್; ಬೀಪ್ ಪದಗಳಿಗೇನೂ ಕಮ್ಮಿ ಇಲ್ಲ! 

ಪ್ರಿಯಾಂಕಾ ಕೊಟ್ಟ ಫೀಡ್‌ಬ್ಯಾಕ್‌ನಿಂದ ಶಮಂತ್ ತಲೆ ಕೆಡಿಸಿಕೊಂಡಿದ್ದಾರೆ. ಏನು ಮಾಡಿದರೆ ಮನೆಯಲ್ಲಿ ಇರಬಹುದು ಎಂದು ಪ್ಲಾನ್ ಮಾಡಲು ಶುರು ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?