ಥೂ... ಈ ವಯಸ್ಸಲ್ಲಿ ಗರ್ಭಿಣಿನಾ ಎನ್ನೋರಿಗೆ ಸೀರಿಯಲ್​ ಮೂಲಕವೇ ನಿರ್ದೇಶಕರ ತಿರುಗೇಟು! ಭೇಷ್​ ಅಂತಿರೋ ನೆಟ್ಟಿಗರು

Published : Oct 19, 2024, 12:23 PM IST
ಥೂ... ಈ ವಯಸ್ಸಲ್ಲಿ ಗರ್ಭಿಣಿನಾ ಎನ್ನೋರಿಗೆ ಸೀರಿಯಲ್​ ಮೂಲಕವೇ ನಿರ್ದೇಶಕರ ತಿರುಗೇಟು! ಭೇಷ್​ ಅಂತಿರೋ ನೆಟ್ಟಿಗರು

ಸಾರಾಂಶ

ಥೂ... ಈ ವಯಸ್ಸಲ್ಲಿ ಗರ್ಭಿಣಿನಾ ಎಂದು ತುಳಸಿಯನ್ನು ಮೂದಲಿಸುತ್ತಿರುವವರಿಗೆ ಸೀರಿಯಲ್​ ಮೂಲಕವೇ ನಿರ್ದೇಶಕರು ಹೀಗೆ ತಿರುಗೇಟು ಕೊಟ್ಟಿದ್ದಾರೆ!  

ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿ ಗರ್ಭಿಣಿ ಎನ್ನುವ ಸಂಚಿಕೆ ತೋರಿಸಿದಾಗಿನಿಂತಲೂ ತುಳಸಿಯ ವಿರುದ್ಧ ಮಾತ್ರವಲ್ಲದೇ ತುಳಸಿ ಪಾತ್ರಧಾರಿ ಸುಧಾರಾಣಿ ವಿರುದ್ಧವೂ ಒಂದಷ್ಟು ಮಂದಿ ಗರಂ ಆಗಿದ್ದಾರೆ. ಥೂ ಅಸಹ್ಯ... ಈ ವಯಸ್ಸಿನಲ್ಲಿ ಎಂದೆಲ್ಲಾ ಹೇಳುತ್ತಿದ್ದಾರೆ. ಸೀರಿಯಲ್​ ವಿರುದ್ಧ  ಕೆಟ್ಟ ಕೆಟ್ಟ ಪದಗಳ ಪ್ರಯೋಗ ಮಾಡುತ್ತಿದ್ದಾರೆ. ನಿರ್ದೇಶಕರ ವಿರುದ್ಧವೂ ಗರಂ ಆಗಿದ್ದಾರೆ. ಅಜ್ಜಿಯಾಗುವ ಕಾಲದಲ್ಲಿ ಅಮ್ಮ ಆಗುವುದು ಹೇಗೆ ಸಾಧ್ಯ ಎನ್ನುವುದು ಬಹುತೇಕ ಮಂದಿಯ ಅಭಿಮತ. ಇದೊಂದು ಅಸಹ್ಯ ಎಂದೂ ಹೇಳಿದ್ದಾರೆ ಹಲವರು. ತಮ್ಮ ನಡುವೆ ದೈಹಿಕ ಸಂಬಂಧ ಬೇಡ ಎಂದಿದ್ದ ತುಳಸಿ ಮತ್ತು ಮಾಧವ್​ ಹೀಗೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ ಹಲವರು.  ಕಮೆಂಟ್​ ಯಾವ ಮಟ್ಟಿಗೆ ಬಿರುಗಾಳಿ ಎಬ್ಬಿಸಿತ್ತು ಎಂದರೆ ಇದರ ಪ್ರೊಮೋ  ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ ದಿನ,  ಕಮೆಂಟ್​ ಸೆಕ್ಷನ್​ ಆಫ್​ ಮಾಡಲಾಗಿತ್ತು. ಆದರೆ ನೆಟ್ಟಿಗರು ಸುಮ್ನೆ ಇರ್ತಾರಾ? ಬೇರೆ ಸೀರಿಯಲ್​ ಪ್ರೊಮೋಗಳಲ್ಲಿನ ಕಮೆಂಟ್​ ಸೆಕ್ಷನ್​ಗೆ ಬಂದು ಶ್ರೀರಸ್ತು ಶುಭಮಸ್ತು ಸೀರಿಯಲ್​ ಅನ್ನು ಉಗಿಯುತ್ತಿದ್ದರು.
 
ಹಾಗಂತೂ ಈಗಲೂ ಇದರ ಬಗ್ಗೆ ನಿಂದನೆ ತಪ್ಪಲಿಲ್ಲ. ಇದೆಲ್ಲಾ ಆದ ಬಳಿಕ ತುಳಸಿ ಮಗುವನ್ನು ಹೆತ್ತರೆ ಆಕೆಯ ಜೀವಕ್ಕೆ ಅಪಾಯವಿದೆ, ಮಗುವನ್ನು ತೆಗೆಸಬೇಕು ಎಂದು ವೈದ್ಯರು ಹೇಳುತ್ತಾರೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ನೆಟ್ಟಿಗರೆಲ್ಲಾ ಗೆಲುವಿನ ನಗೆ ಬೀರಿದ್ದರು. ತಾವು ಹಾಕಿದ ಕಮೆಂಟ್ಸ್​ಗೆ ನಿರ್ದೇಶಕರು ಹೆದರೇ ಬಿಟ್ಟರು. ತುಳಸಿಯ ಮಗುವನ್ನು ಅಬಾರ್ಟ್​ ಮಾಡಿಸುತ್ತಾರೆ. ಇನ್ನು ಮುಂದೆ ನೆಮ್ಮದಿಯಿಂದ ಸೀರಿಯಲ್​ ನೋಡಬಹುದು. ಅಂತೂ ತಮ್ಮ ಮಾತು ನಡೆಯಿತು ಎಂದೇ ಅಂದುಕೊಂಡರು. ಆದರೆ ಈಗ ಆಗಿದ್ದೇ ಬೇರೆ.  ಇದೀಗ ತುಳಸಿ ಮಗು ಹೆರಲುಮುಂದಾಗಿದ್ದಾಳೆ. ಆಕೆಗೆ ತನ್ನ ಪ್ರಾಣಕ್ಕಿಂತಲೂ ಮುಖ್ಯವಾಗಿದ್ದು ಪೂರ್ಣಿಯ ಮಡಿಲಿಗೆ ಕಂದನನ್ನು ಕೊಡುವುದು. ತಾನು ಮಗುವನ್ನು ಹೆತ್ತು ಅದನ್ನು ಪೂರ್ಣಿಯ ಮಡಿಲಿಗೆ ಹಾಕುವುದಾಗಿ ಹೇಳಿದ್ದಾಳೆ ತುಳಸಿ.

ಸ್ಕ್ರಿಪ್ಟ್​ ಇಲ್ದೇ 10 ಗಂಟೆ ಷೋ ಮಾಡೋ ತಾಕತ್ತಿದೆ ಕಣ್ರೀ... ಕೊಂಕು ಮಾಡುವವರಿಗೆ ಅನುಶ್ರೀ ಕೊಟ್ಟ ತಿರುಗೇಟೇನು?

ಈ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಒಂದಷ್ಟು ಮಂದಿ ವಿರೋಧಿಸಿದವರೇ ತುಳಸಿ ಪರ ನಿಂತರು. ಆದರೂ ಕಮೆಂಟಿಗರು, ಪ್ರೇಕ್ಷಕರ ವಿರೋಧದ ಮಾತುಗಳಿಗೆ ನಿರ್ದೇಶಕರು ಸೀರಿಯಲ್​  ಮೂಲಕವೇ ಉತ್ತರ ಕೊಟ್ಟಿದ್ದಾರೆ. ತುಳಸಿ ಗರ್ಭಿಣಿಯಾಗಿರುವುದನ್ನು ಸಮರ್ಥ್​, ಸಿರಿ ಮತ್ತು ಸಂಧ್ಯಾ ಒಪ್ಪಿಕೊಂಡಿದ್ದಾರೆ. ಅಮ್ಮನ ಜೀವನ ಅವಳ ಇಷ್ಟ. ಅಮ್ಮ ನಮಗೆ ಏನು ಬೇಕೋ ಎಲ್ಲವನ್ನೂ ಕೊಟ್ಟಾಗಿದೆ. ಈಗ ಅವಳ ಆಸೆಯನ್ನು ಈಡೇರಿಸಿಕೊಳ್ಳಲು ಅವಳ ಪರವಾಗಿ ನಾವು ನಿಂತುಕೊಳ್ಳಬೇಕಲ್ವಾ ಎಂದು ಸಮರ್ಥ್​ ಪ್ರಶ್ನಿಸಿದ್ದಾನೆ. ಇಂಥ ಸಮಯದಲ್ಲಿ ಅಮ್ಮನನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಸಿರಿ ಹೇಳಿದ್ದಾಳೆ. ಇದಕ್ಕೆ ಸಂಧ್ಯಾ, ಅಮ್ಮ ಪ್ರೆಗ್ನೆಂಟ್​ ಆಗಿರೋದು ನನಗೇನೂ ಬೇಸರವಿಲ್ಲ ನನಗೂ ಖುಷಿನೇ ಎಂದಿದ್ದಾಳೆ. ಆಗ ಮಧ್ಯೆ ಬಂದ ಸಂಧ್ಯಾಳ ಮಾವ, ಇಲ್ಲಿ ಕಮೆಂಟಿಗರ ಮಾತಿಗೆ ಸಾಕ್ಷಿಯಾಗಿ ನಿಂತಿದ್ದಾನೆ. ಪ್ರೇಕ್ಷಕರು ತುಳಸಿಗೆ ಹೇಗೆ ಉಗಿಯುತ್ತಿದ್ದಾರೋ ಅದೇ ರೀತಿ ಇಲ್ಲಿ ಮಾವ ತುಳಸಿಯನ್ನು ನಿಂದಿಸುತ್ತಿದ್ದಾನೆ. 

 

ಅದಕ್ಕೆ ಕೋಪಗೊಂಡ ಸಂಧ್ಯಾ, ವಯಸ್ಸಾದ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳುವಾಗ ನಿಮಗೆ ವಯಸ್ಸಿನ ಯೋಚನೆ ಬರಲ್ಲ. ಆಗ ಬರದದ್ದು ಈಗ ಬರುತ್ತಾ? ಅವರೇನು ಅಕ್ರಮವಾಗಿ ಸಂಬಂಧ ಇಟ್ಟುಕೊಂಡು ಮಕ್ಕಳು ಮಾಡಿಕೊಂಡಿದ್ದಾರಾ ಇಲ್ಲವಲ್ಲ, ಅದು ಅವರ ಪವಿತ್ರ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದಿದ್ದಾಳೆ ಸಿರಿ. ತಮ್ಮ ಮಾವನಿಗೆ ತಿರುಗೇಟು ಕೊಟ್ಟಿರೋ ಸಂಧ್ಯಾ, ಮಕ್ಕಳನ್ನು ಮನೆಯಿಂದ ಹೊರ ಹಾಕುವಾಗ ಯಾವ ಅಸಹ್ಯವೂ ಬರುವುದಿಲ್ಲ... ಇಂಥ ವಿಷಯಕ್ಕೆ ಅಸಹ್ಯ ಹುಟ್ಟತ್ತಾ ಎಂದು ಪ್ರಶ್ನಿಸಿದ್ದಾಳೆ. ಅತ್ತೆ, ಮದುವೆಯಾಗಲೇ ಅಕ್ರಮವಾಗಿ ಇದನ್ನು ಹುಟ್ಟಿಸಿಲ್ಲ. ವಯಸ್ಸು ಯಾವುದಾದರೇನು, ಹುಟ್ಟಿಸುವ ಶಕ್ತಿ ಇದ್ದ ಮೇಲೆ ಮಗು ಹುಟ್ಟಿದರೆ ತಪ್ಪೇನು ಎಂದು ಸಿರಿ ಪ್ರಶ್ನಿಸಿದ್ದಾಳೆ. ಸಮಾಜಕ್ಕೆ ಹೆದರುತ್ತಾ ಕುಳಿತರೆ ಏನೂ ಆಗುವುದಿಲ್ಲ. ಸಮಾಜ ಇರುವುದೇ ಮಾತನಾಡಲು. ಅಕ್ಕ-ಪಕ್ಕದ ಮನೆಯವರು ಹೇಳುವುದನ್ನು ಕೇಳುತ್ತಾ ಕುಳಿತುಕೊಳ್ಳಬಾರದು. ಅವರ ಮಾತಿಗೆ ಕಿವಿಗೊಡಬಾರದು ಎಂದಿದ್ದಾಳೆ.  ಒಟ್ಟಿನಲ್ಲಿ ಸೀರಿಯಲ್​ ಮೂಲಕವೇ ನಿರ್ದೇಶಕರು ಉಲ್ಟಾ ಮಾತನಾಡುವವರಿಗೆ ತಿರುಗೇಟು ನೀಡಿದ್ದಾರೆ. 

ಕ್ಯಾಟ್​ವಾಕ್​ ಮಾಡುವಾಗ ಕಾಲಿಗೆ ಡ್ರೆಸ್​ ಸಿಕ್ಕಿ ಉರುಳಿ ಬಿದ್ದ ಮಾಡೆಲ್: ವಿಡಿಯೋ ವೈರಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?