ನೋ ಸಿಂಪತಿ, ನೋ ಲವ್, ನಿಯತ್ತಾಗಿ ಆಡ್ತಿರೋ ತನಿಷಾಗೆ ಜೈ; ಟ್ಯಾಗ್‌ಲೈನ್ ಫೋಟೋ ಭಾರೀ ಟ್ರೆಂಡಿಂಗ್!

By Shriram Bhat  |  First Published Jan 17, 2024, 12:57 PM IST

ಸೋಷಿಯಲ್ ಮೀಡಿಯಾಗಳಲ್ಲಿ ''ನೋ ಸಿಂಪತಿ, ನೋ ಲವ್, ನಿಯತ್ತಾಗಿ ಆಟ ಆಡಿ ಫೈನಲ್‌ಗೆ ಬಂದಿರೋ ಸ್ಪರ್ಧಿ ಅಂದ್ರೆ ಅದು ತನಿಷಾ ಮಾತ್ರ- ಡಿಸರ್ವಿಂಗ್ ಕಂಟೆಸ್ಟಟ್‌ ಫಾರ್ ಬಿಬಿಕೆ ವಿನ್ನರ್' ಎಂಬ ಟ್ಯಾಗ್‌ ಲೈನ್ ಹೊತ್ತಿರುವ ಫೋಟೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.


'ನೋ ಸಿಂಪತಿ, ನೋ ಲವ್, ನಿಯತ್ತಾಗಿ ಆಟ ಆಡಿ ಫೈನಲ್‌ಗೆ ಬಂದಿರೋ ಸ್ಪರ್ಧಿ ಅಂದ್ರೆ ಅದು ತನಿಷಾ ಮಾತ್ರ'. ಹೀಗೊಂದು ಬರಹ ಇರೋ ಪಿಕ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಅಗುತ್ತಿದೆ. ಹೌದು, ತನಿಷಾ ಅಂದ್ರೆ ಬೆಂಕಿ ಉಂಡೆ, ಯಾರದೋ ಸಿಂಪಥಿಗೆ ಕಾಯುತ್ತಾ, ಯಾರನ್ನೋ ಲವ್ ಮಾಡುವ ನಾಟಕ ಆಡುತ್ತ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆದ ಸ್ಪರ್ಧಿ ತನಿಷಾ ಅಲ್ಲವೇ ಅಲ್ಲ. ಅವರು ನಿಯತ್ತಾಗಿ ಆಡಿದ್ದಾರೆ. ಯಾವುದೇ ಟಾಸ್ಕ್ ಇರಲಿ, ನಿಯತ್ತಾಗಿ ಆಡಿ ಫಲಿತಾಂಶಕ್ಕೆ ಕೊರಳೊಡ್ಡಿದ್ದು ತನಿಷಾ ಮಾತ್ರವೇ ಎಂಬುದು ಬಹುತೇಕರ ಅಭಿಪ್ರಾಯ. 

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10ರ ಗ್ರಾಂಡ್ ಫಿನಾಲೆ ದಿನ ಸಮೀಪಿಸುತ್ತಿದೆ. ಇದೇ ತಿಂಗಳು 27-28 ರಂದು (27-28 ಜನವರಿ 2024) ಗ್ರಾಂಡ್ ಫಿನಾಲೆ ನಡೆಯುತ್ತಿದ್ದು, ಅದರಲ್ಲಿ ಬಿಗ್ ಬಾಸ್ ಸೀನಸ್ 10ರ ವಿನ್ನರ್ ಯಾರು ಎಂಬುದು ನಿರ್ಧಾರವಾಗಲಿದೆ. ಮನೆಯೊಳಕ್ಕೆ ಬಂದಿದ್ದ 16 ಸ್ಪರ್ಧಿಗಳಲ್ಲಿ ಈಗಾಗಲೇ ಬಹಳಷ್ಟು ಮಂದಿ ವಾಪಸ್ ತಮ್ಮ ಮನೆ ಸೇರಿಕೊಂಡಿದ್ದಾರೆ. ಈಗ ಮನೆಯೊಳಗೆ ಉಳಿದಿರೋದು ತನಿಷಾ, ಸಂಗೀತಾ, ಕಾರ್ತಿಕ್, ನಮ್ರತಾ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್. 

Tap to resize

Latest Videos

ನರೇಂದ್ರ ಮೋದಿ ತವರಲ್ಲಿ 'ಜಸ್ಟ್ ಪಾಸ್' ಹಾಡಿನ ಮೋಡಿ; 'ನೋಡಿದ ಕೂಡಲೇ' ಏನಾಯ್ತು ಹೇಳ್ತೀರಾ!?

ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ''ನೋ ಸಿಂಪತಿ, ನೋ ಲವ್, ನಿಯತ್ತಾಗಿ ಆಟ ಆಡಿ ಫೈನಲ್‌ಗೆ ಬಂದಿರೋ ಸ್ಪರ್ಧಿ ಅಂದ್ರೆ ಅದು ತನಿಷಾ ಮಾತ್ರ- ಡಿಸರ್ವಿಂಗ್ ಕಂಟೆಸ್ಟಟ್‌ ಫಾರ್ ಬಿಬಿಕೆ ವಿನ್ನರ್' ಎಂಬ ಟ್ಯಾಗ್‌ ಲೈನ್ ಹೊತ್ತಿರುವ ಫೋಟೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಮೊದಲಿನಿಂದಲೂ ತನಿಷಾರನ್ನು ಸಪೋರ್ಟ್‌ ಮಾಡುತ್ತಿರುವ ಒಂದು ದೊಡ್ಡ ಬಳಗವೇ ಇದೆ ಎಂಬುದು ಗುಟ್ಟೇನೂ ಅಲ್ಲ. ಈಗ ಗ್ರಾಂಡ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆ ಸಹಜವಾಗಿಯೇ ಆ ಟೀಮ್ ಇನ್ನೂ ಹೆಚ್ಚು ಆಕ್ಟಿವ್ ಆಗಿದೆ. 

ಬಿಸಿ-ಬಿಸಿ ಐಸ್‌ಕ್ರೀಮ್ ತಿಂದ್ರಾ ಸಿರಿ ರವಿಕುಮಾರ್; ಕೊಟ್ಟಿದ್ಯಾಕೆ ಅರವಿಂದ್ ಅಯ್ಯರ್!

ಒಟ್ಟಿನಲ್ಲಿ, ಕಾರ್ತಿಕ್, ಸಂಗೀತಾ ಹಾಗೂ ತನಿಷಾರನ್ನು ವಿನ್ನರ್ ಆಗಿ ನೋಡಲು ಕರ್ನಾಟಕದ ತುಂಬಾ ಹಲವರು ಕಾದಿದ್ದಾರೆ ಎನ್ನಬಹುದು. ಇತ್ತೀಚೆಗಷ್ಟೇ ಕಾರ್ತಿಕ್ ಪರ ಬ್ಯಾಟ್ ಬೀಸಿ ಕಾರ್ತಿಕ್ ವಿನ್ನರ್ ಆಗುತ್ತಾರೆ ಎಂಬುದು ಟ್ರೆಂಡಿಂಗ್ ಆಗಿತ್ತು. ಇನ್ನು ಸಂಗೀತಾ ವಿನ್ನರ್ ಆಗಬೇಕೆಂದು ಅವರ ಪರ ಮೊದಲಿನಿಂದಲೂ ವೋಟ್ ಮಾಡುತ್ತ ಬಂದಿರುವವರ ಸಂಖ್ಯೆ ದೊಡ್ಡದಿದೆ. ಈಗ ತನಿಷಾ ಕೂಡ ವಿನ್ನರ್ ಲಿಸ್ಟ್ ಸೇರಿಕೊಂಡಿದ್ದು ಟ್ರೆಂಡಿಂಗ್ ಆಗಿದ್ದಾರೆ. ಹಾಗಿದ್ದರೆ ನಿಜವಾಗಿಯೂ ವಿನ್ನರ್ ಆಗುವವರು  ಯಾರು ಎಂಬುದು ಯಕ್ಷಪ್ರಶ್ನೆಯೇ ಆಗಿದೆ. ಇನ್ನೊಂದು ವಾರದಲ್ಲಿ ಫಲಿತಾಂಶ ಕಣ್ಣಮುಂದೆ ಇರಲಿದೆ. 

click me!