
ಬಿಗ್ಬಾಸ್ನಲ್ಲಿ ವೈಲ್ಡ್ಕಾರ್ಡ್ ಎಂಟ್ರಿ ಎಂದು ಒಂದಿಷ್ಟು ಅತಿಥಿಗಳು ಆಗಮಿಸುವುದು ಎಲ್ಲರಿಗೂ ತಿಳಿದೇ ಇದೆ. ಇಂಥ ಒಂದು ಅವಕಾಶ ತಮಗೂ ಸಿಕ್ಕರೆ ಹೇಗಿರುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಹಲವು ಅಭಿಮಾನಿಗಳಂತೂ ತಮ್ಮ ನೆಚ್ಚಿನ ಸ್ಪರ್ಧಿಯನ್ನು ನೋಡಲು ತುದಿಗಾಲಿನಲ್ಲಿ ನಿಲ್ಲುವುದು ಇದೆ. ಒಮ್ಮೆ ತಮಗೂ ಬಿಗ್ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕರೆ ಹೇಗೆ ಎಂದು ಕಾತರರಾಗಿರುವವರೇ ಹೆಚ್ಚು. ಅಂಥವರಿಗಾಗಿ ಬಿಗ್ಬಾಸ್ ಬಹುದೊಡ್ಡ ಸರ್ಪ್ರೈಸ್ ನೀಡಿದೆ. 15 ಮಂದಿ ಸ್ಪರ್ಧಾ ವಿಜೇತರಿಗೆ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಆ ಲಕ್ಕಿಗಳು ಯಾರು ಎಂದು ಶೀಘ್ರದಲ್ಲಿಯೇ ನಿರ್ಧಾರವಾಗಲಿದೆ. ಇದಕ್ಕಾಗಿ ಮೇಕ್ಮೈ ಟ್ರಿಪ್ ಜೊತೆ ಬಿಗ್ಬಾಸ್ ಒಪ್ಪಂದ ಮಾಡಿಕೊಂಡಿದ್ದು, ಅದು ಹೇಳಿದ ನಿಯಮವನ್ನು ಪಾಲಿಸಬೇಕಿದೆ.
ಅಷ್ಟಕ್ಕೂ ಇಂಥದ್ದೊಂದು ಅವಕಾಶವನ್ನು ನೀಡುತ್ತಿರುವುದು ಹಿಂದಿಯ ಬಿಗ್ಬಾಸ್. ಇದೇ ಮೊದಲ ಬಾರಿಗೆ ಅಭಿಮಾನಿಗಳನ್ನು ಬಿಗ್ಬಾಸ್ ಮನೆಗೆ ಬಿಡಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ. ಈ ಬಗ್ಗೆ ಬಿಗ್ಬಾಸ್ ಜೊತೆ ಅವರು ಮನವಿ ಮಾಡಿಕೊಂಡಿರುವ ವಿಡಿಯೋ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಅವರು, ಫಿನಾಲೆಯ ಬಳಿಕ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಅಭಿಮಾನಿಗಳಿಗೆ ಅವಕಾಶ ನೀಡುವಂತೆ ಅವರು ಕೋರಿಕೊಂಡಿದ್ದರು. ಯಾವಾಗ ಏನು ಎಂಬ ಬಗ್ಗೆ ಇನ್ನೂ ಬಹಿರಂಗಗೊಳ್ಳಲಿಲ್ಲ. ಎಷ್ಟು ಮಂದಿಗೆ ಈ ಅವಕಾಶ ಸಿಗಲಿದೆ ಎನ್ನುವುದು ಹೇಳಿರಲಿಲ್ಲ.
ಕೈಯಿಂದ ಶೂಸ್ ತೆಗೆದು ದೀಪ ಹಚ್ಚಿದ ವರುಣ್, ಫಾಲೋ ಮಾಡಿದ ಕರಣ್, ಉಫ್ ಜಾಹ್ನವಿ ಮಾಡಿದ್ದೇನು?
ಆದರೆ ಇದೀಗ 15 ಮಂದಿಗೆ ಎನ್ನುವುದು ಸಲ್ಮಾನ್ ಖಾನ್ ತಿಳಿಸಿದ್ದಾರೆ. ಅಷ್ಟಕ್ಕೂ ಇದು ಮೇಕ್ ಮೈ ಟ್ರಿಪ್ ಜೊತೆಗಿನ ಒಪ್ಪಂದವಾಗಿದ್ದು, ಅಲ್ಲಿ ಲಾಗಿನ್ ಆಗುವ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಬಿಗ್ಬಾಸ್ ಫಿನಾಲೆ ಶೀಘ್ರದಲ್ಲಿಯೇ ನಡೆಯಲಿದ್ದು, ಅದಾದ ಬಳಿಕ 15 ಮಂದಿ ಲಕ್ಕಿಗಳಿಗೆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಸಿಗಲಿದೆ. ಹೀಗೆ ಉಳಿದುಕೊಳ್ಳುವವರು ಏನು ಮಾಡಲಿದ್ದಾರೆ ಎಂಬಿತ್ಯಾದಿ ಕುತೂಹಲ ಇನ್ನೂ ಉಳಿದುಕೊಂಡಿದೆ.
ಅಂದಹಾಗೆ, ಬಿಗ್ಬಾಸ್ ಸೀನ್ 17 ಶುರುವಾಗಿ ಹಲವು ವಾರಗಳೇ ಕಳೆದಿದ್ದು, ಇನ್ನೇನು ಫಿನಾಲೆ ಹತ್ತಿರವಾಗಿದೆ. ಅಂತಿಮ ಕ್ಷಣಗಳು ಹತ್ತಿರವಾಗುತ್ತಿದ್ದಂತೆಯೇ ಒಳಗಡೆ ಇರುವ ಸ್ಪರ್ಧಿಗಳ ಟಾಸ್ಕ್ ಭರಾಟೆ, ತಾವೇ ಗೆಲ್ಲಬೇಕು ಎನ್ನುವ ಛಲ ಹೆಚ್ಚುತ್ತಲೇ ಸಾಗಿದೆ. ಈ ಸಲದ ಬಿಗ್ ಬಾಸ್ ಉಳಿದ ಸೀಸನ್ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಬಿಗ್ಬಾಸ್ ಮೇಲಿನ ಆರೋಪಗಳು ಏನೇ ಇರಲಿ, ಒಟ್ಟಿನಲ್ಲಿ ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್ ಮಾಡುವ ದೊಡ್ಡ ವರ್ಗವೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಈ ರಿಯಾಲಿಟಿ ಷೋ ಬಗ್ಗೆ ಅಸಹ್ಯ ಎಂದು ಕಮೆಂಟ್ ಮಾಡುವವರಿಗೇನೂ ಕಮ್ಮಿ ಇಲ್ಲ. ಇದರ ವಿರುದ್ಧ ದಿನವೂ ಸಾಕಷ್ಟು ಪೋಸ್ಟ್ಗಳು ಶೇರ್ ಆಗುತ್ತಲೇ ಇರುತ್ತವೆ. ಇದೊಂದು ಅತ್ಯಂತ ಕಳಪೆ ಷೋ ಎಂದು ಬೈಯುವ ದೊಡ್ಡ ವರ್ಗವೇ ಇದೆ. ಆದರೆ ಅಸಲಿಯತ್ತು ಏನೆಂದರೆ ಹೀಗೆ ಬೈದುಕೊಳ್ಳಲಾದರೂ ಇವರಿಗೆ ಈ ಷೋ ನೋಡಬೇಕು! ಇದೀಗ ಜನ ಸಾಮಾನ್ಯರು ಹೋದ ಮೇಲೆ ಬಿಗ್ಬಾಸ್ ಪ್ರದರ್ಶನ ಹೇಗಿರಲಿದೆ ಎನ್ನುವ ಕುತೂಹಲ ಜನರದ್ದಾಗಿದೆ.
ದೇಶ ಭಕ್ತಿಯ ಸಿನಿಮಾದಲ್ಲಿ ದೀಪಿಕಾ ಬೆತ್ತಲೆ! ಹೃತಿಕ್ ಜೊತೆಗಿನ ಹಸಿಬಿಸಿ ದೃಶ್ಯ ನೋಡಿ ಪತಿ ರಣಬೀರ್ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.