
ಕಡಲ ತೀರದ ನಾಡು ಮಂಗಳೂರಿನ ಸಂಸ್ಕೃತಿ ಮತ್ತು ಪರಂಪರೆಯ ಚಿತ್ರಣವಾಗಿರುವ 'ಕೋಲ' ಡಾಕ್ಯುಮೆಂಟರಿ ಬಿಡುಗಡೆ ಆಗಿದೆ. ಇದು ದಕ್ಷಿಣ ಕನ್ನಡದ ಪುರಾತನವಾದ ಹಾಗೂ ದೈವಿಕವಾದ ವಿಶಿಷ್ಠ ಆಚರಣೆ. ದೀಪಕ್ ಆರ್ ಹೆಗ್ಡೆ ನಿರ್ದೇಶನದ ಈ ಸಾಕ್ಷ್ಯಚಿತ್ರವನ್ನು 'ಶರಧಿ ಫಿಲಂಸ್' ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗಷ್ಟೇ 'ವೇದಸ್ಯ ಮ್ಯೂಸಿಕ್ ಚಾನೆಲ್' ಮೂಲಕ ಕೋಲ (Kola) ಸಾಕ್ಷ್ಯಚಿತ್ರ ಬಿಡುಗಡೆ ಆಗಿದೆ. ರವಿ ಹಾಗೂ ಶಕುಂತಲಾ ಈ ವಿಭಿನ್ನ ಕಾರ್ಯಕ್ಕೆ ಬಂಡವಾಳ ಹೂಡಿದ್ದಾರೆ. ಇದೀಗ 'ದೈವಾರಾಧನೆ'ಯ ಈ ಡಾಕ್ಯುಮೆಂಟರಿ ಜಗತ್ತಿನ ಮೂಲೆಮೂಲೆಗೂ ಪರಿಚಯವಾಗಲು ಹೊರಟಿದೆ.
'ಕೋಲ' ಹೆಸರಿನ ಈ ಡಾಕ್ಯುಮೆಂಟರಿ ಬಿಡುಗಡೆ ಬಳಿಕ ಬಹಳಷ್ಟು ಮೆಚ್ಚುಗೆ ಗಳಿಸುತ್ತಿದೆ. ಕಾರಣ, ರಿಷಬ್ ಶೆಟ್ಟಿಯವರ 'ಕಾಂತಾರ'ದ ಮಾದರಿಯಲ್ಲೇ ಇದರಲ್ಲಿ ಕೂಡ ದೈವಾರಾಧನೆ ಬಗ್ಗೆ ಹೇಳಲಾಗಿದೆ. ಜೊತೆಗೆ, ಇದು ಸಿನಿಮಾ ನಿರೂಪಣೆಯಿಂದ ಭಿನ್ನವಾಗಿರುವ ಡಾಕ್ಯುಮೆಂಟರಿ ಆಗಿದ್ದು, ನೈಜತೆ ಇದೆ, ಭಕ್ತಿಭಾವ ಹುಟ್ಟಿಸುವಂತಿದೆ. ಈ ಡಾಕ್ಯುಮೆಂಟರಿಯನ್ನು ಡಾ ಲಕ್ಷ್ಮೀ ಪ್ರಸಾದ್ ನಿರೂಪಣೆ ಮಾಡಿದ್ದಾರೆ. ವೇದಸ್ಯ ಮ್ಯೂಸಿಕ್ ಚಾನೆಲ್ ಈ ಕೋಲ ಸಾಕ್ಷ್ಯಚಿತ್ರ ಬಿಡುಗಡೆ ಮಾಡುವ ಮೂಲಕ ಇಂಥ ಹೊಸ ಪ್ರಯತ್ನಕ್ಕೆ ವೇದಿಕೆ ನಿರ್ಮಿಸಿ ಕೊಟ್ಟಿದೆ.
Yash Toxic: ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ; ಮತ್ತೆ ಯಾವಾಗ?
ಈ ಸಾಕ್ಷ್ಯಚಿತ್ರವನ್ನು ವರ್ಧಮಾನ್ ಜೈನ್, ನಾಕ್ರ ಪರ್ವ, ಆನಂದ್ ಕೆಳಪುತಿಗೆ ಹಾಗು ಮುನಿರಾಜ್ ಚೌಟೌ ಅವರೆಲ್ಲರ ಮೂಲಕ ಸೂಕ್ತವಾಗಿ ವಿವರಿಸಲಾಗಿದೆ. ದಕ್ಷಿಣ ಕನ್ನಡದ ಪುರಾತನ ಸಂಪ್ರದಾಯದ ಒಂದು ಪ್ರಕಾರದ ದೈವಾರಾಧನೆಯನ್ನು ಈ ಮೂಲಕ ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಪಸರಿಸುವ ಕಾರ್ಯವನ್ನು ಟೀಮ್ ಮಾಡುತ್ತಿದೆ. ಇದೀಗ ಉತ್ತರ ಕರ್ನಾಟಕ ಸೇರಿದಂತೆ, ಬಹಳಷ್ಟು ಕಡೆಗಳಲ್ಲಿ ದೀಪಕ್ ಹೆಗ್ಡೆ ನಿರ್ದೇಶನದ 'ಕೋಲ' ಪ್ರದರ್ಶನ ನಡೆಸಲಾಗುತ್ತಿದೆ.
ಅಂದಹಾಗೆ, ದೀಪಕ್ ಹೆಗಡೆ ಅವರು ನಟನೆ ಹಾಗೂ ನಿರ್ದೇಶನ ಎರಡರಲ್ಲೂ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಅವರು 'ನನ್ನ ಮೊಟ್ಟಮೊದಲ ನಿರ್ದೇಶನದಲ್ಲಿ ನಾನು ಉದ್ದೇಶಪೂರ್ವಕವಾಗಿಯೇ ದೈವಾರಾಧನೆ 'ಕೋಲ' ಸಬ್ಜೆಕ್ಟ್ ಅನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಇದು ಬಹಳಷ್ಟು ಕಡೆ ತಲುಪಿದ ಬಳಿಕ ಸ್ವಲ್ಪ ಗ್ಯಾಪ್ ಕೊಟ್ಟು ಬಳಿಕ ಮತ್ತೆ ನಟನೆ-ನಿರ್ದೇಶನ ಮುಂದುವರಿಸಲಿದ್ದೇನೆ' ಎಂದಿದ್ದಾರೆ. ನಟನೆ ಹಾಗೂ ನಿರ್ದೇಶನದ ತರಬೇತಿ ಜೊತೆಗೆ, ಸಂಕಲನ ಹಾಗೂ ಕ್ಯಾಮೆರಾ ಕೈಚಳಕದಲ್ಲೂ ತರಬೇತಿ ಪಡೆದಿದ್ದಾರಂತೆ ದೀಪಕ್ ಹೆಗ್ಡೆ.
ಅದೇ ನನ್ನನ್ನು 'ಬೇಡರ ಕಣ್ಣಪ್ಪ' ಪಾತ್ರಕ್ಕೆ ಎಳೆದು ತಂದಿದ್ದು:.. ಡಾ ರಾಜ್‌ಕುಮಾರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.