ಆ್ಯಂಕರ್ ಅನುಶ್ರೀ ಜೊತೆ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಮೇಲೆ ಸ್ಟೆಪ್ ಹಾಕಿದ ಲಾಯರ್ ಜಗದೀಶ್! ನೆಟ್ಟಿಗರು ಏನಂದ್ರು ನೋಡಿ...
ಬಿಗ್ಬಾಸ್ ಮನೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದು ಲಾಯರ್ ಜಗದೀಶ್. ಅವರು ಹೊರಕ್ಕೆ ಬಂದಿರುವುದಕ್ಕೆ ಇದಾಗಲೇ ಹಲವರಿಗೆ ಸಿಕ್ಕಾಪಟ್ಟೆ ಬೇಸರವಾಗಿದೆ. ಲಾಯರ್ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಫ್ಯಾನ್ಸ್. ಒಬ್ಬರಾದ್ಮೇಲೆ ಒಬ್ಬರ ಮೇಲೆ ಎಗರಾಡ್ತಿರುವ ಅವರು ಕರ್ನಾಟಕದ ಕ್ರಶ್ ಎಂಬ ಪಟ್ಟ ಪಡೆದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇನ್ನೋರ್ವ ಸ್ಪರ್ಧಿ ಹಂಸಾ ಜೊತೆ ಇವರ ರೊಮ್ಯಾನ್ಸ್ ಸಕತ್ ಸದ್ದು ಮಾಡಿತ್ತು. ಆದರೆ ಇದೇ ವೇಳೆ ಅವರ ಪತ್ನಿ ಸೌಮ್ಯಾ ಮಾತ್ರ ಪತಿಯ ಕುರಿತು ಬೇರೆದೇ ಹೇಳಿಕೆ ನೀಡಿದ್ದರು. ಜಗದೀಶ್ ರೋಮ್ಯಾಂಟಿಕ್ ಅಲ್ಲ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಅವರ ಡಾನ್ಸ್ ನೋಡಿ ಖುಷಿಯಾಗಿದ್ದೇನೆ. ಮನೆಯಲ್ಲಿ ನಾನು ಡಾನ್ಸ್ ಮಾಡ್ತೇನೆ. ಅವರು ನಗ್ತಾ ಕುಳಿತಿರ್ತಾರೆ. ಸ್ವಲ್ಪ ನಾಚಿಕೆ ಸ್ವಭಾವ ಅವರದ್ದು ಎಂದಿದ್ದರು. ಪತ್ನಿ ಏನೇ ಹೇಳಿದರೂ ಜಗದೀಶ್ ಅವರು ರೊಮ್ಯಾಂಟಿಕ್ ಮ್ಯಾನ್ ಎಂದೇ ಬಿಗ್ಬಾಸ್ನಿಂದ ಫೇಮಸ್ ಆದವರು.
ಇದೀಗ ಅವರಿಗೆ ಬಿಗ್ಬಾಸ್ನಿಂದ ಬಂದ ಮೇಲೆ ಸಹಜವಾಗಿ ಡಿಮ್ಯಾಂಡ್ ಹೆಚ್ಚಾಗಿದೆ. ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಗೆ ಅವರು ಆಗಮಿಸಿದ್ದಾರೆ. ಬಿಗ್ಬಾಸ್ನಿಂದ ಬರುವ ಸ್ಪರ್ಧಿಗಳಿಗೆ ಸಾಮಾನ್ಯವಾಗಿ ಎಲ್ಲಾ ರಿಯಾಲಿಟಿ ಷೋಗಳಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ. ಅದೇ ರೀತಿ ಡಿಕೆಡಿಯಲ್ಲಿ ಜಗದೀಶ್ ಅವರು ಡಾನ್ಸ್ ಮಾಡಿದ್ದಾರೆ. ಇದೇ ವೇಳೆ ಕೆಲವು ಮಾತನಾಡಿರುವ ಜಗದೀಶ್ ಅವರು, ಪಕ್ಕದಲ್ಲೇ ಇರುವ ಆ್ಯಂಕರ್ ಅನುಶ್ರೀ ತಮ್ಮ ಸ್ವರ್ಗ ಎಂದೂ ಹೇಳಿದ್ದಾರೆ! ವೇದಿಕೆಯ ಮೇಲೆ ತಮಾಷೆ ಮಾಡುವ ಸಮಯದಲ್ಲಿ ಲಾಯರ್ ಜಗದೀಶ್ ಅವರು, ನನ್ನ ಲಕ್ಕಿ ನಂಬರ್ ಸೆವೆನ್. ನನ್ನ ಪಕ್ಕವೇ ಇದೆ ಹೆವನ್ ಎಂದು ಅನುಶ್ರೀಯವರನ್ನು ಉದ್ದೇಶಿಸಿ ಹೇಳಿದ್ದಾರೆ. ಇದನ್ನು ಕೇಳಿ ಅನುಶ್ರೀ ಅವರು ನಾಚಿ ನೀರಾಗಿದ್ದಾರೆ.
undefined
ಲಾಯರ್ ಜಗದೀಶ್ ಮಾತಿಗೆ ನಾಚಿಕೊಂಡ ರಕ್ಷಿತಾ: 'ನಾಟಿ ಆ್ಯಟ್ ಫಾರ್ಟಿ ಸರ್ ನೀವು' ಎಂದ ನಟಿ!
ಆ ಬಳಿಕ, ಆ್ಯಂಕರ್ ಅನುಶ್ರೀ ಮತ್ತು ಜಗ್ಗು ದಾದಾ ಸೇರಿ ತುಝೆ ದೇಖಾ ತೋ ಯೇ ಜಾನಾ ಸನಮ್ ಹಾಡಿಗೆ ರೊಮಾನ್ಸ್ ಮಾಡಿದ್ದಾರೆ. ಇದನ್ನು ನೋಡಿ ತರ್ಲೆ ಕಮೆಂಟಿಗರು ಥರಹೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಹಂಸ ಮೇಡಂ ಆಯ್ತು, ಈಗ ಅನುಶ್ರೀ ಮೇಡಂ ಎಂದು ಕೆಲವರು ಹೇಳಿದ್ರೆ, ಜಗ್ಗು ದಾದಂಗೆ ಒಟ್ನಲ್ಲಿ ಆಂಟಿಗಳು ಬೇಕು ಎನ್ನೋದಾ ಮತ್ತೊಂದಿಷ್ಟು ಮಂದಿ? ಮತ್ತೆ ಹಲವರು ಹಿಂದಿ ಹಾಡು ಹಾಕಿದ್ದಕ್ಕೆ ಗರಂ ಆಗಿದ್ದಾರೆ. ಅನುಶ್ರೀ ಅವರ ಫ್ಯಾನ್ಸ್, ಅವರಿಗೆ ಬೇಗ ಮದುವೆಯಾಗುವಂತೆ ಸಲಹೆ ಕೊಟ್ಟಿದ್ದಾರೆ. ಇಲ್ಲದಿದ್ದರೆ ನಿಮ್ಮ ಮೇಲೆ ಏನೆಲ್ಲಾ ಕೆಟ್ಟಕೆಟ್ಟದ್ದಾಗಿ ಮಾತಾಡ್ತಾರೆ, ನೋಡಲು ಆಗಲ್ಲ ಎಂದು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
ಇನ್ನೋರ್ವ ಕಮೆಂಟಿಗರು, ಇನ್ನೂ ಈ ಕಣ್ಣಲ್ಲಿ ಏನೇನೋ ನೋಡ್ಬೇಕೋ ನಾ ಕಾಣೆ ದೇವರೇ.. ಟೊಮೇಟೊ ಜೊತೆಗೆ ಬದನೇಕಾಯಿ ಡಾನ್ಸ್ ಮಾಡಿದ ಹಾಗೆ ಇದೆ ಎಂದಿದ್ದಾರೆ. ಜಗದೀಶ್ ಅವರನ್ನು ವಾಪಸ್ ಬಿಗ್ಬಾಸ್ಗೆ ಕರೆಸಿಕೊಳ್ಳಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇದು ಸಾಧ್ಯವೇ ಇಲ್ಲ ಎಂದು ಖುದ್ದು ದರ್ಶನ್ ಅವರೇ ಹೇಳಿದ್ದಾರೆ. ಈ ಹಿಂದೆ ಜಗದೀಶ್ ಅವರೂ ನೇರ ಪ್ರಸಾರದಲ್ಲಿ ಬಂದು ವಾಪಸ್ ಹೋಗಲು ತಮಗೆ ಅವಕಾಶ ಇಲ್ಲ ಎಂದು ನೋವು ತೋಡಿಕೊಂಡಿದ್ದರು. ಒಂದು ಚಿಕ್ಕ ಪದದಿಂದ ಬಿಗ್ಬಾಸ್ನಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದ ಅವರು, ಇನ್ನೂ ನನಗೆ ಅರ್ಥವಾಗದ ವಿಷಯ ಏನೆಂದರೆ, ಚೈತ್ರಾ ಕುಂದಾಪುರ, ತುಕಾಲಿ ಮಾನಸ, ಮಂಜಣ್ಣ ಇವರೆಲ್ಲರೂ ನನ್ನ ಹಾಗೆಯೇ ಕೆಲವು ಸಲ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಆದರೆ ನನ್ನೊಬ್ಬನನ್ನೇ ಯಾಕೆ ಹೊರಗೆ ಕಳುಹಿಸಿದ್ದೋ ಗೊತ್ತಾಗುತ್ತಿಲ್ಲ ಎಂದು ಬೇಸರಿಸಿದ್ದಾರೆ. ಇದೇ ವೇಳೆ ನೀವು ಮತ್ತೆ ಹೋಗ್ತೀರಾ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಇದು ಸಾಧ್ಯವಿಲ್ಲ. ಏಕೆಂದ್ರೆ ಇದಾಗಲೇ ಸುದೀಪ್ ಅವರು, ಬಿಗ್ಬಾಸ್ಗೆ ಜಗದೀಶ್ ಮುಗಿದು ಹೋಗಿರೋ ಅಧ್ಯಾಯ ಎಂದಿದ್ದಾರೆ. ಆದ್ದರಿಂದ ಮತ್ತೆ ವಾಪಸ್ ಹೋಗುವ ಯಾವುದೇ ಚಾನ್ಸ್ ಇಲ್ಲ ಎನ್ನುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದರು.
ಬಿಗ್ಬಾಸ್ನಿಂದ ಸಿಕ್ಕಿರೋ ಸಂಭಾವನೆ ಎಷ್ಟು ಎಂದು ಪ್ರಶ್ನಿಸಿದ್ರೆ ಲಾಯರ್ ಜಗದೀಶ್ ಏನೆಲ್ಲಾ ಹೇಳಿದ್ರು ಕೇಳಿ...