Raana Rakshitha Marriage: ʼಕ್ರೇಜಿಕ್ವೀನ್‌ʼ ರಕ್ಷಿತಾ ಸಹೋದರ ರಾಣಾ ಮದುವೆಯಲ್ಲಿ ಚಿತ್ರರಂಗದ ಗಣ್ಯರು!

Published : Feb 07, 2025, 02:35 PM ISTUpdated : Feb 07, 2025, 02:42 PM IST
Raana Rakshitha Marriage: ʼಕ್ರೇಜಿಕ್ವೀನ್‌ʼ ರಕ್ಷಿತಾ ಸಹೋದರ ರಾಣಾ ಮದುವೆಯಲ್ಲಿ ಚಿತ್ರರಂಗದ ಗಣ್ಯರು!

ಸಾರಾಂಶ

ʼಕ್ರೇಜಿ ಕ್ವೀನ್ʼ‌ ರಕ್ಷಿತಾ ಸಹೋದರ ರಾಣಾ ಮದುವೆ ಭರ್ಜರಿಯಾಗಿ ನಡೆದಿದೆ. ಕನ್ನಡ ಚಿತ್ರರಂಗದ ಗಣ್ಯರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. 

ನಟಿ ರಕ್ಷಿತಾ ಅವರ ಸಹೋದರ ರಾಣಾ ಅವರು ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ʼಏಕ್‌ ಲವ್‌ ಯಾʼ ಸಿನಿಮಾದಲ್ಲಿ ನಟಿಸಿದ್ದ ರಾಣಾ ಈಗ ರಕ್ಷಿತಾ ಅವರ ಕೈಹಿಡಿದಿದ್ದಾರೆ. ರಾಣಾ ಮದುವೆಯಾಗಿರುವ ಹುಡುಗಿ ಹೆಸರು ಕೂಡ ರಕ್ಷಿತಾ ಎನ್ನೋದು ವಿಶೇಷ. ರಕ್ಷಿತ್‌ ಹಾಗೂ ರಾಣಾ ಇಬ್ಬರೂ ಪರಸ್ಪರ ಏಳು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದಾರೆ. 

ಮದುವೆಗೆ ಯಾರು ಬಂದಿದ್ರು?
ಈ ಮದುವೆಯಲ್ಲಿ ನಟ ಕಿಚ್ಚ ಸುದೀಪ್-ಪ್ರಿಯಾ, ಅಭಿಷೇಕ್‌ ಅಂಬರೀಶ್- ಅವಿವಾ ಬಿದ್ದಪ್ಪ, ಶ್ರೀಮುರಳಿ, ಚಿನ್ನೇಗೌಡ್ರು, ನಿಖಿಲ್‌ ಚೆಲುವರಾಯಸ್ವಾಮಿ ದಂಪತಿ, ಶರ್ಮಿಳಾ ಮಾಂಡ್ರೆ, ಬಿವೈ ಯಜುವೇಂದ್ರ, ಅನುಪಮಾ ಗೌಡ, ಕೃಷಿ ತಾಪಂಡ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಪ್ರಿಯಾಂಕಾ ಉಪೇಂದ್ರ, ರಮೇಶ್‌ ಅರವಿಂದ್‌, ಮಾಳವಿಕಾ ಅವಿನಾಶ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ಶಿಲ್ಪಾ, ಅನು ಪ್ರಭಾಕರ್‌, ರಘು ಮುಖರ್ಜಿ, ಭಾರತಿ ವಿಷ್ಣುವರ್ಧನ್‌, ಅನಿರುದ್ಧ, ಸುಮಿತ್ರಾ, ಅಮೃತಾ ಅಯ್ಯಂಗಾರ್‌, ಸುಧಾರಾಣಿ, ಶ್ರುತಿ, ಯೋಗೇಶ್ವರ್ ಅವರು ಭಾಗವಹಿಸಿದ್ದಾರೆ. ಇನ್ನೂ ಅನೇಕ ಕಲಾವಿದರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಇವರೆಲ್ಲರೂ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ನಟಿ ರಕ್ಷಿತಾ ಹಾಗೂ‌ ಜೋಗಿ ಪ್ರೇಮ್ ದಂಪತಿ ಬಂಗಾರದ ಬಣ್ಣದ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಇನ್ನು ಸರಳವಾಗಿ ಅರಿಷಿಣ, ಮೆಹೆಂದಿ ಕಾರ್ಯಕ್ರಮ ಮಾಡಲಾಗಿತ್ತು. 

ಒಂದೇ ಮನೆಯಲ್ಲಿ ಇಬ್ರು ರಕ್ಷಿತಾ; ಅವಳ ಹೆಸರಲ್ಲಿ ಇವಳನ್ನ ಕೂಗ್ಬುಟ್ಟು ಜೀವಂತ ಉಳ್ಕೊಂತಾರಾ ಜೋಗಿ ಪ್ರೇಮ್‌?

ರಕ್ಷಿತಾ ಏನಂದ್ರು? 
ರಕ್ಷಿತಾ ಈ ಬಗ್ಗೆ ಮಾತನಾಡಿ, '‌ರಾಣಾ ಮದುವೆಯಾಗಿರುವ ರಕ್ಷಿತಾ ಪ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮನ ಮದುವೆ ಬಗ್ಗೆ ಮಾತನಾಡಿದ್ದ ರಕ್ಷಿತಾ “ರಕ್ಷಿತಾ ತುಂಬಾ ಒಳ್ಳೆಯ ಹುಡುಗಿ. ಅವರಿಬ್ಬರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ರಾಣಾ ತನ್ನ ವೃತ್ತಿ ಜೀವನದಲ್ಲಿ ಸೆಟಲ್ ಆಗಬೇಕು ಅಂತ ಆಕೆ ಕಾದಿದ್ದಾಳೆ. ಈಗ ರಾಣಾ ಮದುವೆಯಾಗಬೇಕು. ರಾಣಾ ಎರಡನೇ ಸಿನಿಮಾ ಕೆಲಸ ಶುರುವಾಗಿದೆ. ಆ ಹುಡುಗಿ ಹೆಸರು ರಕ್ಷಿತಾ ಅನ್ನೋದು ಸಮಸ್ಯೆ ಆಗೋದಿಲ್ಲ. ನನ್ನ ಮೊದಲ ಹೆಸರು ಶ್ವೇತಾ ಎನ್ನೋದಿತ್ತು. ಹೀಗಾಗಿ ಮನೆಯಲ್ಲಿ ಮ್ಯಾನೇಜ್ ಮಾಡ್ತೀವಿ. ರಕ್ಷಿತಾ ತುಂಬಾ ಸರಳವಾದ ಹುಡುಗಿ ಮನೆಯವರು ಒಳ್ಳೆಯವರು, ಸಾಂಪ್ರದಾಯಿಕ ಪದ್ಧತಿ ಅನಿಸರಿಸುತ್ತಾರೆ. ತುಂಬಾ ವರ್ಷಗಳ ಬಳಿಕ ನಮ್ಮ ಕುಟುಂಬದಲ್ಲಿ ಒಂದು ಸಂಭ್ರಮ ಇದು” ಎಂದು ಹೇಳಿದ್ದರು.

Ek Love Ya Success: ಹೊಸ ನಿರ್ದೇಶಕರ ಹುಡುಕಾಟದಲ್ಲಿ ರಾಣಾ-ರಕ್ಷಿತಾ!

ರಾಣಾ ಏನಂದ್ರು? 
ರಾಣಾ ಈ ಬಗ್ಗೆ ಮಾತನಾಡಿ 'ಮದುವೆಯಾಗುವ ಹುಡುಗಿ ಅಂದ್ರೆ ಹಾಗಿರಬೇಕು ಹೀಗಿರಬೇಕು ಅನ್ನೋದಿರುತ್ತದೆ. ಅವೆಲ್ಲವುಗಳಲ್ಲಿ ನಾನು ಪ್ರೀತಿಸಿದ ಹುಡುಗಿ ರಕ್ಷಿತಾ ಪಾಸ್‌ ಆಗಿದ್ದಾಳೆ. ಹೆಚ್ಚು ದಿನ ನಮ್ಮ ಪ್ರೀತಿಯ ವಿಚಾರವನ್ನು ಮುಚ್ಚಿಟ್ಟಿರಲಿಲ್ಲ. ನಾನೇ ರಕ್ಷಿತಾಗೆ ಪ್ರೇಮ ನಿವೇದನೆ ಮಾಡಿದ್ದೆ, ನನಗೋಸ್ಕರ ರಕ್ಷಿತಾ ಕಾದಿದ್ದಾಳೆ” ಎಂದು ಹೇಳಿದ್ದರು. 

ಗಣ್ಯರಿಗೆ ಆಹ್ವಾನ…!
ಅಂದಹಾಗೆ ರಕ್ಷಿತಾ, ಪ್ರೇಮ್‌, ರಾಣಾ ಅವರು ಕನ್ನಡ ಚಿತ್ರರಂಗದ ಗಣ್ಯರ ಮನೆಗೆ ಭೇಟಿ ಕೊಟ್ಟು ಮದುವೆಗೆ ಆಹ್ವಾನ ಮಾಡಿದ್ದರು. ಅಷ್ಟೇ ಅಲ್ಲದೆ ಕೆಲ ರಾಜಕೀಯ ಗಣ್ಯರನ್ನು ಕೂಡ ಆಹ್ವಾನಿಸಿದ್ದರು. ಡಿಸೈನರ್‌ ಆಗಿರುವ ಕಾರಣಕ್ಕೆ ರಾಣಾ ಪತ್ನಿಯೇ ಅವರ ಮದುವೆಯ ಉಡುಗೆಯನ್ನು ಅವರೇ ಡಿಸೈನ್‌ ಮಾಡಿಕೊಂಡಿದ್ದಾರಂತೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!