
ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಪುಟ್ಟಕ್ಕಳೇ ಶಕ್ತಿ. ಈಗ ಪುಟ್ಟಕ್ಕ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಈಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಪುಟ್ಟಕ್ಕ ಸಾವಿಗೀಡಾಗಿದ್ದಾಳೆ. ವಾಹಿನಿಯು ಅತ್ಯಂತ ರೋಚಕ ಎಪಿಸೋಡ್ ಪ್ರಸಾರ ಮಾಡುತ್ತಿದೆ.
ನಾಟಕ ಮಾಡಿದ್ದ ಸಿಂಗಾರಮ್ಮ!
ಈ ಧಾರಾವಾಹಿಯಲ್ಲಿ ಬಂಗಾರಮ್ಮ ಹಾಗೂ ಸಿಂಗಾರಮ್ಮ ಅಕ್ಕ-ತಂಗಿ. ಸಿಂಗಾರಮ್ಮ ಕೆಟ್ಟವಳು. ಸಿಂಗಾರಮ್ಮ-ಬಂಗಾರಮ್ಮ ನೋಡಲು ಒಂದೇ ಥರ ಇದ್ದಾರೆ. ಸಿಂಗಾರಮ್ಮ ಒಂದಷ್ಟು ದಿನಗಳ ಕಾಲ ಬಂಗಾರಮ್ಮನ ಪಾತ್ರ ಹಾಕಿ ಎಲ್ಲರ ಎದುರು ನಾಟಕ ಮಾಡಿದ್ದಳು. ಇದನ್ನು ಕಂಡುಹಿಡಿದಿದ್ದ ಸ್ನೇಹಾಳನ್ನು ಇವರೇ ಸಾಯಿಸಿದ್ದಾರೆ.
ಬಾವಿಯ ತಣ್ಣೀರು ಮೈಮೇಲೆ ಸುರಿದುಕೊಳ್ಳುವಾಗ ಬಿಸಿಯಾಗೋದು ಹೇಗೆ? ಶೂಟಿಂಗ್ನಲ್ಲಿ ಏನೇನಾಗತ್ತೆ ನೋಡಿ!
ಪುಟ್ಟಕ್ಕ ಸಾಯುತ್ತಾಳಾ?
ಸಿಂಗಾರಮ್ಮ ಹಾಗೂ ಅವಳ ಮಗ ಕಲಿ ಇನ್ನೂ ಬಂಗಾರಮ್ಮನ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ. ಈಗ ಸಿಂಗಾರಮ್ಮ ಮತ್ತೆ ಬಂಗಾರಮ್ಮನ ವೇಷ ಹಾಕಿ ಮತ್ತೆ ಕಂಠಿ ಮನೆಗೆ ಬಂದಿದ್ದರು. ಆಗ ಅವರು ಕಂಠಿ ಅಕ್ಕನ ಮಗುವನ್ನು ಕರೆದುಕೊಂಡು ಹೋಗಲು ಪ್ರಯತ್ನಪಟ್ಟಿದ್ದರು. ಇದಕ್ಕೆ ರಾಧಾ ಸಾಥ್ ಕೊಟ್ಟಿದ್ದಳು. ಆ ಮಗುವನ್ನು ಕಾಪಾಡಲು ಪುಟ್ಟಕ್ಕ ಒದ್ದಾಡಿದ್ದಳು. ಸಿಂಗಾರಮ್ಮ ಪುಟ್ಟಕ್ಕಳಿಗೆ ಚಾಕು ಇರಿದಿದ್ದಾಳೆ. ಹೀಗಾಗಿ ಪುಟ್ಟಕ್ಕ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದಾಳೆ. ಈಗ ರಿಲೀಸ್ ಆಗಿರೋ ಪ್ರೋಮೋದಲ್ಲಿ ಪುಟ್ಟಕ್ಕ ತೀರಿಕೊಂಡಿರುವಂತಿದೆ. ಪುಟ್ಟಕ್ಕ ಸಾಯೋದು ಡೌಟ್ ಎನ್ನಬಹುದು. ಪುಟ್ಟಕ್ಕ ಸತ್ತರೆ ಈ ಸೀರಿಯಲ್ ಕಥೆಯಲ್ಲಿ ಹುರುಳೇ ಇರೋದಿಲ್ಲ. ಈಗಾಗಲೇ ಸ್ನೇಹಾ ಸತ್ತಿರೋದಿಕ್ಕೆ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಈಗ ಪುಟ್ಟಕ್ಕ ಸತ್ತರೆ ಏನು ಕಥೆ?
ಕನಸು ಕಾಣುತ್ತಿರೋ ರಾಜಿ!
ಪುಟ್ಟಕ್ಕ ಸತ್ತರೆ ಸಿಂಗಾರಮ್ಮನನ್ನು ಪೊಲೀಸರು ಬಂಧಿಸುತ್ತಾರೆ. ಆಗ ಅವಳು ರಾಧಾ ಹೆಸರು ಹೇಳಬಹುದು. ತನ್ನ ಹೆಸರು ಎಲ್ಲಿ ಹೊರಗಡೆ ಬರತ್ತೆ? ನನ್ನ ಜೀವನ ಏನಾಗುತ್ತದೆ ಎಂದು ರಾಧಾ ಭಯಬಿದ್ದಿದ್ದಾಳೆ. ಪುಟ್ಟಕ್ಕ ಸತ್ತರೆ ಅವಳ ಮನೆ, ಮೆಸ್ ಎಲ್ಲವೂ ನನ್ನ ಪಾಲಾಗುತ್ತದೆ ಅಂತ ರಾಜೇಶ್ವರಿ ಕನಸು ಕಾಣುತ್ತಿದ್ದಾಳೆ.
ಸ್ನೇಹಾ ಸತ್ತ ವಿಷ್ಯ ಕೇಳಿ ಶಾಕ್ನಿಂದ ಬಿದ್ದ ಬಂಗಾರಮ್ಮನಿಗೆ ಶೂಟಿಂಗ್ ವೇಳೆ ಆಗಿದ್ದೇನು? ವಿಡಿಯೋ ವೈರಲ್
ಸಹನಾ-ಕಾಳಿ ಮದುವೆ ಆಗ್ತಾರಾ?
ರಾಜಿ ತಮ್ಮ ಕಾಳಿ ಸಹನಾಳನ್ನು ಪ್ರೀತಿ ಮಾಡುತ್ತಿದ್ದಾನೆ, ಆದರೆ ಅವಳಿಗೆ ಕಾಳಿ ಮೇಲೆ ಲವ್ ಇಲ್ಲ. ಮುಂದೊಂದು ದಿನ ಸಹನಾ-ಕಾಳಿ ಒಂದಾಗ್ತಾರಾ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಸಂಚಿಕೆಗಳು ಭಾರೀ ಕುತೂಹಲ ಮೂಡಿಸುತ್ತಿವೆ.
ಕಂಠಿ ಕಥೆ ಏನು?
ಕಂಠಿ ತನ್ನ ಪತ್ನಿ ಸ್ನೇಹಾಳನ್ನು ಕಳೆದುಕೊಂಡು ಒದ್ದಾಡುತ್ತಿದ್ದಾನೆ. ಸ್ನೇಹಾ ಹೃದಯ ಇನ್ನೊಂದು ಸ್ನೇಹಾ ಪಾಲಾಗಿದೆ. ಹೌದು, ಪುಟ್ಟಕ್ಕ ಮನೆಗೆ ಹೊಕ್ಕಿರುವ ಗಂಗಾಧರ್ ಮಗಳು ಸ್ನೇಹಾಳಿಗೆ ಕಂಠಿ ಪತ್ನಿ ಸ್ನೇಹಾಳ ಹೃದಯ ಹಾಕಿ ಕಸಿ ಮಾಡಲಾಗಿದೆ. ಈ ವಿಷಯ ಇನ್ನೂ ಯಾರಿಗೂ ಗೊತ್ತಿಲ್ಲ. ಅಂದು ಈ ಸ್ನೇಹಾಳನ್ನು ಕಾಪಾಡಬೇಕು ಅಂತ ಕಂಠಿ ತನ್ನ ಪತ್ನಿ ಸ್ನೇಹಾ ಬಳಿ ಹೋಗಿರಲಿಲ್ಲ. ಅಂದು ಕಂಠಿ ತನ್ನ ಪತ್ನಿ ಜೊತೆಗೆ ಇದ್ದಿದ್ದರೆ ಸ್ನೇಹಾ ಬದುಕಿರುತ್ತಿದ್ದಳು. ಈ ವಿಷಯ ಇನ್ನೂ ಕಂಠಿಗೆ ಕಾಡುತ್ತಿದೆ. ಇನ್ನು ಈ ಸ್ನೇಹಾ ಕಂಡರೆ ಕಂಠಿಗೆ ಆಗೋದೇ ಇಲ್ಲ. ನನ್ನ ಪತ್ನಿ ಹೃದಯವನ್ನು ಯಾವ ಹುಡುಗಿಗೆ ಹಾಕಿದ್ದಾರೋ ಆ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ತೀನಿ ಅಂತ ಕಂಠಿ ಹೇಳಿದ್ದಾನೆ. ಮುಂದೆ ಹೊಸ ಸ್ನೇಹಾ, ಕಂಠಿ ಮದುವೆ ಆಗ್ತಾರಾ ಅಂತ ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಕಂಠಿ ಪಾತ್ರದಲ್ಲಿ ಧನುಷ್, ಹೊಸ ಸ್ನೇಹಾ ಪಾತ್ರದಲ್ಲಿ ಅಪೂರ್ವ ನಾಗರಾಜ್, ಪುಟ್ಟಕ್ಕ ಪಾತ್ರದಲ್ಲಿ ಉಮಾಶ್ರೀ, ರಾಜೇಶ್ವರಿ ಪಾತ್ರದಲ್ಲಿ ಸ್ವಾತಿ ಎಚ್‌ವಿ, ಬಂಗಾರಮ್ಮ ಪಾತ್ರದಲ್ಲಿ ಮಂಜುಭಾಷಿಣಿ ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.