
ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರವಾಗ್ತಿದ್ದ ಗಿಚ್ಚಿ ಗಿಲಿಗಿಲಿ (Gicchi Gili Gili) ಮೂಲಕ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸ್ತಿದ್ದ, ಸಂಪೂರ್ಣ ಮನರಂಜನೆ ನೀಡುವ ಹಾಸ್ಯ ನಟ ಚಿಲ್ಲರ್ ಮಂಜು (comedy actor Chillar Manju). ತಮ್ಮ ಅಭಿನಯದ ಮೂಲಕ ಸಾವಿರಾರು ಅಭಿಮಾನಿಗಳ ಮನಸ್ಸನ್ನು ಅವರು ಗೆದ್ದಿದ್ದಾರೆ. ಬಡ ಕುಟುಂಬದಿಂದ ಬಂದ ಚಿಲ್ಲರ್ ಮಂಜು, ನಿಧಾನವಾಗಿ ವೃತ್ತಿಯಲ್ಲಿ ಯಶಸ್ಸು ಕಂಡವರು. ಈಗ ಚಿಲ್ಲರ್ ಮಂಜು ಕಾರ್ ಒಂದನ್ನು ಖರೀದಿ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ.
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಚಿಲ್ಲರ್ ಮಂಜು ಕಾರ್ ಖರೀದಿ ಮಾಡಿದ್ದಾರೆ. ಟಾಟಾ ಕರ್ವ್ವಿ ಕೂಪೆ ಎಸ್‌ಯುವಿ (Tata Curvv Coupe SUV) ಅವರ ಮನೆಗೆ ಬಂದಿದೆ. ಕಾರ್ ಮುಂದೆ ನಿಂತು ಮಂಜು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಈ ಕಾರಿನ ಬೆಲೆ 22 ಲಕ್ಷ ಎನ್ನಲಾಗಿದೆ. ಕಾರಿನ ಮುಂದೆ ನಿಂತಿರುವ ಚಿಲ್ಲರ್ ಮಂಜು ಫೋಟೋವನ್ನು ಸಿಂಪ್ಲಿ ಟ್ರೋಲ್ ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ. 22 ಲಕ್ಷ ರೂಪಾಯಿ ಮೌಲ್ಯದ ಟಾಟಾ ಕರ್ವೆ ಕಾರನ್ನು ಮಂಜು ಖರೀದಿ ಮಾಡಿದ್ದಾರೆ. ಅವರ ತಾಯಿ ಕೂಲಿ ಮಾಡ್ಕೊಂಡು ಮಗನನ್ನು ಬೆಳೆಸಿದ್ದರು. ಬಡವರ ಮಕ್ಕಳು ಬೆಳೆದ್ರೆ ಹೀಗೆ ಬೆಳೆಯಬೇಕು ಅಂತ ಶೀರ್ಷಿಕೆ ಹಾಕಿದ್ದಾರೆ.
ಎಲ್ಲಾ ಪ್ಯಾಕ್ ಮಾಡ್ಕೊಂಡು ಇದ್ದಕ್ಕಿದ್ದಂತೆ ಹಿಮಾಚಲ ಪ್ರದೇಶಕ್ಕೆ ಹೊರಟ ಚಂದನ್ ಶೆಟ್ಟಿ!
ಚಿಲ್ಲರ್ ಮಂಜು ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಕೆಲವರಿಗೆ ಚಿಲ್ಲರ್ ಮಂಜು, ಇಷ್ಟು ಮೌಲ್ಯದ ಕಾರ್ ಖರೀದಿ ಮಾಡಿದ್ದು ಇಷ್ಟವಾಗಿಲ್ಲ. ಮೊದಲು ಹಣಕಾಸಿನ ಭದ್ರತೆ ಮಾಡ್ಕೊಳ್ಳಿ ನಂತ್ರ ದುಬಾರಿ ಕಾರು ಖರೀದಿ ಮಾಡಿ ಎಂಬುದು ಅನೇಕ ಬಳಕೆದಾರರ ಸಲಹೆಯಾಗಿದೆ. ಕಾರ್ ಖರೀದಿ ಮಾಡುವ ಮೊದಲು ಮನೆ ಅಥವಾ ಜಮೀನು ಖರೀದಿ ಮಾಡಿದ್ರೆ ಒಳ್ಳೆಯದಿತ್ತು ಎಂದು ಒಬ್ಬರು ಸಲಹೆ ನೀಡಿದ್ದಾರೆ. ಬಹುತೇಕ ಕಲಾವಿದರು, ಯುಟ್ಯೂಬರ್ಸ್ ಹಣ ಬರ್ತಿದ್ದಂತೆ ಕಾರ್ ಖರೀದಿಗೆ ಮುಂದಾಗ್ತಿದ್ದಾರೆ. ಆದ್ರೆ ಅವರ ಆರ್ಥಿಕ ಪರಿಸ್ಥಿತಿ ಹೇಳುವಷ್ಟು ಚೆನ್ನಾಗಿರೋದಿಲ್ಲ. ತೋರಿಕೆಯ ಅವಶ್ಯಕತೆ ಇಲ್ಲ. ಶ್ರೀಮಂತಿಕೆ ಅನ್ನೋದು ಹತ್ತು ಸಾವಿರ ಬಂದಾಗ ಅದ್ರಲ್ಲಿ ಸಾವಿರ ರೂಪಾಯಿ ಬಟ್ಟೆ ತೆಗೆದುಕೊಂಡು 9 ಸಾವಿರ ಉಳಿಸೋದೇ ಹೊರತು 9 ಸಾವಿರದ ಬಟ್ಟೆ ಧರಿಸಿ, ಸಾವಿರ ಉಳಿಸೋದಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಟ್ರೋಫಿ ನಿನ್ನದೇ ಎಂದು ಹನುಮಂತುಗೆ ಸೂಚನೆ ಕೊಟ್ರಾ ಗುರೂಜಿ; ವಿಡಿಯೋ ವೈರಲ್
ಚಿಲ್ಲರ್ ಮಂಜು ಬೆಳವಣಿಗೆಯನ್ನು ಪ್ರತಿಯೊಬ್ಬ ಬಳಕೆದಾರರು ಮೆಚ್ಚಿದ್ದಾರೆ. ಆದ್ರೆ ಬಂದ ಹಣವನ್ನು ಅವರು ದುಬಾರಿ ಕಾರ್ ಖರೀದಿಗೆ ಖರ್ಚು ಮಾಡಿದ್ದು ಕೆಲವರಿಗೆ ಪ್ರಿಯವಾಗಿಲ್ಲ. ಬಳಕೆದಾರರೊಬ್ಬರು ಚಿಲ್ಲರ್ ಮಂಜು ಗಳಿಕೆ ಬಗ್ಗೆ ಕಮೆಂಟ್ ಮಾಡಿದ್ದಾರೆ. ಒಂದು ಕಾರ್ಯಕ್ರಮಕ್ಕೆ ಹೋದ್ರೆ 10 -15 ಸಾವಿರ ಚಾರ್ಜ್ ಮಾಡ್ತಾರೆ. ತಿಂಗಳಿಗೆ 10 ಪ್ರೋಗ್ರಾಂಗೆ ಹೋದ್ರೂ ಕನಿಷ್ಠ 75 ಸಾವಿರ ಸಿಗುತ್ತೆ. ಜಾಹೀರಾತು, ಗಿಚ್ಚಿ ಗಿಲಿಗಿಲಿ, ಸಿನಿಮಾ ಸೇರಿದಂತೆ ವರ್ಷಕ್ಕೆ ಸುಮಾರು 6 ಲಕ್ಷಕ್ಕಿಂತ ಹೆಚ್ಚು ಹಣವನ್ನು ಅವರು ಗಳಿಸ್ತಾರೆ. ಕಷ್ಟಪಟ್ಟು ದುಡಿದ ಹಣದಲ್ಲಿ ತಮ್ಮಿಷ್ಟದ ವಸ್ತು ಖರೀದಿ ಮಾಡಿದ್ದಾರೆ. ಇಎಂಐ ಮೂಲಕ ಕಾರ್ ಖರೀದಿ ಮಾಡಿರಬಹುದು. ಅವರ ಕೆಲಸವನ್ನು ಶ್ಲಾಘಿಸೋಣ, ಇನ್ನಷ್ಟು ಯಶಸ್ಸು ಕಾಣಲಿ ಅಂತ ಹರಸೋಣ ಎಂದು ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ. ಮಜಾ ಭಾರತ, ಗಿಚ್ಚಿ ಗಿಲಿಗಿಲಿ ನಂತ್ರ ಕೆಲ ಸಿನಿಮಾಗಳಲ್ಲಿ ಚಿಲ್ಲರ್ ಮಂಜು ನಟಿಸಿದ್ದಾರೆ. ಉದಯೋನ್ಮುಕ ಹಾಸ್ಯ ಕಲಾವಿದ ಚಿಲ್ಲರ್ ಮಂಜು ಕೆರೆ ಭೇಟೆ, ದಿಲ್ ದಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.