
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಆರಂಭದಿಂದ ಎಲಿಮಿನೇಟ್ ಆಗಿ ಹೊರ ಬರುವವರೆಗೂ ಸೀರೆ ಮತ್ತು ಚೂಡಿದಾರ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೆ ಹೆಚ್ಚಾಗಿ ಶಾಪಿಂಗ್ ಮಾಡಲು ಇಷ್ಟವಿಲ್ಲದ ಕಾರಣ ಪದೇ ಪದೇ ಅದೇ ಬಟ್ಟೆಯನ್ನು ತೊಳೆದು ಬಳಸಿಕೊಳ್ಳುತ್ತಿದ್ದರಂತೆ. ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಬಿಗ್ ಬಾಸ್ ಮನೆಯಲ್ಲಿ ಬೇರೆ ಸ್ಪರ್ಧಿಗಳು ಸಾಕಷ್ಟು ಬಾರಿ ಚರ್ಚೆ ಮಾಡಿದ್ದಾರೆ. ಒಮ್ಮೆ ಹಾಕಿಕೊಂಡಿರುವ ಬಟ್ಟೆಯನ್ನು ಮತ್ತೊಮ್ಮೆ ಹಾಕಿಕೊಳ್ಳಬಾರದು ಅಂತ. ಕೆಲವರು ಹಾಗೆ ಮಾಡಿದ್ದಾರೆ ಕೂಡ.ಬಿಗ್ ಬಾಸ್ ಮನೆಗೆ ಅಂತ ನಾನು ಒಂದು ರೂಪಾಯಿ ಕೂಡ ಶಾಪಿಂಗ್ ಮಾಡಿಲ್ಲ. ಮನೆಯಲ್ಲಿ ಇದ್ದ ಸೀರೆ ಮತ್ತು ಚೂಡಿದಾರಗಳನ್ನು ಪ್ಯಾಕ್ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದೆ. ಅದನ್ನು ಮತ್ತೆ ಮತ್ತೆ ಬಳಸಿದ್ದೀನಿ. ನಾನು ಬಟ್ಟೆಗಳನ್ನು ತೊಳೆದುಕೊಳ್ಳುತ್ತಿದ್ದ ಅದನ್ನು ಮತ್ತೆ ಧರಿಸುತ್ತಿದ್ದೆ. ಅಲ್ಲಿದ್ದ ಹೆಚ್ಚಿನವರು ಒಮ್ಮೆ ಹಾಕಿದ ಬಟ್ಟೆಯನ್ನು ಮತ್ತೊಮ್ಮೆ ಹಾಕುತ್ತಿರಲಿಲ್ಲ ಮನೆಗೆ ಕಳುಹಿಸುತ್ತಿದ್ದರು. ಮತ್ತೆ ಹೊಸ ಬಟ್ಟೆಗಳು ಬರುತ್ತಿತ್ತು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚೈತ್ರಾ ಮಾತನಾಡಿದ್ದಾರೆ.
ಚೈತ್ರಾ ಕುಂದಾಪುರ ಜೊತೆ ಮದುವೆ ಎಂದು ಟ್ರೋಲ್ ಮಾಡಿದವರಿಗೆ ಬೀಪ್ ಪದಗಳಿಂದ ಕ್ಲಾಸ್ ತೆಗೆದುಕೊಂಡ ಕಿರಿಕ್ ಕೀರ್ತಿ!
'ಪ್ರತಿ ಶುಕ್ರವಾರ ನಮಗೆ ಬುಟ್ಟಿ ತುಂಬಾ ಬಟ್ಟೆಗಳು ಬರುತ್ತಿತ್ತು. ನಾನು ಯಾವತ್ತೂ ಊರಿನಿಂದ ಬಟ್ಟೆಗಳನ್ನು ತರಿಸಿಕೊಳ್ಳುತ್ತಿರಲಿಲ್ಲ ಏಕೆಂದರೆ 450 ಕಿಮೀ.ಗಳಿಂದ ಬಟ್ಟೆ ತರಿಸಿಕೊಳ್ಳುವುದು ಮನೆಯವರಿಗೆ ಬಹಳ ಕಿರಿಕಿರಿ ಆಗುತ್ತಿತ್ತು.
ನಮ್ಮ ಇಲ್ಲಿನ ವ್ಯವಹಾರಗಳನ್ನು ನೋಡಿಕೊಳ್ಳುವುದು ತುಂಬಾ ಇರುತ್ತದೆ. ಅಲ್ಲಿಂದ ಬಟ್ಟೆ ತರಿಸುವುದು ಮತ್ತು ಅದನ್ನು ವಾಪಸ್ ಕಳುಹಿಸುವುದು ತುಂಬಾ ಕಿರಿಕಿರಿ. ನನಗೆ ಬಟ್ಟೆಗಳ ಮೇಲೆ ಯಾವತ್ತೂ ಆಸಕ್ತಿ ಇಲ್ಲ. ನಾನು ನಂಬುವುದು ಒಂದೇ ಬೇರೆ ಬೇರೆ ಬಟ್ಟೆಗಳನ್ನು ಹಾಕುವುದರಿಂದ ಜನರು ನಿಮ್ಮನ್ನು ಅಳಿಬಾರದು. ಬಟ್ಟೆಯಿಂದ ನಿಮ್ಮ ವ್ಯಕ್ತಿತ್ವವನ್ನು ಅಳಿತಾರೆ ಅಂದಾಗ ಅದು ತಪ್ಪು. ಸ್ವಾಮಿ ವಿವೇಕನಂದರು ಒಂದು ಕಡೆ ಹೇಳಿದ್ದಾರೆ, ವಿದೇಶಕ್ಕೆ ಹೋದಾಗ ನೀವು ಯಾಕೆ ಕೇಸರಿ ಬಟ್ಟೆಗಳನ್ನು ಹಾಕಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ ಯಾಕೆ ನಮ್ಮಂತೆ ಬೇರೆ ಬೇರೆ ಬಟ್ಟೆಗಳನ್ನು ಹಾಕಿಕೊಳ್ಳುವುದಿಲ್ಲ ನಮ್ಮನ್ನು ನೋಡಿ ಸೂಟು ಬೂಟು ಹಾಕುತ್ತೀವಿ ಅಂತ ವಿದೇಶಿಗ ಪ್ರಶ್ನೆ ಮಾಡಿದಾಗ ಸ್ವಾಮಿಗಳು ಒಂದು ಮಾತು ಹೇಳುತ್ತಾರೆ. ನಿಮ್ಮ ದೇಶದಲ್ಲಿ ಟೈಲರ್ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳಿಯುತ್ತಾನೆ ಆದರೆ ನನ್ನದ ದೇಶದಲ್ಲಿ ವ್ಯಕ್ತಿತ್ವನೇ ಜನರ ಮನಸ್ಸು ಗೆಲ್ಲುತ್ತದೆ. ಆ ತರ ಚಿಂತನೆಗಳನ್ನು ಆದರ್ಶವಾಗಿ ಇಟ್ಟುಕೊಂಡು ಬದುಕಿದವಳು ನಾನು' ಎಂದು ಚೈತ್ರಾ ಹೇಳಿದ್ದಾರೆ.
ಈ ಕಾರಣಕ್ಕೆ ಪದೇ ಪದೇ ಕೊರಗಜ್ಜನ ಮೊರೆ ಹೋಗುತ್ತಿದ್ರು ಚೈತ್ರಾ ಕುಂದಾಪುರ; ಸತ್ಯ ಲೀಕ್ ಆಗೇಬಿಡ್ತು
'ಬಟ್ಟೆ ಬರೆಗಳು ಯಾವತ್ತೂ ನಮ್ಮ ವ್ಯಕ್ತಿತ್ವಗಳನ್ನು ನಿರ್ಧಾರ ಮಾಡುವ ಅಥವಾ ವ್ಯಕ್ತಿಗೆ ತೂಕ ಕೊಡುವ ವಿಚಾರ ಅನಿಸಿಲ್ಲ. ನಾನು ಮೇಕಪ್ ಮಾಡುವುದಿಲ್ಲ ಡ್ರೆಸ್ ಹಾಕಿಕೊಳ್ಳುವುದಿಲ್ಲ ಅಂತ ವೀಕೆಂಡ್‌ನಲ್ಲಿ ಬಹಳ ಚರ್ಚೆ ಕೂಡ ಆಗಿದೆ. ಒಂದು ಸೀರೆ ಲೈಟ್‌ವೇಟ್ ಇದ್ದು ಕಂಫರ್ಟ್ ಇದ್ದರೆ ಪದೇ ಪದೇ ಧರಿಸುತ್ತೀನಿ. ನಾನು ಅದೇ ಬಟ್ಟೆಗಳನ್ನು ತೊಳೆದು ಪದೇ ಹಾಕಿಕೊಳ್ಳುತ್ತಿದ್ದೆ. ಮನೆಯಿಂದ ಬಟ್ಟೆ ಕಳುಹಿಸಿಕೊಟ್ಟರು ಕೂಡ ದಯವಿಟ್ಟು ಬಟ್ಟೆ ಕೊಡಬೇಡಿ ಎನ್ನುತ್ತಿದ್ದೆ. ನಾನು ಬಂದಾಗ ಸೂಟ್‌ಕೇಸ್‌ನಲ್ಲಿ ಎಷ್ಟು ಬಟ್ಟೆ ತಂದಿದ್ದೆ ಅಷ್ಟೇ ಬಟ್ಟೆಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದೀನಿ. ನಾನು ಕಾರ್ಯಕ್ರಮಗಳಿಗೆ ಸೀರೆಗಳನ್ನು ಹೆಚ್ಚಾಗಿ ಧರಿಸುತ್ತಿದ್ದೆ ಅಲ್ಲದೆ ಅರಿಶಿಣ ಕುಂಕುಮದಲ್ಲಿ ಹಲವು ಸೀರೆಗಳು ಬಂದಿದೆ' ಎಂದಿದ್ದಾರೆ ಚೈತ್ರಾ ಕುಂದಾಪುರ.
ಬಿಗ್ ಬಾಸ್ ಮನೆಗೆ ಪೊಲೀಸರು ಬಂದಿದ್ದು ನಿಜ; ಸತ್ಯ ಬಿಚ್ಚಿಟ್ಟ ಚೈತ್ರಾ ಕುಂದಾಪುರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.