ಮದುವೆ ಆಗಿ 8 ವರ್ಷ ಕಳೆದಿದೆ; ಪ್ರಪೋಸ್‌ ಅನ್ನೋದು ಆಗೇ ಇಲ್ಲ ಎಂದ ಗೌತಮಿ ಜಾದವ್

Published : Jan 23, 2025, 08:08 AM IST
ಮದುವೆ ಆಗಿ 8 ವರ್ಷ ಕಳೆದಿದೆ; ಪ್ರಪೋಸ್‌ ಅನ್ನೋದು ಆಗೇ ಇಲ್ಲ ಎಂದ ಗೌತಮಿ ಜಾದವ್

ಸಾರಾಂಶ

ಬಿಗ್ ಬಾಸ್‌ನಿಂದ ಹೊರಬಂದ ಗೌತಮಿ ಜಾದವ್, ವನದುರ್ಗೆ ದರ್ಶನ ಪಡೆದು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಎಂಟು ವರ್ಷಗಳ ದಾಂಪತ್ಯ ಜೀವನದಲ್ಲಿ ಪತಿ ಅಭಿ ಜೊತೆ ಎರಡು ವರ್ಷ ಪ್ರೀತಿಸಿದ್ದಾಗಿ ತಿಳಿಸಿದ್ದಾರೆ. ಪ್ರೀತಿಯ ಪ್ರಸ್ತಾಪವಿಲ್ಲದೆ, ಮಾತುಕತೆಯ ಮೂಲಕವೇ ಪ್ರೀತಿ ಚಿಗುರಿದ್ದಾಗಿ ಹೇಳಿದ್ದಾರೆ. ಸಿನಿಮಾ ಸೆಟ್‌ನಲ್ಲಿ ಭೇಟಿಯಾದ ಇವರು, ಮೊಬೈಲ್‌ನಲ್ಲಿ ಫೋಟೋ ಕಳುಹಿಸುವ ಮೂಲಕ ಸಂಬಂಧ ಆರಂಭವಾಗಿದೆ ಎಂದು ಅಭಿ ತಿಳಿಸಿದ್ದಾರೆ.

ಬಿಗ್ ಬಾಸ್ ಸೀಶನ್ 11ರ ಸ್ಪರ್ಧಿ ಗೌತಮಿ ಜಾದವ್ ಫಿನಾಲೆ ವಾರಕ್ಕೆ ಕಾಲಿಡುವ ಮುನ್ನವೇ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಹೊರ ಬರುತ್ತಿದ್ದಂತೆ ತಮ್ಮ ಆರಾಧ್ಯ ದೈವ ಮಂಗಳೂರಿನ ವನದುರ್ಗೆ ದರ್ಶನ ಪಡೆಯುತ್ತಾರೆ. ಅದಾದ ಮೇಲೆ ಸಾಲು ಸಾಲು ಸಂದರ್ಶನಗಳಲ್ಲಿ ಭಾಗಿಯಾಗುತ್ತಾರೆ. ಗೌತಮಿ ಜಾದವ್ ಪತಿ ಅಭಿ ಕೂಡ ಸಿನಿಮಾ ಕ್ಷೇತ್ರದಲ್ಲಿ ಇರುವ ಕಾರಣ ಹಲವರಿಗೆ ಪರಿಚಯವಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗೌತಮಿ ಅಭಿ ಅಭಿ ಅಂತ ಜಪ ಮಾಡುವುದನ್ನು ಕೂಡ ನೋಡಿದ್ದೀರಿ. ಆದರೆ ಇವರಿಬ್ಬರು ಎಷ್ಟು ವರ್ಷ ಪ್ರೀತಿಸಿದ್ದತು ಎಷ್ಟು ವರ್ಷ ಲವ್ ಮಾಡಿದ್ದರು ಎಂದು ಈಗ ರಿವೀಲ್ ಮಾಡಿದ್ದಾರೆ. 

'ಮದುವೆಗೂ ಮುನ್ನ ಎರಡು ವರ್ಷ ಲವ್  ಮಾಡಿದ್ದೀವಿ ಆಮೇಲೆ ಮದುವೆ ಮಾಡಿಕೊಂಡಿದ್ದು. ಈಗ 8 ವರ್ಷಗಳು ಕಳೆದಿದೆ. ನಮ್ಮಿಬ್ಬರ ನಡುವೆ ಲವ್ ಪ್ರಪೊಸಲ್ ಆಗಿಲ್ಲ ಯಾರೇ ಪ್ರಶ್ನೆ ಕೇಳಿದ್ದರೂ ನಮಗೆ ಉತ್ತರನೇ ಇರುವುದಿಲ್ಲ. ಮಾತನಾಡುತ್ತಾ ಮಾತನಾಡುತ್ತ ಒಬ್ಬರಿಗೊಬ್ಬರು ಇಷ್ಟ ಪಡುತ್ತಿದ್ದೀವಿ ಅಂತ ಗೊತ್ತಾಗುತ್ತದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಗೌತಮಿ ಮಾತನಾಡಿದ್ದಾರೆ. ಬಿಗ್ ಬಾಸ್‌ ಫ್ಯಾಮಿಲಿ ರೌಂಡ್ ಆಯೋಜಿಸಿದ್ದಾಗ ಗಾರ್ಡನ್ ಏರಿಯಾದಲ್ಲಿ ಅಭಿ ಪ್ರಪೋಸ್ ಮಾಡಿದ್ದರು. ಮಂಡಿಯೂರಿ ಗೌತಮಿಗೆ ಹೂ ಕೊಟ್ಟು ಅಂದೇ ವೆಡ್ಡಿಂಗ್ ಆನಿವರ್ಸರಿ ಆಗಿದ್ದ ಕಾರಣ ಕೇಕ್ ಕಟ್ ಮಾಡಿಸಿದ್ದರು. ಅದಕ್ಕೂ ಮುನ್ನ ನಮ್ಮಿಬ್ಬರ ನಡುವೆ ಯಾವುದೇ ರೀತಿಯಲ್ಲಿ ಪ್ರಪೋಸಲ್ ನಡೆದಿಲ್ಲ ಎಂದು ಹೇಳಿದ್ದಾರೆ. 

ಹೌದು ನಾನು ಮರಾಠಿ ಆದರೆ ಕನ್ನಡ ತುಂಬಾ ಚೆನ್ನಾಗಿ ಬರುತ್ತೆ; ಯಮುನಾ ಶ್ರೀನಿಧಿಗೆ ತಿರುಗೇಟು ಕೊಟ್ಟ ಗೌತಮಿ

'ಮೊದಲ ಸಲ ಗೌತಮಿ ಅವರನ್ನು ನೋಡಿದಾಗ ಏನೂ ಅನಿಸಲಿಲ್ಲ. ಆದರೆ ಸಿನಿಮಾ ಅಗ್ರಿಮೆಂಟ್ ಸಹಿ ಮಾಡಿ ಗೌತಮಿ ಹೊರ ಬರುತ್ತಿದ್ದರು ಆಗ ನಾನು ಸೈನ್ ಮಾಡಲು ಹೋಗುತ್ತಿದ್ದೆ. ಆದರೆ ಮೊದಲು ಭೇಟಿ ಆಗಿದ್ದು ಸಿನಿಮಾ ಸೆಟ್‌ನಲ್ಲಿ. ಪ್ರತಿಯೊಬ್ಬರ ಜೊತೆ ಗೌತಮಿ ಮಾತನಾಡುತ್ತಿದ್ದ ರೀತಿ ನನಗೆ ಇಷ್ಟವಾಗಿತ್ತು ಆದರೆ ನಾವು ಮಾತನಾಡಿರುವುದಿಲ್ಲ. ನಮ್ಮಿಬ್ಬರ ನಡುವೆ ಏನೂ ಮಾತು ಬಂತು ಅಂತ ಮಾತನಾಡುತ್ತಿರಲಿಲ್ಲ. ಆಕೆಗೆ ಆಗ ನಾನು ಕ್ಯಾಮೆರಾ ಮ್ಯಾನ್ ಆಂಡ್ ಹೀರೋಯಿನ್ ಫೀಲ್ ಇತ್ತು. ಗ್ರೂಪ್‌ನಲ್ಲಿ ನಂಬರ್‌ ತೆಗೆದುಕೊಂಡು ಅವರಿಗೆ ಮೊದಲು ಮೆಸೇಜ್ ಮಾಡಿದ್ದೇ ಫೋಟೋ ಕಳುಹಿಸುವುದು. ಗೌತಮಿ ಫೋಟೋವನ್ನು ನಾನು ಮೊಬೈಲ್ ವಾಲ್‌ಪೇಪರ್‌ ಹಾಕಿಕೊಂಡಿದ್ದರು ಯಾಕೆ ಅಂತ ಕೇಳಿದಾಗ ನಾನು ಇಷ್ಟವಾದ ಫ್ರೇಮ್ ಎಂದು ಹೇಳಿದ್ದೆ' ಎಂದಿದ್ದಾರೆ ಗೌತಮಿ ಪತಿ ಅಭಿ. 

ಬಿಗ್ ಬಾಸ್‌ ಕೊಟ್ಟ ಪೇಮೆಂಟ್‌, ಗಂಡ ಮಾಡಿದ ಶಾಪಿಂಗ್; ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ಗೌತಮಿ ಜಾದವ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!