ಕಲರ್ಸ್‌ ಕನ್ನಡದಲ್ಲಿ ಇನ್ನು ಮುಂದೆ ವಾರದ 7 ದಿನವೂ ಸೀರಿಯಲ್‌ ಮನೋರಂಜನೆ!

By Gowthami K  |  First Published Nov 13, 2024, 6:02 PM IST

ಕಲರ್ಸ್‌ ಕನ್ನಡ ವಾಹಿನಿಯು ವಾರದ 7 ದಿನಗಳಲ್ಲಿ ಸೀರಿಯಲ್‌ಗಳನ್ನು ಪ್ರಸಾರ ಮಾಡಲಿದೆ. ಈ ಹಿಂದೆ ವಾರದ 5 ದಿನ ಮಾತ್ರ ಪ್ರಸಾರವಾಗುತ್ತಿದ್ದ ಸೀರಿಯಲ್‌ಗಳು ಈಗ ವಾರದ 7 ದಿನವೂ ಪ್ರಸಾರವಾಗಲಿವೆ. ಬಿಗ್‌ಬಾಸ್‌ ಕನ್ನಡ 11ರ ನಂತರ ಈ ಬದಲಾವಣೆ ಜಾರಿಗೆ ಬಂದಿದೆ.


ಕಲರ್ಸ್‌ ಕನ್ನಡ ವಾಹಿನಿಯಲ್ಲಿ ವಾರದ 5 ದಿನ ಮಾತ್ರವೇ  ಈ ಹಿಂದೆ ಸೀರಿಯಲ್‌ ಪ್ರಸಾರವಾಗುತ್ತಿತ್ತು. ಬಿಗ್‌ಬಾಸ್‌ ಕನ್ನಡ 11ರ ಬಳಿಕ ಶನಿವಾರ 9 ಗಂಟೆಯವರೆಗೆ ಸೀರಿಯಲ್‌ ಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇದೀಗ ಭಾನುವಾರವೂ 9 ಗಂಟೆಯವರೆಗೆ ಸೀರಿಯಲ್‌ ಪ್ರಸಾರ ಮಾಡಿ ವಾರದ 7 ದಿನವೂ ಮನರಂಜನೆ ಇರಲಿದೆ.

ವಿದೇಶದಲ್ಲಿ ಐಷಾರಾಮಿ ಮನೆಗಳನ್ನು ಹೊಂದಿರುವ ಬಾಲಿವುಡ್ ತಾರೆಯರು

Tap to resize

Latest Videos

undefined

ವಾರದ ಏಳು ದಿನವೂ ಭರ್ತಿ ಮನರಂಜನೆ ನೀಡಲು ಕಲರ್ಸ್‌ ಕನ್ನಡದ ಆರು ಧಾರಾವಾಹಿಗಳು ಮುಂದಾಗಿದೆ. ಕರಿಮಣಿ ಧಾರಾವಾಹಿ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದ್ದು, ಇನ್ನು ವಾರದ 7 ದಿನವೂ ಇದೇ ಸಮಯದಲ್ಲಿ ಮೂಡಿ ಬರಲಿದೆ.

ಮೆಗಾ ಕುಟುಂಬದ ಕಂಡೀಷನ್ ಮಧ್ಯೆಯೇ ವರುಣ್ ತೇಜ್ ಪತ್ನಿ ಲಾವಣ್ಯ ತ್ರಿಪಾಠಿ ಸಿನೆಮಾಗೆ ರೀ ಎಂಟ್ರಿ

ಇನ್ನು 6.30 ಗೆ ದೃಷ್ಟಿಬೊಟ್ಟು, 7 ಗಂಟೆಗೆ ಭಾಗ್ಯಲಕ್ಷ್ಮಿ, 7.30 ಲಕ್ಷ್ಮಿ ಬಾರಮ್ಮ, 8 ಗಂಟೆಗೆ ನಿನಗಾಗಿ, 8.30ಕ್ಕೆ ಶ್ರೀಗೌರಿ, 9 ಗಂಟೆಗೆ ರಾಮಾಚಾರಿ ಪ್ರಸಾರವಾಗುತ್ತಿದೆ. ಶನಿವಾರ ಮತ್ತು ಭಾನುವಾರ ರಾಮಾಚಾರಿ ಸೀರಿಯಲ್‌ ಪ್ರಸಾರವಾಗುವುದಿಲ್ಲ. ಏಕೆಂದರೆ ವೀಕೆಂಡ್‌ ನಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಕಿಚ್ಚನ ಶೋ 9 ಗಂಟೆಗೆ ಪ್ರಸಾರವಾಗಲಿದ್ದು, ಮಿಕ್ಕ 5 ದಿನ ಬಿಗ್‌ಬಾಸ್‌ 9.30ರಿಂದ ಪ್ರಸಾರವಾಗುತ್ತಿದೆ. ಹೀಗಾಗಿ ರಾಮಾಚಾರಿ ಸೀರಿಯಲ್‌ ಒಂದನ್ನು 
 

click me!