ಸೀತಾಗೆ ಜೈಲು, ತಾತಾ ಗೋತಾ, ಸೀರಿಯಲ್ ಸ್ಟಾಪ್ ಆಗ್ತಿದ್ಯಾ? ಸೀತಾರಾಮದ ಹೈ ಡ್ರಾಮಾಗೆ ಬೇಸತ್ತ ನೆಟ್ಟಿಗರು!

By Bhavani Bhat  |  First Published Nov 13, 2024, 3:37 PM IST

 ಸೀತಾರಾಮ ಸೀರಿಯಲ್‌ನಲ್ಲಿ ಸೀತಾ ಜೈಲು ಪಾಲಾಗಿದ್ದಾಳೆ. ಭಾರ್ಗವಿ ತಾತಂಗೆ ಟ್ಯಾಬ್ಲೆಟ್ ಹಾಕಿ ಮಲಗಿಸಿಬಿಟ್ಟಿದ್ದಾಳೆ. ಸೀರಿಯಲ್ ಮುಗಿಸಿ ಬಿಡಿ ಅಂತ ಕೈ ಮುಗೀತಿದ್ದಾರೆ ವೀಕ್ಷಕರು. ಸಿಹಿಯ ಅಳು ಅವರಿಗೆ ಬೇಸರ ತಂದಿದೆ.



ಸೀತಾರಾಮ ಸೀರಿಯಲ್‌ನಲ್ಲಿ ಸಡನ್ನಾಗಿ ಹೈ ಡ್ರಾಮಾ ನಡೆಯುತ್ತಿದೆ. ಭಾರ್ಗವಿಯ ಷಡ್ಯಂತ್ರಕ್ಕೆ ಮೂರು ಜೀವಗಳು ವಿಲವಿಲ ಒದ್ದಾಡುವಂತಾಗಿದೆ. ಸೀತಾ ಮತ್ತು ರಾಮನ ವಿರುದ್ಧ ಕೇವಲ ಮೇಘಶ್ಯಾಮ್‌ ಮತ್ತು ಶಾಲಿನಿ ಮಾತ್ರ ತಿರುಗಿ ಬಿದ್ದಿಲ್ಲ. ಇತ್ತ ಭಾರ್ಗವಿಯೂ ಸೀತಾಳಿಗೆ ತಕ್ಕ ಪಾಠ ಮಾಡಬೇಕೆಂಬ ನಿಟ್ಟಿನಲ್ಲಿದ್ದಾಳೆ. ಇದಕ್ಕಾಗಿ ಏನೇನೆಲ್ಲ ಸರ್ಕಸ್ ಮಾಡಿದ್ದಾಳೆ. ಪ್ರತೀ ಸಲ ಅವಳ ಪ್ಲಾನ್ ಸೀತಾ ಮತ್ತು ರಾಮರಿಗೆ ಪಾಸಿಟಿವ್ ಆಗಿದೆ. ಭಾರ್ಗವಿಗೆ ಏಟು ಬೀಳುವಂತಾಗಿದೆ. ಇದೀಗ ಮುಂದುವರಿದು, ಸೀತಾಳನ್ನು ಜೈಲಿಗೆ ಕಳಿಸಲು ನಿಟ್ಟಿನಲ್ಲಿ ದುಷ್ಟರೆಲ್ಲ ಸೇರಿ ಪ್ಲಾನ್‌ ಮಾಡಿದ್ದಾರೆ. ಆ ಪ್ಲಾನ್‌ನ ಸೂರ್ತಧಾರಿ ಭಾರ್ಗವಿ. ಈ ಪ್ಲಾನ್‌ ಸಕ್ಸಸ್‌ ಆಗಲು, ನೇರವಾಗಿ ಚಾಂದಿನಿ ಮತ್ತು ಶಾಲಿನಿಗೆ ಸಾಲು ಸಾಲು ಐಡಿಯಾ ಕೊಡುತ್ತಿದ್ದಾಳೆ ಭಾರ್ಗವಿ. ಅದರಂತೆ, ಭಾರ್ಗವಿ ಮಾತಿನ ಪ್ರಕಾರವೇ ಸಿಹಿ ಇದ್ದ ಕೋಣೆಯ ಲಾಕ್‌ ಓಪನ್‌ ಮಾಡಿಟ್ಟಿದ್ದಾರೆ.

ಹೀಗೆ ಬಾಗಿಲು ತೆರೆದು ಇಡುತ್ತಿದ್ದಂತೆ, ಇದನ್ನು ಗಮನಿಸಿದ ಸಿಹಿ, ಮನೆಯಲ್ಲಿನ ಯಾರ ಗಮನಕ್ಕೂ ಬಾರದಂತೆ, ನೇರವಾಗಿ ಸೀತಾ ಮತ್ತು ರಾಮನ ಬಳಿಗೆ ತೆರಳಿದ್ದಾಳೆ. ಸಿಹಿಯನ್ನು ನೋಡಲು ಸೀತಾ ಮತ್ತು ರಾಮ್‌ ಬರಬೇಕು ಎನ್ನುವಷ್ಟರಲ್ಲಿಯೇ, ಸಿಹಿಯೇ ಬಂದಿದ್ದನ್ನು ನೋಡಿ ಖುಷಿಯಲ್ಲಿದ್ದಾರೆ. ನಾನು ಆ ಮನೆಗೆ ಹೋಗಲ್ಲ ಸೀತಮ್ಮ. ಅಲ್ಲಿ ಊಟಕ್ಕೂ ಏನೂ ಇಲ್ಲ. ಆಟ ಆಡುವುದಕ್ಕೂ ಯಾರೂ ಇಲ್ಲ. ಎಲ್ಲರೂ ಬೈಯುತ್ತಾರೆ ಎಂದು ನೋವನ್ನು ಹೇಳಿಕೊಂಡಿದ್ದಾಳೆ. ಇತ್ತ ಭಾರ್ಗವಿಯ ಪ್ಲಾನ್‌ ವರ್ಕೌಟ್‌ ಆಗಿದೆ. ತಮ್ಮ ಪ್ಲಾನ್‌ನಂತೆ ಸಿಹಿ ಮನೆಯಿಂದ ಓಡಿಹೋಗಿ ಸೀತಾ ಮಡಿಲು ಸೇರಿದ್ದಾಳೆ.

Tap to resize

Latest Videos

undefined

ಲಕ್ಷ್ಮೀ ನಿವಾಸದಲ್ಲಿ ಮಹಾತಿರುವು : ಜಾಹ್ನವಿ ಮುಂದೆ ಬಯಲಾಗುತ್ತಿದೆ ಸೈಕೋ ಜಯಂತ್ ಮುಚ್ಚಿಟ್ಟ ರಹಸ್ಯ!

ಭಾರ್ಗವಿ ಇದಕ್ಕೂ ಮೊದಲು ಕಂತ್ರಿ ಐಡಿಯಾವನ್ನು ಶಾಲಿನಿಗೆ ಕೊಟ್ಟಿದ್ದಾಳೆ. ಸಿಹಿ ನಿಮ್ಮ ಕಣ್ಣು ತಪ್ಪಿಸಿ, ಸೀತಾಳ ಮಡಿಲು ಸೇರಬೇಕು. ಇಬ್ಬರೂ ಒಟ್ಟಿಗೆ ಇದ್ದಾಗಲೇ ನೀವು ನೇರವಾಗಿ ಪೊಲೀಸ್‌ ಠಾಣೆಗೆ ದೂರು ನೀಡಿ. ಆಗ ಪೊಲೀಸರು ಬಂದು ಸೀತಾಳನ್ನು ಬಂಧಿಸಿ ಕರೆದೊಯ್ಯುತ್ತಾರೆ. ಆಗ ಸಿಹಿ ನಿಮ್ಮ ಜತೆಯಲ್ಲಿಯೇ ಇರ್ತಾಳೆ ಎಂದು ಶಾಲಿನಿ ಮತ್ತು ಚಾಂದಿನಿಗೆ ಭಾರ್ಗವಿ ಐಡಿಯಾ ಕೊಟ್ಟಿದ್ದಳು. ಆ ಪ್ಲಾನ್‌ ಪ್ರಕಾರವೇ ಎಲ್ಲವೂ ನಡೆದಿದೆ.

ಇತ್ತ ಮನೆಯಲ್ಲಿ ಸಿಹಿ ಕಾಣಿಸ್ತಿಲ್ಲ ಎಂದು ರಂಪಾಟ ಮಾಡಿ, ಶ್ಯಾಮ್‌ ಮುಂದೆಯೂ ಸೀತಾ ಸಿಹಿಯನ್ನು ಕರೆದೊಯ್ದಿದ್ದಾಳೆ ಎಂದು ಹೇಳಿದ್ದಾಳೆ. ಇಷ್ಟಾಗಿದ್ದೇ ತಡ ಸೀತಾಳ ಮನೆಗೆ ಪೊಲೀಸರ ಸಮೇತ ಬಂದಿದ್ದಾರೆ. ಸಿಹಿಯನ್ನು ಕರೆದೊಯ್ಯುವ ವಿಚಾರಕ್ಕೆ ಶ್ಯಾಮ್‌ ಮತ್ತು ರಾಮ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಅಲ್ಲೇ ಇದ್ದ ಅಶೋಕ್‌ ಸಹ ಶ್ಯಾಮ್‌ ವಿರುದ್ಧ ಕೂಗಾಡಿದ್ದಾನೆ. ಶ್ಯಾಮನ ಕೊರಳಪಟ್ಟಿ ಹಿಡಿದು ಆವಾಜ್‌ ಹಾಕಿದ್ದಾನೆ.

ವೈರಲ್‌ಗಾಗಿ ಬಾಯ್‌ಫ್ರೆಂಡ್ ಜೊತೆಗಿನ ಖುಲ್ಲಂ ಖುಲ್ಲಾ ವಿಡಿಯೋ ಲೀಕ್ ಮಾಡಿದ ರೀಲ್ಸ್ ರಾಣಿ!

ಇತ್ತ ಯಾರ ಮಾತನ್ನೂ ಕೇಳದ ಪೊಲೀಸರು ಸೀತಾಳನ್ನು ಕರೆದುಕೊಂಡು ಠಾಣೆಯತ್ತ ನಡೆದಿದ್ದಾರೆ. ರಾಮ್‌ ಏನೂ ತೋಚದೆ ನಿಂತಿದ್ದಾನೆ. ಮತ್ತೊಂದು ಕಡೆ ಪ್ಲಾನ್‌ ಸಕ್ಸಸ್‌ ಆದ ಖುಷಿಯಲ್ಲಿ ಭಾರ್ಗವಿ ಹಾಲು ಕುಡಿದಷ್ಟು ಸಂತಸದಲ್ಲಿದ್ದಾಳೆ. ಈ ಕಡೆ ತಾತ ಸೂರಿಗೆ ಟ್ಯಾಬ್ಲೆಟ್ ಹಾಕಿ ಮಲಗಿಸಿದ್ದಾಳೆ.

ಸೋ ಸೀರಿಯಲ್‌ನಲ್ಲಿ ವೀಕ್ಷಕರು ಜೀರ್ಣಿಸಿಕೊಳ್ಳಲಾಗದಷ್ಟು ಹೈ ಡ್ರಾಮಾ ನಡೆದಿದೆ. ಈ ಡ್ರಾಮಾಗೆ ಹೇಗೆ ಬ್ರೇಕ್ ಬೀಳುತ್ತೆ ಅಂತ ಗೊತ್ತಿಲ್ಲ. ಆದರೆ ಈ ಡ್ರಾಮಾನ ನೋಡಿ ವೀಕ್ಷಕರಿಗೆ ಸಾಕಾಗಿ ಹೋಗಿದೆ. ಅದರಲ್ಲೂ ಸಿಹಿಯ ನೋವು, ಕಣ್ಣೀರನ್ನು ಅವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಏನೇನೆಲ್ಲ ಕಾಮೆಂಟ್ ಮಾಡ್ತಿದ್ದಾರೆ. ಒಬ್ಬರಂತೂ 'ಸೀತಾಗೆ ಜೈಲು, ತಾತಾ ಗೋತಾ, ಮುಗೀತಲ್ಲಾ ಸೀರಿಯಲ್' ಅನ್ನುತ್ತಿದ್ದಾರೆ. ಆದರೂ ಈ ಡ್ರಾಮ ಹೈ ಟಿಆರ್‌ಪಿ ತರುತ್ತೆ ಅನ್ನೋ ವಿಶ್ವಾಸ ಸೀರಿಯಲ್ ಟೀಮ್‌ಗಿದೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!