ನನ್ನ ಪೋಟೋಗೆ ರೇಟ್‌ ಫಿಕ್ಸ್‌ ಮಾಡಿ ಹೋಗ್ತೀರಾ ಅಂತ ಕಾಲ್ ಮಾಡಿದ್ರು; ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟ ನಮ್ರತಾ ಗೌಡ

Published : Nov 13, 2024, 03:40 PM IST
ನನ್ನ ಪೋಟೋಗೆ ರೇಟ್‌ ಫಿಕ್ಸ್‌ ಮಾಡಿ ಹೋಗ್ತೀರಾ ಅಂತ ಕಾಲ್ ಮಾಡಿದ್ರು; ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟ ನಮ್ರತಾ ಗೌಡ

ಸಾರಾಂಶ

ನಟಿಯರ ಬೆನ್ನು ಹಿಂದೆ ನಡೆಯುತ್ತಿರುವ ಮೋಸವನ್ನು ತೆರೆದಿಟ್ಟ ನಮ್ರತಾ ಗೌಡ. ಈವೆಂಟ್‌ ಅನ್ನೋ ಪದ ಭಯ ಹುಟ್ಟಿಸಿದೆ....

ಕನ್ನಡ ಕಿರುತೆರೆಯ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಮೊದಲ ಸಲ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ 'ಕಮಿಟ್‌ಮೆಂಟ್‌' ಮತ್ತು 'ಈವೆಂಟ್‌'ಗಳ ಮತ್ತೊಂದು ಮುಖವನ್ನು ರಿವೀಲ್ ಮಾಡಿದ್ದಾರೆ. 

'ನನ್ನನ್ನು ಚಿಕ್ಕಂದಿನಿಂದಲೂ ಕಿರುತೆರೆ, ಚಿತ್ರರಂಗದವರು ನೋಡಿದ್ದಾರೆ...ನಾನು ಚಿತ್ರೀಕರಣಕ್ಕೆ ಹೋಗುವಾಗಲೂ ಅಪ್ಪ ಅಮ್ಮ ಜೊತೆ ಬರುತ್ತಿದ್ದರು. ಹಾಗಾಗಿ ಬಹಳ ಸುರಕ್ಷಿತ ವಾತಾವರಣದಲ್ಲಿ ಇದ್ದೆ. ಇತ್ತೀಚಿಗೆ ನಮ್ರತಾ ಕಮೀಟ್ಮೆಂಟ್‌ಗೆ ಬರ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೇರೆ ನಟಿಯರ ಹೆಸರು ಇದರಲ್ಲಿ ಇದೆ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಕಾಸ್ಟಿಂಗ್ ಡೈರೆಕ್ಟರ್ ಒಬ್ಬರು ಕಾಲ್ ಮಾಡಿ ಹೀಗೆ ಒಂದು ಕಡೆ ಹೋಗಬೇಕು ಎನ್ನುತ್ತಾರೆ ಆಗ ನನಗೆ ಏನೂ ಅರ್ಥವಾಗುತ್ತಿರಲಿಲ್ಲ ನನಗೆ ಹೀಗೆ ನಡೆಯುತ್ತಿದೆ ಅನ್ನೋ ಐಡಿಯಾ ಇರಲಿಲ್ಲ' ಎಂದು ಕನ್ನಡ ಖಾಸಗಿ ಟಿವಿಯ ಸಂದರ್ಶನದಲ್ಲಿ ನಮ್ರತಾ ಮಾತನಾಡಿದ್ದಾರೆ. 

'ಕಮಿಟ್ಮೆಂಟ್ ಎನ್ನುವುದಕ್ಕೆ ಈವೆಂಟ್ ಎನ್ನುವ ಕೋಡ್ ವರ್ಡ್‌ ಬಳಸುತ್ತಾರೆ. ಈವೆಂಟ್‌ಗೆ ಹೋಗ್ತೀರಾ ಎಂದು ಕೇಳಿದಾಗ ನನಗೆ ನಿಜಕ್ಕೂ ಶಾಕ್ ಆಯ್ತು. ಮಹಿಳೆಯೊಬ್ಬರು ಪೋನ್ ಮಾಡಿ ಈವೆಂಟ್ ಇದೆ ಆರ್‌ಆರ್‌ ನಗರದಲ್ಲಿ ಹೋಗ್ತೀರಾ ಎಂದು ಕೇಳಿದ್ದರು. ಏನು ಈವೆಂಟ್ ಎಂದು ಕೇಳಿದಾಗ ನಿಮಗೆ ಗೊತ್ತಿಲ್ವಾ ಅಂದ್ರು. ಕೊನೆಗೆ ನಾನು ಆಕೆಯ ಫೋನ್ ಕಾಲ್ ಕಟ್ ಮಾಡಿದ್ದೆ. ಬಳಿಕ ಒಂದಿಷ್ಟು ಸ್ಕ್ರೀನ್ ಶಾಟ್‌ ಬಂತು..ನಮ್ಮ ಫೋಟೋಗಳನ್ನು ಬಳಸಿ ಪ್ರೊಫೈಲ್‌ ಸಿದ್ಧಪಡಿಸುತ್ತಾರೆ ಅದಕ್ಕೆ ಒಂದು ರೇಟ್‌ ಫಿಕ್ಸ್‌ ಮಾಡುತ್ತಾರೆ. ಯಾರೋ ಕಸ್ಟಮರ್ಸ್‌ಗೆ ಕಳುಹಿಸುತ್ತಾರೆ ಬಳಿಕ ಹಣ ಪಡೆದು ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಹೀಗೆ ಬ್ಯುಸಿನೆಸ್ ಮಾಡುತ್ತಾರೆ' ಎಂದು ನಮತ್ರಾ ಹೇಳಿದ್ದಾರೆ. 

'ಮಗಳು ಜಾನಕಿ' ಸೀರಿಯಲ್ ಮುಗಿದ್ದಿದೇ ತಡ ಎಲ್ಲಿ ಮಾಯವಾಗಿಬಿಟ್ಟರು ಗಾನವಿ ಲಕ್ಷ್ಮಣ್

'ನನ್ನ ಹಿಂದೆ ಏನು ನಡೆಯುತ್ತಿದೆ ಎಂದು ಮಾಹಿತಿ ಕಲೆ ಹಾಕಿ ಪೋಷಕರ ನೆರವಿನಿಂದ ಕ್ರಮ ಕೈಗೊಂಡೆ. ಇದನ್ನು ಸಾಕಷ್ಟು ಜನ ನಂಬಿ ಮೋಸ ಹೋಗುತ್ತಾರೆ. ನನಗೆ ಇದೊಂದು ಕಹಿ ಅನುಭವ ಅಗಿತ್ತು. ಇಂತಹ ಪ್ರೊಫೈಲ್ ಎಲ್ಲಾ ಕಡೆ ಹರಿದಾಡಿದ್ದಾಗ ಕೆಟ್ಟ ಅಭಿಪ್ರಾಯ ಬರುತ್ತದೆ. ಓಹ್ ನಮ್ರತಾ ಹೀಗೆ ಅಂತ ಇವರೆಲಾ ಹೀಗೆ ಹಣ ಮಾಡುವುದು ಎಂದುಕೊಳ್ಳುತ್ತಾರೆ. ಈ ಬಗ್ಗೆ ಗೊತ್ತಾದಾಗ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ಗೊತ್ತಾಗಲಿಲ್ಲ ಮೀಡಿಯಾ ಮುಂದೆ ಹೋಗಬೇಕಾ ಸುಮ್ಮನಾಗಬೇಕಾ ತಿಳಿಯಲಿಲ್ಲ. ಈಗ ಮಾಹಿತಿ ಕಲೆ ಹಾಕಿದ್ದೀನಿ ಇಂತಹ ಅನುಭವ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಆಗುತ್ತದೆ ಆದರೆ ಕೆಲವರು ಮಾತ್ರ ಮಾತನಾಡುತ್ತಾರೆ' ಎಂದಿದ್ದಾರೆ ನಮ್ರತಾ. 

ಗಾಜನೂರಿಗೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!