ಅತ್ತಿಗೆ ಚಾರು ಕಾಲಿಗೆ ಬಿದ್ದ ಶ್ರುತಿ; ಸತ್ಯ ಗೊತ್ತಾದ ಬಳಿಕ ರಾಮಾಚಾರಿ ರಿಯಾಕ್ಷನ್ ಏನು?

ಕಲರ್ಸ್ ಕನ್ನಡದಲ್ಲಿ, ಸೋಮವಾರದಿಂದ ಶುಕ್ರವಾರದವೆರೆಗೆ, ರಾತ್ರಿ 9ಕ್ಕೆ 'ರಾಮಾಚಾರಿ' ಸೀರಿಯಲ್ ಪ್ರಸಾರವಾಗುತ್ತಿದೆ. ಹಲವು ವೀಕ್ಷಕರು ಈ ಧಾರಾವಾಹಿ ಮೆಚ್ಚಿದ್ದು, ಸೀರಿಯಲ್ ಒಮ್ಮೆ ಟಾಪ್ ಟಿಆರ್‌ಪಿ ದಾಖಲಿಸಿ ಈಗ ಸ್ವಲ್ಪ ಕೆಳಗಡೆ ಸರಿದಿದ್ದರೂ ಈಗಲೂ ಈ ಧಾರಾವಾಹಿಯ ಕ್ರೇಜ್ ಪೂರ್ತಿ ಕಮ್ಮಿ ಆಗಿಲ್ಲ. 


ರಾಮಾಚಾರಿಗೆ ವಿಷಯ ಗೊತ್ತಿಲ್ಲ ಅಥವಾ ಗೊತ್ತಿದೆ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ, ಈಗ ಚಾರು ಏನೇ ಮಾಡಿದರೂ ಅದು ಮನೆಯವರೆಲ್ಲರ ಹಿತಕ್ಕಾಗಿ ಎಂಬುದು ರಾಮಾಚಾರಿಗೆ ಗೊತ್ತು. ಆದರೆ, ಅದನ್ನು ಈ ವೇಳೆಯಲ್ಲಿ ಬಾಯಿಬಿಟ್ಟು ಹೇಳೋ ಹಾಗಿಲ್ಲ. ಅತ್ತ ಚಾರು ಸೈಲೆಂಟ್ ಆಗಿರುವಾಗ ತನ್ನ ಮಗಳಿಗೇ ಚಾರು ಹಾಗೂ ಮಿಕ್ಕವರ ಎದುರಲ್ಲಿ ದಬಾಯಿಸುವಂತೆಯೂ ಇಲ್ಲ. ರಾಮಾಚಾರಿಯ ಅಮ್ಮ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವ ಇಟ್ಟಿಗೆಯಂತಾಗಿದ್ದಾಳೆ. ಏನು ಮಾಡಬೇಕೆಂದು ತೋಚದೇ ಅತ್ತಿತ್ತ ನೋಡಲು, ಚಾರು ಮುಗುಳ್ನಗು ಅವಳಿಗೆ ಧೈರ್ಯ ನೀಡುತ್ತದೆ. 

ಮೊದಮೊದಲು ಸುತ್ತುಬಳಸಿ ಚಾರು ಹೆಸರು ಹೇಳದೇ, ಟಾಂಗ್ ನೀಡುತ್ತಿದ್ದ ಶ್ರುತಿ, ಮನೆಯ ಹಿರಿಯರೆಲ್ಲರ ಆಶೀರ್ವಾದ ಪಡೆದ ಬಳಿಕ, ನೇರವಾಗಿಯೇ ಚಾರು ಮುಂದೆ ಬಂದು ಆಕೆಯನ್ನು ಹಿಯಾಳಿಸಿ, ನಿನ್ನೆ ಚಾರು ಹೇಳಿದ್ದ ಮಾತನ್ನು ನೆನಪಿಸಿ ಆಕೆಗೆ ಮತ್ತೆ ಮತ್ತೆ ಅವಮಾನ ಮಾಡುವಂತೆ ಮಾತನಾಡುತ್ತಾಳೆ. 

Latest Videos

ಈಗ ಸಹನೆ ಕಳೆದುಕೊಳ್ಳುವ ಶ್ರುತಿ ಅಮ್ಮ 'ಸುಮ್ಮನಿರು' ಸಾಕು' ಎಂದು ಶ್ರುತಿ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾಳೆ. ಆದರೂ ಪಟ್ಟುಬಿಡದ ಶ್ರುತಿ ಅಂದುಕೊಂಡಿದ್ದನ್ನು ಹೇಳಿ ಕೆಲಸಕ್ಕೆ ಹೊರಡುತ್ತಾಳೆ. ಶ್ರುತಿ ಹೊರಟ ಬಳಿಕ ಬಂದ ರಾಮಾಚಾರಿ ತಾಯಿ ಸೊಸೆ ಚಾರು ಸಮೀಪ ಬಂದು "ಯಾಕಮ್ಮಾ ನೀನು  ಸತ್ಯ ಹೇಳಲಿಲ್ಲ' ಎಂದು ಕೇಳಲು ಚಾರು 'ಅದೆಲ್ಲ ಬೇಡ' ಎಂದು ಹೇಳಿ ಮುಗುಳ್ನಗುವಳು. ರಾಮಾಚಾರಿ ಕೂಡ ಮುಗುಳ್ನಗಲು ಎನೋ ಗುಟ್ಟು ಇದೆ ಎಂಬ ಸಂದೇಹಗೊಂಡ ಅಜ್ಜಿ ತನ್ನ ಸೊಸೆ ಜತೆ ಒಳಗೆ ಹೋಗುವಳು. 

ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ ಸಿಕ್ಕಾಪಟ್ಟೆ ಟ್ರೋಲ್‌, ತೂಕ ಹೆಚ್ಚಳ, ಮುಖಕ್ಕೆ ಸರ್ಜರಿ!

ಒಟ್ಟಿನಲ್ಲಿ ತೀವ್ರ ಕುತೂಹಲ ಕೆರಳಿಸುತ್ತಿರುವ ರಾಮಾಚಾರಿಯ ಪ್ರೊಮೋ ಇಂದಿನ ಸಂಚಿಕೆಯ ನಿರೀಕ್ಷೆ ಹೆಚ್ಚಿಸಿದೆ. ಹೆಣ್ಣು ಕೆಲಸಕ್ಕೆ ಹೋಗದೇ ಇದ್ದರೆ ಮನೆಯಲ್ಲಿ ಬರುವ ಮಾತುಗಳು ಹಾಗೂ ಕೆಲಸಕ್ಕೆ ಹೊರಟಾಗ ಅವಳ ಮನದಲ್ಲಿ ಮೂಡುವ ಆತ್ಮವಿಶ್ವಾಸ ಈ ಸಂಚಿಕೆಯ ಹೈಲೈಟ್ ಎನ್ನಬಹುದು. ಆದರೆ, ಕೆಲಸಕ್ಕೆ ಹೋದ ಶ್ರುತಿ ವಾಪಸ್ ಬಂದಾಗ ಸೀನ್‌ನಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆದ ಹಾಗಿದೆ. ಹಾಗಿದ್ದರೆ ಕೆಲಸಕ್ಕೆ ಹೋದ ಶ್ರುತಿಗೆ ಅಲ್ಲಿ ಯಾವ ಸತ್ಯ ತಿಳಿಯಿತು? ಇಂದಿನ ಸಂಚಿಕೆಯೇ ಇದಕ್ಕೆ ಉತ್ತರ ನೋಡಲಿದೆ, ನೋಡಿ ರಾಮಾಚಾರಿ ಸೀರಿಯಲ್, ರಾತ್ರಿ 9 ಗಂಟೆಗೆ. 

ತುಳಿಸಿ ಮನೆ ಬಾಗಿಲಿಗೆ ಬಂದ ಅವಿನಾಶ್; ಇನ್ನೇನು 'ಗ್ರಹಚಾರ' ಕಾದಿದೆಯೋ ಎಂದ ವೀಕ್ಷಕರು!

ಅಂದಹಾಗೆ, ಕಲರ್ಸ್ ಕನ್ನಡದಲ್ಲಿ, ಸೋಮವಾರದಿಂದ ಶುಕ್ರವಾರದವೆರೆಗೆ, ರಾತ್ರಿ 9ಕ್ಕೆ 'ರಾಮಾಚಾರಿ' ಸೀರಿಯಲ್ ಪ್ರಸಾರವಾಗುತ್ತಿದೆ. ಹಲವು ವೀಕ್ಷಕರು ಈ ಧಾರಾವಾಹಿ ಮೆಚ್ಚಿದ್ದು, ಸೀರಿಯಲ್ ಒಮ್ಮೆ ಟಾಪ್ ಟಿಆರ್‌ಪಿ ದಾಖಲಿಸಿ ಈಗ ಸ್ವಲ್ಪ ಕೆಳಗಡೆ ಸರಿದಿದ್ದರೂ ಈಗಲೂ ಈ ಧಾರಾವಾಹಿಯ ಕ್ರೇಜ್ ಪೂರ್ತಿ ಕಮ್ಮಿ ಆಗಿಲ್ಲ. ಇಂದಿನ ಪ್ರೋಮೋ ಕುತೂಹಲ ನೀಗಲು ಇಂದಿನ ಸಂಚಿಕೆಯೇ ಉತ್ತರ ನೀಡಲಿದೆ. 

click me!