ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಮಗನ ವಿರುದ್ಧ ಕುಸುಮಾ ತಿರುಗಿಬಿದ್ದಿದ್ದಾಳೆ. ಮುಂದೇನಾಗತ್ತೆ?
ಬಹುತೇಕ ಧಾರಾವಾಹಿಗಳಲ್ಲಿ ಅತ್ತೆ-ಸೊಸೆಯ ಸಂಬಂಧವನ್ನು ಕೀಳಾಗಿ ತೋರಿಸುತ್ತಿದ್ದರೆ, ಅದಕ್ಕೆ ವಿರುದ್ಧವಾಗಿ ಭಾಗ್ಯಲಕ್ಷ್ಮಿ ಕನ್ನಡ ಧಾರಾವಾಹಿಯಲ್ಲಿ ಅತ್ತೆ- ಸೊಸೆಯ ಪ್ರೀತಿಯ ಬಾಂಧವ್ಯ ತೋರಿಸಲಾಗಿದೆ. ಮಗನನ್ನೇ ಎದುರು ಹಾಕಿಕೊಂಡು, ಸೊಸೆ ಭಾಗ್ಯಳ ಪರವಾಗಿ ನಿಲ್ಲುವ ಅತ್ತೆ ಕುಸುಮಳ ಪಾತ್ರ ವೀಕ್ಷಕರಿಗೆ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರಿಗೆ ಅಚ್ಚುಮೆಚ್ಚಾಗಿದೆ. ಅಷ್ಟಕ್ಕೂ ಈ ಧಾರಾವಾಹಿಯ ಕಥೆ ಏನೆಂದರೆ, ಮನೆಯವರು ಹೇಳಿದರು ಅಂತ ತಾಂಡವ್ (Tandav) ಹೆಚ್ಚೇನೂ ಓದದ ಭಾಗ್ಯಳನ್ನು ಮದುವೆ ಆಗಿದ್ದಾನೆ. ಇವರಿಬ್ಬರಿಗೂ ಇಬ್ಬರು ಮಕ್ಕಳು. ಆಫೀಸಲ್ಲಿ ಕೆಲಸ ಮಾಡುವ ತಾಂಡವ್‌ಗೆ ಭಾಗ್ಯ ಕಂಡರೆ ಆಗೋದೇ ಇಲ್ಲ. ಎಲ್ಲ ತಪ್ಪಿಗೂ ಭಾಗ್ಯ ಕಾರಣ ಅಂತ ಅವಳನ್ನು ದೂಷಿಸುವುದೇ ಅವನ ಕೆಲಸ. ಆದರೆ ಭಾಗ್ಯಳ ನೆರವಿಗೆ ನಿಲ್ಲುವುದು ಅತ್ತೆ.
ಹಿಂದಿನ ಕಂತಿನಲ್ಲಿ ಕಂಠಪೂರ್ತಿ ಕುಡಿದು ಬಂದಿದ್ದ ತಾಂಡವ್, ತನ್ನೆಲ್ಲಾ ನೋವಿಗೆ ಅಮ್ಮನೇ ಕಾರಣ ಎನ್ನುವ ರೀತಿಯಲ್ಲಿ ಸಿಕ್ಕಾಪಟ್ಟೆ ಬೈದಿದ್ದ. 'ನಿನ್ನ ನೀನು ಏನ್ ಅಂದುಕೊಂಡಿದ್ದೀಯಾ? ನಿನಗೆ ಜೈಕಾರ ಹಾಕಬೇಕು ಅಷ್ಟೇ. ನನಗೆ ಮಾಡೋಕೆ ಬೇರೆ ಏನೂ ಕೆಲಸ ಇಲ್ಲಾ ಅಂದುಕೊಂಡಿದ್ಯಾ? ನಿನ್ನದೇ ಎಲ್ಲಾ ಫೈನಲ್, ಯಾರಿಂದಲೂ ಬದಲಾಯಿಸಲು ಆಗಲ್ಲ ಎನ್ನೋದೇ ಆಗೋಯ್ತು. ನಿನಗೆ ಒಂದು ದೊಡ್ಡ ಕಿರೀಟ ಹಾಕಿ, ಪಾದಕ್ಕೆ ನಮಸ್ಕಾರ ಮಾಡಬೇಕು. ಎಲ್ಲರು ಜೈ ಜೈ ಅನ್ನಬೇಕು ನಿನಗೆ ಅಲ್ವಾ?' ಎಂದು ತಾಯಿ ಕುಸುಮಳ (Kusuma) ವಿರುದ್ಧ ಮಾತನಾಡಿದ್ದ.
ಗಿಣಿರಾಮ ಮುಗೀತು ಎಂದು ಬೇಜಾರ್ ಮಾಡ್ಕೊಂಡೋರಿಗೆ ‘ಕಲ್ ಸಕ್ರೆ’ ನೀಡಿದ ರಿತ್ವಿಕ್ ಮಠ
ಈ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡಿದ್ದ ಅಮ್ಮ ಕುಸುಮಾ, ಈಗ ಮಗನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಹೇಗಾದರೂ ಸೊಸೆ ಭಾಗ್ಯಳನ್ನು ಚೆನ್ನಾಗಿ ಓದಿಸಬೇಕು ಎನ್ನುವುದು ಅತ್ತೆಯ ಆಸೆ. ಆದರೆ ಈ ವಯಸ್ಸಿನಲ್ಲಿ ಕಲಿತು ಅವಳು ಮಾಡುವುದು ಏನಿದೆ ಎನ್ನುವುದು ಗಂಡನ ಅನಿಸಿಕೆ. ಇದೇ ವಿಷಯಕ್ಕೆ ತಾಯಿ-ಮಗನ ನಡುವೆ ವಾದ-ಪ್ರತಿವಾದ ತಾರಕಕ್ಕೇರಿದೆ. ಮಗನ ವಿರುದ್ಧ ತಿರುಗಿಬಿದ್ದಿರೋ ಕುಸುಮಾ, ಸೊಸೆ ಭಾಗ್ಯಳನ್ನು ಉದ್ದೇಶಿಸಿ, 'ಏನಮ್ಮಾ ಭಾಗ್ಯ ನಿನ್ನ ಗಂಡನ ತಲೆಗೆ ಪೆಟ್ಟು ಬಿದ್ದಿದ್ಯಾ? ಅವನ್ಯಾಕೆ ಹುಚ್ಚುಹುಚ್ಚಾಗಿ ವರ್ತಿಸುತ್ತಿದ್ದಾನೆ' ಎಂದು ಕೇಳುತ್ತಾಳೆ. ಭಾಗ್ಯ ಓದಿಲ್ಲ, ದಡ್ಡಿ ಎನ್ನುತ್ತಿದ್ದ ಮಗ ತಾಂಡವ್, ಈಗ ಪತ್ನಿಯನ್ನು ಓದಿಸುವುದು ಬೇಡ ಎನ್ನುವ ಬಗ್ಗೆ ಅಸಮಾಧಾನ ಹೊರಹಾಕಿದ ಕುಸುಮಾ, 'ನಿನ್ನೆ ತನಕ ಇವಳನ್ನು ಓದಿಸಿಲ್ಲ. ಇವಳು ದಡ್ಡಿ. ಇವಳಿಗೆ ಬುದ್ಧಿ ಎಂದು ನನ್ನ ನಿರ್ಧಾರದ ಬಗ್ಗೆ ನಿಂದಿಸುತ್ತಿದ್ದ. ಸರಿ ಆಯ್ತಪ್ಪಾ, ನಿನ್ನ ಹೆಂಡ್ತಿನ ಓದಿಸುತ್ತೇನೆ ಎಂದ್ರೆ, ಈಗ ಹೀಗೆ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿದ್ದಾನೆ' ಎಂದು ಬೈಯುತ್ತಾಳೆ.
ಈಗ ಅವಳು ಓದಿ ಏನಾಗಬೇಕಿದೆ? ಜನರು ಏನಂದುಕೊಳ್ಳುತ್ತಾರೆ ಎಂದಾಗ ಕುಸುಮಾ, 'ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮಗ ಬೇರೆಯವರ ರೀತಿ ಆಗದೇ ಆದರ್ಶಗಳನ್ನು ಇಟ್ಟುಕೊಳ್ಳಬೇಕು ಎಂದು ನಾನು ಬೆಳೆಸಿದ್ದು. ಆದ್ರೆ ನನ್ನ ಮಗನ ಯೋಚನೆಗಳು ತುಂಬಾ ಕೆಳಮಟ್ಟದಲ್ಲಿ ಇವೆ. ಅವಳನ್ನು ಓದಿಸಿದ್ರೆ ನಿನಗೇನಾಗುತ್ತದೆ ಎಂದು ಬೈಯೋ ಕುಸುಮಾ, ಕಳೆದ ಸಂಚಿಕೆಯಲ್ಲಿ ನೋಡಿದಂತೆ ಕುಡಿದ (Drunken) ತಾಂಡವ್ನನ್ನು ಹೀಗಳೆಯುತ್ತಾ, 'ನಿನ್ನೆನೇ ಗೊತ್ತಾಯ್ತು. ನಿನಗೆ ನಮ್ಮ ಮೇಲೆ ಎಷ್ಟು ಗೌರವ ಇದೆ ಅಂತ. ನಿನ್ನೆ ಎಲ್ಲಾ ಮಾತನಾಡಿ ಮುಗಿಸಿದ್ದೀಯಾ ನೀನು. ಈಗ ನಿನ್ನಿಂದ ನಾನು ಹೊಸದಾಗಿ ತಿಳಿದುಕೊಳ್ಳುವುದು ಏನೂ ಇಲ್ಲ. ಇವತ್ತು ನೀನು ಏನೂ ಮಾತನಾಡಬೇಡ. ಇವತ್ತು ನಾನು ಮಾತನಾಡ್ತೀನಿ. ನೀನು ಕೇಳಿಸಿಕೋ. ನಾನು ಹೇಳಿದ ರೀತಿಯೇ ಈ ಮನೆಯಲ್ಲಿ ನಡೆಯುತ್ತೆ' ಎನ್ನುತ್ತಾಳೆ.
ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು 'ಗಂಧೀಬಾತ್' ಪೋಸ್ಟರ್
ಅಷ್ಟೇ ಅಲ್ಲದೇ, ನನ್ನ ನಿರ್ಧಾರವನ್ನು ನಾನು ಬದಲಿಸಲ್ಲ. ನನಗೆ ಯಾವುದು ಸರಿ ಅನ್ನಿಸಸುತ್ತೋ ಅದನ್ನೇ ಮಾಡ್ತೀನಿ. ನೀನು ಅರ್ಥ ಮಾಡಿಕೊಂಡು ನನ್ನ ಜೊತೆ ಬದುಕಬೇಕೋ, ಬದುಕು. ಇಷ್ಟ ಇಲ್ವಾ ಹೊರಡು. ಈ ಮನೆಯಲ್ಲಿ ಯಾರು ಬೇಕಾದ್ರೂ ಇರಬಹುದು. ಇಷ್ಟ ಇಲ್ಲದವರು ಹೋಗಬಹುದು ಎಂದು ಕುಸುಮಾ ಮಗನಿಗೆ ವಾರ್ನ್ (warn) ಮಾಡುತ್ತಾಳೆ. ಮಗ ಮನೆ ಬಿಟ್ಟು ಹೋಗ್ತಾನಾ ಅಥವಾ ಇನ್ನೇನು ಮಾಡ್ತಾನಾ ಕಾದು ನೋಡಬೇಕಿದೆ. ಪ್ರೋಮೋ ನೋಡಿ ಪ್ರೇಕ್ಷಕರಂತೂ ಫುಲ್ ಖುಷ್ ಆಗಿದ್ದಾರೆ. ಕುಸುಮಾಳಿಗೆ ಜೈಕಾರ ಹಾಕುತ್ತಿದ್ದಾರೆ.