Small Screen

ರಿತ್ವಿಕ್ ಮಠದ್

ರಿತ್ವಿಕ್ ಮಠದ್ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟ. ಮೂಲತಃ ದಾವಣಗೆರೆಯವರಾದ ಇವರು ಬೆಳೆದದ್ದು ಬೆಳಗಾವಿಯಲ್ಲಿ. 

Image credits: social media

ಎಂಎನ್ ಸಿ ಉದ್ಯೋಗಿ

ರಿತ್ವಿಕ್ ಎಂಎನ್‌ಸಿ ಕಂಪನಿಯಲ್ಲಿ ಮೊದಲು ಕಾರ್ಯ ನಿರ್ವಹಿಸುತ್ತಿದ್ದರು. ನಟನೆ ಕಡೆಗೆ ಆಸಕ್ತಿ ಹೊಂದಿದ್ದ ಇವರು ಕೆಲಸ ಬಿಟ್ಟು ನಟನೆಗೆ ಬಂದರು. 

Image credits: social media

ಸೀರಿಯಲ್

ರಿತ್ವಿಕ್ ಸ್ಟಾರ್ ಮೊದಲು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ನಟಿಸಿದ್ದರು.  ಅಲ್ಲದೇ ಮೂಡಲಮನೆ ಸೀರಿಯಲ್‌ನಲ್ಲೂ ನಟಿಸಿದ್ದರು.
 

Image credits: social media

ಸಿನಿಮಾ

ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ರಿತ್ವಿಕ್ ಯುವ ಸಾಮ್ರಾಟ್, ಶಂಭು ಮಹಾದೇವ ಗಿಫ್ಟ್ ಬಾಕ್ಸ್, ನಮ್ಮ ಉತ್ಸವ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

Image credits: social media

ಗಿಣಿರಾಮ ಸೀರಿಯಲ್

'ಗಿಣಿರಾಮ ಧಾರಾವಾಹಿಯಲ್ಲಿ ರಿತ್ವಿಕ್ ಖಡಕ್ ಉತ್ತರ ಕರ್ನಾಟಕ ಭಾಷೆ ಮಾತನಾಡುವ ಶಿವರಾಮ್ ಆಗಿ ನಟಿಸುತ್ತಿದ್ದರು. ಆದರೆ ಈ ಸೀರಿಯಲ್ ಇನ್ನೇನು ಮುಗಿಯುತ್ತದೆ.

Image credits: social media

ಕಲ್ ಸಕ್ರೆ ನೀಡಿದ ರಿತ್ವಿಕ್

ಗಿಣಿರಾಮ ಸೀರಿಯಲ್ ಮುಗಿಯುತ್ತೆ ಎಂದು ಸುದ್ದಿ ಹೆಚ್ಚುತ್ತಿರುವ ನಡುವೆ ರಿತ್ವಿಕ್ ತಾವು ಹೊಸ ಸಿನಿಮಾ ‘ಕಲ್ ಸಕ್ರೆ’ಯಲ್ಲಿ ನಾಯಕನಾಗಿ ನಟಿಸುತ್ತಿರುವುದಾಗಿ  ಹೇಳಿದ್ದಾರೆ.

Image credits: social media

ಪೋಸ್ಟರ್ ಬಿಡುಗಡೆ

ರಿತ್ವಿಕ್ ಇದೀಗ ಬಿ ಧರ್ಮ ರಾಜುಲು ನಿರ್ಮಾಣದ ಕಲ್ ಸಕ್ರೆ ಚಿತ್ರದಲ್ಲಿ ನಟಿಸುತ್ತಿದ್ದು, ಆ ಪೋಸ್ಟರನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದಯವಿಟ್ಟು ಎಲ್ಲರೂ ಹರಸಿ, ಆಶೀವ೯ದಿಸಿ ಎಂದು ಬರೆದಿದ್ದಾರೆ. 

Image credits: social media

ಉಜ್ಜಯಿನಿ ಮಹಾಕಾಲೇಶ್ವರ ದರ್ಶನ ಮಾಡಿದ ರಂಜನಿ ರಾಘವನ್

8 ವರ್ಷ ಪ್ರೀತಿಸಿದ ಸೈನಿಕನ ಜೊತೆ ಗಿಣಿರಾಮ ನಟಿ ಕಾವೇರಿ ಮದುವೆ!

ಭವ್ಯಾ ಗೌಡ: 70ರ ದಶಕದ ನಟಿ ತರ ಕಾಣ್ತೀರಾ ಎಂದ ಫ್ಯಾನ್ಸ್

ಸಣ್ಣಗಾಗಿ ಲುಕ್ ಬದಲಾಯಿಸಿಕೊಂಡ 'ಗುಂಡಮ್ಮ' ಗೀತಾ ಭಟ್!