ಮೊನ್ನೆ ಮೊನ್ನೆ ಮಂತ್ರಾಲಯದ ರಾಯರ ಮಠದಲ್ಲಿ ಲಕ್ಷಣವಾಗಿ ಸೀರೆ ಉಟ್ಟು ಭಕ್ತಿ ಉಕ್ಕಿಸೋ ಹಾಗೆ ಫೋಟೋಗೆ ಫೋಸ್ ನೀಡಿದ ಸಾರಾ ಅಣ್ಣಯ್ಯ ಇವತ್ತು ಮತ್ತೆಲ್ಲೋ ಇದ್ದಾರೆ. ಅರೆ, ಈ ಹುಡುಗಿ ಶೂಟಿಂಗ್‌ಗೆ ಯಾವಾಗ ಹೋಗ್ತಾಳೆ ಅಂತ ಜನ ತಲೆ ಕೆಡಿಸಿಕೊಂಡಿದ್ದಾರೆ.
ಸಾರಾ ಅಣ್ಣಯ್ಯ ಅಂದ ತಕ್ಷಣ ನೆನಪಾಗೋದು ಕನ್ನಡತಿ ಸೀರಿಯಲ್‌ನ ವರೂ. ಒಂದು ಕಡೆ ಗೆಳತಿ ಮೇಲೆ ಪ್ರೀತಿ, ಅವಳನ್ನು ಪ್ರೀತಿಸ್ತಿರೋ ತನ್ನ ಹೀರೋ ಹರ್ಷನ ಮೇಲೆ ವ್ಯಾಮೋಹ, ಯಾರೂ ಅವನನ್ನು ಟಚ್ ಮಾಡ್ಬಾರ್ದು ಅನ್ನೋ ಪೊಸೆಸ್ಸಿವ್‌ನೆಸ್, ಜೊತೆಗೆ ಸೈಕೋ ಥರದ ನಡವಳಿಕೆ. ಇವೆಲ್ಲವನ್ನೂ ಸಖತ್ತಾಗಿ ಸ್ಕ್ರೀನ್ ಮೇಲೆ ತಂದವರು ಸಾರಾ ಅಣ್ಣಯ್ಯ. ಕೊಡಗಿನ ಯಾವ್ದೋ ಎಸ್ಟೇಟಿನಲ್ಲಿ ಹುಟ್ಟಿ ಬೆಳೆದ ಈ ನೀಳ ಕಾಯದ ಸುಂದರಿಯನ್ನ ಕನ್ನಡತಿ ಟೀಮ್ ಅದೆಲ್ಲಿ ಹುಡುಕ್ತೋ, ಕನ್ನಡ ಕಿರುತೆರೆಗೆ ಒಬ್ಬ ಅಪ್ಪಟ ಪರ್ಫಾಮರ್ ಸಿಕ್ಕಂಗಾಯ್ತು. ಕನ್ನಡತಿ ವೈಂಡ್‌ಅಪ್ ಆಗ್ತಿದ್ದ ಹಾಗೆ ಸಾಲು ಸಾಲು ಆಫರ್‌ಗಳು ಈಕೆಯನ್ನು ಹುಡುಕಿಕೊಂಡು ಬಂದವು. ಆದರೆ ಈ ಬೆಡಗಿ ಮಾತ್ರ ಲೋಕ ಸುತ್ತೋದ್ರಲ್ಲೇ ಖುಷಿ ಕಂಡ ಹಾಗಿತ್ತು. ಕನ್ನಡತಿ ನಂತರ 'ನಮ್ಮ ಲಚ್ಚಿ' ಯಲ್ಲಿ ನೆಗೆಟಿವ್ ಶೇಡ್ ಪಾತ್ರದಲ್ಲಿ ಹೆಸರು ಮಾಡ್ತಿರುವಾಗಲೇ ಜೀ ಕನ್ನಡದಿಂದ ಭರ್ಜರಿ ಆಫರ್ ಸಿಕ್ತು. ಈ ಚಾನಲ್‌ನ ಫೇಮಸ್ ಸೀರಿಯಲ್ 'ಅಮೃತಧಾರೆ'ಯಲ್ಲಿ ಹೀರೋನ ತಂಗಿ ಪಾತ್ರ.
ಇದರ ನಡುವೆ ನೀವೊಮ್ಮೆ ಸಾರಾ ಅಣ್ಣಯ್ಯ ಇನ್‌ಸ್ಟಾಗ್ರಾಂ ನೋಡಿದ್ರೆ ಒಂದು ರಾಶಿ ಟ್ರಾವೆಲ್ ಫೋಟೋಗಳಿವೆ. ಚೆಂದ ಚೆಂದದ ಡೆಸ್ಟಿನೇಶನ್‌ಗಳು. ನೀವೆಲ್ಲಾದ್ರೂ ನಿಸರ್ಗ ಪ್ರೇಮಿಗಳಾಗಿದ್ರೆ, ಅದ್ಭುತ ಡೆಸ್ಟಿನೇಶನ್‌ಗಳ ಹುಡುಕಾಟದಲ್ಲಿದ್ದರೆ ಮೀಟ್ ಮಿಸ್ ಸಾರಾ. ಊರೆಲ್ಲ ಸುತ್ತಾಡೋ ಈ ಹುಡುಗಿ ನಿಮಗೆ ಕರೆಕ್ಟಾಗಿ ಗೈಡ್ ಮಾಡ್ತಾರೆ. ಅಂದ ಹಾಗೆ ಮೊನ್ನೆ ಮೊನ್ನೆ ಮಂತ್ರಾಲಯದ ರಾಯರ ಮಠದ ಎದುರು ಲಕ್ಷಣವಾಗಿ ಸೀರೆ ಉಟ್ಕೊಂಡು ಅಪ್ಪಟ ಸಂಪ್ರದಾಯಸ್ಥ ಭಾರತೀಯ ನಾರಿಯಂತೆ ಪೋಸ್ ಕೊಟ್ಟಿದ್ರು ಸಾರಾ. ರಾಯರ ಕರುಣೆ, ಹೃದಯವಂತಿಕೆ ಕುರಿತಾಗಿಯೂ ಸ್ಟೇಟ್‌ಮೆಂಟ್ ಹಾಕಿದ್ರು.
ಸರಿ ರಾಯರ ದರ್ಶನ ಬೇಡ್ಕೊಂಡು ಇನ್ಮೇಲೆ ಶೂಟಿಂಗ್‌ನಲ್ಲಿ ಬ್ಯುಸಿ ಆಗ್ಬಿಡ್ತಾರೆ ಅಂದ್ರೆ ತಣ್ಣಗಿರೋ ಈ ಮಂಗಳವಾರದ ಮಧ್ಯಾಹ್ನ ಕಾಶ್ಮೀರದ ದಾಲ್ ಲಾಕ್‌ನ ಹೂವಿನ ದೋಣಿಯಲ್ಲಿ ಕೂತು ದೋಣಿ ನಡೆಸೋ ಅಂಕಲ್‌ಗೆ ಇನ್ನಿಲ್ಲದ ಕಾಟ ಕೊಡ್ತಿದ್ದಾರೆ. ದೋಣಿ ನಡೆಸೋ ವ್ಯಕ್ತಿಯ ಕೈಯಿಂದ ಹುಟ್ಟು ತಗೊಂಡು ತಾನೇ ದೋಣಿ ನಡೆಸೋಕೆ ಹೊರಟಿದ್ದಾರೆ. ದೋಣಿ ನಡೆಸುವಾತ ಡೈರೆಕ್ಷನ್ ಕೊಡ್ತಾ ಇದ್ರೆ ಈ ಹುಡುಗಿ ಉಲ್ಟಾ ಡೈರೆಕ್ಷನ್‌ನಲ್ಲಿ ದೋಣಿ ಹುಟ್ಟು ಹಾಕ್ತಾ ಆ ದೋಣಿ ನಡೆಸುವಾತನ ಜೀವ ಬಾಯಿಗೆ ಬರೋ ಹಾಗೆ ಮಾಡ್ತಿದ್ದಾರೆ.
ಮಂತ್ರಾಲಯಕ್ಕೆ ಭೇಟಿ ನೀಡಿದ ಸಾರಾ ಅಣ್ಣಯ್ಯ: ಸೀರೆಯುಟ್ಟು ರಾಯರ ದರ್ಶನ ಪಡೆದ ನಟಿ
ತನ್ನ ಈ ಪರಾಕ್ರಮವನ್ನು ಇನ್‌ಸ್ಟಾದಲ್ಲಿ ಪೋಸ್ಟ್(Post) ಮಾಡಿದ್ದೇ ಆಕೆಯ ಫ್ರೆಂಡ್ಸೇ ಅವರ ಕಾಲೆಳೆಯುತ್ತಿದ್ದಾರೆ. ಇನ್ನೊಬ್ಬ ಕಿರುತೆರೆ ನಟಿ, ಸಾರಾ ಫ್ರೆಂಡ್ ಕಾವ್ಯಾ ಗೌಡ, 'ಅವನ್ನ ಯಾಕೇ ಸಾಯಿಸ್ತಾ ಇದ್ದೀಯಾ?' ಅಂತ ಕೇಳಿದ್ದಾರೆ. ಇದಕ್ಕೆ ಫನ್ನಿಯಾಗಿ ಉತ್ತರಿಸಿರೋ ಸಾರಾ, 'ಯು ನೋ ನಂಗೆ ಸ್ವಿಮ್(Swim) ಮಾಡೋಕೆ ಗೊತ್ತು' ಅಂದಿದ್ದಾರೆ. 'ಪಾಪ ಅಂಕಲ್' ಅಂತ ಮತ್ತೆ ಕಾವ್ಯಾ ಸಾರಾಗೆ ಛೇಡಿಸಿದ್ದಾರೆ. 'ನೀನೂ ಬಾ' ಅಂತ ಬಿದ್ದೂ ಬಿದ್ದೂ ನಗೋ ಸ್ಮೈಲಿ ಪೋಸ್ಟ್ ಮಾಡಿ ಸಾರ ಉತ್ತರಿಸಿದ್ದಾರೆ. ಎಂದಿನಂತೆ ಫ್ಯಾನ್ಸ್ ಸಾರಾ ಮಾಡಿರೋ ಈ ಹೊಸ ಸಾಹಸಕ್ಕೆ ಹಾರ್ಟ್ ಸಿಂಬಲ್ ತೋರಿಸಿ ಲೈಕ್ ಕೊಟ್ಟಿದ್ದಾರೆ. ಸಾರಾ ಮಾತ್ರ ತನ್ನ ತುಂಟಾಟಗಳನ್ನು ಸಹಿಸಿಕೊಂಡು ಒಳಗೆ ಆತಂಕವಿದ್ದರೂ ತೋರಿಸಿಕೊಳ್ಳದೇ ಸ್ಥಿತಪ್ರಜ್ಞನಂತೆ ಕುಳಿತಿರೋ ದೋಣಿ ನಡೆಸುವಾತನಿಗೆ 'ಜಂಟಲ್‌ಮೆನ್' ಅಂತ ಬಿರುದು ಕೊಟ್ಟು ಬಹು ಪರಾಕ್ ಅಂದಿದ್ದಾರೆ.
ಒಟ್ಟಾರೆ ಸಾರಾ ಅಣ್ಣಯ್ಯ ಲೈಫಲ್ಲಿ(Life) ಏನೇ ಬಂದ್ರೂ ಎನ್‌ಜಾಯ್(Enjoy) ಮಾಡ್ಬೇಕು. ಸಾಧ್ಯ ಆದ್ರೆ ಸಾಯೋದ್ರೊಳಗೆ ಜಗತ್ತಿಗೆ ಒಂದು ರೌಂಡ್ ಟ್ರಿಪ್ ಮಾಡಿ ಬರಬೇಕು ಅಂತ ಕಾಲ್ಕ್ಯುಲೇಟ್(Calculate) ಮಾಡ್ಕೊಂಡ ಹಾಗಿದೆ. ಇಲ್ಲಾಂದ್ರೆ ಎರಡು ದಿನದ ಹಿಂದೆ ಮಂತ್ರಾಲಯದಲ್ಲಿ ರಾಯರ ಭಜನೆ ಮಾಡ್ತಿದ್ದ ಹುಡುಗಿ ಏಕಾಏಕಿ ದಾಲ್ ಲೇಕ್‌ನಲ್ಲಿ ಹೂವಿನ ದೋಣಿಯಲ್ಲಿ ಕೂತು ಪಹಾಡಿ ಹಾಡಿಗೆ ಜೈ ಅನ್ನೋದಂದ್ರೆ ಸಣ್ ಮಾತಾ?
ಹಾಸಿಗೆಯಿಂದ ಎದ್ದೇಳಲು ಆಗಲ್ಲ, ಟೂತ್‌ಬ್ರಶ್‌ನಲ್ಲಿ ಉಗುರು ಕ್ಲೀನ್ ಮಾಡುವೆ: ನಿವೇದಿತಾ ಗೌಡ