
ಕಿರುತೆರೆ ಲೋಕ ಕೂಡ ಈಗ ಸಿಕ್ಕಾಪಟ್ಟೆ ದೊಡ್ಡದಾಗುತ್ತಿದೆ. ಅದರಲ್ಲೂ ಸ್ಟಾರ್ ಕಲಾವಿದರು ಕಿರುತೆರೆಗೆ ಎಂಟ್ರಿ ಕೊಟ್ಟ ಬಳಿಕ ಮತ್ತಷ್ಟು ವಿಸ್ತಾರವಾಗಿ ಬೆಳೆದಿದೆ. ಸಾವಿರ ಲಕ್ಷಗಳ ವ್ಯವಹಾರ ಈಗ ಕೋಟಿ ದಾಟಿದೆ. ಟಾಪ್ ಟಿವಿ ತಾರೆಯರು ಎನಿಸಿಕೊಂಡವರೇ ಸಾವಿರದಲ್ಲಿ ಹಣ ಎಣಿಸುತ್ತಿದ್ದರು. ಆದರೀಗ ಸಿನಿಮಾ ಸ್ಟಾರ್‌ಗಳು ಎಂಟ್ರಿ ಕೊಟ್ಟ ಬಳಿಕ ಕೋಟಿ ಎಣಿಸುತ್ತಿದ್ದಾರೆ. ಅನೇಕ ಸಿನಿಮಾ ತಾರೆಯರು ಗೇಮ್ ಶೋ, ರಿಯಾಲಿಟಿ ಶೋ ಅಂತ ಎಂಟ್ರಿ ಕೊಟ್ಟಿದ್ದಾರೆ, ಈ ಎಲ್ಲಾ ಶೋಗಳು ಕಿರುತೆರೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
ಟಿವಿ ಶೋಗಳನ್ನು ಹೋಸ್ಟ್ ಮಾಡಿರುವ ಅನೇಕ ದೊಡ್ಡ ದೊಡ್ಡ ಸ್ಟಾರ್ಸ್ ದೊಡ್ಡ ಮೊತ್ತದ ಹಣ ಜೇಬಿಳಿಸಿದ್ದಾರೆ. ಕಪಿಲ್ ಶರ್ಮಾ ಶೋಗಾಗಿ ಕಪಿಲ್ ಶರ್ಮಾ, ಲಾಕ್ ಅಪ್‌ಗಾಗಿ ಕಂಗನಾ ರಣಾವತ್, ಕೌನ್ ಬನೇಗ ಕರೋಡ್‌ಪತಿಗಾಗಿ ಅಮಿತಾಭ್ ಬಚ್ಚನ್, ಕರಣ್ ಜೋಹರ್ ಹೀಗೆ ಅನೇಕ ಸ್ಟಾರ್ಸ್ ಹೆಚ್ಚು ಸಂಭಾವನೆ ಪಡೆಯುವ ಟಿವಿ ಸ್ಟಾರ್ಸ್ ಆಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಎಲ್ಲಾ ಸಿನಿ ಐಕಾನ್‌ಗಳು ತಮ್ಮ ಕಾರ್ಯಕ್ರಮಗಳಿಗೆ ಪ್ರತಿ ಸಂಚಿಕೆಗೆ ಸುಮಾರು 1 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ.
ಬಿಗ್ ಬಾಸ್ ರಿಯಾಲಿಟಿ ಶೋ ಹೋಸ್ಟ್‌ಗೆ ನೀಡುವ ಸಂಭಾವನೆ ಎಲ್ಲಾ ಶೋಗಳನ್ನು ಮೀರಿಸಿದೆ. ಹೌದು ಹಿಂದಿ ಬಿಗ್ ಬಾಸ್‌ಅನ್ನು ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಕಳೆದ ವರ್ಷ ಅಂದರೆ ಬಿಗ್ ಬಾಸ್ ಸೀಸನ್ 16ಕ್ಕೆ ಸಲ್ಮಾನ್ ಖಾನ್ ಬರೋಬ್ಬರಿ 1000 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಾರಿ ಸಲ್ಮಾನ್ ಖಾನ್ ಒಂದು ವಾರಕ್ಕೆ 25 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅಂದರೆ ಪ್ರತಿ ಸಂಚಿಕೆಗೆ ಸಲ್ಮಾನ್ ಖಾನ್ 12.50 ಕೋಟಿ ರೂಪಾಯಿ ಜೇಬಿಗಿಳಿಸುತ್ತಿದ್ದಾರೆ. ಈ ಮೂಲಕ ಕಿರುತೆರೆಯಲ್ಲಿ ಅತೀ ಹೆಚ್ಚು ಸಂಭಾವನೆ ಪೆಯುವ ಭಾರತೀಯ ನಟನಾಗಿ ಹೊರಹೊಮ್ಮಿದ್ದಾರೆ.
ರಿಯಾಲಿಟಿ ಶೋ ಹೋಸ್ಟ್ ಮಾಡುವವರನ್ನು ಧಾರಾವಾಹಿ ಕಲಾವಿದರಿಗೆ ಹೋಲಿಸಲು ಸಾಧ್ಯವಿಲ್ಲ. ಹಾಗಾಗಿ ಧಾರಾವಾಹಿ ವಿಚಾರಕ್ಕೆ ಬರುವುದಾದರೆ ನಟಿ ರೂಪಾಲಿ ಗಂಗೂಲಿ ಅಗ್ರಸ್ಥಾನದಲ್ಲಿದ್ದಾರೆ. ಅನುಪಮಾ ನಟಿ ರೂಪಾಲಿ ಗಂಗೂಲಿ ಪ್ರತಿ ಸಂಚಿಕೆಗೆ 3 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಇನ್ನೂ ಉಳಿದಂತೆ ಹಿನಾ ಖಾನ್. ರೋನಿನ್ ರಾಯ್, ರಾಮ್ ಇನ್ನೂ ಕೆಲವು ಕಲಾವಿದರು ಒಂದು ಸಂಚಿಕೆಗೆ 1.5 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.