ರಾಜಾ ರಾಣಿ ಸೀಸನ್ 2 ವಿನ್ನರ್ ಟ್ರೋಫಿ ಗೆದ್ದ ಕಿರುತೆರೆ ನಟಿ. ಎರಡು-ಮೂರನೇ ಸ್ಥಾನ ಯಾರಿಗೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಸೀಸನ್ 2 ರಿಯಾಲಿಟಿ ಶೋ ಅಂತ್ಯವಾಗಿದೆ. ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಈ ರಿಯಾಲಿಟಿ ಶೋ ರಿಯಲ್ ಕಪಲ್‌ಗಳ ಲವ್ ಸ್ಟೋರಿ ಹೇಳುತ್ತದೆ. ಮೊದಲನೇ ಸೀಸನ್ ಭರ್ಜರಿ ಪ್ರದರ್ಶನ ಪಡೆದ ಕಾರಣ ಎರಡನೇ ಸೀಸನ್ ಶುರು ಮಾಡಲಾಗಿತ್ತು. ಎರಡನೇ ಸೀಸನ್ ವಿನ್ನರ್ ಟ್ರೋಫಿಯನ್ನು ಕಿರುತೆರೆ ನಟಿ ಕಾವ್ಯಾ ದಂಪತಿ ಗಿಟ್ಟಿಸಿಕೊಂಡಿದ್ದಾರೆ.
ಲೋಕೇಶ್ ಪ್ರೋಡಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋ ತೀರ್ಪುಗಾರರು ಸೃಜನ್ ಲೋಕೇಶ್ ಮತ್ತು ನಟಿ ತಾರಾ ಅನುರಾಧ. ಜಾಹ್ನವಿ ನಿರೂಪಣೆಯಲ್ಲಿ ನಡೆಯುತ್ತಿರುವ ಎರಡನೇ ಸೀಸನ್ ವಿನ್ನರ್ 'ನಮ್ಮನೆ ಯುವರಾಣಿ' ಧಾರಾವಾಹಿ ನಟಿ ಕಾವ್ಯಾ ಮಹಾದೇವ್ ಮತ್ತು ಪತಿ ಕುಮಾರ್. ವಿನ್ನರ್ ಟ್ರೋಫಿ, ಕಿರೀಟ ಮತ್ತು 5 ಲಕ್ಷ ಮೊತ್ತವನ್ನು ಗೆದ್ದಿದ್ದಾರೆ. ಎರಡನೇ ಸ್ಥಾನವನ್ನು ಸುಂದರ್ ರಾಜ್ ಮತ್ತು ವೀಣಾ ಸುಂದರ್ ಪಡೆದರೆ ಮೂರನೇ ಸ್ಥಾನವನ್ನು ರಜತ್ ಬುಜ್ಜಿ ಮತ್ತು ಅಕ್ಷತಾ ಪಡೆದಿದ್ದಾರೆ.
'ಪ್ರಪಂಚದಲ್ಲಿ ಎಷ್ಟು ಅದ್ಭುತವಾದ ಜನರಿದ್ದಾರೆ ನಿಮ್ಮ ಪ್ರೀತಿ, ಸಪೋರ್ಟ್, ಧೈರ್ಯ ಮತ್ತು ಸಹಾಯದಿಂದ ನಮ್ಮ ರಾಜಾ ರಾಣಿ ಜರ್ನಿ ಅದ್ಭುತವಾಗಿದೆ. ನೀವೆಲ್ಲರೂ ಪ್ರೀತಿ ತೋರಿಸಿ ನಮಗೆ ವೋಟ್ ಮಾಡಿದಕ್ಕೆ ಗೆದ್ದಿರುವುದು.ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಹೀಗೆ ಇರಲಿ' ಎಂದು ಕಾವ್ಯಾ ಪತಿ ಕುಮಾರ್ ಬರೆದುಕೊಂಡಿದ್ದಾರೆ. ವಾರ ವಾರವೂ ಕಾವ್ಯಾ ಮತ್ತು ಕುಮಾರ್ ವಿಭಿನ್ನ ರೀತಿಯಲ್ಲಿ ಮನೋರಂಜನೆ ನೀಡಿದ್ದಾರೆ.
ರಿಯಾಲಿಟಿ ಶೋ ಜಾಸ್ತಿ ಮಾಡಿ ರಿಯಲ್ ಆಗಿದ್ದೀವಿ: ರಜತ್ ಅಕ್ಷಿತಾ ಜೋಡಿ
ಇನ್ನೊಬ್ಬರ ಸಂಸಾರ ತಾಪತ್ರಯಗಳೊಳಗೆ ಇಣುಕಿ ನೋಡುವುದರಲ್ಲಿ ಕುತೂಹಲ, ಖುಷಿಗಳಿದ್ದಂತೆಯೇ ಕಲಿಯುವುದೂ ಸಾಕಷ್ಟಿರುತ್ತದೆ. ಕಲಿಯುವುದೂ, ನಲಿಯುವುದೂ ಎರಡೂ ಇರೋದ್ರಿಂದಲೇ ‘ರಾಜ-ರಾಣಿ’ ಶೋ ಕರ್ನಾಟಕದ ಮನೆಮಾತಾಗಿರೋದು. ಮತ್ತೊಂದು ವಿಶೇಷತೆ ಎಂದರೆ ಈ ಬಾರಿಯ ರಾಜ-ರಾಣಿ ಸೀಸನ್ 2ನಲ್ಲಿ ಕಾಮನ್ ಜೋಡಿಗಳಿಗೂ ಅವಕಾಶ ದೊರೆಯಲಿದ್ದು ವೀಕ್ಷಕರಿಗಾಗಿ ಒಂದು ಕಾಂಟೆಸ್ಟ್ ಏರ್ಪಡಿಸಲಾಗಿದೆ. ಈ ಕಾಂಟೆಸ್ಟ್‌ನಲ್ಲಿ ಗೆದ್ದ ಜೋಡಿಯು ಸ್ವಿಟ್ಜರ್ಲ್ಯಾಂಡ್‌ನಲ್ಲಿ ತಮ್ಮ ಎರಡನೇ ಹನಿಮೂನ್ ಅನ್ನು ಆಚರಿಸಿಕೊಳ್ಳಬಹುದು ಎಂದು ಘೋಷಿಸಿದ್ದರು.
ಬಳ್ಳಾರಿಯಿಂದ ದೊಡ್ಡಬಸವನ ಗೌಡ ಮತ್ತು ಪೂಜಾ ಸ್ವಿಟ್ಜರ್ಲ್ಯಾಂಡ್‌ಗೆ ಹೋಗುವ ಅವಕಾಶ ಪಡೆದುಕೊಂಡಿದ್ದಾರೆ. 'ಮದ್ವೆ ಮುಂಚೆನೇ ನಾನು ಸ್ವಿಟ್ಜರ್ಲ್ಯಾಂಡ್ ಕರೆದುಕೊಂಡು ಹೋಗ್ತೀನಿ ಅಂದಿದ್ದೆ ಈಗ ಅ ಕನಸು ನನಸು ಆಯ್ತು. ಕಲರ್ಸ್ ಕನ್ನಡ ಕೊಟ್ಟಿರುವ ಸರ್ಪ್ರೈಸ್‌ಗೆ ತುಂಬಾ ಖುಷಿಯಾಗಿದೆ. ವೀಕ್ಷಕರಿಗೆ ಈ ರೀತಿ ಅವಕಾಶ ಕೊಟ್ಟಿರುವುದಕ್ಕೆ ಖುಷಿ ಇದೆ' ಎಂದು ಹೇಳಿದ್ದಾರೆ.
ರಾಜಾ ರಾಣಿ 2 ಕಾಂಪಿಟೇಶನ್ ಅಲ್ಲ ಸೆಲೆಬ್ರೇಶನ್: ರಾಜೀವ್ ರೇಷ್ಮಾ ದಂಪತಿ!
ಕಾಂಪೌಂಡ್ ಹಾರಿಸಿ ಗರ್ಲ್‌ಫ್ರೆಂಡ್‌ನ ಎಸ್ಕೇಪ್ ಮಾಡಿದ ಅರುಣ್:
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ 2 ರಿಯಾಲಿಟಿ ಶೋನಲ್ಲಿ ಮಾಸ್ಟರ್ ಆನಂದ್ ಸಹೋದರ ಅರುಣ್ ಮತ್ತು ಅವರ ಪತ್ನಿ ಮಾಧುರ್ಯ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ತಮ್ಮ ಜೀವನದ ಮರೆಯಲಾಗದ ಘಟನೆಯನ್ನು ರಿವೀಲ್ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಅರುಣ್ ತಮ್ಮ ಗರ್ಲ್‌ಫ್ರೆಂಡ್ ಮಾಧುರ್ಯ ಮತ್ತು ಸ್ನೇಹಿತನನ್ನು ಗ್ರೂಪ್ ಸ್ಟಡಿ ಮಾಡಲು ಕರೆಸಿಕೊಂಡಿದ್ದರಂತೆ. ಮೂವರು ಮನೆಯಲ್ಲಿ ರುಚಿರಚಿಯಾಗಿ ಅಡುಗೆ ಮಾಡಿಕೊಂಡು ಎಂಜಾಯ್ ಮಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಡೋರ್ ಬೇಲ್ ಸೌಂಡ್ ಆಗಿದೆ. ಯಾರು ಅಂತ ಅರುಣ್ ನೋಡಿದ್ದರೆ ಅವರ ತಂದೆ ನಿಂತಿದ್ದಾರೆ. ಗಾಬರಿಗೊಂಡ ಮೂವರು ಮಾಧುರ್ಯರನ್ನು ಹಿಂದಿನ ಬಾಗಿಲಿನಿಂದ ಕಾಂಪೌಂಡ್ ಹಾರಿಸಿ ಎಸ್ಕೇಪ್ ಮಾಡಿಸಿದ್ದಾರೆ. ಮಜಾ ಏನೆಂದರೆ ಮಾಧುರ್ಯ ಹಿಂದಿನಿಂದ ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಅಲ್ಲದೆ ಮನೆಯಲ್ಲಿ ಏನೋ ನಡೆಯುತ್ತಿದೆ ಪತ್ತೆ ಮಾಡಬೇಕು ಎಂದು ಅರುಣ್ ತಂದೆ ಮಾಧುರ್ಯ ಬಿಟ್ಟಿದ್ದ ಚಪ್ಪಲಿ ಮೇಲೆ ಅವರ ಚಪ್ಪಲಿ ಬಿಟ್ಟಿದ್ದಾರೆ.
ಊಟ ಮಾಡಲು ಮೂರು ತಟ್ಟೆ ಇಟ್ಟುಕೊಂಡಿದ್ದರಂತೆ, ಯಾಕೆ ಮೂರು ತಟ್ಟೆ ಎಂದು ಪ್ರಶ್ನೆ ಮಾಡಿದ್ದರಂತೆ. ಆಗ ಇಲ್ಲ ಅದನ್ನು ಕೆಲಸ ಮಾಡುವ ಆಂಟಿಗೆ ಕೊಡಲು ಎಂದು ಸುಳ್ಳು ಹೇಳಿದ್ದರಂತೆ. ಒಂದಾದ ಮೇಲೊಂದು ಸುಳ್ಳು ಹೇಳಬೇಕು ಎಂದು ಒಂದು ದಿನ ಅರುಣ್ ಮನೆಯಲ್ಲಿ ಏನಾಯ್ತು ಎಂದು ತಂದೆಗೆ ತಿಳಿಸಿದ್ದಾರೆ. ಅಣ್ಣ ಆನಂದ್ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮದುವೆಯಾಗಿದ್ದಾರೆ.