ಬಾಡಿಗೆ ಕಟ್ಟಲಿಕ್ಕಾಗದೇ ಬಾಂಬೆ ಬಿಟ್ಟು ಬೆಂಗಳೂರಿಗೆ ಬಂದವಳೀಗ ಸೀರಿಯಲ್ ನಾಯಕಿ

By Suvarna NewsFirst Published Jul 8, 2022, 1:27 PM IST
Highlights

'ಒಲವಿನ ಉಡುಗೊರೆ' ಕಲರ್ಸ್ ಕನ್ನಡದಲ್ಲಿ ಪ್ರಸಾರ ಆರಂಭಿಸುತ್ತಿರುವ ಹೊಸ ಸೀರಿಯಲ್. ಇದರ ನಾಯಕಿ ಹೆಸರು ಅಮಿತಾ ಸದಾಶಿವ ಕುಲಾಲ್. ಮಂಗಳೂರಿನ ಪೋರಿ. ಬಾಡಿಗೆ ಕಟ್ಟಲಾಗದೇ ಬಾಂಬೆ ಬಿಟ್ಟು ಬೆಂಗಳೂರಿಗೆ ಬಂದ ಈಕೆಯ ಸ್ಟೋರಿ ಇಂಟರೆಸ್ಟಿಂಗ್‌ ಆಗಿದೆ.

ಬಟ್ಟಲು ಕಣ್ಣು, ಚಿಕ್ಕ ಹುಡುಗಿಯಂತೆ ಇನ್ನೋಸೆಂಟ್ ಮಾತು, ಆದರೂ ಲುಕ್‌ನಲ್ಲೊಂದು ಅಟ್ರಾಕ್ಷನ್. ಈ ಹುಡುಗಿಯ ಹೆಸರು ಅಮಿತಾ ಸದಾಶಿವ ಕುಲಾಲ್. ಇಷ್ಟೂದ್ದ ಹೆಸರಿನ ಈಕೆ ಕುಡ್ಲದ ಸುಂದರಿ. ಬಾಂಬೆಯಲ್ಲೂ ಕೆಲ ಕಾಲ ಇದ್ದು ಇದ್ದು ಬಂದಾಕೆ. ಮಂಗಳೂರು ಆಕ್ಸೆಂಟ್‌ನಲ್ಲಿ ಕನ್ನಡ ಮಾತಾಡುವ ಈ ಹುಡುಗಿಯ ಕತೆ ಇಂಟರೆಸ್ಟಿಂಗ್ ಆಗಿದೆ. 

ಹಾಗೆ ನೋಡಿದರೆ ಸೀರಿಯಲ್, ಸಿನಿಮಾದಲ್ಲಿರುವ ಪ್ರತೀ ನಟ ನಟಿಯರ ಹಿನ್ನೆಲೆಯಲ್ಲೂ ಆಸಕ್ತಿಕರ ಅಂಶಗಳಿರುತ್ತವೆ. 'ಹಿಟ್ಲರ್ ಕಲ್ಯಾಣ'ದ ನಾಯಕಿ ಲೀಲಾ ಪಾತ್ರದಿಂದ ಮನೆ ಮಾತಾಗಿರುವ ಮಲೈಕಾ ವಸುಪಾಲ್ ಒಂದು ಕಾಲದಲ್ಲಿ ಸೀರಿಯಲ್‌ನಲ್ಲಿ ಚಾನ್ಸ್ ಕೇಳ್ಕೊಂಡು ಆಡಿಶನ್ ಮೇಲೆ ಆಡಿಶನ್ ಅಟೆಂಡ್ ಮಾಡಿದ್ರು. ಇದಕ್ಕಾಗಿ ತನ್ನೂರು ದಾವಣಗೆರೆಯಿಂದ ಬೆಂಗಳೂರಿಗೆ ಓಡಾಡಿ ಮತ್ತೆ ನಿರಾಸೆಯಿಂದ ಮರಳುತ್ತಿದ್ದ ಅವರಿಗೆ ಹಿಟ್ಲರ್ ಕಲ್ಯಾಣದಂಥಾ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಾಗ ಅವರ ಲೈಫೇ ಬದಲಾಯ್ತು. ಈಗ ಅವರು 'ಉಪಾಧ್ಯಕ್ಷ' ಸಿನಿಮಾದ ನಾಯಕಿಯೂ ಆಗಿದ್ದಾರೆ. 'ಲಕ್ಷಣಾ' ನಾಯಕಿ ವಿಜಯಲಕ್ಷ್ಮಿಯೂ ಬಹಳ ಕಷ್ಟದಿಂದ ಸೀರಿಯಲ್‌ನಲ್ಲಿ ಅವಕಾಶ ಪಡೆದು ಈಗ ಮಿಂಚುತ್ತಿದ್ದಾರೆ. 

 

 

Lakshana Serial: ಅಮ್ಮನನ್ನೇ ಕೆಳ ನೂಕಿದ ಮಗಳು! ರೀರಲ್ಲೂ ಇವೆ ರಿಯಲ್‌ ಸಂಗತಿ!

ಅಮಿತಾ ವಿಚಾರಕ್ಕೆ ಬರೋದಾದರೆ ಈಕೆಯ ಊರು ಮಂಗಳೂರು. ಯಾರಾದ್ರೂ ಏನು ಓದಿರೋದು ಅಂತ ಕೇಳಿದ್ರೆ ತಕ್ಷಣಕ್ಕೆ, 'ನಾನು ಹತ್ತನೇ ಕ್ಲಾಸ್ ಫೇಲು' ಅಂತಂದು ಕಣ್ ಹೊಡೀತಾರೆ. ಸೀರಿಯಲ್ ಸೆಟ್‌ನಲ್ಲೂ ಈ ಥರ ಹೇಳಿ ಸೆಟ್ ಹುಡುಗರ ತಲೆಗೆ ಹುಳ ಬಿಟ್ಟಿದ್ದಾರೆ. ಆದರೆ ನಿಜಕ್ಕೂ ಈಕೆ ಕಂಪ್ಯೂಟರ್ ಸೈನ್ಸ್ ಪದವೀಧರೆ. ಭರತನಾಟ್ಯದಲ್ಲಿ ಸೀನಿಯರ್ ಎಕ್ಸಾಂ ಪಾಸ್ ಮಾಡಿ ದೇಶಾದ್ಯಂತ ಪ್ರದರ್ಶನ ಕೊಟ್ಟಿದ್ದಾರೆ. ಹದಿನೇಳನೇ ವಯಸ್ಸಿಗೇ ಬಾಂಬೆಗೆ ಹೋಗಿ ಅಲ್ಲಿ ಮಾಡೆಲಿಂಗ್ ನಲ್ಲಿ ಮಿಂಚಿದವರು. ಹಿಂದಿ ರಂಗಭೂಮಿಯಲ್ಲಿ ಆಕ್ಟಿಂಗ್ ಸ್ಕಿಲ್ಸ್ ಕಲಿತವರು. ಆದರೆ ಕೋವಿಡ್ ಬಂದು ಪ್ರಾಜೆಕ್ಟ್‌ಗಳೆಲ್ಲ ಕೈ ಬಿಟ್ಟಾಗ ಅಲ್ಲಿ ರೂಮ್‌ ಬಾಡಿಗೆ ಕಟ್ಟಲಾಗದೇ ಮಂಗಳೂರಿನ ಮನೆಗೆ ಮರಳಿದವರು. 

ಕೆಟ್ನಾಗಿ ಕಮೆಂಟ್ಸ್ ಮಾಡೋರಿಗೆ ಕ್ಲಾಸ್ ತಗೊಂಡ ಗಟ್ಟಿಮೇಳದ ಅಮೂಲ್ಯ

ಇಲ್ಲಿಗೆ ಬಂದಮೇಲೆ ಸೀರಿಯಲ್‌, ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಸಾಕಷ್ಟು ಕಡೆ ಅಲೆದಾಡಿದ್ರು. ಎಲ್ಲಿ ಹೋದರೂ ಇವರ ಭಾಷೆಯೇ ಸೆಲೆಕ್ಷನ್‌ಗೆ ಅಡ್ಡಿ ಆಗ್ತಿತ್ತು. ಇವರದು ಮಂಗಳೂರು ಶೈಲಿಯ ಅಚ್ಚಗನ್ನಡ. ಮಾತೃಭಾಷೆ ತುಳುವಾದರೂ ಇವರ ತಂದೆಗೆ ತನ್ನ ಮಗಳು ಮುಂದೆ ಕನ್ನಡ ಎಂ ಎ ಮಾಡಬೇಕು ಅನ್ನೋ ಕನಸು ಇತ್ತಂತೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೂ ಮಾತೃಭಾಷೆ ತುಳು ಆಗಿದ್ದರೂ ಅದನ್ನು ಬಿಟ್ಟು ಕನ್ನಡವನ್ನೇ ಮಾತಾಡುತ್ತಿದ್ದರು. ಆದರೆ ಮಂಗಳೂರು ಶೈಲಿಯ ಕನ್ನಡವೇ ಇವರ ಶತ್ರುವಾಗಿತ್ತು. ಸೀರಿಯಲ್‌ಗೆ ಬೆಂಗಳೂರಿನ ಇಂಗ್ಲೀಷ್ ಬೆರೆತ ಭಾಷೆಯೇ ಬೇಕಿತ್ತೇನೋ. ಲುಕ್‌ನಲ್ಲಿ ಸೆಲೆಕ್ಟ್ ಆದರೂ ಭಾಷೆ ಸರಿ ಹೋಗದ ಎಷ್ಟು ಆಡಿಶನ್ ಕೊಟ್ಟರೂ ಆಯ್ಕೆ ಆಗಲಿಲ್ಲ.

ಆದರೆ ಅನುಭವಿ ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ನುರಿತ ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಇದೆಲ್ಲ ಮ್ಯಾಟರೇ ಆಗಲಿಲ್ಲ. ತಾನು ಭಾಷೆಯ ಕಾರಣಕ್ಕೆ ಬೇರೆ ಸೀರಿಯಲ್‌ಗಳಲ್ಲಿ ಸೆಲೆಕ್ಟ್ ಆಗುತ್ತಿರಲಿಲ್ಲ ಅನ್ನೋ ವಿಚಾರವನ್ನು ಇನ್ನೋಸೆಂಟ್‌ ಆಗಿ ಹೇಳಿಕೊಂಡರೂ ಅವರು ಅದೆಲ್ಲ ಏನಾಗಲ್ಲ, ಸರಿ ಇಲ್ಲ ಅನಿಸಿದರೆ ನಾವು ಸರಿ ಪಡಿಸ್ತೀವಿ, ನೀನು ಆಕ್ಟಿಂಗ್ ಮಾಡು ಅಂತ ಕಾನ್ಫಿಡೆನ್ಸ್ ತುಂಬಿದರು. ಅದೇ ಆತ್ಮವಿಶ್ವಾಸದಲ್ಲಿ ಈ ಹುಡುಗಿ ಇಂದು 'ಒಲವಿನ ನಿಲ್ದಾಣ' ಸೀರಿಯಲ್ ನಾಯಕಿಯಾಗಿದ್ದಾರೆ. ಅಪ್ಪಿತಪ್ಪಿ ಮಂಗಳೂರು ಕನ್ನಡ ನುಸುಳಿದರೆ ರಂಗಭೂಮಿ ಹಿನ್ನೆಲೆ ಇರುವ ಹಿರಿಯ ನಟ ಮಂಡ್ಯ ರಮೇಶ್, 'ಮಂಗ್ಳೂರು ಕನ್ನಡ..' ಅಂತ ಎಚ್ಚರಿಸುತ್ತಾರಂತೆ. ಆಗ ಮತ್ತೆ  ಮಲೆನಾಡ ಕನ್ನಡಕ್ಕೆ ಶಿಫ್ಟ್ ಆಗ್ತಾರಂತೆ ಅಮಿತಾ.

'ಒಲವಿನ ನಿಲ್ದಾಣ'ದ ತಾರಿಣಿ ಎಂಬ ಮುದ್ದು ಹುಡುಗಿ ಪಾತ್ರದಲ್ಲಿ ಅಮಿತಾ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಅಕ್ಷಯ್ ನಾಯಕನಾಗಿ ನಟಿಸುತ್ತಿದ್ದಾರೆ. ಮಲೆನಾಡ ಹುಡುಗಿ, ಬೆಂಗಳೂರು ಹುಡುಗನ ಪ್ರೇಮ, ಸಂಬಂಧ, ಸ್ಟ್ರಗಲ್ ಗಳ ಕಥೆ ಈ ಸೀರಿಯಲ್‌ನದು. 

ಕನ್ನಡತಿ ರಂಜನಿ ರಾಘವನ್ ಲಂಗ ದಾವಣಿ ಡ್ಯಾನ್ಸ್ ಈಗ ವೈರಲ್!

click me!