
ಬಿಗ್ ಬಾಸ್ ಮನೆಗೆ ಕಾಲಿಟ್ಟ ಮರುಕ್ಷಣವೇ ಮನೆಯಿಂದ ಕಾಣೆಯಾಗಿದ್ದ ತುಳುನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ಅಧಿಕೃತವಾಗಿ ಬಿಗ್ ಬಾಸ್ ಮನೆಗೆ ಲೇಟಾಗಿ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ರಕ್ಷಿತಾ ಮನೆಯೊಳಗೆ ಹೋದಾಕ್ಷಣ ಮಾತನಾಡಿದ ಮಾತುಗಳಿಗೆ 18 ಜನ ಕಂಟೆಸ್ಟೆಂಟ್‌ಗಳು ಥರಗುಟ್ಟಿ ಹೋಗಿದ್ದಾರೆ. ಜೊತೆಗೆ, ಒಂದು ಪ್ರಶ್ನೆ ಕೇಳಿದ ನಿರೂಪಕ ಕಿಚ್ಚ ಸುದೀಪ್ ಕೂಡ, ರಕ್ಷಿತಾ ಉತ್ತರವನ್ನು ಕೇಳಿ ಶಾಕ್ ಆಗಿದ್ದಾರೆ.
ರಕ್ಷಿತಾ ಶೆಟ್ಟಿ ಮನೆಯೊಳಗೆ ಕಾಲಿಟ್ಟ ಮರುಕ್ಷಣವೇ ಮನೆಯೊಳಗಿದ್ದ 18 ಕಂಟೆಸ್ಟೆಂಟ್‌ಗಳಿಗೆ ಭಾರೀ ಕ್ಲಾಸ್ ತೆಗೆದುಕೊಂಡಿದ್ದಾರೆ. ನನ್ನನ್ನು ಮನೆಯಿಂದ ಹೊರಗೆ ಹಾಕಲು ಹಲವರು ಅನೇಕ ಕಾರಣಗಳನ್ನು ಕೊಟ್ಟಿದ್ದಾರೆ. ಆದರೆ, ಇವರು ಕೊಟ್ಟ ಕಾರಣಗಳು ಯಾವುದೂ ಸೂಕ್ತ ಆಗಿರಲಿಲ್ಲ. ಇಲ್ಲಿ ಯಾರೂ ಚಿಕ್ಕವರು-ದೊಡ್ಡವರು, ಸೆಲೆಬ್ರಿಟಿ-ನಾನ್ ಸೆಲೆಬ್ರಿಟಿ ಅನ್ನೋದು ಲೆಕ್ಕಕ್ಕಿಲ್ಲ. ದೊಡ್ಡ ದೊಡ್ಡ ಮಾತನಾಡಲು ಎಲ್ಲರಿಗೂ ಬರುತ್ತದೆ. ನ್ಯಾಯ ಏನಿದೆ ಎಂಬುದನ್ನು ಆಲೋಚನೆ ಮಾಡಬೇಕು ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಎಲ್ಲ ಕಂಟೆಸ್ಟೆಂಟ್‌ಗಳ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ನಿರೂಪಕ ಕಿಚ್ಚ ಸುದೀಪ್ ಅವರು, 'ನಿಮಗೆ ಓಟು ಹಾಕಿ ಹೊರಗೆ ಹಾಕಿದ ಯಾರಾದರೂ ಒಬ್ಬರನ್ನು ಹೊರಗೆ ಹಾಕಬೇಕು ಎಂದು ಹೇಳಿದರೆ ಯಾರನ್ನ ಹೊರಗೆ ಹಾಕ್ತೀರಿ' ಎಂದು ಪ್ರಶ್ನೆ ಮಾಡುತ್ತಾರೆ. ಆಗ ಇದಕ್ಕೆ ಉತ್ತರ ಕೊಟ್ಟ ರಕ್ಷಿತಾ ಶೆಟ್ಟಿ ಯಾರಾದರೂ ಒಬ್ಬರು ಅಲ್ಲ, ಎಲ್ಲರನ್ನೂ ಹೊರಗೆ ಹಾಕ್ತೇನೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಮೊದಲ ದಿನವೇ ನಾಮಿನೇಷನ್ ಮಾಡಿ ತುಳುನಾಡಿನ ಕನ್ನಡತಿ ರಕ್ಷಿತಾ ಶೆಟ್ಟಿ ಅವರನ್ನು ಹೊರಗೆ ಕಳುಹಿಸಿದ್ದು ಬಿಗ್ ಬಾಸ್ ವೀಕ್ಷಕರಿಗೆ ತೀವ್ರ ಬೇಸರ ತಂದಿತ್ತು. ಈ ನಿರ್ಧಾರ ತಪ್ಪು ಎಂದು ಹಲವು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿಯ ಬಿಗ್ ಬಾಸ್ ಆಡಳಿತವು ವೀಕ್ಷಕರ ಬೇಡಿಕೆಗೆ ಮಣಿದು ರಕ್ಷಿತಾ ಶೆಟ್ಟಿಯವರಿಗೆ ಮರಳಿ ಅವಕಾಶ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮನೆಯಿಂದ ಹೊರಹೋಗುವಾಗಲೂ 'ಒಂದಲ್ಲ ಒಂದು ದಿನ ಎಲ್ಲರೂ ಹೋಗಬೇಕು. ಇಂದು ನಾನು ಹೋಗುತ್ತಿದ್ದೇನೆ' ಎಂದು ಹೇಳಿ ಸಮಾಧಾನದಿಂದ ಹೊರನಡೆದಿದ್ದ ರಕ್ಷಿತಾ, ಇದೀಗ ಮರಳಿ ಬಂದು ಪ್ರಾಪರ್ ರೀಸನ್ ಕೇಳಿ, ತಮ್ಮ ನಿರ್ಧಾರದ ಬಗ್ಗೆ ಸ್ಟ್ಯಾಂಡ್ ತೆಗೆದುಕೊಳ್ಳುವಂತೆ ಸ್ಪರ್ಧಿಗಳಿಗೆ ಸವಾಲು ಹಾಕಿದ್ದಾರೆ. ರಕ್ಷಿತಾ ಶೆಟ್ಟಿ ಅವರ ಈ ಮರು ಎಂಟ್ರಿ ಬಿಗ್ ಬಾಸ್ ಆಟಕ್ಕೆ ಹೊಸ ತಿರುವು ನೀಡಿದ್ದು, ಮುಂಬರುವ ದಿನಗಳಲ್ಲಿ ಮನೆಯಲ್ಲಿ ಭಾರೀ ಜಟಾಪಟಿ ನಡೆಯುವ ಸಾಧ್ಯತೆ ಇದೆ.
ನಾನು ಹೇಗೆ ಅಂತ ಅಲ್ಲಿದ್ದವರಿಗೆ ಗೊತ್ತಿಲ್ಲ, ಕೆಲವೇ ಟೈಮ್‌ನಲ್ಲಿ ನನ್ನನ್ನು ಅವರು ಹೇಗೆ ನಾಮಿನೇಟ್ ಮಾಡ್ತಾರೆ? ಈ ಪ್ರಶ್ನೆಯನ್ನು ನಾನು ಅವರಿಗೆ ಕೇಳಬೇಕು. ಅಶ್ವಿನಿ ಮೇಡಂ ಅವರು ನನ್ನ ಬಗ್ಗೆ ಸ್ಟ್ಯಾಂಡ್ ತಗೊಳ್ಳಲಿಲ್ಲ, ಅದನ್ನು ಪ್ರಶ್ನೆ ಮಾಡಬೇಕು. ಪುಸ್ತಕದ ಕವರ್ ನೋಡಿ ಜಡ್ಜ್ ಮಾಡಬಾರದು, ಅದರೊಳಗಡೆ ಏನಿದೆ ಅಂತ ಗೊತ್ತಿಲ್ಲ. ಸ್ಪಂದನಾ, ಮಾಳು ನಿಪನಾಳ ಅವರಿಗೂ ಕೂಡ ಈ ಶೋನಲ್ಲಿ ಇರಲು ಯೋಗ್ಯತೆ ಇಲ್ಲದೆ ಇರಬಹುದು, ನನಗೆ ಆ ಯೋಗ್ಯತೆ ಇರಬಹುದು' ಎಂದು ರಕ್ಷಿತಾ ಶೆಟ್ಟಿ ಆಕ್ರೋಶ ಹೊರಹಾಕಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.