
ಬಿಗ್ ಬಾಸ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಮಜಾ ಟಾಕೀಸ್ ಆರಂಭವಾಗಿದೆ. ಅತಿ ಹೆಚ್ಚು ಟಿಆರ್‌ಪಿ ಪಡೆಯುವ ಈ ಶೋ ಸೃಜನ್ ಲೋಕೇಶ್ ನಿರೂಪಣೆಯಲ್ಲಿ ನಡೆಯುತ್ತದೆ. ಇಷ್ಟು ದಿನ ಬರುತ್ತಿದ್ದ ರೀತಿಗೂ ಈಗ ಬರುತ್ತಿರುವ ರೀತಿಗೂ ಕೊಂಚ ಬದಲಾವಣೆ ಇದೆ. ಪ್ರತಿ ಎಪಿಸೋಡ್‌ನಲ್ಲಿ ವಿಭಿನ್ನತೆ ಕಾಣಬಹುದು. ಕಳೆದ ವಾರ ನಟ ಶರಣ್ ಮತ್ತು ತರುಣ್ ಸುಧೀರ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವಾರ ಸೋನಲ್ ಆಗಮಿಸಿದ್ದಾರೆ.
ಹೌದು! ಈ ವಾರ ಡೈನಾಮಿಕ್ ಸ್ಟಾರ್ ದೇವರಾಜ್ ಫ್ಯಾಮಿಲಿ ಮಜಾ ಮನೆಗೆ ಆಗಮಿಸಿದ್ದಾರೆ. ಕಾಮಿಡಿ ಮಾಡಿಕೊಂಡು ಸಖತ್ ಜಾಲಿ ಮಾಡಿದ್ದಾರೆ. ಇದೇ ಸಮಯದಲ್ಲಿ ನಟಿ ಸೋನಲ್ ಮೊಂಥೆರೋ ಕೂಡ ಆಗಮಿಸಿದ್ದಾರೆ. ಇದನ್ನು ನೋಡಿದ ಕುರಿ ಪ್ರತಾಪ್ 'ಒಂದು ಎಪಿಸೋಡ್‌ನಲ್ಲಿ ಗಂಡನ ಕರ್ಸ್ಕೊಂಡು ಬಂದು ಕೂರಿಸಿಕೊಳ್ಳುತ್ತೀಯಾ ಇನ್ನೊಂದು ಎಪಿಸೋಡ್‌ನಲ್ಲಿ ಹೆಂಡತಿನ ಕರ್ಕೊಂಡು ಬಂದು ಕೂರಿಸೋದು...ಅವರೇನು ಸಂಸಾರನೇ ಮಾಡೋದು ಬೇಡವಾ?' ಎಂದು ಕುರಿ ಪ್ರತಾಪ್ ಪಂಚ್ ಕೊಟ್ಟಿದ್ದಾರೆ.
6 ವರ್ಷ ಸೀರಿಯಲ್ ಬಿಟ್ಟಿದ್ರೂ ಅವಕಾಶ ಬಂತು ಆದರೆ ನಾನು ಕಂಡಿಷನ್ ಹಾಕಿದೆ: 'ಭಾಗ್ಯ ಲಕ್ಷ್ಮಿ' ಕಾವೇರಿ
ಈ ವೇಳೆ ಕಾಮಿಡಿ ಡಬಲ್ ಮಾಡಲು ಕುರಿ ಪ್ರತಾಪ್ ಸೀರೆ ವ್ಯಾಪಾರ ಶುರು ಮಾಡಿದ್ದಾರೆ. ಬ್ಲೌಸ್ ಪೀಸ್‌ನ ತರಕಾರಿ ಗಾಡಿ ಮೇಲೆ ಹಾಕಿ ಮಾರಾಟ ಮಾಡಿದ್ದಾರೆ. 50% ರಿಯಾಯಿತಿ ಎಂದು ಹೇಳಿಕೊಂಡು ಬ್ಲೌಸ್ ಪೀಸ್‌ನ ಮಾರಲು ಬಂದು ಸಿಕ್ಕಾಕೊಂಡಿದ್ದಾರೆ. ಇದೊಂದು ಫನ್ ಕಾಮಿಡಿ ಎಪಿಸೋಡ್ ಆಗಿರಲಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಕೂಡ ಭಾಗಿಯಾಗಿದ್ದರು. ರಾಗಿಣಿ ನಟಿಸಿರುವ ಶ್ಯಾನಭೋಗರ ಮಗಳು ಸಿನಿಮಾ ರಿಲೀಸ್ ಆಗಿದೆ ಹೀಗಾಗಿ ಮಜಾ ಟಾಕೀಸ್‌ನಲ್ಲಿ ಪ್ರಮೋಷನ್ ಕೂಡ ಭರ್ಜರಿಯಾಗಿ ನಡೆದಿದೆ. 'ಕುರಿ ಪ್ರತಾಪ್ ಇರುವುದಕ್ಕೆ ಕಾಮಿಡಿ ಮಸ್ತ್ ಆಗಿದೆ' ಎಂದು ಸಖತ್ ಪಾಸಿಟಿವ್ ಕಾಮೆಂಟ್ ಬರುತ್ತಿದೆ. ಈ ಸೀಸನ್‌ನಲ್ಲಿ ಯೋಗರಾಜ್ ಭಟ್, ತುಕಾಲಿ ಸಂತೋಷ್, ಶಿವು, ವಿನೋದ್ ಗೊಬ್ಬರಗಾಲ, ಪ್ರಿಯಾಂಕಾ, ಕುರಿ ಪ್ರತಾಪ್ ಹಾಗೂ ಚಂದ್ರಪ್ರಭಾ ಇದ್ದಾರೆ.
ಆರೇಂಜ್ ಸೀರೆಯಲ್ಲಿ ಮಿಂಚಿದ ಕಾವ್ಯಾ ಗೌಡ; ಬೇರೆಯವರ ಮದ್ವೆಗೆ ರೆಡಿ ಆಗೋಕೆ ಬೇಜಾರ್ ಆಗಲ್ವಾ ಎಂದ ಫ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.