
Kannada Serial Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಗೆ ಮತ್ತಷ್ಟು ರೋಚಕ ತಿರುವು ನೋಡಲು ತ್ರಿಕಾಲಜ್ಞಾನಿಗಳ ಗುರುಗಳ ಆಗಮನವಾಗಿದೆ. ಪ್ರತಿಬಾರಿಯೂ ಧಾರಾವಾಹಿಯಲ್ಲಿ ಕಾಲಜ್ಞಾನಿಗಳ ಗುರುಗಳು ಬಂದಾಗ ಪ್ರೇಕ್ಷಕರಿಗೆ ಮುಂದೆ ಕಥೆ ಹೇಗೆ ಸಾಗಲಿದೆ ಎಂಬುದರ ಸಣ್ಣ ಸುಳಿವು ಸಿಗುತ್ತದೆ. ಒಗಟಾಗಿ ಮಾತನಾಡುವ ಗುರುಗಳ ಮಾತು ಕೆಲವರಿಗೆ ಅರ್ಥವಾದ್ರೆ ಮತ್ತೊಂದಿಷ್ಟು ಮಂದಿ ಉಡಾಫೆ ಮಾಡುತ್ತಾರೆ. ಈಗ ಕಾಲಜ್ಞಾನಿಗಳ ಮಾತಿನಿಂದ ಸಿದ್ದೇಗೌಡ ಮತ್ತು ಜಯಂತ್ ಎದೆಯಲ್ಲಿ ನಡುಕು ಶುರುವಾಗಿದೆ. ಮತ್ತೊಂದೆಡೆ ಭಾವನಾ ಮಾತ್ರ ಖುಷಿಯಾಗಿದ್ದಾಳೆ. ಇತ್ತ ಬಹು ದಿನಗಳ ಬಳಿಕ ಮನೆಗೆ ಬಂದಿರುವ ತಾಯಿಯನ್ನು ಕಂಡು ವೀಣಾ ಸಹ ಫುಲ್ ಹ್ಯಾಪಿ ಹ್ಯಾಪಿಯಾಗಿದ್ದಾಳೆ. ಇತ್ತ ವೀಣಾ ತಾಯಿ ಕಂಡು ಕೊಂಕು ಮಾತನಾಡಿದ್ದ ಕಿರಿ ಸೊಸೆ ಸಿಂಚನಾಳಿಗೆ ಮಾವ ಶ್ರೀನಿವಾಸ್ ಕಣ್ಸನ್ನೆಯಲ್ಲಿ ಎಚ್ಚರಿಕೆ ನೀಡಿದ್ದಾನೆ.
ಶಿವರಾತ್ರಿ ಹಿನ್ನೆಲೆ ಜವರೇಗೌಡರು ಮಗ ಸಿದ್ದೇಗೌಡ ಮತ್ತು ಸೊಸೆ ಭಾವನಾಳನ್ನು ದೇವಸ್ಥಾನಕ್ಕೆ ಕಳುಹಿಸಿದ್ದಾಳೆ. ದೇವಸ್ಥಾನದಲ್ಲಿ ಇಬ್ಬರಿಗೂ ಕಾಲಜ್ಞಾನಿಗಳ ಗುರುಗಳ ದರ್ಶನವಾಗಿದೆ. ಗುರುಗಳ ಮುಂದೆ ಕುಳಿತು ನಾನು ಮತ್ತು ಭಾವನಾ ಖುಷಿಯಾಗಿದ್ದೇವೆ. ನಾನು ಸಂತೋಷವಾಗಿ ಬದುಕುತ್ತಿದ್ದೇವೆ ಎಂದು ಸಿದ್ಧೇಗಗೌಡರು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಂತೆ ಕಾಲಜ್ಞಾನಿಗಳ ಗುರುಗಳು, ಇದು ಕಡಿಮೆ ಸಮಯದ ಸಂತೋಷ ಎಂದು ಹೇಳಿ ಮುಂದೆ ಜೈಲುಪಾಲಾಗುವ ಸುಳಿವನ್ನು ನೀಡಿದ್ದಾರೆ. ಮತ್ತೊಂದೆಡೆ ಸತ್ಯ ಶೋಧದಲ್ಲಿರುವ ಭಾವನಾಗೆ ಒಳ್ಳೆಯದಾಗಲಿದೆ ಎಂದು ಗುರುಗಳು ಆಶೀರ್ವಾದ ಮಾಡಿದ್ದಾರೆ.
ಗುರುಗಳು ಹೇಳಿದ ಮಾತುಗಳಿಂದ ಸಿದ್ದೇಗೌಡರ ಮನಸ್ಸಿನಲ್ಲಿ ಆತಂಕ ಸೃಷ್ಟಿಯಾಗಿದೆ. ಹಿಟ್ ಆಂಡ್ ರನ್ ಕೇಸ್‌ನಲ್ಲಿ ಅರೆಸ್ಟ್ ಆಗುವ ಭಯ ಸಿದ್ದೇಗೌಡರಿಗೆ ಶುರುವಾಗಿದೆ. ತನಗೆ ತಿಳಿಯಬೇಕಿರುವ ಸತ್ಯ ಶೀಘ್ರದಲ್ಲಯೇ ತಿಳಿಯಲಿದೆ ಎಂಬ ವಿಷಯ ಭಾವನಾ ಮೊಗದಲ್ಲಿ ಸಂತೋಷವನ್ನುಂಟು ಮಾಡಿದೆ. ಇದೆಲ್ಲಾ ಒಂದ್ಕಡೆಯಾದ್ರೆ ಮರಿಗೌಡ ಮತ್ತು ಜವರೇಗೌಡ ಅಪಘಾತ ಪ್ರಕರಣದಲ್ಲಿ ಹಣ ನೀಡಿ ಬೇರೆ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕೊನೆಗೂ ಸಿಕ್ತು ಸೈಕೋ ಜಯಂತ್‌ನ ಜುಟ್ಟು; ಪ್ಲೀಸ್ ಡಮ್ಮಿ ಕ್ಯಾರೆಕ್ಟರ್ ಮಾಡ್ಬೇಡಿ ಫ್ಯಾನ್ಸ್ ಡಿಮ್ಯಾಂಡ್
ಚಿನ್ನುಮರಿಗಾಗಿ ಜಯಂತ್ ಹುಡುಕಾಟ
ಮಗು ಕಳೆದುಕೊಂಡು ಭ್ರಮೆಯಲ್ಲಿರುವ ಚಿನ್ನುಮರಿ ಮನೆಯಿಂದ ಹೊರಗೆ ಬಂದಿದ್ದಾಳೆ. ತುಮಕೂರಿನ ಬಸ್ ಹತ್ತಿ ಚಿನ್ನುಮರಿ ಹೋಗಿರುವ ವಿಷಯ ಜಯಂತ್‌ಗೆ ಗೊತ್ತಾಗಿದೆ. ಜಾಹ್ನವಿ ತವರು ಸೇರುವ ಮೊದಲೇ ಆಕೆಯನ್ನು ತಡೆಯಬೇಕೆಂದು ಜಯಂತ್ ಮುಂದಾಗಿದ್ದಾನೆ. ಇತ್ತ ಜಾನು ದೇವಸ್ಥಾನಕ್ಕೆ ಬಂದು ಶಿವನ ಹಾಡು ಕೇಳುತ್ತಾ, ದೇವರಲ್ಲಿ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾಳೆ. ಜಾನು ಹುಡುಕಾಟದಲ್ಲಿರೋ ಜಯಂತ್‌ಗೂ ಕಾಲಜ್ಞಾನಿಗಳ ಗುರುಗಳ ದರ್ಶನವಾಗಿದೆ. ಗಿಡುಗನ ಕೈಯಿಂದ ತಪ್ಪಿಸಿಕೊಂಡ ಪಕ್ಷಿ ಸ್ವತಂತ್ರ ಬಯಸಿ ಹೊರ ಬಂದಿದೆ. ಇದ್ದಾಗ ಪ್ರೀತಿಯಿಂದ ನೋಡದೇ ಈಗ ಹುಡುಕಾಡಿದ್ರೆ ಏನು ಪ್ರಯೋಜನ. ಒಮ್ಮೆ ಹೋದ ಪ್ರೀತಿ ಮತ್ತೆ ಸಿಗಲ್ಲ ಎಂದು ಕಾಲಜ್ಞಾನಿಗಳ ಗುರುಗಳು ಭವಿಷ್ಯ ನುಡಿದಿದ್ದಾರೆ. ತನಗೆ ಜಾನು ಮತ್ತೆ ಸಿಗಲ್ವಾ ಅನ್ನೋ ಆತಂಕದಲ್ಲಿಯೇ ಜಯಂತ್ ಪತ್ನಿಯನ್ನು ಹುಡುಕುತ್ತಿದ್ದಾನೆ.
ಬಹುದಿನಗಳ ಬಳಿಕ ವೀಣಾ ಹ್ಯಾಪಿ ಹ್ಯಾಪಿ
ಜಿಪುಣ ಗಂಡನಿಗೆ ಹೇಳಿ ತಾಯಿಯನ್ನು ವೀಣಾ ಕರೆಸಿಕೊಂಡಿದ್ದಾಳೆ. ಪತ್ನಿಯ ತಾಯಿ ಮನೆಗೆ ಬಂದ್ರೆ ಬಿಟ್ಟಿ ಊಟ ಹಾಕಬೇಕಲ್ವಾ ಎಂದು ಗೊಣಗುತ್ತಲೇ ಸಂತೋಷ್ ಅತ್ತೆಯನ್ನು ಕರೆದುಕೊಂಡು ಬಂದಿದ್ದಾನೆ. ಮನೆ ಎರಡು ಭಾಗ ಆಗಿರೋದನ್ನು ಕಂಡು ವೀಣಾ ತಾಯಿಗೆ ಆಶ್ಚರ್ಯವಾಗಿದೆ.
ಇದನ್ನೂ ಓದಿ: ಹುಚ್ಚಿಯಾಗಿ ಜಯಂತ್‌ನ ಬಂಗಾರದ ಪಂಜರದಿಂದ ಹೊರ ಬಂದ ಜಾನು; ವಿಶ್ವನ ಬಳಿ ಹೋಗ್ತಾಳಾ ಚಿನ್ನುಮರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.