ಕುಂಕುಮ ಭಾಗ್ಯ ನಟಿಯ ಬಾಳಲ್ಲಿ ಬಿರುಗಾಳಿ, 9 ವರ್ಷದ ದಾಂಪತ್ಯ ಜೀವನ ಅಂತ್ಯ

ಕುಂಕುಮ ಭಾಗ್ಯ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾಗಿರುವ ನಟಿಯ ಬಾಳಲಲ್ಲಿ ಬಿರುಗಾಳಿ ಎದ್ದಿದೆ. 9 ವರ್ಷದ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಅಷ್ಟಕ್ಕೂ  ಈ ಸುಂದರ ಸಂಸಾರಕ್ಕೆ ಯಾರ ಕಣ್ಣು ಬಿತ್ತು?
 


ಮುಂಬೈ(ಏ.05)  ಕುಂಕುಮ ಭಾಗ್ಯ ಸೇರಿದಂತೆ  ಹಲವು ಧಾರವಾಹಿಗಳ ಮೂಲಕ ವೀಕ್ಷರ ಮನಗೆದ್ದ ನಟಿ ಮುಗ್ಧಾ ಚಾಪೇಕರ್ ಬಾಳಲಲ್ಲಿ ಬಿರುಗಾಳಿ ಎದ್ದಿದೆ. ಪರಿಣಾಮ 9 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಮುಗ್ದಾ ಚಾಪೇಕರ್ ಹಾಗೂ ಆಕೆಯ ಪತಿ ರಾವಿಶ್ ದೆಸಾಯಿ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಿದ್ದಾರೆ. ಈ ಕುರಿತು ಇಬ್ಬರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ವಿಚ್ಚೇದನ ಖಚಿತಪಡಿಸಿದ್ದಾರೆ.

9 ವರ್ಷಗಳ ದಾಂಪತ್ಯ ಜೀವನ ಅಂತ್ಯ
9 ವರ್ಷಗಳ ಹಿಂದೆ ಮುಗ್ಗಾ ಚಾಪೇಕರ್ ಹಾಗೂ ರಾವಿಶ್ ದೇಸಾಯಿ ವೈವಾಹಿಕ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಬಳಿಕ ಹಲವು ವೇದಿಕೆಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಉತ್ತಮ ಜೋಡಿ ಎಂದೇ ಎಲ್ಲರಿಂದಲೂ ಕರೆಯಿಸಿಕೊಂಡಿದ್ದರು. ಆದರೆ 9 ವರ್ಷಗಳ ಬಳಿಕ ಇವರ ವಿಚ್ಚೇದನ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

Latest Videos

ವಿಚ್ಚೇದನ ಕುರಿತು ಸ್ಪಷ್ಟನೆ
ವಿಚ್ಚೇದನ ಕುರಿತು ರಾವಿಶ್ ದೇಸಾಯಿ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ಹಲವು ದಿನಗಳ ಮಾತುಕತೆ, ಚರ್ಚೆ, ಇರಿಸು ಮುರಿಸುಗಳ ಬಳಿಕ ನಾವಿಬ್ಬರು ಬೇರೆಯಾಗಲು ಪರಸ್ಪರ ಒಪ್ಪಿಕೊಂಡಿದ್ದೇವೆ. ಪತಿ ಹಾಗೂ ಪತ್ನಿಯಾಗಿದ್ದ ನಾವು ಇದೀಗ ಬೇರೆ ಯಾಗುತ್ತಿದ್ದೇವೆ.  ಮುಂದಿನ ದಿನಗಳಲ್ಲಿ ನಾವಿಬ್ಬರು ನಮ್ಮದೇ ದಾರಿಯಲ್ಲಿ ಸಾಗಲು ಬಯಸಿದ್ದೇವೆ. ಸರಿಸುಮಾರು ಕಳೆದ ಒಂದು ವರ್ಷದಿಂದ ನಾವು ಬೇರೆಯಾಗಿದ್ದೇವೆ. ಇದೀಗ ಅಧಿಕೃತಗೊಂಡಿದೆ. ಆದರೆ ನಮ್ಮೊಳಗಿನ ಪ್ರೀತಿ, ಗೌರವ, ಗೆಳೆತನ ಹಾಗೆ ಇರಲಿದೆ. ಈ ಸಂಕಷ್ಟದ ಸಮಯದಲ್ಲಿ ಅಭಿಮಾನಿಗಳು, ಆಪ್ತರು ನಮ್ಮ ಖಾಸಗಿತನ ಗೌರವಿಸಬೇಕಾಗಿ ಮನವಿ ಮಾಡುತ್ತೇವೆ ಎಂದು ರಾವಿ ದೇಸಾಯಿ ಹೇಳಿದ್ದಾರೆ.

ಕುಂಕುಮ ಭಾಗ್ಯ 
ಮುಗ್ಧಾ ಚಾಪೇಕರ್ ಜನಪ್ರಿಯ ಕುಂಕುಮ ಭಾಗ್ಯ ಶೋ ಮೂಲಕ ಅತ್ಯಂತ ಜನಪ್ರಿಯರಾಗಿದ್ದಾರೆ. ಹಿಂದಿ ಧಾರವಾಹಿ, ರಿಯಾಲಿಟಿ ಶೋ ಸೇರಿದಂತೆ ಹಲವು ವೇದಿಕೆಗಳಲ್ಲಿ ಮುಗ್ದಾ ಚಾಪೇಕರ್ ಮನೆ ಮಾತಾಗಿದ್ದಾರೆ. ಪತಿ ರಾವಿಶ್ ದೇಸಾಯಿ ಕೂಡ ಹಿಂದಿ ಧಾರವಾಹಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಮುಗ್ದಾ
ಮುಗ್ದಾ ಚಾಪೇಕರ್ ಹಾಗೂ ರಾವಿಶ್ ದೇಸಾಯಿ ಪ್ರೀತಿಸಿ ಮದುವೆಯಾಗಿದ್ದು. ಧಾರವಾಹಿ ಸೇರಿದಂತೆ ಇತರ ಟಿವಿ ಶೋಗಳ ಮೂಲಕ ಇವರು ಪ್ರೀತಿ ಆರಂಭಗೊಂಡಿತ್ತು. ಶೂಟಿಂಗ್ ಸೆಟ್‌ಗಳಲ್ಲಿ, ಸೇರಿದಂತೆ ಹಲವು ಕಾರ್ಯಕ್ರಗಳಲ್ಲಿ ಜೊತೆಯಾಗುತ್ತಿದ್ದ ಮುಗ್ದಾ ಹಾಗೂ ರಾವಿಶ್ ನಡುವೆ ಸಲುಗೆ ಹಾಗೂ ಆತ್ಮೀಯತೆ ಬೆಳೆದಿತ್ತು. ಈ ಪ್ರೀತಿ 9 ವರ್ಷಗಳ ಹಿಂದೆ ಮದುವೆಯ ಅರ್ಥ ಪಡೆದಿತ್ತು. ಮದುವೆಯಾದ ಕೆಲ ವರ್ಷಗಳ ಕಾಲ ಈ ಜೋಡಿ ನಡುವೆ ಯಾವುದೇ ರೀತಿಯ ಮನಸ್ತಾಪ ಇರಲಿಲ್ಲ. ಆದರೆ ಕಳೆದದ 3 ವರ್ಷಗಳಲ್ಲಿ ಈ ಜೋಡಿ ನಡುವೆ ಅಂತರ ಹೆಚ್ಚಾಗಿತ್ತು.ಎರಡು ವರ್ಷಗಳ ಹಿಂದೆ ಇಬ್ಬರು ಮಾತುಕತೆ ನಡೆಸಿದ್ದರು. ಜೊತೆಯಾಗಿ ಮುನ್ನಡೆಯಲು ಸಾಧ್ಯವಾಗದ ಕಾರಣ ವಿಚ್ಚೇದನ ಸೂಕ್ತ ಆಯ್ಕೆ ಅನ್ನೋದನ್ನು ಇಬ್ಬರು ಮನಗಂಡಿದ್ದರು.ಹೀಗಾಗಿ ಕಳೆದ ಒಂದು ವರ್ಷದಿಂದ ಇಬ್ಬರು ಬೇರೆಬೇರೆಯಾಗಿ ನೆಲೆಸಿದ್ದರು. ಇದೀಗ ಇವರ ವಿಚ್ಚೇದನ ಖಚಿತಗೊಂಡಿದೆ.
 

click me!