ಭೂಮಿಕಾ ಮತ್ತು ಆಕೆಯ ಹೊಟ್ಟೆಯಲ್ಲಿ ಇರುವ ಮಗುವನ್ನು ಕೊಲ್ಲಲು ಈಗ ಕರೆಂಟ್ ಶಾಕ್ ನೀಡುವ ತಂತ್ರದ ಮೊರೆ ಹೋಗಿದ್ದಾಳೆ ಅತ್ತೆ ಶಕುಂತಲಾ. ಅಲ್ಲಿ ಆಗಿದ್ದೇನು?
ಇಂದು ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ ಮಲತಾಯಿ ಕಾನ್ಸೆಪ್ಟೇ ತುಂಬಿ ಹೋಗಿದೆ. ಮಲತಾಯಿ ಎಂದರೆ ಕುತಂತ್ರಿ, ವಿಲನ್, ಕೆಟ್ಟವಳು ಎಂದೆಲ್ಲಾ ಬಿಂಬಿಸಲಾಗುತ್ತಿದೆ. ಒಂದು ಸೀರಿಯಲ್ ಹಿಟ್ ಆಗುತ್ತಿದ್ದಂತೆಯೇ, ಅದರ ಹಾದಿಯಲ್ಲಿಯೇ ನಡೆಯುವ ಇತರ ಸೀರಿಯಲ್ ನಿರ್ದೇಶಕರು ಧಾರಾವಾಹಿಗಳಲ್ಲಿ ಮಲತಾಯಿಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಬಹುತೇಕ ಸೀರಿಯಲ್ಗಳಲ್ಲಿಯೂ ಮಲತಾಯಿ ಇದ್ದು, ಆಕೆಯೇ ಅದರಲ್ಲಿ ವಿಲನ್ ಆಗಿರೋದು ಮಾತ್ರ ವಿಚಿತ್ರ. ಇದರ ಬಗ್ಗೆ ಇದಾಗಲೇ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿರುವುದೂ ಇದೆ. ಆದರೆ, ಟಿಆರ್ಪಿ ಬೇಕು ಅಷ್ಟೇ. ಇದೇ ಕಾರಣಕ್ಕೆ ವಿಲನ್ಗಳು ಏನೆಲ್ಲಾ ಕುತಂತ್ರಗಳನ್ನು ಮಾಡಬಹುದು ಎನ್ನುವುದನ್ನು ಸೀರಿಯಲ್ನಲ್ಲಿ ಧಾರಾಳವಾಗಿ ತೋರಿಸಲಾಗುತ್ತಿದೆ.
ಅಂಥದ್ದೇ ಒಂದು ಸೀರಿಯಲ್ ಅಮೃತಧಾರೆ. ವೀಕ್ಷಕರು ತುಂಬಾ ಇಷ್ಟಪಟ್ಟು ನೋಡುತ್ತಿರುವ, ಸದಾ ಟಿಆರ್ಪಿಯಲ್ಲಿ ಉನ್ನತ ಸ್ಥಾನವನ್ನೇ ಕಾಯ್ದುಕೊಂಡು ಬಂದಿರುವ ಸೀರಿಯಲ್ಗಳಲ್ಲಿ ಒಂದು ಅಮೃತಧಾರೆ. ಇದಕ್ಕೆ ಕಾರಣವೂ ಇದೆ. ಹಿಂದಿನಿಂದಲೂ ಇಲ್ಲಿಯವರೆಗೆ ಬಂದಿರುವ ಬೇರೆ ಬೇರೆ ಭಾಷೆಗಳ ಸಹಸ್ರಾರು ಸೀರಿಯಲ್ಗಳ ಪೈಕಿ ಹೆಚ್ಚಿನವರು ಮಹಿಳಾ ಕೇಂದ್ರೀಕೃತವೇ ಆಗಿದ್ದರೂ ಅದರಲ್ಲಿ ಅಳುಮುಂಜಿ ಸೊಸೆ, ವಿಲನ್ ಅತ್ತೆಯನ್ನೇ ತೋರಿಸಿ ಬರಲಾಗಿದೆ. ಆದರೆ ಅಮೃತಧಾರೆ ವಿಭಿನ್ನವಾಗಿ ಎಲ್ಲರ ಮನಸ್ಸನ್ನು ಗೆಲ್ಲಲು ಕಾರಣ, ಇದರಲ್ಲಿ ಇರುವ ಡಿಫರೆಂಟ್ ಥೀಮ್. ಮಧ್ಯವಯಸ್ಸಿನವರ ನವೀರಾದ ಪ್ರೇಮದ ಕಥೆ ಇದಾಗಿದ್ದರೂ, ಇಲ್ಲಿ ವಿಲನ್ ಅತ್ತೆಯ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಲೇ ಇರುವ ಸೊಸೆ. ಗಂಡ-ಹೆಂಡತಿಯನ್ನು ಬೇರೆ ಬೇರೆ ಮಾಡಲು ಅತ್ತೆ ಶಕುಂತಲಾ ದೇವಿ ಹೂಡುತ್ತಿರುವ ಪ್ಲ್ಯಾನೇ ಗಂಡ-ಹೆಂಡತಿಯನ್ನು ಮತ್ತಷ್ಟು, ಇನ್ನಷ್ಟು ಹತ್ತಿರ ಮಾಡುತ್ತಿದೆ. ಶಕುಂತಲಾದೇವಿ ಏನೇ ಪ್ಲ್ಯಾನ್ ಮಾಡಿದ್ರೂ ಅದಕ್ಕೆ ತಕ್ಕ ಉತ್ತರ ಕೊಡುತ್ತಲೇ ಬಂದವಳು ಸೊಸೆ ಭೂಮಿಕಾ.
'ಅಮೃತಧಾರೆ' ಶಕುಂತಲಾ ಸೀರೆ ಮೇಲೆ ನೆಟ್ಟಿಗರ ಕಣ್ಣು! ಆಗರ್ಭ ಶ್ರೀಮಂತೆ ಪ್ರತಿದಿನ ಸ್ನಾನನೇ ಮಾಡಲ್ವಾ?
ಆದರೆ ಈಗ ಭೂಮಿಕಾಗೆ ತನ್ನ ಅತ್ತೆಯ ಕುತಂತ್ರ ಗೊತ್ತೇ ಆಗದಷ್ಟು ಪೆದ್ದು ಮಾಡಲಾಗುತ್ತಿದೆ. ಭೂಮಿಕಾ ಮತ್ತು ಆಕೆಯ ಹೊಟ್ಟೆಯಲ್ಲಿ ಇರುವ ಮಗುವನ್ನು ಸಾಯಿಸಲು ಶಕುಂತಲಾ ಶತಪ್ರಯತ್ನ ಪಡುತ್ತಿದ್ದಾಳೆ. ಆದರೆ ಇದು ಭೂಮಿಕಾಗೆ ಮಾತ್ರ ಗೊತ್ತಾಗದೇ ಇರುವುದು ವಿಚಿತ್ರ ಎನ್ನಿಸುತ್ತಿದೆ. ಇದೀಗ ಕರೆಂಟ್ ಶಾಕ್ ಕೊಟ್ಟು ಭೂಮಿಕಾಳನ್ನು ಸಾಯಿಸಲು ಶಕುಂತಲಾ ಮತ್ತು ಅಣ್ಣ ಪ್ಲ್ಯಾನ್ ಮಾಡಿದ್ದಾರೆ. ಭೂಮಿಕಾ ಮೆಟ್ಟಿಲಿನಿಂದ ಕೆಳಕ್ಕೆ ಇಳಿಯುತ್ತಿದ್ದಂತೆಯೇ ಕರೆಂಟ್ ಶಾಕ್ ಹೊಡೆದು ಸಾಯಿಸಬೇಕು ಎನ್ನುವ ಪ್ಲ್ಯಾನ್.
ಆದರೆ, ಇದು ಗೌತಮ್ ಅಮ್ಮನಿಗೆ ತಿಳಿದುಬಿಡುತ್ತದೆ. ಆದ್ದರಿಂದ ಸೊಸೆ ಭೂಮಿಕಾಳ ಪ್ರಾಣ ಕಾಪಾಡಲು ಮುಂದಾಗುತ್ತಾಳೆ. ಆದರೆ ಆಕೆಗೆ ಮಾತು ಬರುವುದಿಲ್ಲ. ಅವಳು ಏನು ಹೇಳುತ್ತಿದ್ದಾಳೆ ಎಂದು ಭೂಮಿಕಾಗೆ ತಿಳಿಯುವುದಿಲ್ಲ. ಸೊಸೆಯ ಪ್ರಾಣಕ್ಕೆ ಅಪಾಯ ಇದೆ ಎಂದು ಗೊತ್ತಾಗುತ್ತಿದ್ದಂತೆಯೇ ಭೂಮಿಕಾ ತಾಯಿ ತಾನೇ ಓಡಿ ಹೋಗಿ ಕರೆಂಟ್ ಮೇಲೆ ಕಾಲಿಡುತ್ತಾಳೆ. ಅವಳನ್ನು ಮುಟ್ಟಲು ಹೋದ ಭೂಮಿಕಾಗೂ ಕರೆಂಟ್ ತಾಗುತ್ತದೆ. ಕರೆಂಟ್ ಶಾಕ್ನಲ್ಲಿ ಅತ್ತ ಅತ್ತೆ ಒದ್ದಾಡುತ್ತಿದ್ದರೆ, ಆಕೆಯನ್ನು ಕಾಪಾಡಲು ಭೂಮಿಕಾ ವಿಲವಿಲ ಎನ್ನುತ್ತಿದ್ದಾಳೆ. ಕೂಡಲೇ ಎಲ್ಲರ ಸಹಾಯ ಕೋರುತ್ತಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಬರೀ ಕೆಟ್ಟದ್ದನ್ನೇ ತೋರಿಸುವುದು ಆಗಿದೆ. ಸೊಸೆಯಂದಿರನ್ನು ಹೇಗೆ ಸಾಯಿಸಬೇಕು ಎಂದು ಅತ್ತೆಯಂದಿರಿಗೆ ಟ್ಯೂಷನ್ ಕೊಡುವ ಹಾಗಿದೆ, ಇಂಥದ್ದನ್ನು ನೋಡುವ ಮೊದಲು ನಮ್ಮನ್ನು ಸಾಯಿಸಿ ಎಂದು ಕಿಡಿ ಕಾರುತ್ತಿದ್ದಾರೆ.
ಅಯ್ಯಯ್ಯೋ... ಡಾನ್ಸ್ ಮಾಡ್ತಾ ಮಾಡ್ತಾ ಭಾಗ್ಯಳ ಅಮ್ಮಂಗೆ ಇದೇನಾಗೋಯ್ತು? ವಿಡಿಯೋಗೆ ಫ್ಯಾನ್ಸ್ ಶಾಕ್!